|
ಢಾಕಾ (ಬಾಂಗ್ಲಾದೇಶ) – ಭಾರತವು ಬಾಂಗ್ಲಾದೇಶದ ಗಡಿ ಮುಚ್ಚಿದೆ. ಬಾಂಗ್ಲಾದೇಶದ ಸೈನ್ಯ ಬೇಗನೆ ಬಂದು ಆಪರೇಷನ್ ಆರಂಭಿಸುವರು ಅದರ ಮೂಲಕ ಹಿಂದುಗಳನ್ನು ಕೊಲ್ಲುವ ಷಡ್ಯಂತ್ರ ರೂಪಿಸಲಾಗಿದೆ. 1971 ನಂತರ ಹಿಂದುಗಳ ಇಷ್ಟೊಂದು ಕೆಟ್ಟ ಪರಿಸ್ಥಿತಿ ಮೊದಲ ಬಾರಿಗೆ ನಿರ್ಮಾಣವಾಗಿದೆ. ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವ ವಿಚಾರ ಮಾಡಿದರೆ, ಅಲ್ಲಿ ಕೂಡ ‘ಜಮಾತ್-ಏ-ಇಸ್ಲಾಮಿಯ’ ಜಿಹಾದಿ ಕಾರ್ಯಕರ್ತರು ಇರುತ್ತಾರೆ. ಆದ್ದರಿಂದ ನಾವು ನ್ಯಾಯಾಲಯದ ಮೆಟ್ಟಲೇರುವುದು ಕೂಡ ಸಾಧ್ಯವಾಗಿದೆ, ಎಂದು ಬಾಂಗ್ಲಾದೇಶದಲ್ಲಿನ ಓರ್ವ ಹಿಂದುತ್ವನಿಷ್ಠರು ಸನಾತನ ಪ್ರಭಾಕಕ್ಕೆ ದೂರವಾಣಿಯ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.
ಹಿಂದುತ್ವನಿಷ್ಠರು ಮಂಡಿಸಿರುವ ಬಾಂಗ್ಲಾದೇಶದಲ್ಲಿನ ಭಯಾನಕ ಪರಿಸ್ಥಿತಿ !
೧. ಹಿಂದುತ್ವನಿಷ್ಠರ ಮೇಲೆ ಬಹಳಷ್ಟು ಒತ್ತಡ !
ಯಾವ ಹಿಂದುತ್ವನಿಷ್ಠರು ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ದ ವಿರುದ್ಧ ಕಾರ್ಯ ಮಾಡುತ್ತಿದ್ದಾರೆ, ಅವರು ಅಲ್ಲಿಯ ಸರಕಾರ ಮತ್ತು ಜಿಹಾದಿ ಮುಸಲ್ಮಾನರ ಹಿಟ್ ಲಿಸ್ಟ್ ನಲ್ಲಿ ಇದ್ದಾರೆ. ಅಂತಹ ಓರ್ವ ದೊಡ್ಡ ಹಿಂದುತ್ವನಿಷ್ಠರಿಗೆ ಕೆಲವು ದಿನಗಳ ಹಿಂದೆ ನಮ್ಮ ಸೈನ್ಯ ಅಧಿಕಾರಿಗಳು ಕರೆಸಿ ತಾಕಿತು ಮಾಡಿದ್ದರು ಮತ್ತು ಹಿಂದುತ್ವಕ್ಕಾಗಿ ಏನೂ ಮಾಡದಂತೆ ಒತ್ತಡ ತಂದರು. ಹಿಂದುತ್ವನಿಷ್ಠರ ಪ್ರತಿಯೊಂದು ಚಲನವಲನೆಯ ಮೇಲೆ ಸೂಕ್ಷ್ಮ ನಿಗಾ ಇರಿಸಲಾಗಿದೆ.
೨. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಡಾ. ಮಹಮ್ಮದ್ ಯುನೂಸ್ ಇವರಿಗೆ ಹಿಂದುಗಳು ಸ್ವಲ್ಪವೂ ಹಿಡಿಸುವುದಿಲ್ಲ !
ಈಗ ಸರಕಾರದಲ್ಲಿ ಅತ್ಯಂತ ಕಟ್ಟರವಾಗಿದ್ದು ಅವರು ಮದರಸಾಗಳಲ್ಲಿ ಶಿಕ್ಷಣ ಪಡೆದಿರುವ ಆಸಿಫ್ ನಾಝರೂಲ್ ಮುಂತಾದ ಕೆಲವು ನಾಯಕರು ಇದ್ದಾರೆ. ಈಗಿನ ಮಧ್ಯಂತರ ಸರಕಾರದ ಮುಖ್ಯಸ್ಥನಾಗಿರುವ ಡಾ. ಮಹಮ್ಮದ್ ಯುನೂಸ್ ಇವರು ಅಮೇರಿಕಾದ ದಲ್ಲಾಳಿಯಾಗಿದ್ದು ಅವರಿಗೆ ಹಿಂದುಗಳು ಸ್ವಲ್ಪವೂ ಹಿಡಿಸುವುದಿಲ್ಲ.
೩. ಉತ್ತರ ಬಾಂಗ್ಲಾದೇಶದಲ್ಲಿ ‘ಜಮಾತ-ಎ-ಇಸ್ಲಾಮಿ’ನ ಜಾಲ ಹೆಚ್ಚುತ್ತಿದೆ !
ಹಿಂದುಗಳ ಸಂಖ್ಯೆ ಹೆಚ್ಚಾಗಿರುವ ಉತ್ತರ ಬಾಂಗ್ಲಾದೇಶದಲ್ಲಿ ‘ಜಮಾತ್-ಎ-ಇಸ್ಲಾಮಿ’ ತನ್ನ ಜಾಲವನ್ನು ಹೆಚ್ಚಿಸುತ್ತಿದೆ. ಆಗಸ್ಟ್ ೫ ರಂದು ಶೇಖ ಹಸೀನಾ ಇವರು ರಾಜೀನಾಮೆ ನೀಡಿ ಪಲಾಯನ ಮಾಡಿ ಕೇವಲ ೨ ದಿನದಲ್ಲಿಯೇ ಜಮಾತ್-ಎ-ಇಸ್ಲಾಮಿಯ ಜಿಹಾದಿಗಳು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸೇರಿಕೊಂಡು ಢಾಕಾದಲ್ಲಿನ ಕುಖ್ಯಾತ ಭಯೋತ್ಪಾದಕರನ್ನು ಜೈಲಿನಿಂದ ಬಿಡಿಸಿದರು. ಆ ಸಮಯದಲ್ಲಿ ಪೊಲೀಸರು ಕೂಡ ಅಸಹಾಯಕರಾಗಿದ್ದರು. ಅವರ ಮೇಲೆ ಕೂಡ ದಾಳಿಗಳು ನಡೆಯುತ್ತಿದ್ದವು.
ಸಂಪಾದಕೀಯ ನಿಲುವು
|