ಭಾರತದ ಮೊದಲ ಮಹಿಳಾ ಗೂಢಚಾರಿಣಿ ಸೈನಿಕ ನೀರಾ ಆರ್ಯಾ !

೧೫ ಆಗಸ್ಟ್ ೨೦೨೪ ರಂದು ಇರುವ ‘ಸ್ವಾತಂತ್ರ್ಯದಿನ’ದ ನಿಮಿತ್ತ …

ನೀರಾ ಆರ್ಯಾ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಒಂದು ಕುಟುಂಬದ ಸುತ್ತಲೂ ಕೇಂದ್ರೀಕರಿಸಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಯೋಗದಾನ ನೀಡಿದ ಅನೇಕ ವ್ಯಕ್ತಿಗಳನ್ನು ಇತಿಹಾಸದ ಪುಟಗಳಲ್ಲಿ ಉದ್ದೇಶಪೂರ್ವಕವಾಗಿ ಲುಪ್ತ ಮಾಡಲಾಯಿತು. ಇಂದು ಅದೇ ಕುಟುಂಬದ ಮುಂದಿನ ಪೀಳಿಗೆಯು ಆ ಇತಿಹಾಸವನ್ನು ಓದದೆ ತಾಳಮೇಳವಿಲ್ಲದ ಹೇಳಿಕೆಗಳನ್ನು ನೀಡುತ್ತಿದೆ, ಆಗ ನನಗೆ ಅವರ ಬುದ್ಧಿಯ ಬಗ್ಗೆ ಕನಿಕರ ಮೂಡುತ್ತದೆ. ಬ್ರಿಟಿಷರ ಕಾಲದಲ್ಲಿನ ಕರಿನೀರಿನ ಶಿಕ್ಷೆ ಯಾವ ರೀತಿಯದಾಗಿತ್ತು ? ಎಂಬುದನ್ನು ತಿಳಿದುಕೊಳ್ಳದೇ ಅನೇಕರು ಅದರ ಬಗ್ಗೆ ತಮ್ಮ ಅಲ್ಪಬುದ್ಧಿಯನ್ನು ಪ್ರದರ್ಶಿಸುತ್ತಿರುತ್ತಾರೆ. ಅದೇ ಅಂಡಮಾನದ ಕತ್ತಲೆಯ ಗೋಡೆಯಲ್ಲಿ ಇತಿಹಾಸದ ಒಂದು ಪುಟವನ್ನು ಲುಪ್ತಗೊಳಿಸಲಾಯಿತು. ಆ ವಿಷಯದ ಬಗ್ಗೆ ಭಾರತೀಯರಿಗೆ ಇಂದು ಕೂಡ ಏನೂ ಗೊತ್ತಿಲ್ಲ. ಆ ವಿಷಯವೇ ವೀರ ‘ನೀರಾಳ’ ಬಗ್ಗೆ ಇದೆ, ಅವಳು ಅನೇಕ ಯಾತನೆಗಳನ್ನು ಭೋಗಿಸುವಾಗ ಕೂಡ ದೇಶಕ್ಕೆ ದ್ರೋಹ ಬಗೆಯಲಿಲ್ಲ. ಅವಳು ದೇಶಕ್ಕಾಗಿ ತನ್ನ ಪತಿಯ ಪ್ರಾಣವನ್ನು ತೆಗೆಯಲು ಹಿಂದು-ಮುಂದೆ ನೋಡಲಿಲ್ಲ.; ಈ ವಿಷಯವಿದೆ ಓರ್ವ ನೀರಾಳ, ಅವಳು ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವದ ಬಗ್ಗೆಯೂ ಎಂದಿಗೂ ಚಿಂತೆಯನ್ನು ಮಾಡಲಿಲ್ಲ; ಆದರೆ ಸ್ವತಂತ್ರ ಭಾರತದಲ್ಲಿ ಮಾತ್ರ ಅವಳು ಗುಡಿಸಿಲಿನಲ್ಲಿ ವಾಸಿಸಬೇಕಾಯಿತು, ಏಕೆಂದರೆ ಇತಿಹಾಸದ ಇಂತಹ ಎಷ್ಟೋ ಸುವರ್ಣಪುಟಗಳನ್ನು ಒಂದು ಕುಟುಂಬಕ್ಕಾಗಿ ಉದ್ದೇಶಪೂರ್ವಕವಾಗಿ ಮುಚ್ಚಿಡಲಾಯಿತು.

೧. ನೀರಾ ಆರ್ಯಾ ಇವರ ಶಿಕ್ಷಣ ಹಾಗೂ ಆಝಾದ್‌ ಹಿಂದ್‌ ಸೇನೆಯಲ್ಲಿ ಪ್ರವೇಶ

೫ ಮಾರ್ಚ್ ೧೯೦೨ ರಂದು ಉತ್ತರಪ್ರದೇಶದ ಬಾಗಪತ ಜಿಲ್ಲೆಯಲ್ಲಿ ನೀರಾ ಆರ್ಯರ ಜನ್ಮವಾಯಿತು. ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದ ನೀರಾ ಇವರ ಶಿಕ್ಷಣ ಕೋಲಾಕಾತಾದಲ್ಲಿ ಆಯಿತು. ಚಿಕ್ಕಂದಿನಿಂದಲೇ ಅವರಲ್ಲಿ ದೇಶಭಕ್ತಿ ಸೇರಿಕೊಂಡಿತ್ತು. ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡಲು ಅವರು ತಮ್ಮ ಪ್ರಾಣವನ್ನೂ ಆಹುತಿ ಕೊಡಲು ಸಿದ್ಧರಾಗಿದ್ದರು. ಶಾಲೆಯ ಶಿಕ್ಷಣ ಮುಗಿದ ನಂತರ ದೇಶಪ್ರೇಮದ ಹುಚ್ಚು ಅವರನ್ನು ಶಾಂತ ಕುಳಿತುಕೊಳ್ಳಲು ಬಿಡಲಿಲ್ಲ. ಅದೇ ಆಸಕ್ತಿಯಿಂದ ಅವರು ನೇತಾಜಿ ಸುಭಾಷ್ಚಂದ್ರ ಬೋಸ್‌ ಇವರ ಆಝಾದ್‌ ಹಿಂದ್‌ ಸೇನೆಯಲ್ಲಿನ ‘ಝಾನ್ಸಿ ರಾಣಿ ರೆಜಿಮೆಂಟ್‌’ನಲ್ಲಿ ಪ್ರವೇಶ ಪಡೆದರು. ನೇತಾಜಿಯವರು ಅವರಿಗೆ ಸರಸ್ವತಿ ರಾಜಾಮಣಿ ಇವರ ಜೊತೆಗೆ ಬೇಹುಗಾರಿಕೆಯನ್ನು ಮಾಡುವ ಹೊಣೆಯನ್ನು ನೀಡಿದರು. ಅವರು ದೇಶದ ಮೊದಲ ಮಹಿಳಾ ಗೂಢಚಾರಿಣಿ ಸೈನಿಕರಾದರು. ಕೆಲವೊಮ್ಮೆ ಹುಡುಗಿ, ಕೆಲವೊಮ್ಮೆ ಪುರುಷರಾಗಿ ಬ್ರಿಟಿಷ ಅಧಿಕಾರಿ ಹಾಗೂ ಆಂಗ್ಲರ ಸೇನಾತಾಣದಲ್ಲಿನ ಮಾಹಿತಿಯನ್ನು ಅವರು ಆಝಾದ್‌ ಹಿಂದ್‌ ಸೇನೆಗೆ ಪೂರೈಸುತ್ತಿದ್ದರು. ಅವರ ದೇಶಸೇವೆ ಮನೆಯವರಿಗೆ ತಿಳಿಯದೇ ನಡೆಯುತ್ತಿತ್ತು.

ಶ್ರೀ. ವಿನೀತ ವರ್ತಕ

೨. ನೇತಾಜಿ ಸುಭಾಷ್ಚಂದ್ರ ಬೋಸ್‌ರ ಜೀವವನ್ನು ಉಳಿಸಲು ಪತಿಯ ಕರುಳನ್ನು ಹೊರತೆಗೆದ ನೀರಾ ಆರ್ಯ !

ಅವರ ಈ ಗೂಢಚಾರಿಕೆಯ ಮಾಹಿತಿ ಇಲ್ಲದ ಅವರ ಮನೆಯವರು ಬ್ರಿಟಿಷ ಸೇನೆಯಲ್ಲಿನ ಓರ್ವ ಪ್ರತಿಷ್ಠಿತ ಅಧಿಕಾರಿಯೊಂದಿಗೆ ಅವರ ವಿವಾಹವನ್ನು ನಿಶ್ಚಯಿಸಿದರು. ಆ ಅಧಿಕಾರಿಯ ಹೆಸರು ಶ್ರೀಕಾಂತ ಜಯ ರಾಜನ್‌ ದಾಸ್‌ ! ವಿವಾಹದ ಸಡಗರದ ದಿನಗಳು ಮುಗಿದಂತೆ ಅವರ ಮತ್ತು ಅವರ ಪತಿಯ ವಿಚಾರಗಳ ನಡುವೆ ಕಂದಕ ಹೆಚ್ಚಾಗತೊಡಗಿತು. ಶ್ರೀಕಾಂತ ದಾಸ ಇವರಿಗೆ ನೀರಾ ಇವಳ ಇನ್ನೊಂದು ರೂಪದ ಕಲ್ಪನೆ ಬಂದಿತು. ‘ನೀರಾ ಬ್ರಿಟಿಷ ಆಡಳಿತದ ವಿರುದ್ಧ ಬೇಹುಗಾರಿಕೆ ಮಾಡಿ ಆಝಾದ್‌ ಹಿಂದ್‌ ಸೇನೆಗೆ ಸಹಾಯ ಮಾಡುತ್ತಿದ್ದಾಳೆ’, ಎಂಬುದು ತಿಳಿದ ನಂತರ ಅವರು ನೇತಾಜಿಯವರ ಬಗ್ಗೆ ವಿಚಾರಿಸಲು ಆರಂಭಿಸಿದರು. ನೇತಾಜಿಯವರ ವಿಳಾಸವನ್ನು ಹೇಳಬೇಕೆಂದು ಅವರಿಗೆ ಅನೇಕ ವಿಧಗಳಲ್ಲಿ ಬಲವಂತ ಮಾಡಿದರು; ಆದರೆ ನೀರಾ ಯಾವುದಕ್ಕೂ ಮಣಿಯಲಿಲ್ಲ. ತದ್ವಿರುದ್ಧ ನೀರಾ ಇನ್ನೂ ವೇಗದಿಂದ ತಮ್ಮನ್ನು ಸ್ವಾತಂತ್ರ್ಯಹೋರಾಟದಲ್ಲಿ ಸಮರ್ಪಿಸಿಕೊಂಡರು. ಒಮ್ಮೆ ಒಂದು ಮಹತ್ವದ ಮಾಹಿತಿಯನ್ನು ನೇತಾಜಿಯವರಿಗೆ ತಿಳಿಸಲು ನೀರಾ ಒಂದು ರಹಸ್ಯ ಭೇಟಿಗಾಗಿ ಹೊರಟಿದ್ದರು, ಇದರ ಸುಳಿವು ಶ್ರೀಕಾಂತ ದಾಸರಿಗೆ ಸಿಕ್ಕಿತು. ಅವರು ಎಚ್ಚರಿಕೆಯಿಂದ ನೀರಾ ಇವರನ್ನು ಹಿಂಬಾಲಿಸಿದರು. ನೇತಾಜಿಯವರೊಂದಿಗೆ ಭೇಟಿಯಾಗುತ್ತಿರುವಾಗ ಶ್ರೀಕಾಂತ ನೇತಾಜಿಯವರ ದಿಕ್ಕಿಗೆ ಗುಂಡು ಹಾರಿಸಿದರು. ಆದರೆ ಆ ಗುಂಡು ನೇತಾಜಿಯವರ ವಾಹನಚಾಲಕನಿಗೆ ತಗಲಿತು. ಮುಂದೇನಾಗಬಹುದು, ಎಂಬುದು ನೀರಾ ಇವರಿಗೆ ಕಲ್ಪನೆ ಬಂದಿತು. ಆಗ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ನೀರಾ ತನ್ನಲ್ಲಿದ್ದ ಚೂರಿಯಿಂದ ತನ್ನ ಪತಿಯ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರಗೆ ತೆಗೆದು ನೇತಾಜಿ ಸುಭಾಷ್ಚಂದ್ರರ ಜೀವ ಉಳಿಸಿದರು.

೩. ನೇತಾಜಿಯವರ ವಿಳಾಸವನ್ನು ಹೇಳಲು ನಿರಾಕರಿಸಿದ್ದರಿಂದ ಜೈಲರ್‌ ನೀರಾ ಇವರಿಗೆ ನೀಡಿದ ಅಘೋರಿ ಶಿಕ್ಷೆ !

ಒಬ್ಬ ಬ್ರಿಟಿಷ ಅಧಿಕಾರಿಯ ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಸರಕಾರ ನೀರಾ ಆರ್ಯರನ್ನು ಕರಿನೀರಿನ ಜೀವಾವಧಿ ಶಿಕ್ಷೆಗಾಗಿ ಸೆಲ್ಯುಲರ್‌ ಜೈಲ್, ಅಂದರೆ ಅಂಡಮಾನಕ್ಕೆ ಕಳುಹಿಸಿತು. ಅಲ್ಲಿ ಅತ್ಯಾಚಾರದ ಎಂದೂ ಮುಗಿಯದ ಪ್ರವಾಸ ಆರಂಭವಾಯಿತು ! ಕೊರೆಯುವ ಚಳಿಯಲ್ಲಿ ಸಣ್ಣ ಒಂದು ಸೆರೆಮನೆಯ ಕೋಣೆಯಲ್ಲಿ ಪ್ರತಿದಿನ ಅವರ ಮೇಲೆ ಅತ್ಯಾಚಾರ ಮಾಡಲಾಗುತ್ತಿತ್ತು. ದೊಡ್ಡ ಸರಪಳಿಗಳಲ್ಲಿ ಸಿಲುಕಿಸಿದ ಕೈ ಕಾಲುಗಳ ಕೋಳಗಳಿಂದ ಚರ್ಮ ಸುಲಿಯಲ್ಪಟ್ಟು ಎಲುಬುಗಳೂ ಸವೆಯುತ್ತಿದ್ದವು; ಆದರೆ ಬ್ರಿಟಿಷ ಅತ್ಯಾಚಾರ ಮುಗಿಯುತ್ತಿರಲಿಲ್ಲ. ಒಮ್ಮೆ ಜೈಲರನು (ಸೆರೆಮನೆಯ ಅಧಿಕಾರಿ) ಅವರಿಗೆ ಒಂದು ಪ್ರಸ್ತಾವನೆ ನೀಡಿದನು, ನೀನು ನೇತಾಜಿಯವರ ವಿಳಾಸ ಹೇಳಿದರೆ, ನಾವು ನಿನ್ನನ್ನು ಈ ಸಂಕೋಲೆಗಳಿಂದ ಮತ್ತು ಕಿರುಕುಳದಿಂದ ಮುಕ್ತಗೊಳಿಸುವೆವು’, ಆದರೆ ಇದಕ್ಕೆ ನೀರಾ ಒಂದು ಶಬ್ದವನ್ನೂ ಮಾತನಾಡಲು ನಿರಾಕರಿಸಿದರು. ‘ನೇತಾಜಿ ಎಲ್ಲಿರಬಹುದು ?’, ಎಂಬ ಪ್ರಶ್ನೆಗೆ ‘ಅವರು ನನ್ನ ಹೃದಯದಲ್ಲಿದ್ದಾರೆ’ ಎಂದು ಹೇಳಿದರು, ಈ ಉತ್ತರದಿಂದ ರೊಚ್ಚಿಗೆದ್ದ ಆ ಜೈಲರ ನೀರಾ ಇವರ ಬಟ್ಟೆಗಳನ್ನು ಹರಿದನು. ಅಲ್ಲಿಂದ ಕಮ್ಮಾರನನ್ನು ಕರೆದು ಇಕ್ಕಳದಿಂದ ನೀರಾರವರ ಬಲ ಸ್ತನವನ್ನು ಕತ್ತರಿಸಲು ಆದೇಶ ನೀಡಿದನು. ಆ ಕಮ್ಮಾರನು ಒಂದು ಕ್ಷಣವೂ ತಡಮಾಡದೆ ನೀರಾರವರ ಬಲ ಸ್ತನವನ್ನು ಕತ್ತರಿಸಿದನು. ‘ಪುನಃ ನನಗೆ ಪ್ರತ್ಯುತ್ತರ ನೀಡಿದರೆ ನಿನ್ನ ಎಡ ಸ್ತನವನ್ನೂ ಶರೀರದಿಂದ ಬೇರ್ಪಡಿಸುವೆನು’, ಎಂದು ಗದರಿಸಿದನು; ಆದರೂ ನೀರಾ ನೇತಾಜಿಯವರ ಬಗ್ಗೆ ಅಥವಾ ಅವರ ವಿಳಾಸದ ಬಗ್ಗೆ ಒಂದು ಶಬ್ದವನ್ನೂ ಹೇಳಲಿಲ್ಲ.

೪. ಸ್ವಾತಂತ್ರ್ಯೋತ್ತರ ಕಾಲದಲ್ಲಿ ನೀರಾ ಆರ್ಯ ಜೀವಿಸಿದ ಕಠಿಣ ಜೀವನ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಅಂಡಮಾನ ಸೆರೆಮನೆಯಿಂದ ಅವರನ್ನು ಮುಕ್ತಗೊಳಿಸಲಾಯಿತು. ತಪ್ಪು ಇತಿಹಾಸವನ್ನು ಹೇಳುವ ಜನರು ಶಿಸ್ತುಬದ್ಧ ರೀತಿಯಲ್ಲಿ ನೀರಾ ಆರ್ಯರ ಬಲಿದಾನವನ್ನು ಇತಿಹಾಸದಿಂದ ಲುಪ್ತಗೊಳಿಸಿದರು. ದೇಶಕ್ಕಾಗಿ ತನ್ನ ಪತಿಯನ್ನೇ ಹತ್ಯೆಗೈದ ಹಾಗೂ ಪ್ರಸಂಗಾನುಸಾರ ತನ್ನ ಸ್ತನವನ್ನೇ ಬಲಿದಾನ ಮಾಡಿದ ರಣರಾಗಿಣಿ ಭಾರತೀಯರ ದೃಷ್ಟಿಗೆ ಪುನಃ ಯಾವತ್ತೂ ಕಾಣಿಸಲೇ ಇಲ್ಲ. ತಮ್ಮ ಜೀವನದ ಕೊನೆಯ ಕ್ಷಣದ ವರೆಗೂ ಸರಕಾರಿ ಭೂಮಿಯಲ್ಲಿ ಒಂದು ಅನಧಿಕೃತ ಗುಡಿಸಲಿನಲ್ಲಿ ಅವರು ಭಾಗ್ಯನಗರದ (ಹೈದ್ರಾಬಾದ್‌ನ) ರಸ್ತೆಯ ಮೇಲೆ ಹೂವುಗಳನ್ನು ಮಾರುತ್ತಾ ತಮ್ಮ ಜೀವನವನ್ನು ಕಳೆದರು. ದೇಶಕ್ಕಾಗಿ ತಮ್ಮ ಸರ್ವೋಚ್ಚ ಬಲಿದಾನ ನೀಡಿದ ನೀರಾ ಆರ್ಯ ೨೬ ಜುಲೈ ೧೯೯೮ ರಂದು ಅನಂತದಲ್ಲಿ ವಿಲೀನರಾದರು. ಸರಕಾರ ಅವರ ಗುಡಿಸಲನ್ನೂ ಬುಲ್ಡೋಝರ್‌ನಿಂದ ನೆಲಸಮಗೊಳಿಸಿತು. ‘ನೀರಾ ಇವರ ಒಂದು ಸಣ್ಣ ಸನ್ಮಾನ ಮಾಡುವ ಮಾನಸಿಕತೆಯನ್ನೂ ಕಳೆದ ೭೫ ವರ್ಷಗಳಲ್ಲಿ ಭಾರತ ಸರಕಾರ ತೋರಿಸಿಲ್ಲ’, ಇದು ಭಾರತೀಯರಾದ ನಮಗೆ ಲಜ್ಜಾಸ್ಪದವಾಗಿದೆ.

೫. ಕ್ರಾಂತಿಕಾರರ ಸನ್ಮಾನ ಯಾವಾಗ ?

ಇಲ್ಲಿ ಚಲನಚಿತ್ರಗಳಲ್ಲಿ ನಟಿಸುವ ನಟರು (ಹಿರೋ) ಮತ್ತು ನೇತಾರರ ಕಾಲುಗಳನ್ನು ನೆಕ್ಕುವ ಜನರನ್ನು ‘ಪದ್ಮ’ ಪುರಸ್ಕಾರಗಳಿಂದ ಸನ್ಮಾನಿಸುತ್ತಾರೆ, ಆಗ ಇತಿಹಾಸದ ಪುಟದಲ್ಲಿ ಲುಪ್ತವಾಗಿರುವ ಇಂತಹ ಅನೇಕ ಅನಾಮಿಕ ವೀರರ ಸನ್ಮಾನವನ್ನು ಮಾಡಲು ನಾವು ಇಂದು ಕೂಡ ಮರೆತಿದ್ದೇವೆ.

ಬಾಯಿಯಲ್ಲಿ ಬಂಗಾರದ ಚಮಚವನ್ನಿಟ್ಟುಕೊಂಡು ಜನಿಸಿದ ಕೆಲವು ರಾಜಕಾರಣಿಗಳು ಸೆಲ್ಯುಲರ್‌ ಜೈಲಿನ ಶಿಕ್ಷೆಯ ವಿಷಯದಲ್ಲಿ ತಾಳಮೇಳವಿಲ್ಲದ ಹೇಳಿಕೆಗಳನ್ನು ನೀಡುವಾಗ ಅವರಿಗೆ, ”ಯಾವ ಸ್ತನದ ಹಾಲು ಕುಡಿದು ನೀವು ಈ ಜಗತ್ತಿಗೆ ಬಂದಿದ್ದೀರೊ, ಆ ಸ್ತನವನ್ನು ಸ್ತ್ರೀಯ ಶರೀರದಿಂದ ಬೇರ್ಪಡಿಸುವಾಗ ಎಷ್ಟು ಯಾತನೆಯಾಗಿರಬಹುದು? ಎಂಬುದರ ಬಗ್ಗೆ ಸ್ವಲ್ಪ ವಿಚಾರ ಮಾಡಿರಿ” ಎಂದು ಹೇಳಬೇಕೆನಿಸುತ್ತದೆ.

ನೀರಾ ಆರ್ಯರಂತಹ ಸ್ತ್ರೀಗೆ ಜನ್ಮ ನೀಡಿದ ಈ ಭಾರತ ದೇಶ ಧನ್ಯ, ದೇಶಕ್ಕಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿದ ಕ್ರಾಂತಿಕಾರಿ ಹಾಗೂ ಆಝಾದ್‌ ಹಿಂದ್‌ ಸೇನೆಯನ್ನು ನಿರ್ಮಿಸಿದ ನೇತಾಜಿಯವರು ಧನ್ಯ, ನೀರಾ ಆರ್ಯರಂತಹ ಸೈನಿಕರು ತಮ್ಮ ಯೋಗದಾನವನ್ನು ನೀಡಿದ ಆ ಆಝಾದ್‌ ಹಿಂದ್‌ ಸೇನೆ ಧನ್ಯ, ಆದರೆ ನಾವು ಮಾತ್ರ ದುರ್ದೈವಿಗಳು. ಏಕೆಂದರೆ ನಮಗೆ ತಪ್ಪು ಇತಿಹಾಸವನ್ನು ಕಲಿಸಲಾಯಿತು, ನಾವು ೭೫ ವರ್ಷಗಳಲ್ಲಿಯೂ ಇಂತಹ ಜನರ ಪ್ರಶಂಸೆಯನ್ನು ಮಾಡಲಿಲ್ಲ, ನಮಗೆ ಭಾರತದ ಸ್ವಾತಂತ್ರ್ಯ ಹೋರಾಟವೇ ತಿಳಿಯಲಿಲ್ಲ, ಆದ್ದರಿಂದ ನಾವು ದುರ್ದೈವಿಗಳು. ಭಾರತದ ಈ ಮೊದಲ ಗೂಢಚಾರಿಣಿ ನೀರಾ ಆರ್ಯ ಇವರಿಗೆ ಸಾಷ್ಟಾಂಗ ನಮಸ್ಕಾರಗಳು !’

– ಶ್ರೀ. ವಿನೀತ ವರ್ತಕ, ಅಭಿಯಂತ, ಮುಂಬಯಿ. (೧೮.೧೨.೨೦೨೨)

(ಆಧಾರ : ಶ್ರೀ. ವಿನೀತ ವರ್ತಕ ಇವರ ‘ಬ್ಲಾಗ್‌’)

ನೀರಾ ಆರ್ಯಾ