Bangladeshi Hindus Protests: ಢಾಕಾದಲ್ಲಿ ಹಿಂದುತ್ವನಿಷ್ಠ ಸಂಘಟನೆಯಿಂದ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯ ವಿರುದ್ಧ ಪ್ರತಿಭಟನೆ

‘ಹರೇ ಕೃಷ್ಣ ಹರೇ ರಾಮ’ ಜಯಭೋಷ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ರಾಜಧಾನಿ ಢಾಕಾದಲ್ಲಿ ಕೆಲವು ಪ್ರಮಾಣದಲ್ಲಿ ನಿಂತಿದೆ. ಅದರ ನಂತರ ಹಿಂದೂಗಳ ವಿರೋಧದಲ್ಲಿನ ಅತ್ಯಾಚಾರದ ಸಂದರ್ಭದಲ್ಲಿ ಇಲ್ಲಿಯ ಹಿಂದೂ ಜಾಗರಣ ಮಂಚ್ ದಿಂದ ಢಾಕಾದ ಶಾಹಬಾಗ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಢಾಕಾ ಟ್ರಿಬ್ಯೂನ್ ಈ ಬಂಗಾಲಿ ಸಮಾಚಾರ ಪತ್ರದ ಪ್ರಕಾರ ಸಾವಿರಾರು ಹಿಂದುಗಳು ಶಾಹಬಾಗ ವೃತ್ತದಲ್ಲಿ ಸೇರಿದ್ದರು ಮತ್ತು ಅವರು ಹಿಂಸಾಚಾರದ ವಿರುದ್ಧ ಧ್ವನಿಯೆತ್ತಿದರು. ಆ ಸಮಯದಲ್ಲಿ ಅವರು ‘ಹರೇ ಕೃಷ್ಣ ಹರೇ ರಾಮ’ದ ಜಯ ಘೋಷ ಮಾಡಿದರು.

ಹಿಂದೂ ಜಾಗರಣ ಮಂಚ ಆಯೋಜಕರು, ದಿನಾಜಪುರದಲ್ಲಿ ೪ ಹಿಂದೂ ಬಹುಸಂಖ್ಯಾತ ಗ್ರಾಮಗಳು ಸುಟ್ಟು ಹಾಕಿದ್ದಾರೆ. ಜನರು ನಿರಾಶ್ರಿತರಾಗಿದ್ದಾರೆ. ದೌರ್ಜನ್ಯದ ಭಯದಲ್ಲಿ ಅವರು ಅಡಿಗೆ ಕುಳಿತಿದ್ದಾರೆ. ಶೇಖ್ ಹಸಿನಾ ಇವರು ದೇಶ ತೊರೆದ ನಂತರ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚಾಗಿವೆ. ಇಂತಹ ದಾಳಿಗಳು ತಡೆಯುವುದಕ್ಕಾಗಿ ಅಲ್ಪಸಂಖ್ಯಾತ ಸಚಿವಾಲಯದ ಸ್ಥಾಪನೆ, ಅಲ್ಪಸಂಖ್ಯಾತ ರಕ್ಷಣಾ ಆಯೋಗದ ಸ್ಥಾಪನೆ ಹಾಗೂ ಕಠೋರ ಕಾನೂನು ರೂಪಿಸುವುದು ಮತ್ತು ಸಂಸತ್ತಿನಲ್ಲಿ ಅಲ್ಪಸಂಖ್ಯಾತರಿಗಾಗಿ ಶೇಕಡ ೧೦ ರಷ್ಟು ಮೀಸಲಾತಿಗಾಗಿ ನಾವು ಆಗ್ರಹಿಸಿದ್ದೇವೆ. ಹಾಗೂ ಹಿಂಸಾಚಾರದಲ್ಲಿನ ನಷ್ಟ ಪರಿಹಾರ ನೀಡಬೇಕು, ಶಿಥಿಲಗೊಡಿರುವ ದೇವಸ್ಥಾನಗಳನ್ನು ಮತ್ತೆ ಕಟ್ಟಿಸಿ ಕೊಡಬೇಕೆಂದು ಕೂಡ ಆಗ್ರಹಿಸಿದ್ದೇವೆ.

ಪ್ರತಿಭಟನಾಕಾರರು, ಇದು ನಮ್ಮ ಪೂರ್ವಜರ ಭೂಮಿ ಆಗಿದೆ. ನಾವು ಇಲ್ಲೇ ಸತ್ತರು ಚಿಂತೆ ಇಲ್ಲ, ಆದರೆ ನಾವು ನಮ್ಮ ಜನ್ಮಭೂಮಿ ಬಾಂಗ್ಲಾದೇಶ ತೊರೆಯುವುದಿಲ್ಲ. ನಮ್ಮ ಹಕ್ಕು ಪಡೆಯುವುದಕ್ಕಾಗಿ ನಾವು ಬೀದಿಗೆ ಇಳಿಯುವೆವು.

೫೨ ಜಿಲ್ಲೆಗಳಲ್ಲಿನ ಹಿಂದೂಗಳ ಮೇಲೆ ದಾಳಿ !

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಗಿದೆ

ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರೈಸ್ತ ಏಕತಾ ಪರಿಷತ್ತಿನ ಪ್ರಕಾರ ದೇಶದಲ್ಲಿನ ೬೪ ರಲ್ಲಿ ೫೩ ಜಿಲ್ಲೆಗಳಲ್ಲಿ ಹಿಂದೂ ಮತ್ತು ಅವರ ಆಸ್ತಿಯನ್ನು ಗುರಿ ಮಾಡಲಾಗಿದೆ. ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕಬೇಕಾಗುತ್ತದೆ ಎಂದು ಪರಿಷತ್ತು ಹೇಳಿದೆ. ಅವರು ಮಧ್ಯಂತರ ಸರಕಾರದ ಪ್ರಮುಖ ಮಹಮ್ಮದ ಯುನೂಸ್ ಇವರ ಬಳಿ ಭದ್ರತೆ ಹಾಗೂ ಸ್ವರಕ್ಷಣೆಗಾಗಿ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಹಿಂದೂ ಸಂಘಟನೆಗಳು ತಕ್ಷಣ ಬೀದಿಗೆ ಇಳಿದು ಪ್ರತಿಭಟನೆ ನಡೆಸುವುದು ಶ್ಲಾಘನೀಯ; ಆದರೆ ಈಗ ಅವರು ಇಷ್ಟಕ್ಕೆ ನಿಲ್ಲದೆ ಅಲ್ಲಿಯ ಹಿಂದುಗಳಿಗೆ ಸ್ವಸಂರಕ್ಷಣೆ ಕಲಿಸುವುದು ಆವಶ್ಯಕವಾಗಿದೆ !