J & K Assembly Fight : ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಕಲಂ ೩೭೦ ರ ಫಲಕ ಹರಿದಿದ್ದಕ್ಕೆ ರಂಪರಾದ್ದಾಂತ

ಶಾಸಕರು ಪರಸ್ಪರ ಕಾಲರ್ ಹಿಡಿದು ಎಳೆದಾಡಿದರು !

ಶ್ರೀನಗರ (ಜಮ್ಮು ಕಾಶ್ಮೀರ) – ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಕಲಂ 370 ಮತ್ತೆ ಮರು ಸ್ಥಾಪಿಸುವ ಪ್ರಸ್ತಾಪವನ್ನು ನವೆಂಬರ್ ೬ ರಂದು ಭಾರಿ ರಂಪಾರಾದ್ಧಾಂತದಲ್ಲಿ ಸಮ್ಮತಿಸಿದ ನಂತರ ನವೆಂಬರ್ ೭ ರಂದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ಶಾಸಕರಲ್ಲಿ ಹೊಡೆದಾಟ ನಡೆಯಿತು. ಸಭಾಗೃಹದಲ್ಲಿ ರಂಪಾರಾದ್ಧಾಂತ ನಡೆದ ನಂತರ ಅಧ್ಯಕ್ಷರು ವಿಧಾನಸಭೆಯ ಕಾರ್ಯಕಲಾಪ ೨೦ ನಿಮಿಷಕ್ಕಾಗಿ ಮುಂದೂಡಿದರು.

ಶಾಸಕ ಖುರ್ಷಿದ್ ಅಹಮದ್ ಶೇಖ್ ಇವರು ಕಲಂ 370 ಜಾರಿಗೊಳಿಸುವ ಫಲಕವನ್ನು ಸಭಾಗೃಹದಲ್ಲಿ ಹಾರಿಸಿದರು. ಅದರಲ್ಲಿ, ‘ನಮಗೆ ಕಲಂ 370 ಮತ್ತು ‘೩೫ ಅ ‘ಮರು ಸ್ಥಾಪಿಸಿಬೇಕಿದೆ ಮತ್ತು ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು,’ ಎಂದು ಬರೆದಿತ್ತು. ಈ ಫಲಕಕ್ಕೆ ಭಾಜಪ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುನಿಲ ಶರ್ಮಾ ಇವರು ವಿರೋಧಿಸಿದರು. ಆ ಸಮಯದಲ್ಲಿ ಅವರ ವಿರುದ್ಧ ಘೋಷಣೆಗಳು ಕೂಗಲು ಆರಂಭಿಸಿದರು. ಶರ್ಮಾ ಇವರು ಶೇಖ್ ಇವರ ಹತ್ತಿರ ಹೋಗಿ ಅವರ ಕೈಯಲ್ಲಿರುವ ಫಲಕ ಕಸಿದುಕೊಂಡರು. ಈ ಸಮಯದಲ್ಲಿ ಶೇಖ್‌ಅನ್ನು ಬೆಂಬಲಿಸಿ ಸಜ್ಜಾದ ಲೋನ್ ಮತ್ತು ವಾಹಿದ ಪಾರಾ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಕೆಲವು ಶಾಸಕರು ಭಾಜಪ ಶಾಸಕರ ಜೊತೆಗೆ ಕೈ ಕೈ ಮಿಲಾಯಿಸಿದರು. ಈ ಫಲಕ ಹರಿದಿರುವುದರಿಂದ ಸಂಘರ್ಷವೇ ಸೃಷ್ಟಿಯಾಯಿತು. ಎರಡು ಪಕ್ಷದ ಶಾಸಕರು ಪರಸ್ಪರ ಕಾಲರ್ ಹಿಡಿದು ಫಲಕ ಕಸಿದುಕೊಳ್ಳಲು ಆರಂಭಿಸಿದರು ರಂಪಾಟ ಹೆಚ್ಚಾಗುತ್ತಿರುವುದನ್ನು ನೋಡಿ ಮಧ್ಯಸ್ಥಿಕೆ ವಹಿಸುವ ಸುರಕ್ಷಾ ಪಡೆಯಿಂದ ಭಾಜಪ ಶಾಸಕರನ್ನು ಸಭಾಗೃಹದಿಂದ ಹೊರದೂಡಲಾಯಿತು.

ಫಲಕ ಹಾರಿಸುವ ಶಾಸಕ ಖುರ್ಷಿದ್ ಅಹ್ಮದ್ ಶೇಖ್ ಇವರು ಬಾರಾಮುಲ್ಲಾ ಲೋಕಸಭೆಯ ಸಂಸದ ಇಂಜಿನಿಯರ್ ರಶೀದ್ ಇವರ ಸಹೋದರನಾಗಿದ್ದಾರೆ, ರಶೀದ್ ನನ್ನು ೨೦೧೬ ರಲ್ಲಿ ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿರುವ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಅವರು ೨೦೧೯ ರಿಂದ ತೀಹಾರ ಜೈಲಿನಲ್ಲಿದ್ದರು. ವಿಧಾನಸಭಾ ಚುನಾವಣೆಯ ಮೊದಲು ಅವರಿಗೆ ಜಾಮೀನು ದೊರೆತಿತ್ತು.

ಸಂಪಾದಕೀಯ ನಿಲುವು

ಜಮ್ಮು ಕಾಶ್ಮೀರದ ವಿಧಾನಸಭೆಯ ಚುನಾವಣೆ ನಡೆದ ನಂತರ ಕೂಡ ಅಲ್ಲಿಯ ಮುಸಲ್ಮಾನರು ಆಯ್ಕೆ ಮಾಡಿ ಕಳಿಸಿರುವ ಶಾಸಕರು ದೇಶದ್ರೋಹಿ ಮನಸ್ಥಿತಿಯಿಂದ ವರ್ತಿಸುತ್ತಿದ್ದಾರೆ, ಇದೇ ಈ ಘಟನೆಯಿಂದ ಬಹಿರಂಗವಾಗಿದೆ. ಆದ್ದರಿಂದ ಕೇಂದ್ರ ಸರಕಾರ ಈ ವಿಧಾನಸಭೆಯನ್ನು ವಿಸರ್ಜಿಸಿ ಪುನಃ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದೇ ಸರಿ ಹೋಗುವುದು. ಇಂದಿಲ್ಲ ನಾಳೆಯಾದರೂ ಹೀಗೆ ಮಾಡಬೇಕಾಗುತ್ತದೆ !