ಬಾಂಗ್ಲಾದೇಶದಲ್ಲಿ ಪ್ರತಿ ವರ್ಷ 2,30,000 ಹಿಂದೂಗಳನ್ನು ದೇಶ ತೊರೆಯುವಂತೆ ಒತ್ತಾಯಿಸಲಾಗುತ್ತದೆ !

ನವದೆಹಲಿ – ಬಾಂಗ್ಲಾದೇಶದಲ್ಲಿ ದಂಗೆಯ ನಂತರ ಕಟ್ಟರವಾದಿಗಳ ಪ್ರಾಬಲ್ಯವು ಸೃಷ್ಟಿಸಿದ ಅರಾಜಕತೆಯಿಂದಾಗಿ ಅಲ್ಲಿನ ಹಿಂದೂ ಸಮುದಾಯವು ಆತಂಕಕ್ಕೆ ಗುರಿಯಾಗಿದೆ. ಹಿಂದೂಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಮೊದಲೇ ಬಾಂಗ್ಲಾದೇಶದಲ್ಲಿ ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸುತ್ತಿರುವ ಹಿಂದೂಗಳ ಜನಸಂಖ್ಯೆಯು ನಿರಂತರವಾಗಿ ಕಡಿಮೆಯಾಗುತ್ತಿದೆ, 1951ಕ್ಕೆ ಹೋಲಿಸಿದರೆ, ಬಾಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇಕಡಾ 14 ರಷ್ಟು ಕಡಿಮೆಯಾಗಿದೆ. ಬಾಂಗ್ಲಾದೇಶದಲ್ಲಿರುವ 2 ಲಕ್ಷದ 30 ಸಾವಿರ ಹಿಂದೂಗಳನ್ನು ಪ್ರತಿ ವರ್ಷ ದೇಶ ತೊರೆಯುವಂತೆ ಅನಿವಾರ್ಯಗೊಳಿಸಲಾಗುತ್ತದೆ.

1. 1965 ಮತ್ತು 2006ರ ನಡುವೆ, ಬಾಂಗ್ಲಾದೇಶದಲ್ಲಿ ‘ವೇಸ್ಟೆಡ್ ಪ್ರಾಪರ್ಟಿ ಆಕ್ಟ್’ (ಶತ್ರು ಆಸ್ತಿ ಕಾಯ್ದೆ) ಅಡಿಯಲ್ಲಿ ಹಿಂದೂಗಳ ಒಡೆತನದ ಸುಮಾರು 26 ಲಕ್ಷ ಎಕರೆ ಭೂಮಿಯನ್ನು ಮುಟ್ಟುಗೋಲು ಮಾಡಲಾಯಿತು. ಇದರಿಂದ 12 ಲಕ್ಷ ಹಿಂದೂ ಕುಟುಂಬಗಳು ತೊಂದರೆಗೀಡಾದವು.

2. 1980 ಮತ್ತು 1990ರ ನಡುವೆ, ಹಿಂದೂಗಳ ವಿರುದ್ಧ ಕಟ್ಟರವಾದಿ ಚಳುವಳಿಗಳು ಇನ್ನಷ್ಟು ಹೆಚ್ಚಾದವು. 1992ರಲ್ಲಿ, ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯ ಧ್ವಂಸದ ನಂತರ, ಚಿತ್ತಗಾವ ಮತ್ತು ಢಾಕಾದಲ್ಲಿನ ಅನೇಕ ಹಿಂದೂ ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿತ್ತು.

3. ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಯಿತು; ಏಕೆಂದರೆ ಅನೇಕ ಪಾಕಿಸ್ತಾನಿಗಳು ಅವರನ್ನು ಪ್ರತ್ಯೇಕತಾವಾದದ ಅಪರಾಧಿ ಎಂದು ಪರಿಗಣಿಸಿದ್ದರು. 1951ರಲ್ಲಿ ಅಧಿಕೃತ ಜನಗಣತಿಯ ಪ್ರಕಾರ ಬಾಂಗ್ಲಾದೇಶದ (ಆಗಿನ ಪೂರ್ವ ಪಾಕಿಸ್ತಾನ) ಒಟ್ಟು ಜನಸಂಖ್ಯೆಯಲ್ಲಿ 22% ರಷ್ಟು ಹಿಂದೂಗಳಿದ್ದರು. ಆದರೆ 1991ರ ಹೊತ್ತಿಗೆ, ಈ ಸಂಖ್ಯೆ 15% ಕ್ಕೆ ಇಳಿಯಿತು. 2011ರ ಜನಗಣತಿಯಲ್ಲಿ, ಈ ಸಂಖ್ಯೆ ಕೇವಲ 8.5%ಕ್ಕೆ ಬಂದಿತು. 2022ರಲ್ಲಿ, ಇದು ಶೇಕಡಾ 8ಕ್ಕಿಂತ ಕಡಿಮೆಯಾಗಿದೆ. ಅದೇ ವೇಳೆ ಮುಸ್ಲಿಮರ ಜನಸಂಖ್ಯೆಯು 1951ರಲ್ಲಿ 76% ರಷ್ಟಿತ್ತು 2022ರಲ್ಲಿ 91% ರಷ್ಟು ಏರಿಕೆಯಾಗಿದೆ.

4. ಹಿಂದೂ ಅಮೇರಿಕನ್ ಫೌಂಡೇಶನ್ ವರದಿಯ ಪ್ರಕಾರ, 1964 ರಿಂದ 2013ರ ನಡುವೆ, ಧಾರ್ಮಿಕ ಕಿರುಕುಳದಿಂದಾಗಿ 1 ಕೋಟಿ 10 ಲಕ್ಷಕ್ಕೂ ಹೆಚ್ಚು ಹಿಂದೂಗಳು ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದಾರೆ. 2011ರ ಜನಗಣತಿಯಲ್ಲಿ 2000 ರಿಂದ 2010ರ ನಡುವೆ ದೇಶದ ಜನಸಂಖ್ಯೆಯಿಂದ 10 ಲಕ್ಷ ಹಿಂದೂಗಳು ಕಣ್ಮರೆಯಾಗಿದ್ದಾರೆ!

5. ಜನವರಿ ಮತ್ತು ಜೂನ್ 2016ರ ನಡುವೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಹಿಂದೂಗಳ 66 ಮನೆಗಳನ್ನು ಸುಟ್ಟುಹಾಕಲಾಯಿತು, 24 ಜನರು ಗಾಯಗೊಂಡಿದ್ದರು ಮತ್ತು ಕನಿಷ್ಠ 49 ದೇವಾಲಯಗಳನ್ನು ನಾಶಪಡಿಸಲಾಯಿತು.

ಸಂಪಾದಕೀಯ ನಿಲುವು

ಇಸ್ಲಾಮಿಕ್ ದೇಶಗಳಲ್ಲಿನ ಹಿಂದೂಗಳ ಸ್ಥಿತಿ ಇದು ! ಈ ಬಗ್ಗೆ ಜಗತ್ತಿನ ಯಾವ ಇಸ್ಲಾಮಿಕ್ ರಾಷ್ಟ್ರವೂ ಕೂಡ ಹಿಂದೂಗಳ ಪರವಾಗಿ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ !