ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರ ಭರವಸೆ
ನವ ದೆಹಲಿ – ಶ್ರೀಲಂಕಾದ ಭೂಮಿಯನ್ನು ಭಾರತದ ವಿರುದ್ಧ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ, ಎಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಭರವಸೆ ನೀಡಿದ್ದಾರೆ. ಅವರು ರಾಷ್ಟ್ರಪತಿಯಾದ ಬಳಿಕ 2 ದಿನಗಳ ಭಾರತ ಪ್ರವಾಸಕ್ಕೆ ಬಂದಿದ್ದಾರೆ. ಅವರು ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಆ ಸಮಯದಲ್ಲಿ ಅವರು ಮೇಲಿನಂತೆ ಭರವಸೆ ನೀಡಿದರು. ಅಧ್ಯಕ್ಷರಾದ ನಂತರ ಅನುರಾ ಕುಮಾರ ದಿಸಾನಾಯಕೆ ಅವರ ಮೊದಲ ವಿದೇಶಿ ಪ್ರವಾಸ ಇದಾಗಿದೆ.
ರಾಷ್ಟ್ರಪತಿ ದಿಸಾನಾಯಕೆ ಮಾತನಾಡಿ, ಶ್ರೀಲಂಕಾ ಭಾರತದ ನೆರವಿನೊಂದಿಗೆ ಮುಂದುವರಿಯುವುದು ಮತ್ತು ನೆರೆಯ ದೇಶಕ್ಕೆ ಬೆಂಬಲವನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಸುಮಾರು 2 ವರ್ಷಗಳ ಹಿಂದೆ ನಾವು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದೇವೆ. ಆ ಸಂಕಟದಿಂದ ಹೊರಬರಲು ಭಾರತ ನಮಗೆ ಸಾಕಷ್ಟು ಸಹಾಯ ಮಾಡಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ಶ್ರೀಲಂಕಾಕ್ಕೆ ಮಹತ್ವದ ಸ್ಥಾನವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಧ್ಯಕ್ಷರಾದ ಬಳಿಕ ನಿಮ್ಮ ಮೊದಲ ವಿದೇಶಿ ಭೇಟಿಗೆ ನೀವು ಭಾರತವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ’, ಈ ಭೇಟಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ. ನಮ್ಮ ಪಾಲುದಾರಿಕೆಗೆ ನಾವು ಭವಿಷ್ಯವಾದಿ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದೇವೆ’, ಎಂದು ಹೇಳಿದರು.
ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರು ರಾಜ್ಘಾಟ್‌ನಲ್ಲಿ ಮೋಹನದಾಸ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಅವರು ಮಾತನಾಡುತ್ತಾ, ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ಶಾಶ್ವತ ಮೌಲ್ಯಗಳು ಪ್ರಪಂಚದಾದ್ಯಂತ ಮಾನವೀಯತೆಯನ್ನು ಪ್ರೇರೇಪಿಸುತ್ತಿವೆ’, ಎಂದು ಹೇಳಿದರು. (ಭಾರತದಲ್ಲಿರುವ ಹಿಂದೂಗಳಿಗೆ ಈ ಮೌಲ್ಯಗಳಲ್ಲಿ ಎಷ್ಟು ನಿರರ್ಥಕತೆಯಿದೆ, ಎನ್ನುವುದು ಈಗ ಗಮನಕ್ಕೆ ಬರುತ್ತಿದೆ. ಈ ತಥಾಕಥಿತ ಮೌಲ್ಯಗಳಿಂದಾಗಿ ಹಿಂದೂಗಳಿಗೆ ಆತ್ಮಘಾತವಾಯಿತು. ಅವರ ದೇಶದ ಇಬ್ಭಾಗವಾಯಿತು ! – ಸಂಪಾದಕರು)
ಸಂಪಾದಕೀಯ ನಿಲುವುಭಾರತದ ವಿರೋಧವನ್ನು ಧಿಕ್ಕರಿಸಿ ಭಾರತದ ಮೇಲೆ ಬೇಹುಗಾರಿಕೆ ಮಾಡುವ ಚೀನಾ ಹಡಗನ್ನು ಶ್ರೀಲಂಕಾದಲ್ಲಿ ನಿಲ್ಲಿಸಲು ಅಲ್ಲಿನ ಸರಕಾರ ಅನುಮತಿ ನೀಡಿತ್ತು. ಆದ್ದರಿಂದ ಭೂಮಿ ಮಾತ್ರವಲ್ಲ, ‘ಶ್ರೀಲಂಕಾದ ಸಮುದ್ರ ಪ್ರದೇಶ ಮತ್ತು ಬಂದರುಗಳನ್ನು ಯಾರಿಗೂ ಬಳಸಲು ಬಿಡುವುದಿಲ್ಲ’, ಎಂದು ದಿಸಾನಾಯಕೆ ಹೇಳಬೇಕು ! |