(‘ಯೂ ಟ್ಯೂಬರ್’ ಅಂದರೆ ‘ಯೂ ಟ್ಯೂಬ್’ನ ಮೂಲಕ ವಿಡಿಯೋ ಪ್ರಸಾರ ಮಾಡುವ ವ್ಯಕ್ತಿ)
‘ಯೂ ಟ್ಯೂಬರ್’ ಧ್ರುವ ರಾಠಿ ಇವರ ವಿಷಯದಲ್ಲಿ ೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಹಳಷ್ಟು ಚರ್ಚೆ ನಡೆಯಿತು. ‘ಅವರು ಆಡಳಿತದವರ ನಿಜರೂಪವನ್ನು ಬಹಿರಂಗಪಡಿಸಿದರು, ಆಡಳಿತದವರ ಬಣ್ಣ ಬಯಲು ಮಾಡಿದರು’, ಈ ರೀತಿ ವಿರೋಧಿಗಳು ಬಾಯ್ತುಂಬ ಅವರನ್ನು ಸ್ತುತಿಸಿದರು. ಕಾಂಗ್ರೆಸ್ಸಿಗರಂತೂ ಕೆಲವು ನಗರಗಳಲ್ಲಿ ಅವರ ವಿಡಿಯೋಗಳನ್ನು ಹೆಚ್ಚೆಚ್ಚು ಜನರು ನೋಡಬೇಕೆಂದು ದೊಡ್ಡ ‘ಸ್ಕ್ರೀನ್ಸ್’ಗಳನ್ನು ಹಾಕಿದ್ದರು. ಈ ವ್ಯಕ್ತಿ ಮತ್ತು ಅಧಿಕಾರಾರೂಢರ ವಿರುದ್ಧ ಬಹಿರಂಗ ನಿಲುವು ನೀಡುವ ಈ ಜನರು ಯಾರು ? ಎನ್ನುವ ಪ್ರಶ್ನೆ ಜನಸಾಮಾನ್ಯರಿಗೆ ಬರುತ್ತದೆ. ಅದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
೧. ಪ್ರಸ್ತುತ ಯೂ ಟ್ಯೂಬರ್‌ಗಳ ಕಾಲ…
ಪ್ರಸ್ತುತ ಕಾಲವು ಯೂ ಟ್ಯೂಬರ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸುಗ್ಗಿಯ ಕಾಲವಾಗಿದೆ. ಸಾಮಾಜಿಕ ಮಾಧ್ಯಮ ಯೂ ಟ್ಯೂಬ್‌ನಲ್ಲಿ ವಿಡಿಯೋ ಪ್ರಸಾರಗೊಳಿಸಿ, ಜನರ ಮನೋರಂಜನೆ ಮತ್ತು ಜ್ಞಾನವೃದ್ಧಿ ಮಾಡುವಂತಹ ವ್ಯಕ್ತಿಯನ್ನು ಯೂ ಟ್ಯೂಬರ್ ಎಂದು ಗುರುತಿಸಲಾಗುತ್ತದೆ.
ಪ್ರಸಾರಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದರಿಂದ ಜನರು ಸತ್ಯ ಹಾಗೂ ಯೋಗ್ಯ ವಾರ್ತೆಗಳಿಗಾಗಿ ಸಾಮಾಜಿಕ ಮಾಧ್ಯಮಗಳಾದ ‘ಎಕ್ಸ್’ (ಹಿಂದಿನ ಟ್ವಿಟರ್), ಫೇಸ್‌ಬುಕ್, ಯೂ ಟ್ಯೂಬ್ ಇವುಗಳ ಆಧಾರ ಪಡೆಯುತ್ತಾರೆ. ಜನರಿಗೆ ಓದಿ ಮಾಹಿತಿಯನ್ನು ಪಡೆಯುವುದಕ್ಕಿಂತ ವಿಡಿಯೋದ ಮೂಲಕ ಮಾಹಿತಿ ಪಡೆಯುವುದು ಸುಲಭವೆನಿಸುತ್ತದೆ; ಏಕೆಂದರೆ ಅದು ದೃಕ್‌ಶ್ರಾವ್ಯ (ನೋಡುವುದು ಮತ್ತು ಕೇಳುವುದು) ಆಗಿರುತ್ತದೆ. ವಿಡಿಯೋದ ಮೂಲಕ ಪ್ರಸ್ತುತ ಪಡಿಸುವವನು ಹೆಚ್ಚು ಪ್ರಭಾವಿಯಾಗಿ ವಿಷಯವನ್ನು ಮಂಡಿಸಬಹುದು. ಆದ್ದರಿಂದ ಇತ್ತೀಚೆಗೆ ಯೂ ಟ್ಯೂಬ್‌ಗೆ ಹೆಚ್ಚು ಬೇಡಿಕೆಯಿದೆ. ಯೂ ಟ್ಯೂಬ್ ನಲ್ಲಿ ಸ್ವತಃ ಸಿದ್ಧಪಡಿಸಿದ ವಿಡಿಯೋ ಅಪ್‌ಲೋಡ್ ಮಾಡಿ ಅದನ್ನು ಹೆಚ್ಚೆಚ್ಚು ಪ್ರಸಾರ ಮಾಡಿ ‘ಲೈಕ್ಸ್’ ಪಡೆಯುವುದು, ಪ್ರಸಾರ ಮಾಡುವುದು ಇತ್ಯಾದಿಗಳಿಂದ ಹೆಚ್ಚೆಚ್ಚು ಜನರು ನೋಡುವ ಹಾಗೆ ಪ್ರಯತ್ನಿಸುತ್ತಾರೆ. ಅವುಗಳಲ್ಲಿ ಕೆಲವರ ವಿಡಿಯೋಗಳಲ್ಲಿ ಅವರು ಒಳ್ಳೆಯ ವಿಷಯಗಳನ್ನು ಯೋಗ್ಯ ರೀತಿಯಲ್ಲಿ ಮಂಡಿಸಿರುವುದರಿಂದ ಲಕ್ಷಗಟ್ಟಲೆ ಜನರು ನೋಡುತ್ತಾರೆ ಹಾಗೂ ಅವರ ವಿಡಿಯೋಗಳನ್ನು ನಿಯಮಿತವಾಗಿ ವೀಕ್ಷಿಸುವವರ ಸಂಖ್ಯೆಯೂ (ಸಬ್‌ಸ್ಕ್ರೈಬರ್) ಲಕ್ಷಗಟ್ಟಲೆ ಇರುತ್ತದೆ. ಇತ್ತೀಚೆಗೆ ಹೀಗೆ ಮಾಡಿ ಲಕ್ಷಗಟ್ಟಲೆ ರೂಪಾಯಿಗಳಿಸುವುದೇ ಒಂದು ಉದ್ಯೋಗವಾಗಿದೆ. ಈ ಉದ್ಯೋಗದಲ್ಲಿ ಯಶಸ್ವಿಯಾದವರು ಲಕ್ಷಗಟ್ಟಲೆ ವಾಚಕರು ಹಾಗೂ ಹಣವನ್ನೂಗಳಿಸಲು ಅರ್ಹರಾಗುತ್ತಾರೆ. ಅದರ ಪರಿಣಾಮದಿಂದ ಅವರಿಗೆ ಪ್ರಸಿದ್ಧಿ, ಹಣ, ಸ್ಥಾನಮಾನ ಎಲ್ಲವೂ ಸಿಗುತ್ತದೆ. ಆದ್ದರಿಂದ ಹೆಚ್ಚೆಚ್ಚು ಜನರು ವಿಡಿಯೋ ಚಿತ್ರೀಕರಣ, ಎಡಿಟಿಂಗ್, ಮಂಡನೆ ಇತ್ಯಾದಿ ಕಲಿತು ಯೂ ಟ್ಯೂಬ್‌ನಲ್ಲಿ ವಾರ್ತಾವಾಹಿನಿಯನ್ನು ಆರಂಭಿಸುತ್ತಾರೆ, ಕೆಲವರು ತಮ್ಮ ಕ್ಷೇತ್ರದ ಮಾಹಿತಿಯನ್ನು ನೀಡುವ ವಾಹಿನಿಯನ್ನು ಆರಂಭಿಸುತ್ತಾರೆ, ಕೆಲವರು ಮನೋರಂಜನೆಯ ವೇದಿಕೆಯನ್ನು ಲಭ್ಯ ಮಾಡಿಕೊಡುತ್ತಾರೆ ಮತ್ತು ಕೆಲವರು ಮುಕ್ತ ಪತ್ರಿಕೋದ್ಯಮಕ್ಕಾಗಿ ಅದನ್ನು ಉಪಯೋಗಿಸುತ್ತಾರೆ.
೨. ಧ್ರುವ ರಾಠಿಯವರ ಬಗ್ಗೆ …
ಸದ್ಯ ಬುದ್ಧಿಪ್ರಾಮಾಣ್ಯವಾದಿಗಳ ಮುಂದಿನ ಪೀಳಿಗೆಯು ಕಾರ್ಯನಿರತವಾಗಿದೆ. ಈ ಪೀಳಿಗೆ ಎಲ್ಲ ವಿಷಯಗಳಲ್ಲಿ ಉದಾ. ವೈದ್ಯಕೀಯ, ಸಾಮಾಜಿಕ, ರಾಜಕೀಯ ಇತ್ಯಾದಿ ಯಾವುದೇ ವಿಷಯದ ಮಾಹಿತಿಯನ್ನು ತರ್ಕಬದ್ಧವಾಗಿ ಹಾಗೂ ತಮಗೆ ಬೇಕಾದ ಹಾಗೆ, ನಿಮಗೆ ಮನದಟ್ಟಾಗುವ ಹಾಗೆ ಯೂ ಟ್ಯೂಬ್‌ನ ಮೂಲಕ ನೀಡುತ್ತಿದ್ದಾರೆ. ಈ ಮಾಹಿತಿಯಲ್ಲಿನ ಸ್ವಲ್ಪ ಮಾಹಿತಿ ಸತ್ಯವಾಗಿರುತ್ತದೆ, ಇನ್ನು ಸ್ವಲ್ಪ ಮಾಹಿತಿ ತಪ್ಪಾಗಿರುತ್ತವೆ, ಕೆಲವು ಅರ್ಧಸತ್ಯವಾಗಿರುತ್ತವೆ, ಕೆಲವು ಮಾಹಿತಿ ಗೊಂದಲವನ್ನುಂಟು ಮಾಡುವ ಹಾಗೂ ಕೆಲವು ಮಾಹಿತಿ ಕೇವಲ ಕಣ್ಣಿಗೆ ಧೂಳೆರಚುವ ತರ್ಕವಾಗಿರುತ್ತವೆ. ವಾಚಕರಿಗೆ ಪ್ರಾರಂಭದಲ್ಲಿ ಎಲ್ಲ ಸತ್ಯ ಮಾಹಿತಿ ನೀಡಿದರೆ, ಅವರ ಮೇಲೆ ವಿಶ್ವಾಸ ನಿರ್ಮಾಣವಾಗುತ್ತದೆ ಹಾಗೂ ಈ ಪ್ರಕ್ರಿಯೆ ಪೂರ್ಣವಾದ ನಂತರ ಅವನು ತನ್ನ ವಿಚಾರಶೈಲಿ, ತನ್ನದೇ ಆದ ರೀತಿಯ ತರ್ಕವನ್ನು ವಿವಿಧ ಪ್ರಕಾರದ ಉದಾಹರಣೆಗಳನ್ನು ನೀಡಿ ವಾಚಕರ ಮನವೊಲಿಸಿ ಅವರನ್ನು ದಾರಿ ತಪ್ಪಿಸಲು ಸಿದ್ಧನಾಗುತ್ತಾನೆ. ಈ ಪ್ರಕ್ರಿಯೆಯನ್ನು ಇಂದಿನ ಆಧುನಿಕ ಬುದ್ಧಿಪ್ರಾಮಾಣ್ಯವಾದಿಗಳು ಮಾಡುತ್ತಿದ್ದಾರೆ. ಆದ್ದರಿಂದ ಅವರ ಸುಳ್ಳನ್ನು ತಕ್ಷಣ ತಿಳಿದುಕೊಂಡು ಪ್ರತ್ಯುತ್ತರ ನೀಡಲು ಕೆಲವೊಮ್ಮೆ ಕಠಿಣವಾಗುತ್ತದೆ. ಕೆಲವೊಮ್ಮೆ ಏನೂ ಹೊಳೆಯುವುದಿಲ್ಲ. ಅದೇ ರೀತಿ ಧ್ರುವ ರಾಠಿಯವರ ವಿಷಯದಲ್ಲಿಯೂ ಆಗಿದೆ.
ಧ್ರುವ ರಾಠಿ ಮೂಲತಃ ಹರಿಯಾಣದವರಾಗಿದ್ದು ಸದ್ಯ ಜರ್ಮನಿಯಲ್ಲಿ ನೆಲೆಸಿದ್ದಾರೆ. ಯೂ ಟ್ಯೂಬರ್ ಆಗಿರುವುದರ ಜೊತೆಗೆ ಅವರು ವಿವಿಧ ದೇಶಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಪ್ರವಾಸದ ಅನುಭವ, ಒಳ್ಳೆಯ ಹಾಗೂ ಕೆಟ್ಟ ವಿಷಯಗಳನ್ನು ಜನರಿಗೆ ತಲುಪಿಸುತ್ತಾರೆ. ಸದ್ಯ ಯೂ ಟ್ಯೂಬ್‌ನಲ್ಲಿ ಅವರಿಗೆ ೨ ಕೋಟಿ ೪೦ ಲಕ್ಷಕ್ಕೂ ಹೆಚ್ಚು ವೀಕ್ಷಕರಿದ್ದಾರೆ, ಅಂದರೆ ಅವರು ಇಷ್ಟು ಜನಪ್ರಿಯರಾಗಿದ್ದಾರೆ. ಮಹತ್ವದ ವಿಷಯವೆಂದರೆ ಅವರಿಗೆ ಅತೀ ಹೆಚ್ಚು ವೀಕ್ಷಕರು ಚುನಾವಣೆಯ ಅವಧಿಯಲ್ಲಿ ಸಿಕ್ಕಿದರು.
೩. ಸಮಾಜದ್ರೋಹಿ ಉದ್ಯಮಿ ಜಾರ್ಜ್ ಸೊರೋಸ್ ಇವರ ವೈಭವೀಕರಣ
ಒಂದು ದೇಶದ ಆಡಳಿತಗಾರನು ಒಬ್ಬ ವ್ಯಕ್ತಿಗೆ ಬೇಕಾದ ಹಾಗೆ ಮಾಡದೆ, ಅದರ ವಿರುದ್ಧ ಕೃತಿಗಳನ್ನು ಮಾಡುತ್ತಿದ್ದರೆ, ಆಗ ಆಡಳಿತಗಾರನ ದೇಶವನ್ನು ಅಸ್ಥಿರಗೊಳಿಸುವುದು, ದೇಶದಲ್ಲಿ ಸಾಮಾಜಿಕ, ರಾಜಕೀಯ ಕೋಲಾಹಲವನ್ನುಂಟು ಮಾಡುವುದು, ದೇಶದಲ್ಲಿ ಆಂದೋಲನಗಳಿಗೆ ಉತ್ತೇಜನ ನೀಡುವುದು, ಇಂತಹ ಕೃತ್ಯಗಳನ್ನು ಬೃಹತ್ಪ್ರಮಾಣದಲ್ಲಿ ಹಣ ಸುರಿದು ಮಾಡತೊಡಗುತ್ತಾನೆ. ‘ಟೂಲ್‌ಕಿಟ್’ ಅದರಲ್ಲಿನ ಒಂದು ಭಾಗವಾಗಿದ್ದರೂ ಈ ಷಡ್ಯಂತ್ರವನ್ನು ದೀರ್ಘಕಾಲ ಮುಂದುವರಿಸಬೇಕಾಗುತ್ತದೆ. ಅದಕ್ಕಾಗಿ ಸಂಬಂಧಪಟ್ಟ ದೇಶದಲ್ಲಿ ತಮ್ಮ ವಿಚಾರಶೈಲಿಯ ಜನರನ್ನು ಹುಡುಕಿ ಅವರಿಂದ ದೇಶವಿರೋಧಿ ಕೃತ್ಯಗಳನ್ನು ಮಾಡಿಸಲಾಗುತ್ತದೆ ಹಾಗೂ ನಂತರ ದೇಶದ ಪ್ರಸಾರಮಾಧ್ಯಮಗಳು, ಸ್ವಯಂಸೇವಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ಮೂಲಕ ಆಡಳಿತದ ವಿರುದ್ಧ, ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ವಿಷಕಾರುತ್ತಾ ಇರಬೇಕಾಗುತ್ತದೆ. ಅದಕ್ಕಾಗಿ ಹಣ ಪೂರೈಸುವ ಅಗ್ರಗಣ್ಯ ವ್ಯಕ್ತಿಯೇ ಜಾರ್ಜ್ ಸೊರೋಸ್ ! ಇವರು ಸಾಮ್ಯವಾದಿಗಳಿಗೆ ಅನುಕೂಲಕರವಾಗಿದ್ದು ಭಾರತವನ್ನು ಅಸ್ಥಿರಗೊಳಿಸುವ ದೊಡ್ಡ ಒಳಸಂಚಿನಲ್ಲಿ ಒಬ್ಬರಾಗಿದ್ದಾರೆ. ಈ ಸೊರೋಸ್‌ನ ವಿಷಯದಲ್ಲಿ ರಾಠಿಯವರು ಸೊರೋಸ್‌ರು ಹಿರಿಯ ಪರಿಸರಪ್ರೇಮಿ, ಸುಧಾರಣಾವಾದಿ, ಒಳ್ಳೆಯ ಅರ್ಥಶಾಸ್ತ್ರಜ್ಞ ಎಂದೆಲ್ಲ ಅವರ ಗುಣಗಾನ ಮಾಡುತ್ತಾರೆ. ಒಳ್ಳೆಯ ಸ್ಥಿತಿಯಲ್ಲಿದ್ದ ಇಂಗ್ಲೆಂಡ್‌ನ ಬ್ಯಾಂಕ್‌ಗಳು ಸಂಪೂರ್ಣ ನೆಲಕಚ್ಚಲು ಸೊರೋಸ್ ಇವರೇ ಕಾರಣ. ರಾಠಿಯವರ ದೃಷ್ಟಿಯಲ್ಲಿ ಜಾರ್ಜ್ ಸೊರೋಸ್ ಇವರು ಅನೇಕ ದೇಶಗಳ ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಯತ್ನಿಸುತ್ತಾರೆ. ಇದೇ ಸೊರೋಸ್ ೨ ನೇ ಮಹಾಯುದ್ಧದಲ್ಲಿ ಹಿಟ್ಲರನ ಸೈನ್ಯಕ್ಕೆ ಜ್ಯೂ ಕುಟುಂಬದವರ ಮಾಹಿತಿಯನ್ನು ಕೊಟ್ಟಿದ್ದರಿಂದ ಹಿಟ್ಲರನಿಗೆ ಸಹಜವಾಗಿ ಅವರ ನರಸಂಹಾರ ಮಾಡಲು ಸಾಧ್ಯವಾಯಿತು. ಆದರೆ ಸೊರೊಸ್ ಅವರು ತನ್ನ ಜ್ಯೂ (ಯಹೂದಿ) ಹೆಸರನ್ನು ಮರೆಮಾಚಿದ್ದರು. ಈ ವಿಷಯದಲ್ಲಿ ಸೋರೋಸ್‌ಗೆ ‘ಸ್ವಲ್ಪವಾದರೂ ಪಶ್ಚಾತ್ತಾಪವಾಗುತ್ತಿದೆಯೇ ?’, ಎಂದು ಕೇಳಿದಾಗ ಅವರು ನೇರವಾಗಿ ‘ಇಲ್ಲ’, ಎಂದಿದ್ದರು. ಅವರು ಮೂಲತಃ ಹಂಗೇರಿ ದೇಶದವರಾಗಿದ್ದರೂ ಅನಧಿಕೃತ ನುಸುಳುಕೋರರನ್ನು ತಮ್ಮ ದೇಶದೊಳಗೆ ನುಸುಳಿಸಿದ್ದರು. ಇಂತಹ ವ್ಯಕ್ತಿ ಯಾರಿಗೆ ‘ಶ್ರೇಷ್ಠ’ರೆಂದು ಅನಿಸುತ್ತದೋ, ಅವರು ಸ್ವತಃ ಎಷ್ಟು ಕೀಳ್ಮಟ್ಟದವರಾಗಿರಬಹುದು ? ಸೊರೋಸ್‌ರ ‘ಓಪನ್ ಸೊಸೈಟಿ ಫೌಂಡೇಶನ್’ ಸಂಸ್ಥೆಯು ಅನೇಕ ದೇಶಗಳಲ್ಲಿ ಕಾರ್ಯನಿರತವಾಗಿದ್ದು ಅಲ್ಲಿನ ರಾಷ್ಟ್ರವಿರೋಧಿ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತದೆ.
೪. ಭಾರತದಲ್ಲಿ ಸರ್ವಾಧಿಕಾರ ಬರುತ್ತಿದೆ ಎಂದು ಹೇಳುತ್ತಾ ದಾರಿತಪ್ಪಿಸುವ ಪ್ರಯತ್ನ !
ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು, ಶಾಸಕರನ್ನು ಮತ್ತು ಸಂಸದರನ್ನು ಆರಿಸಲಾಗುತ್ತದೆ. ಆದರೂ ರಾಠಿಯವರ ಅಭಿಪ್ರಾಯದಲ್ಲಿ ‘ಮೋದಿ ಸರ್ವಾಧಿಕಾರಿಯಾಗಿದ್ದು ಭಾರತದಲ್ಲಿ ಶೇ. ೭೦ ರಷ್ಟು ಸರ್ವಾಧಿಕಾರ ಬಂದಿದೆ.’ ಭಾರತದಲ್ಲಿ ಸರ್ವಾಧಿಕಾರ ಇರುತ್ತಿದ್ದರೆ, ಈ ಹಿಂದೆಯೆ ರಾಠಿಯವರನ್ನು ಹೆಡೆಮುರಿ ಕಟ್ಟಿ ದೇಶದಲ್ಲಿ ತಂದು ಭಾರತವಿರೋಧಿ ಕೃತ್ಯಗಳಿಗಾಗಿ ತಕ್ಷಣ ಶಿಕ್ಷೆಯಾಗಿರುತ್ತಿತ್ತು; ಆದರೆ ಹಾಗೆ ಆಗಿಲ್ಲ. ಜಮ್ಮು ಕಾಶ್ಮೀರದಲ್ಲಿನ ಕಲಮ್ ೩೭೦ (ವಿಶೇಷ ರಾಜ್ಯದ ಸ್ಥಾನಮಾನ ನೀಡುವ ಕಲಮ್) ತೆರವುಗೊಳಿಸಿದಾಗ ಅವರು ಆಕ್ಷೇಪವೆತ್ತಿದ್ದರು. ಶ್ರೀರಾಮಮಂದಿರಕ್ಕೂ ವಿರೋಧಿಸಿದ್ದರು, ‘ಸ್ಟೆಚ್ಯು ಆಫ್ ಯುನಿಟಿ’ಯ ಕಡೆಗೆ ಪ್ರವಾಸಿಗರು ಬೆನ್ನು ತಿರುಗಿಸುವರು, ಎಂಬ ಭವಿಷ್ಯವಾಣಿಯನ್ನು ಅವರು ನುಡಿದಿದ್ದರು, ಅದು ಮಾತ್ರ ಸುಳ್ಳಾಯಿತು. ಮದ್ಯ ಹಗರಣದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರನ್ನು ಬಂಧಿಸಿದಾಗ ಅದನ್ನು ಸಹ ಅವರು ವಿರೋಧಿಸಿದ್ದರು. ದೇಶದಲ್ಲಿ ತುರ್ತುಪರಿಸ್ಥಿತಿಯಂತಹ ಪರಿಸ್ಥಿತಿ ಇದೆ ಎನ್ನುವಂತಹ ಹರಟೆ ಹೊಡೆದಿದ್ದರು.
೫. ರಾಷ್ಟ್ರನಿಷ್ಠ ಮಾಧ್ಯಮಗಳನ್ನು, ಪತ್ರಕರ್ತರನ್ನು ‘ಗೋದಿ ಮಿಡಿಯಾ’ ಎಂದು ಹೀಯಾಳಿಸುವುದು !
ರಾಷ್ಟ್ರ ಹಾಗೂ ಧರ್ಮ ಪ್ರೇಮಿ ‘ಯೂ ಟ್ಯೂಬರ್’ ಮತ್ತು ಪ್ರಸಾರ ಮಾಧ್ಯಮಗಳನ್ನು ‘ಗೋದಿ ಮೀಡಿಯಾ’ (ಮೋದಿಯವರನ್ನು ಪ್ರಶಂಸಿಸುವ, ಅವರ ಕೃತಿಗಳನ್ನು ಹೊಗಳುವ ಮಾಧ್ಯಮಗಳಿಗೆ ವಿರೋಧಿಗಳಿಂದ ‘ಗೋದಿ ಮೀಡಿಯಾ’, ಎಂದು ನಾಮಕರಣ ಮಾಡಲಾಗಿದೆ) ಎಂದು ಅವರು ಉಲ್ಲೇಖಿಸುತ್ತಾರೆ. ಭಾರತದಲ್ಲಿನ ಸಾಮ್ಯವಾದಿ ಮಾಧ್ಯಮಗಳೂ ಹಾಗೆಯೇ ಉಲ್ಲೇಖಿಸುತ್ತವೆ. ರಾಠಿಯವರಿಗೆ ಅವರು ಭಾರತದ ನಿಜಸ್ವರೂಪವನ್ನು ಜನರ ಮುಂದಿಟ್ಟು ಭಾರತದಲ್ಲಿ ಸಂಪೂರ್ಣ ಸರ್ವಾಧಿಕಾರಿ ಆಡಳಿತ ಬರುವುದನ್ನು ತಪ್ಪಿಸಿ ದೊಡ್ಡ ರಾಷ್ಟ್ರ ಕಾರ್ಯ ಮಾಡುತ್ತಿದ್ದಾರೆ ಎಂದು ಅನಿಸುತ್ತದೆ. ಅವರನ್ನು ವಿರೋಧಿಸುವವರು, ಅವರ ವೈಚಾರಿಕ ಗೊಂದಲ, ವೈಚಾರಿಕ ತಪ್ಪುಗಳನ್ನು ಎತ್ತಿತೋರಿಸುವವರು ‘ಗೋದಿ ಮೀಡಿಯಾ’ದ ಭಾಗವಾಗಿದ್ದಾರೆ, ಅಂದರೆ ಒಂದು ರೀತಿಯಲ್ಲಿ ಸತ್ಯವನ್ನು ಇದಕ್ಕಿದ್ದಂತೆಯೆ ಮಂಡಿಸದೆ ಭ್ರಾಂತಿ ನಿರ್ಮಾಣ ಮಾಡುವ ಮಾಹಿತಿಯನ್ನು ನೀಡುವುದು ಹಾಗೂ ಅದನ್ನು ಯಾರು ಕೂಡ ವಿರೋಧಿಸಬಾರದು, ಇದು ರಾಠಿಯವರ ಮಾನಸಿಕತೆಯಾಗಿದೆ.
೬. ಹಿಂದೂಗಳ ಸಮಸ್ಯೆಗಳು ಬಂದಾಗ ಬಾಯಿಗೆ ಬೀಗ !
ಬಾಂಗ್ಲಾದೇಶದ ಹಿಂದೂಗಳ ವಿಷಯದಲ್ಲಿ ಅವರು ಬಾಯಿ ಮುಚ್ಚಿಕೊಂಡಿದ್ದರು. ಹಿಂದೂಗಳ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅತ್ಯಾಚಾರವಾದರೂ ಯಾವಾಗಲೂ ಭಾರತದ ಹಾಗೂ ಜಗತ್ತಿನ ಪ್ರತಿಯೊಂದು ಚಿಕ್ಕ-ಪುಟ್ಟ ಘಟನೆಗಳ ವಿಡಿಯೋ ಸಿದ್ಧಪಡಿಸುವ ರಾಠಿಯವರು ಸುಮ್ಮನಿದ್ದರು. ಲವ್ ಜಿಹಾದ್‌ನ ಇಷ್ಟು ಘಟನೆಗಳು ಭಾರತದಲ್ಲಿ ಘಟಿಸುತ್ತಿವೆ, ಅದರ ವಿಷಯದಲ್ಲಿ ಭಾರತೀಯರನ್ನು ಜಾಗೃತಗೊಳಿಸುವ ವಿಡಿಯೋ ತಯಾರಿಸಬೇಕೆಂದು ಅವರಿಗೆ ಅನಿಸುವುದಿಲ್ಲ. ಇದರಿಂದಲೇ ಅವರ ನಿಜಸ್ವರೂಪ ಬಯಲಾಗುತ್ತದೆ. ಜಾರ್ಜ್ ಸೊರೋಸ್ ಇವರ ಹಾಗೆಯೇ ಅವರು ಭಾರತವಿರೋಧಿ ಲೇಖಕ, ಪತ್ರಕರ್ತ ಹರ್ಷ ಮಂದೇರನನ್ನು ಅವರು ‘ವಿದ್ವಾಂಸ ವ್ಯಕ್ತಿ’, ‘ಅನೇಕ ಪುಸ್ತಕಗಳನ್ನು ಬರೆಯುವ ವ್ಯಕ್ತಿ’ ಎಂದು ಬಹುಮಾನ ನೀಡಿದ್ದಾರೆ. ಈ ಹರ್ಷ ಮಂದೇರನು ಪೌರತ್ವ ತಿದ್ದುಪಡಿ ಕಾನೂನನ್ನು (‘ಸಿಈ’ಯನ್ನು) ರಸ್ತೆಗಿಳಿದು ವಿರೋಧಿಸಿದ್ದನು. ‘ಸಿಈ’ ಕಾನೂನು ಬಂದರೆ ನಾನು ಮುಸಲ್ಮಾನನಾಗುವೆನು’, ಎಂದು ಕೂಡ ಹೇಳಿಕೆ ನೀಡಿದ್ದನು. ರವೀಶ ಕುಮಾರರನ್ನು ರಾಠಿಯವರು ತನ್ನ ಮಾರ್ಗದರ್ಶಕರೆಂದು ತಿಳಿಯುತ್ತಾರೆ. ರವೀಶ ಕುಮಾರರೂ ನಿರಂತರ ಭಾರತವಿರೋಧಿ ಹೇಳಿಕೆಗಳನ್ನು ನೀಡುವುದು, ಮೋದಿ ಸರಕಾರದ ಯೋಜನೆಗಳನ್ನು ವಿರೋಧಿಸುವುದು, ಭಾರತವಿರೋಧಿಗಳ ಪಕ್ಷವಹಿಸುವುದು ಇತ್ಯಾದಿಗಳನ್ನೇ ಮಾಡುತ್ತಿದ್ದಾರೆ. ಸಣ್ಣಸಣ್ಣ ವಿಷಯಗಳನ್ನೂ ಸರಕಾರದ ವಿರುದ್ಧದ ವಾತಾವರಣ ಮೂಡಿಸಲು ಉಪಯೋಗಿಸುತ್ತಾರೆ.
೭. ಅನೈತಿಕ ವ್ಯವಸಾಯಗಳಿಗೆ ಪ್ರೋತ್ಸಾಹಿಸುವುದು
ಧ್ರುವ ರಾಠಿ ಇವರು ಜನರನ್ನು ‘ಇಥರ್ ಲೈಟ್’ ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ಸಲಹೆ ನೀಡಿದರು. ‘ಪಿ.ಎನ್.ಪಿ. ಕರೆನ್ಸಿ’ ಈ ‘ಕ್ರಿಪ್ಟೋ ಕರೆನ್ಸಿ’ಯ (ಆಭಾಸದ ಚಲನ್) ಜಾಹೀರಾತು ನೀಡಿದ್ದರು. ಇಥರ್ ಲೈಟ್ ನಕಲಿ ಕಂಪನಿಯಾಗಿದೆ ಹಾಗೂ ಪಿ.ಎನ್.ಪಿ. ಕರೆನ್ಸಿಯೂ ನಕಲಿ ಚಲನ ಆಗಿದೆಯೆಂದು ನಂತರ ತಿಳಿಯಿತು. ಅದರ ಮೌಲ್ಯ ಶೇ. ೯೦ ರಷ್ಟು ಕುಸಿದಿರುವುದರಿಂದ ಈ ಚಲನ ಖರೀದಿ ಮಾಡಿದವರ ಹಣ ಮುಳುಗಿರಬಹುದು. ಇವೆರಡೂ ವಿಷಯಗಳು ಸುಳ್ಳೆಂದು ಸಾಬೀತಾದಾಗ ಅವರು ತನ್ನದೇ ವಿಡಿಯೋ ತಯಾರಿಸಿ ಪುನಃ ಅಪ್‌ಲೋಡ್ ಮಾಡಿದರು.
೮. ನಿರರ್ಥಕ ಅಂಶಗಳು
ಭಾರತದಲ್ಲಿನ ವಿಕಾಸಕಾರ್ಯದ ವಿಷಯದಲ್ಲಿ ಅವರಿಗೆ ಹಾಸ್ಯಾಸ್ಪದ ಪ್ರಶ್ನೆಗಳಿವೆ. ಅವುಗಳಲ್ಲಿ ಭಾರತದಲ್ಲಿ ಇಷ್ಟು ಮಹಾಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳ ಅವಶ್ಯಕತೆಯೇನಿದೆ ? ಕೇವಲ ದೇಶದ ಶೇ. ೮ ರಷ್ಟು ಜನರಿಗಾಗಿ ಇವುಗಳನ್ನು ಮಾಡಲಾಗುತ್ತದೆಯೇ ? ಎನ್ನುವ ಪ್ರಶ್ನೆಗಳನ್ನು ಕೇಳುವ ರಾಠಿ ಇವರು ತಾವು ಸ್ವತಃ ಜರ್ಮನಿಯ ದೊಡ್ಡ ಮಾರ್ಗಗಳಲ್ಲಿ ವೇಗವಾಗಿ ವಾಹನ ನಡೆಸುವ ಆನಂದ ಪಡೆದುಕೊಳ್ಳುತ್ತಾರೆ
೯. ನಿಜಸ್ವರೂಪವನ್ನು ಗುರುತಿಸಿರಿ !
ಈ ಲೇಖನದಲ್ಲಿ ಕೇವಲ ಕೆಲವು ಮಹತ್ವದ ಅಂಶಗಳನ್ನು ಆಯ್ದುಕೊಂಡು ಅವುಗಳ ಖಂಡನೆ ಮಾಡಲು ಪ್ರಯತ್ನಿಸಲಾಗಿದೆ. ಈ ಬುದ್ಧಿಪ್ರಾಮಾಣ್ಯವಾದಿ, ಸಾಮ್ಯವಾದಿ ವಿಚಾರವಾದಿಗಳ ಅನೇಕ ಪೀಳಿಗೆಗಳು ಅವರ ಜ್ಞಾನವನ್ನು ಎರೆದು ಭಾರತೀಯರಲ್ಲಿ ಭ್ರಾಂತಿಯನ್ನುಂಟು ಮಾಡಿದ್ದಾರೆ. ಒಟ್ಟಾರೆ ಹೇಗಾದರೂ ಮಾಡಿ ಭಾರತಕ್ಕೆ ಹೇಗೆ ಹಾನಿಯನ್ನುಂಟು ಮಾಡಬಹುದು, ಭಾರತವನ್ನು ಮುಂದಕ್ಕೊಯ್ಯುವ ಪ್ರಯತ್ನಗಳಿಗೆ ಹೇಗೆ ಕಡಿವಾಣ ಹಾಕಬಹುದು, ಎಂಬುದಕ್ಕಾಗಿಯೇ ಈ ಪ್ರಭಾವಿ ವ್ಯಕ್ತಿಗಳು ಪ್ರಯತ್ನಿಸುತ್ತಿರುತ್ತಾರೆ. ಅವರ ಹೇಳಿಕೆಗಳಿಗೆ, ಅಭ್ಯಾಸಕ್ಕೆ ಮರುಳಾಗದೆ ಜನರು ಸತ್ಯವನ್ನು ಶೋಧಿಸುವ, ತುಲನಾತ್ಮಕ ಅಭ್ಯಾಸ ಮಾಡಲು ಪ್ರಯತ್ನಿಸಿದರೆ ಇಂತಹವರ ನಿಜಸ್ವರೂಪ ಅವರಿಗೆ ತಿಳಿಯುವುದು ಹಾಗೂ ಅವರು ತಮ್ಮ ಷಡ್ಯಂತ್ರಗಳಿಂದ ತಮ್ಮನ್ನು ದೂರವಿಡಬಹುದು ಹಾಗೂ ಅವರ ವಿಚಾರಶೈಲಿಗೆ ಮರುಳಾಗುವ ಇತರರಿಗೂ ಪ್ರಬೋಧನೆ ಮಾಡಬಹುದು. ಸಾಮ್ಯವಾದಿ, ಬುದ್ಧಿಪ್ರಾಮಾಣ್ಯವಾದಿಗಳ ವೈಚಾರಿಕ ಆಕ್ರಮಣವನ್ನು ದೂರಗೊಳಿಸುವ ಈ ಹೋರಾಟವನ್ನು ಪ್ರತಿಯೊಬ್ಬ ರಾಷ್ಟ್ರ ಹಾಗೂ ಧರ್ಮಪ್ರೇಮಿಯೂ ಮಾಡಲೇಬೇಕಾಗಿದೆ.
– ಶ್ರೀ. ಯಜ್ಞೇಶ ಸಾವಂತ, ದೇವದ, ಪನವೇಲ್ (೨೦.೮.೨೦೨೪)
ಅರ್ಧಸತ್ಯ ಮಾಹಿತಿ ನೀಡುವುದುಮುಂಬಯಿಯಲ್ಲಿ ಮತಗಣನೆಯ ಸಮಯದಲ್ಲಿ ಒಂದು ಘಟನೆ ಘಟಿಸಿತ್ತು. ಅದರಲ್ಲಿ ಮುಂಬಯಿಯ ಒಂದು ಭಾಗದ ಮತಗಣನೆಯಲ್ಲಿ ಅಭ್ಯರ್ಥಿ ರವೀಂದ್ರ ವಾಯಕರ್ ಮತ್ತು ಠಾಕ್ರೆ ಬಣದ ಅಭ್ಯರ್ಥಿ ಅಮೋಲ ಕೀರ್ತಿಕರ್ ಇವರ ನಡುವೆ ನೇರ ಸ್ಪರ್ಧೆ ನಡೆಯಿತು. ಅದರಲ್ಲಿ ಮೊದಲು ‘ಅಮೋಲ್ ಕೀರ್ತಿಕರ್ ವಿಜಯಿ’, ಎಂದು ಘೋಷಣೆ ಆಗಿತ್ತು; ಆದರೆ ಕೆಲವೇ ನಿಮಿಷಗಳಲ್ಲಿ ‘ರವೀಂದ್ರ ವಾಯಕರ್ ವಿಜಯಿಯಾದರು’, ಎಂದು ಚುನಾವಣಾ ಆಯೋಗದಿಂದ ಹೇಳಲಾಯಿತು. ಇದರಲ್ಲಿ ಬೇರೆಯೆ ಒಂದು ಘಟನೆಯ ವಾರ್ತೆ ಬಂತು ಅದೇನೆಂದರೆ, ‘ವಾಯಕರ್ ಇವರ ಭಾವನೆಂಟನ ಸಂಚಾರಿವಾಣಿಯ ಮೂಲಕ ಇ.ವಿಎಮ್. (ಇಲೆಕ್ಟ್ರಾನಿಕ್ ಮತದಾನ ಯಂತ್ರ) ‘ಅನ್‌ಲಾಕ್’ ಮಾಡಲು ಸಾಧ್ಯವಿದೆ’, ಎಂಬುದಾಗಿತ್ತು. ಮತದಾನ ಕಕ್ಷೆಯಲ್ಲಿ ಯಾರಿಗೂ ಸಂಚಾರಿವಾಣಿ ತೆಗೆದುಕೊಂಡು ಹೋಗಲು ಅನುಮತಿ ಇಲ್ಲದಿರುವಾಗ ವಾಯಕರ್ ಇವರ ಭಾವನೆಂಟನು ಈ ಸಂಚಾರಿವಾಣಿಯನ್ನು ಕಕ್ಷೆಗೆ ತಂದಿದ್ದನು. ಅದರಿಂದಾಗಿ ಮತದಾನ ಯಂತ್ರವನ್ನು ಭಾವನೆಂಟನ ಸಂಚಾರಿವಾಣಿಗೆ ಜೋಡಿಸಿ ಅದರ ಮೂಲಕ ಮತದಾನದ ಲೆಕ್ಕಾಚಾರವನ್ನು ಬದಲಾಯಿಸಿ ವಾಯಕರ್ ವಿಜಯಿಯಾದರು’, ಎಂದು ಮುಂಬಯಿಯ ಒಂದು ಪ್ರಸಿದ್ಧ ಆಂಗ್ಲ ದೈನಿಕ ಪ್ರಸಿದ್ಧಪಡಿಸಿತ್ತು. ಇದನ್ನು ಧ್ರುವ ರಾಠಿ ಇವರು ತಮ್ಮ ವಿಡಿಯೋಗಾಗಿ ಉಪಯೋಗಿಸಿಕೊಂಡರು. ಚುನಾವಣಾ ಆಯೋಗವು ‘ಹೀಗೇನೂ ಆಗಿಲ್ಲ’ವೆಂದು ಹೇಳುತ್ತಾ ಆಂಗ್ಲ ದೈನಿಕ ಕ್ಷಮೆಯಾಚಿಸಬೇಕು ಮತ್ತು ಸರಿಯಾದ ವಾರ್ತೆಯನ್ನು ನೀಡಬೇಕೆಂದು ಹೇಳಿತು. ದೈನಿಕ ಸರಿಯಾದ ವಾರ್ತೆಯನ್ನು ನೀಡಿತು; ಆದರೆ ಇಲ್ಲಿ ರಾಠಿಯವರು ಆ ವಾರ್ತೆಯನ್ನು ಯಥಾವತ್ತಾಗಿ ಪ್ರಸಿದ್ಧಪಡಿಸದೆ ಒಂದು ಅಸ್ಪಷ್ಟವಾಗಿ ಉಲ್ಲೇಖಿಸಿದರು. ಇಲ್ಲಿ ಆಡಳಿತದವರ ಅಕ್ಷೇಪವಿದೆ. ಆ ವಾಸ್ತವವನ್ನು ಮಂಡಿಸದೆ ಸುಳ್ಳು ವಾರ್ತೆಯನ್ನೇ ಜನರ ಮುಂದಿರಿಸಿ ಗೊಂದಲವನ್ನುಂಟು ಮಾಡಲಾಯಿತು. – ಶ್ರೀ. ಯಜ್ಞೇಶ ಸಾವಂತ |