‘ನಮಗೆ ಉತ್ತಮ ಸಂಬಂಧ ಬೇಕು; ಆದರೆ ಭಾರತ ನಮ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದಂತೆ ! – ಜಮಾತ್-ಎ-ಇಸ್ಲಾಮಿ ಪಕ್ಷ

ಜಮಾತ್-ಎ-ಇಸ್ಲಾಮಿ ಪಕ್ಷದ ಮುಖ್ಯಸ್ಥ ಶಫೀಕರ್ ರೆಹಮಾನ್ ಹೇಳಿಕೆ !

ಢಾಕಾ (ಬಾಂಗ್ಲಾದೇಶ) – ಜಮಾತ್-ಎ-ಇಸ್ಲಾಮಿ ಪಕ್ಷಕ್ಕೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಉತ್ತಮ ಸಂಬಂಧ ಹೊಂದಿರಬೇಕು ಎಂದೆನಿಸುತ್ತದೆ; ಆದರೆ ಭಾರತವು ನಮ್ಮ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಆ ಪಕ್ಷದ ನಾಯಕ ಶಫೀಕುರ ರಹಮಾನ ಇವರು ಹೇಳಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರು. ‘ಬಾಂಗ್ಲಾದೇಶವು ಅಮೇರಿಕ, ಚೀನಾ ಮತ್ತು ಪಾಕಿಸ್ತಾನ ಹೀಗೆ ಎಲ್ಲ ದೇಶಗಳೊಂದಿಗೆ ಬಲವಾದ ಸಂಬಂಧಗಳನ್ನು ನಿರ್ಮಿಸಬೇಕು’, ಎಂಬುದು ನಮ್ಮ ಪಕ್ಷದ ಅಭಿಪ್ರಾಯವಾಗಿದೆ’ ಎಂದು ಅವರು ಹೇಳಿದರು.
ಶಫೀಕುರ್ ರೆಹಮಾನ್ ತಮ್ಮ ಮಾತನ್ನು ಮುಂದುವರಿಸಿ,

1. ಜಮಾತೆ ಇಸ್ಲಾಮಿ ಭಾರತದ ವಿರುದ್ಧ ಇಲ್ಲ !

ಭಾರತವು ಜಮಾತ್-ಎ-ಇಸ್ಲಾಮಿ ಪಕ್ಷವನ್ನು ಭಾರತ ವಿರೋಧಿ ಎಂದು ಪರಿಗಣಿಸುತ್ತದೆ; ಆದರೆ ಇದು ತಪ್ಪು ಮತ್ತು ಇದನ್ನು ಬದಲಾಯಿಸಬೇಕು. ಜಮಾತ-ಎ- ಇಸ್ಲಾಮಿ ಯಾವುದೇ ದೇಶದ ವಿರುದ್ಧ ಇಲ್ಲ. ನಾವು ಬಾಂಗ್ಲಾದೇಶದ ಬೆಂಬಲಿಗರಾಗಿದ್ದು, ಕೇವಲ ಬಾಂಗ್ಲಾದೇಶದ ಹಿತಾಸಕ್ತಿಗಳನ್ನು ಮಾತ್ರ ರಕ್ಷಿಸಲು ಬಯಸುತ್ತೇವೆ.

2. ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಹಿಂತಿರುಗಬೇಕು !

ಒಂದು ವೇಳೆ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಹೋಗಿರದಿದ್ದರೆ ಒಳ್ಳೆಯದಾಗುತ್ತಿತ್ತು. ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಹಿಂತಿರುಗಿ ಕಾನೂನು ಎದುರಿಸಬೇಕು.

3. ‘ಭಾರತವು ತನ್ನ ವಿದೇಶಾಂಗ ನೀತಿಯನ್ನು ಪುನರ್ ಪರಿಶೀಲಿಸಬೇಕಂತೆ !

‘ಭಾರತವು ನಮ್ಮ ನೆರೆಯ ದೇಶವಾಗಿದೆ ಮತ್ತು ನಾವು ಅದರೊಂದಿಗೆ ಉತ್ತಮ, ಸ್ಥಿರ ಮತ್ತು ದ್ವಿಪಕ್ಷೀಯ ಸೌಹಾರ್ದ ಸಂಬಂಧ ಬೇಕಿದೆ; ಆದರೆ ಭಾರತವು ಭೂತಕಾಲದಲ್ಲಿ ಮಾಡಿರುವ ಕೆಲವು ವಿಷಯಗಳು ಬಾಂಗ್ಲಾದೇಶದ ಹೆಚ್ಚಿನ ಜನರಿಗೆ ಇಷ್ಟವಾಗಿರುವುದಿಲ್ಲ. ಉದಾಹರಣೆಗೆ, 2014 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ, ಢಾಕಾದಲ್ಲಿ ಭಾರತದ ಹಿರಿಯ ರಾಜಕೀಯ ಅಧಿಕಾರಿಯೊಬ್ಬರು, ‘ಯಾರು ಚುನಾವಣೆಯಲ್ಲಿ ಭಾಗವಹಿಸಬೇಕು ಮತ್ತು ಯಾರೂ ಭಾಗವಹಿಸಬಾರದು’ ಎಂದು ಹೇಳಿದ್ದರು. ಇದು ಸ್ವೀಕಾರಾರ್ಹವಲ್ಲ. ನೆರೆಯ ದೇಶಗಳು ಹೀಗೆ ಮಾಡಬಾರದು. ಭಾರತವು ತನ್ನ ವಿದೇಶಾಂಗ ನೀತಿಯನ್ನು ಮರುಪರಿಶೀಲಿಸಬೇಕು ಮತ್ತು ನೆರೆಯ ರಾಷ್ಟ್ರಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು.

4. `ಭಾರತವು ಆಣೆಕಟ್ಟೆಯಿಂದ ನೀರು ಬಿಡುವ ಬಗ್ಗೆ ಸೂಚನೆ ನೀಡಿರಲಿಲ್ಲವಂತೆ !’

‘ಬಾಂಗ್ಲಾದೇಶದಲ್ಲಿ ಬಂದಿರುವ ನೆರೆಯ ವಿಷಯದಲ್ಲಿ ರೆಹಮಾನ ಮಾತನಾಡಿ, ಭಾರತವು ಆಣೆಕಟ್ಟೆಯಿಂದ ನೀರನ್ನು ಬಿಡುತ್ತಿರುವ ಸೂಚನೆಯನ್ನು ಮೊದಲು ನೀಡಬೇಕಾಗಿತ್ತು. ಆಗ ನಮಗೆ ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಯಾವ ಸ್ಥಳದಲ್ಲಿ ಆಣೆಕಟ್ಟೆ ಇದೆಯೋ, ಅಲ್ಲಿ ಆಣೆಕಟ್ಟೆಯ ಆವಶ್ಯಕತೆಯಿರಲಿಲ್ಲ. ನೀರನ್ನು ನೈಸರ್ಗಿಕವಾಗಿ ಹರಿಯಲು ಬಿಡಬೇಕಾಗಿತ್ತು ಎಂದು ಹೇಳಿದರು.

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ‘ಅವರು ಹಿಂದೂಗಳಾಗಿದ್ದಾರೆ’ ಎಂಬ ಕಾರಣಕ್ಕೆ ದಾಳಿ ನಡೆದಿಲ್ಲವಂತೆ’ !

‘ನಾವು ಪಾಕಿಸ್ತಾನ ಸೇರಿದಂತೆ ಎಲ್ಲ ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತೇವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ `ಹಿಂದೂಗಳಾಗಿರುವುದರಿಂದ ಅವರ ಮೇಲೆ ದಾಳಿ ನಡೆದಿಲ್ಲ’ ಎಂದು ಶಫೀಕರ್ ರೆಹಮಾನ್ ಹೇಳಿದ್ದಾರೆ. (‘ನಂಬುವಂತೆ ಸುಳ್ಳು ಹೇಳು’, ಎನ್ನುವ ವೃತ್ತಿಯ ಶಫೀಕುರ್ ರೆಹಮಾನ್ ! ಬಾಂಗ್ಲಾದೇಶದಲ್ಲಿ, ಹಿಂದೂಗಳಿಗೆ ಪ್ರತಿದಿನ ಹೆಕ್ಕಿ ಹೆಕ್ಕಿ ಕೊಲ್ಲಲಾಗುತ್ತಿರುವಾಗ ರೆಹಮಾನ ಯಾವ ಆಧಾರದ ಮೇಲೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ?

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಭಾರತ ಮಧ್ಯಸ್ಥಿಕೆ ವಹಿಸದಿದ್ದರಿಂದ ಇಂದು ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ಹದಗೆಟ್ಟಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಈಗಿರುವ ಪರಿಸ್ಥಿತಿ ಬರುತ್ತಿರಲಿಲ್ಲ, ಹಾಗೆಯೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರಲಿಲ್ಲ ಮತ್ತು ಸಂಬಂಧಗಳು ಹಾಳಾಗುತ್ತಿರಲಿಲ್ಲ !