ಮೋದಿಯವರ ಮೂರನೇ ಅವಧಿ ಮತ್ತು ಭಾರತದ ಮುಂದಿರುವ ಚೀನಾದ ಗಂಡಾಂತರ

(ಎಡದಿಂದ) ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್‌

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೂರನೇ ಅಧಿಕಾರಾವಧಿಯು ಚೀನಾದ ವಿಷಯದಲ್ಲಿ, ಅಂದರೆ ವಿಶೇಷವಾಗಿ ಟಿಬೇಟ್‌ ಹಾಗೂ ತೈವಾನ ಇವುಗಳ ವಿಷಯದಲ್ಲಿ ಧೋರಣಾತ್ಮಕ ಹಾಗೂ ಎಚ್ಚರಿಕೆಯಿಂದ ಇಟ್ಟಿರುವ ದೃಷ್ಟಿಕೋನ ಕಾಣಿಸುತ್ತದೆ. ಇದರಿಂದ ಮುಂದೆ ಜಗಳಗಳು ಹೆಚ್ಚಾಗುವ ಸಾಧ್ಯತೆ ಇದೆ. ಭಾರತ ಮತ್ತು ಚೀನಾದ ನಡುವಿನ ಸಂಬಂಧವು ಮಹತ್ವದ್ದಾಗಿದ್ದು ವೈಚಾರಿಕ ಹಾಗೂ ರಾಜಕೀಯ ಹಂತದಲ್ಲಿ ಈ ವಿಷಯದಲ್ಲಿ ಯಾವಾಗಲೂ ಚರ್ಚೆಗಳು ನಡೆಯುತ್ತಿರುತ್ತವೆ. ಮೋದಿಯವರ ಸರಕಾರ ತನ್ನ ಮೂರನೇ ಅವಧಿಯನ್ನು ಆರಂಭಿಸಿದ್ದು ಈ ಸರಕಾರ ಹಿಂದಿನ ನಿಲುವನ್ನೇ ಮುಂದುವರಿಸಲಿದೆಯೋ ಅಥವಾ ಹೊಸ ದೃಷ್ಟಿಕೋನವನ್ನು ಅಳವಡಿಸಲಿದೆ ? ಎಂಬ ವಿಷಯದಲ್ಲಿ ಇನ್ನೂ ಅನಿಶ್ಚಿತತೆಯಿದೆ. ಈ ವಿಷಯದಲ್ಲಿ ವಿಚಾರಮಂಥನ ಮಾಡುವ ಲೇಖನ ಇದಾಗಿದೆ.

೧. ಉಭಯಪಕ್ಷಗಳ ಹಿತಸಂಬಂಧದ ರೂಪುರೇಷೆ ಸಡಿಲವಾಗಿರುವುದು

ಚೀನಾವು ಅರ್ಥವ್ಯವಸ್ಥೆಯಲ್ಲಿ ಗಳಿಸುತ್ತಿರುವ ಲಾಭ ಹಾಗೂ ಅದು ಭಾರತ-ಚೀನಾದ ೩ ಸಾವಿರದ ೪೪೦ ಕಿಲೋಮೀಟರ್‌ ಉದ್ದದ ನಿಯಂತ್ರಣರೇಖೆಯನ್ನು ಬದಲಾಯಿಸಲು ಮಾಡು ತ್ತಿರುವ ಪ್ರಯತ್ನದಿಂದ ೧೯೯೦ ರಲ್ಲಿ ಸ್ಥಾಪಿಸಲಾದ ಎರಡೂ ದೇಶಗಳಲ್ಲಿನ ಹಿತಸಂಬಂಧವನ್ನು ಸುಧಾರಿಸಲು ನಿರ್ಧರಿಸಿದ ರೂಪುರೇಷೆಯು ಸಡಿಲಗೊಂಡಿದೆ. ೨೦೨೦ ರಲ್ಲಿ ಉಭಯಪಕ್ಷ ಗಳ ಹಿತಸಂಬಂಧವನ್ನು ಕಾಯ್ದುಕೊಳ್ಳಲು ಚೀನಾ ತನ್ನ ಪೂರ್ವ ಸ್ಥಿತಿಗೆ ಬರಬೇಕೆಂದು ಭಾರತವು ಮಾಡಿದ ಪ್ರಯತ್ನಗಳು ವಿಫಲವಾಗಿವೆ. ಆದ್ದರಿಂದ ಭಾರತ ಅಪಾಯಕಾರಿಯಾದ ಭಾರತ-ಚೀನಾ ಸೈನ್ಯ ಸಂಘರ್ಷವನ್ನು ಎದುರಿಸಬೇಕಾಗುತ್ತಿದೆ..

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೨. ಉಭಯ ದೇಶಗಳಲ್ಲಿನ ಸಂಬಂಧದ ವಿಷಯದಲ್ಲಿ ಹೊಸ ರೂಪುರೇಷೆ ಆವಶ್ಯಕ 

ಅಂತಿಮಸ್ತರದ ಆಪತ್ಕಾಲೀನ ಸಂಘರ್ಷವನ್ನು ತಪ್ಪಿಸಲು ಭಾರತ ಮತ್ತು ಚೀನಾ ಈ ಉಭಯ ದೇಶಗಳ ನಡುವಿನ ಸಂಘರ್ಷದ ವಿಷಯದಲ್ಲಿ ತುರ್ತಾಗಿ ಹೊಸ ನಿಲುವನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ; ಆದರೆ ಈ ೨ ದೇಶಗಳ ಪೈಕಿ ಚೀನಾದ ವರ್ಚಸ್ಸು ಪ್ರಬಲವಾಗಿರುವುದರಿಂದ ಭಾರತದ ಮುಂದೆ ‘ಚೀನಾದ ಮಾತನ್ನು ಒಪ್ಪಿಕೊಳ್ಳುವುದು ಅಥವಾ ಅದರ ಮೇಲೆ ಆಕ್ರಮಣ ಮಾಡುವುದು’, ಇದು ಅದರ ಮುಂದಿರುವ ಪರ್ಯಾಯವಾಗಿದೆ. ಉಭಯ ದೇಶಗಳ ನಡುವೆ ಸೈನ್ಯದ ಸ್ತರದಲ್ಲಿ ನಡೆದಿರುವ ೨೧ ಸಭೆಗಳಿಂದ ಸ್ವಲ್ಪ ಪ್ರಮಾಣದಲ್ಲಿ ಪ್ರಗತಿ ಆಗಿದೆ; ಆದರೆ ನಿಯಂತ್ರಣರೇಖೆಯ ಜಗಳವನ್ನು ನಿವಾರಿಸಲು ಅದು ಸಾಲದು.

೩. ಭಾರತದ ಧೋರಣಾತ್ಮಕ ಪ್ರತಿಕ್ರಿಯೆ

ಪ್ರಸ್ತುತ ಇರುವ ಗೊಂದಲದಲ್ಲಿಯೆ ಭಾರತ ತನ್ನ ಗಡಿಯಲ್ಲಿನ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ ಹಾಗೂ ಬಾಹ್ಯತಃ ಅಮೇರಿಕಾ ಮತ್ತು ಅದರ ಜೊತೆಗಿರುವ ರಾಷ್ಟ್ರಗಳೊಂದಿಗೆ ಸಾಮೀಪ್ಯವನ್ನು ಸಾಧಿಸಿ ಸಮತೋಲನವನ್ನು ಕಾಪಾಡುವ ಪ್ರಯೋಗ ಮಾಡುತ್ತಿದೆ; ಆದರೆ ಈ ಉಪಾಯಯೋಜನೆಯಿಂದ ಚೀನಾದ ಭಾರತವಿರೋಧಿ ನಿಲುವಿನ ತೀವ್ರತೆಯನ್ನು ಸ್ವಲ್ಪವೂ ಕಡಿಮೆ ಮಾಡಲು ಸಾಧ್ಯವಾಗಿಲ್ಲ.

೪. ಚೀನಾದ ದೃಷ್ಟಿಕೋನ

ಉಭಯ ದೇಶಗಳ ಮುಖಂಡರ ಉನ್ನತ ಮಟ್ಟದ ಸಭೆ ನಡೆಯುತ್ತಿರುವಾಗಲೂ ಚೀನಾದ ಸೈನಿಕರು ಭಾರತೀಯ ಗಡಿಯ ಒಳಗೆ ನುಸುಳುವುದು ಹಾಗೆಯೇ ನಡೆದಿದೆ. ನಿಯಂತ್ರಣ ರೇಖೆಯಲ್ಲಿ ಸತ್ಯಂತ ಕೆಟ್ಟ ಪರಿಸ್ಥಿತಿಯ ವಿಷಯದಲ್ಲಿ ಚೀನಾ ಸಿದ್ಧತೆಯನ್ನು ಮಾಡುತ್ತಿದ್ದು ‘ಭಾರತ ಸಹಕರಿಸುವುದಿಲ್ಲ’, ಎನ್ನುವ ಆರೋಪ ಚೀನಾದ್ದಾಗಿದೆ.

೫. ವಿದೇಶಗಳೊಂದಿಗೆ ಪಾಲುದಾರಿಕೆ ಮಾಡಿ ಲಾಭವನ್ನು ಗಳಿಸಲು ಭಾರತದ ಪ್ರಯತ್ನ

ಈ ಪರಿಸ್ಥಿತಿಯನ್ನು ಎದುರಿಸಲು ಹೆಚ್ಚೆಚ್ಚು ಪರ್ಯಾಯಗಳನ್ನು ನಿರ್ಮಾಣ ಮಾಡಲು ಭಾರತವು ಅಮೇರಿಕಾ ಹಾಗೂ ಅದರ ಜೊತೆಗಿರುವ ರಾಷ್ಟ್ರಗಳೊಂದಿಗೆ ಪಾಲುದಾರಿಕೆ ಮಾಡಿ ಲಾಭಗಳಿಸಲು ಪ್ರಯತ್ನಿಸುತ್ತಿದೆ. ಸದ್ಯದ ಚಟುವಟಿಕೆಗಳೆಂದರೆ ಟಿಬೇಟ್‌ನಲ್ಲಿನ ಸ್ಥಳಗಳ ಹೆಸರನ್ನು ಬದಲಾಯಿಸುವ ಭಾರತದ ನಿಯೋಜನೆ ಹಾಗೂ ಟಿಬೇಟ್‌ಗೆ ಬೆಂಬಲ ನೀಡುವ ದ್ವಿಪಕ್ಷೀಯ ಅಮೇರಿಕಾ ಕಾಂಗ್ರೆಸ್ಸಿನ ಪ್ರತಿನಿಧಿ ಮಂಡಳಿಯ ಯಜಮಾನನ ಹುದ್ದೆಯನ್ನು ಭಾರತ ಸ್ವೀಕರಿಸಿರುವ ವಿಷಯದಲ್ಲಿ ಚೀನಾದ ಆಕ್ರಮಣದ ವಿರುದ್ಧ ಭಾರತ ಪ್ರಬಲವಾದ ನಿಲುವು ತಳೆದಿರುವುದು ಕಂಡುಬರುತ್ತಿದೆ.

೬. ಭಾರತದ ಆರ್ಥಿಕ ಹಾಗೂ ರಾಜಕೀಯ ನಡೆ

ಚೀನಾದಲ್ಲಿ ನೇರವಾಗಿ ವಿಮಾನಸೇವೆಯನ್ನು ಆರಂಭಿಸಲು ನಿರಾಕರಿಸುವುದು ಹಾಗೂ ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನ್‌ಪಿಂಗ್‌ ಇವರೊಂದಿಗೆ ನೇರವಾಗಿ ಮಾತುಕತೆ ನಡೆಸದಿರುವುದು, ಇಂತಹ ಹೆಜ್ಜೆಗಳನ್ನು ಮೋದಿ ಸರಕಾರ ಇಟ್ಟಿದೆ. ಮೋದಿ ಸರಕಾರದ ಈ ಆಟವು ಭಾರತಕ್ಕೆ ಲಾಭಗಳಿಸಿಕೊಡುವ ಹಾಗೂ ಚೀನಾ ಯೋಗ್ಯ ಒಪ್ಪಂದ ಮಾಡುವಂತೆ ಒತ್ತಾಯಪಡಿಸುವುದೇ ಈ ನಿಲುವಿನ ದೊಡ್ಡ ಉದ್ದೇಶವಾಗಿದೆ.

೭. ಚೀನಾದ ಧೋರಣಾತ್ಮಕ ಸಮೀಕರಣಗಳು ಗಡಿರೇಖೆಯಲ್ಲಿನ ಗೊಂದಲಗಳಿಗೆ ಉಪಾಯವನ್ನು ಹುಡುಕಿ

ಉಭಯ ದೇಶಗಳಲ್ಲಿನ ಸಂಬಂಧವನ್ನು ಮೊದಲಿನ ಸ್ಥಿತಿಗೆ ತರುವ ಭಾರತದ ಪ್ರಯತ್ನಗಳನ್ನು ಚೀನಾ ಮಾತ್ರ ‘ಭಾರತದ ಉದ್ಧಟತನ’ ಎಂಬ ದೃಷ್ಟಿಕೋನದಿಂದ ನೋಡುತ್ತಿದೆ. ತನ್ನ ಸ್ಥಿರವಾದ ಸ್ಥಾನಗಳ ವಿಷಯದಲ್ಲಿ ಅದರ ಆತ್ಮವಿಶ್ವಾಸ ದೃಢವಾಗಿದೆ. ‘ಭಾರತ ಗತಿಶೀಲ ಮುತ್ಸದ್ದಿತನದಿಂದ ಹಾಗೂ ಪಾಶ್ಚಾತ್ಯ ದೇಶಗಳೊಂದಿಗೆ ಸಂಬಂಧವನ್ನು ದೃಢಪಡಿಸುವುದನ್ನು ಮಾಡಿದರೂ ಕೊನೆಗೆ ಭಾರತ ಏಶಿಯಾದಲ್ಲಿನ ಚೀನಾದ ವರ್ಚಸ್ಸನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ’, ಎನ್ನುವ ವಿಶ್ವಾಸ ಚೀನಾಕ್ಕಿದೆ.

೮. ಮಾನಸಿಕ ಒತ್ತಡ ತರುವ ಒತ್ತಡಯುಕ್ತ ಯುದ್ಧ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚೆಗಿನ ನಡವಳಿಕೆಯಿಂದ ಭಾರತ ಮತ್ತು ಚೀನಾದ ನಡುವೆ ಮಾನಸಿಕ ಒತ್ತಡ ಭರಿತ ಯುದ್ಧ ಆರಂಭವಾಗಿರುವುದು ಕಾಣಿಸುತ್ತದೆ. ಆದರೂ ವಿದೇಶಗಳೊಂದಿಗೆ ಸಂಬಂಧವನ್ನಿಟ್ಟು ಸಮತೋಲನ ಸಾಧಿಸುವುದು ಹಾಗೂ ಶೀಘ್ರಗತಿಯಲ್ಲಿ ಹೆಚ್ಚುತ್ತಿರುವ ಅರ್ಥವ್ಯವಸ್ಥೆಯು ಭಾರತದ ಮುಂದಿರುವ ಎಲ್ಲಕ್ಕಿಂತ ಉತ್ತಮ ಪರ್ಯಾಯವಾಗಿದ್ದರೂ, ಅಮೇರಿಕಾದಲ್ಲಿನ ರಾಷ್ಟ್ರಾಧ್ಯಕ್ಷರ ಹುದ್ದೆಯ ಚುನಾವಣೆಯ ವಿಶೇಷ ಪ್ರಭಾವವು ಈ ಭೂರಾಜಕೀಯ ಸ್ಥಿತಿಯ ಮೇಲಾಗÀಬಹುದು. ಆದ್ದರಿಂದ ಚೀನಾಗೆ ಸಂಬಂಧಿಸಿದ ಮಾರ್ಗಗಳು ಸವಾಲುಗಳಿಂದ ತುಂಬಿವೆ.

– ಬ್ರಿಗೇಡಿಯರ್‌ ಹೇಮಂತ ಮಹಾಜನ (ನಿವೃತ್ತ), ಪುಣೆ