ದೇಶದಲ್ಲಿ ಹೊಸದಾಗಿ ಅನ್ವಯವಾದ ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಕಾನೂನುಗಳ  ಸ್ವರೂಪ !

೧. ಆಂಗ್ಲರ ಕಾಲದ ಕಾನೂನುಗಳಲ್ಲಿ ಬದಲಾವಣೆ

ಭಾರತೀಯ ಸಂಸತ್ತು ‘ಭಾರತೀಯ ದಂಡಸಂಹಿತೆ ೧೮೬೦’, ‘ಭಾರತೀಯ ಸಾಕ್ಷ್ಯ ಕಾನೂನು ೧೮೭೨’ ಮತ್ತು ‘ಭಾರತೀಯ ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆ ೧೮೮೨, ಸುಧಾರಿತ ೧೯೭೩’ ಈ ೩ ಕಾನೂನುಗಳಲ್ಲಿ ತಿದ್ದುಪಡಿ ಮಾಡಿ ಅವುಗಳನ್ನು ಡಿಸೆಂಬರ್‌ ೨೦೨೩ ರಲ್ಲಿ ಅಂಗೀಕರಿಸಲಾಯಿತು. ಅನಂತರ ಅವುಗಳಿಗೆ ೨೫.೧೨.೨೦೨೩ ರಂದು ರಾಷ್ಟ್ರಪತಿಗಳ ಮನ್ನಣೆಯೂ ಸಿಕ್ಕಿತು. ೧೮೫೭ ರ ಸಶಸ್ತ್ರ ಕ್ರಾಂತಿಯ ನಂತರ ಆಂಗ್ಲರು ಭಾರತೀಯರಿಗೆ ಕಾನೂನಿನ ಭಯ ತೋರಿಸಲು ಅನೇಕ ಕಾನೂನುಗಳೊಂದಿಗೆ ಈ ಮೇಲಿನ ಮೂರು ಕಾನೂನುಗಳನ್ನೂ ಮಾಡಿದ್ದರು. ೧೮೩೪ ರಲ್ಲಿ ಲಾರ್ಡ್ ಮೆಕಾಲೆಯ ಸದಸ್ಯತ್ವದಲ್ಲಿ ಒಂದು ಆಯೋಗವನ್ನು ನೇಮಿಸಲಾಯಿತು. ಅವನು ೧೮೬೦ ರಲ್ಲಿ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ) ಮತ್ತು ೧೮೭೨ ಮತ್ತು ೧೮೮೨ ರಲ್ಲಿ ಇನ್ನೂ ಎರಡು ಕಾನೂನುಗಳನ್ನು ರೂಪಿಸಿದನು.

೨. ಕೇಂದ್ರ ಸರಕಾರದಿಂದ ಕಾನೂನುಗಳನ್ನು ಬದಲಾಯಿಸುವ ಪ್ರಕ್ರಿಯೆ ಪ್ರಾರಂಭ 

ಆಂಗ್ಲರ ಕಾಲದ ಕಾನೂನುಗಳ ತಿದ್ದುಪಡಿಯ ಪ್ರಕ್ರಿಯೆ ಮಾರ್ಚ್ ೨೦೨೦ ರಿಂದ ನಡೆಯುತ್ತಿದೆ. ಅದಕ್ಕಾಗಿ ವಿಧಿ ಆಯೋಗದಿಂದ ಸೂಚನೆಗಳನ್ನು ತರಿಸಿಕೊಳ್ಳಲಾಯಿತು. ಕೇಂದ್ರ ಸರಕಾರವು ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ ಅಧಿನಿಯಮ’ ಈ ಮೂರೂ ಕಾಯಿದೆಗಳನ್ನು ೧೧.೮.೨೦೨೩ ರಂದು ಸಂಸತ್ತಿನಲ್ಲಿ ಮಂಡಿಸಿತು. ಅವುಗಳ ಬಗ್ಗೆ ತಕರಾರುಗಳನ್ನು, ಸಲಹೆಗಳನ್ನು ಮತ್ತು ಅಭಿಪ್ರಾಯಗಳನ್ನು ತರಿಸಲಾಯಿತು. ಅನಂತರ ೧೦.೧೧.೨೦೨೩ ರಂದು ಚರ್ಚೆ ನಡೆಯಿತು. ಅನಂತರ ಅವು ಕಾನೂನಿನಲ್ಲಿ ರೂಪಾಂತರವಾಗಿ ೯.೧೨.೨೦೨೩ ರಂದು ಅವು ಗಳನ್ನು ಅಂಗೀಕರಿಸಲಾಯಿತು. ಅವುಗಳಿಗೆ ೨೫.೧೨.೨೦೨೩

ರಂದು ರಾಷ್ಟ್ರಪತಿಗಳ ಮನ್ನಣೆ ಲಭಿಸಿತು. ಈ ಕಾನೂನುಗಳು ೧ ಜುಲೈ ೨೦೨೪ ರಿಂದ ಜ್ಯಾರಿಗೆ ಬರಲಿವೆ ಎಂದು ಕೇಂದ್ರ ಸರಕಾರವು ಹೇಳಿತ್ತು. (ಪ್ರತ್ಯಕ್ಷದಲ್ಲಿಯೂ ಈ ಕಾನೂನುಗಳು ೧ ಜುಲೈ ೨೦೨೪ ರಂದು ಅನ್ವಯವಾದವು ! – ಸಂಪಾದಕರು) ಸರಕಾರ, ತನಿಖಾ ವಿಭಾಗ, ಪೊಲೀಸ್, ನ್ಯಾಯವಾದಿಗಳು, ನ್ಯಾಯವ್ಯವಸ್ಥೆ ಮತ್ತು ಜನರಿಗೆ ಹೊಸ ಕಾನೂನುಗಳ ಅಭ್ಯಾಸಕ್ಕಾಗಿ ಸಾಕಷ್ಟು ಸಮಯ ಸಿಗಬೇಕೆಂಬುದು, ಇದರ ಹಿಂದಿನ ಉದ್ದೇಶವಾಗಿತ್ತು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೩. ಭ್ರಷ್ಟ ಹಾಗೂ ಜಾತಿವಾದಿ ಪಕ್ಷಗಳಿಂದ ವಿರೋಧ

ವಾಸ್ತವದಲ್ಲಿ ಹಳೆಯ ಕಾನೂನುಗಳನ್ನು ಬದಲಾಯಿಸುವುದು ಹಾಗೂ ಅದರಲ್ಲಿ ಸುಧಾರಣೆ ಮಾಡುವುದು ಸುಲಭವಾಗಿರುತ್ತದೆ. ಅದಕ್ಕಾಗಿ ಇಷ್ಟು ಗದ್ದಲ ಮಾಡುವ ಅವಶ್ಯಕತೆಯಿರುವುದಿಲ್ಲ್ಲ; ಆದರೆ ಹಿಂದುತ್ವನಿಷ್ಠ ವಿಚಾರವಾದಿ ಸರಕಾರ ಕೇಂದ್ರದಲ್ಲಿ ಬಂದ ನಂತರ ಭ್ರಷ್ಟ, ಜಾತಿವಾದಿ ಹಾಗೂ ಮತಾಂಧರ ಮತಗಳಿಂದ ಆರಿಸಿ ಬರುವ ಪಕ್ಷಗಳು ಈ ಕಾನೂನಿನ ವಿರುದ್ಧ ಕೋಲಾಹಲವೆಬ್ಬಿಸಿದವು. ವಾಸ್ತವವೆಂದರೆ ಕಾಂಗ್ರೆಸ್‌ ಮತ್ತು ವಿವಿಧ ಪಕ್ಷಗಳ ಸರಕಾರದ ಅವಧಿಯಲ್ಲಿ ಅನೇಕ ಕಾನೂನುಗಳನ್ನು ಬದಲಾಯಿಸಲಾಗಿದೆ; ವಿರೋಧಿಗಳು ಇನ್ನೂ ‘ಸಿಈ’ ಮತ್ತು ಕೃಷಿ ಕಾನೂನುಗಳನ್ನು ವಿರೋಧಿಸುವುದನ್ನು ಮುಂದುವರಿಸಿದ್ದಾರೆ.

೪. ಪೊಲೀಸ್, ಆಡಳಿತ ಹಾಗೂ ತನಿಖಾದಳದರಿಗೆ ಮಾರ್ಗದರ್ಶಕ ತರಬೇತಿ

ಈ ಕಾನೂನಿನ ವಿಷಯದಲ್ಲಿ ಪೊಲೀಸ್, ಆಡಳಿತ ಹಾಗೂ ತನಿಖಾದಳ ಇವರಿಗೆ ಮಾರ್ಗದರ್ಶನದ ಆವಶ್ಯಕತೆಯಿದೆ, ಎಂಬುದನ್ನು ಗಮನದಲ್ಲಿಟ್ಟು ಕೇಂದ್ರ ಸರಕಾರದಿಂದ ಈ ವಿಷಯದಲ್ಲಿಯೂ ಪ್ರಯತ್ನ ನಡೆಯಿತು. ‘೨೦೨೪-೨೫ ಈ ವರ್ಷದಲ್ಲಿ ಕಾನೂನು ವಿಷಯದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹೊಸ ಕಾನೂನಿನ ವಿಷಯದ ಪಠ್ಯಕ್ರಮನ್ನು ಸಮಾವೇಶಗೊಳಿಸಿ’, ಎಂದು ಕೇಂದ್ರ ಸರಕಾರ ‘ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ’ಗೆ ಹೇಳಿದೆ. ‘ಲಾಲ್‌ಬಹಾದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ’ಯ ಐ.ಎ.ಎಸ್. ಅಧಿಕಾರಿ ಹಾಗೂ ಭಾರತೀಯ ಪೊಲೀಸ್‌ ಸೇವೆಯಲ್ಲಿರುವ ಅಧಿಕಾರಿಗಳ ಸಹಿತ ಅಪರಾಧ ನೋಂದಣಿ ಬ್ಯುರೋ ಮತ್ತು ನ್ಯಾಯಾಂಗ ವೈದ್ಯಕೀಯ ಪ್ರಯೋಗಶಾಲೆಯ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ ಈ ಹೊಸ ಕಾನೂನಿನ ವಿಷಯದಲ್ಲಿ ಕೇಂದ್ರ ಎಲ್ಲ ರಾಜ್ಯಗಳ ಮುಖ್ಯ ಸಚಿವರೊಂದಿಗೆ ಮತ್ತು ಪೊಲೀಸ್‌ ಪ್ರಮುಖರೊಂದಿಗೆ ಸಭೆಯನ್ನೂ ತೆಗೆದುಕೊಳ್ಳಲಾಯಿತು. ಈ ಕಾನೂನಿನ ವಿಷಯದಲ್ಲಿ ಚಂಡೀಗಡದಲ್ಲಿ ಒಂದು ‘ಆಪ್‌’ಅನ್ನು ಸಹ ಆರಂಭಿಸಲಾಗಿದೆ. ಈ ವಿಷಯದಲ್ಲಿ ೫ ದಿನಗಳ ಒಂದು ‘ಕ್ರ್ಯಾಶ್‌ ಕೋರ್ಸ್‌’ (ಶೀಘ್ರ ತರಬೇತಿ ಯೋಜನೆ) ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವ ಶಾಹ ಇವರು ಹೇಳಿದ್ದಾರೆ.

೫. ಮಹಿಳೆಯರ ಮೇಲಾಗುವ ಅತ್ಯಾಚಾರಗಳ ವಿರುದ್ಧದ ಕಲಮ್‌ಗಳು

ಅ. ಈ ಕಾನೂನಿನಲ್ಲಿ ಒಂದು ಮಹತ್ವದ ಅಂಶವನ್ನು ನಮೂದಿಸಲಾಗಿದೆ. ನೌಕರಿ ಕೊಡಿಸುವುದು, ನೌಕರಿಯಲ್ಲಿ ಭಡ್ತಿ ಕೊಡಿಸುವುದು ಮುಂತಾದ ಸುಳ್ಳು ಆಶ್ವಾಸನೆಗಳನ್ನು ನೀಡಿ, ಅದೇ ರೀತಿ ತನ್ನ ಜಾತಿ ಮತ್ತು ಪಂಥವನ್ನು ಮರೆಮಾಚಿ ವಿವಾಹವಾಗುವ ವ್ಯಕ್ತಿಗೆ ೧೦ ವರ್ಷಗಳ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುವುದು. ಇದರಿಂದ ‘ಲವ್‌ ಜಿಹಾದ್‌’ಗೆ ಕಡಿವಾಣ ಬೀಳಬಹುದು.

ಆ. ಯಾವುದಾದರೂ ಮಹಿಳೆ ಅಥವಾ ಹುಡುಗಿಯ ಮೇಲೆ ಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳು ಬಲಾತ್ಕಾರ ಮಾಡಿದರೆ, ಅವರಿಗೆ ೨೦ ವರ್ಷಗಳ ವರೆಗೆ ಶಿಕ್ಷೆಯಾಗಬಹುದು. ಅದೇ ರೀತಿ ಯಾವ ಆರೋಪಿ ಈ ಹಿಂದೆಯೂ ಬಲಾತ್ಕಾರ ಮಾಡಿದ್ದಾನೆ ಹಾಗೂ ಅದರಲ್ಲಿ ಅವನಿಗೆ ಶಿಕ್ಷೆಯೂ ಆಗಿದೆ, ಇಂತಹ ಆರೋಪಿ ಪುನಃ ಅದೇ ಅಪರಾಧ ಮಾಡಿದರೆ, ಅವನಿಗೆ ಜೀವಾವಧಿ ಅಥವಾ ಸಾಯುವ ತನಕ ಸೆರೆಮನೆವಾಸ ಆಗಬಹುದು.

೬. ಖಟ್ಲೆಗಳನ್ನು ವೇಗವಾಗಿ ನಡೆಸುವಲ್ಲಿ ಉಪಯುಕ್ತ

ಆರೋಪಿಗಳಿಗೆ ಕಾನೂನಿನ ಭಯವಿಲ್ಲ. ಆ ಭಯ ಮೂಡಬೇಕು ಹಾಗೂ ಅಪರಾಧ ಕಡಿಮೆಯಾಗಬೇಕು, ಅದಕ್ಕಾಗಿ ಈ ಪರಿವರ್ತನೆ ಮಾಡಲಾಗಿದೆ. ಅದೇ ರೀತಿ ಸಣ್ಣ ಅಪರಾಧವಿದ್ದರೆ ಅಥವಾ ಯಾವುದರಲ್ಲಿ ೩ ತಿಂಗಳಿಗಿಂತ ಕಡಿಮೆ ಶಿಕ್ಷೆ ವಿಧಿಸಲಾಗಿದ್ದರೆ ಅಥವಾ ದಂಡದ ಮೊತ್ತವೂ ೩ ಸಾವಿರಕ್ಕಿಂತ ಕಡಿಮೆ ಇದ್ದರೆ, ಅವರ ಅಪೀಲಿನ ಏರ್ಪಾಡನ್ನು ತೆಗೆಯಲಾಗಿದೆ. ಹೊಸ ಕಾನೂನಿನಲ್ಲಿ ‘ಇಲೆಕ್ಟ್ರಾನಿಕ್’ ಮಾಧ್ಯಮವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲು ಸೂಚಿಸಲಾಗಿದೆ. ಉದಾ. ಆರೋಪಿ ಅಪರಾಧ ಮಾಡಿರುವ ಸ್ಥಳಕ್ಕೆ ಹೋಗಿ ಅಲ್ಲಿನ ವಸ್ತುಗಳು ಮತ್ತು ಅಪರಾಧಕ್ಕೆ ಉಪಯೋಗಿಸಿದ ಶಸ್ತ್ರಗಳ ಪಂಚನಾಮೆ ಮಾಡುವುದು, ಸಾಕ್ಷಿದಾರರ ಸಾಕ್ಷಿ ತೆಗೆದುಕೊಳ್ಳುವುದು, ಇದರಲ್ಲಿ ‘ಇಲೆಕ್ಟ್ರಾನಿಕ್’ ಮಾಧ್ಯಮಗಳನ್ನು ಉಪಯೋಗಿಸಲು ಸೂಚಿಸಲಾಗಿದೆ. ಆರೋಪಿ ಮತ್ತು ಸಾಕ್ಷಿದಾರರಿಗೆ ಸಮನ್ಸ್ ಜಾರಿ ಮಾಡುವ ಪ್ರಕ್ರಿಯೆ ನಡೆಸಲು ‘ಇಲೆಕ್ಟ್ರಾನಿಕ್’ ಮಾಧ್ಯಮಗಳ ಉಪಯೋಗುವುದರಿಂದ ಖಟ್ಲೆಗಳು ಶೀಘ್ರವಾಗಿ ನಡೆಯುವವು ಎಂಬ ಆಸೆಯನ್ನು ಇಟ್ಟುಕೊಳ್ಳಲು ತೊಂದರೆಯಿಲ್ಲ

೭. ನ್ಯಾಯವೈದ್ಯಕೀಯ ಪ್ರಯೋಗಶಾಲೆಗಳ ವರದಿ ಅನಿವಾರ್ಯಗೊಳಿಸಿರುವುದರ ವಿರುದ್ಧ ಬಂಗಾಲ ಉಚ್ಚ ನ್ಯಾಯಾಲಯದಲ್ಲಿ ಸವಾಲು

ಹೊಸ ಕಾನೂನನ್ನು ವಿರೋಧಿಸಿ ಸರ್ವೋಚ್ಚ ನ್ಯಾಯಾಲಯ ಮತ್ತು ಇನ್ನೂ ಕೆಲವು ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ದಾಖಲಿಸಲಾಗಿತ್ತು. ಅವುಗಳನ್ನು ವಿವಿಧ ಕಾರಣಗಳನ್ನು ನೀಡಿ ನ್ಯಾಯಾಲಯಗಳು ನಿರಾಕರಿಸಿವೆ. ಈ ರೀತಿ ೧.೭.೨೦೨೪ ರಿಂದ ಈ ಕಾನೂನು ಕಾರ್ಯನಿರತವಾಯಿತು. ಮುಂಬಯಿ ಮತ್ತು ದೆಹಲಿಯಲ್ಲಿ ಅನಧಿಕೃತ ಬೀದಿವ್ಯಾಪಾರಿಗಳ ವಿರುದ್ಧದ ಕಾರ್ಯಾಚರಣೆ ನ್ಯಾಯಾಲಯಕ್ಕೆ ತಲುಪಿದೆ. ಅಲ್ಲಿಯೂ ಹೊಸ ಕಾನೂನು ಅನ್ವಯವಾಗುವುದು. ಬಂಗಾಲ ಉಚ್ಚ ನ್ಯಾಯಾಲಯದಲ್ಲಿ ಇತ್ತೀಚೆಗೆ ಒಂದು ಅರ್ಜಿ ದಾಖಲಾಯಿತು. ಅದರಲ್ಲಿ ‘ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಯೋಗಶಾಲೆಗಳಿದ್ದು ಹೊಸ ಕಾನೂನಿನಲ್ಲಿ ನ್ಯಾಯವೈದ್ಯಕೀಯ ಪ್ರಯೋಗಶಾಲೆಗಳ ವರದಿ ಕಡ್ಡಾಯಗೊಳಿಸಿರುವುದರಿಂದ ಈ ಪ್ರಯೋಗಶಾಲೆಗಳಿಗೆ ಕೆಲಸದ ಒತ್ತಡ ನಿರ್ಮಾಣವಾಗಿದೆ’, ಎಂದು ಹೇಳಲಾಗಿದೆ. ಈ ವಿಷಯದ ಆಲಿಕೆ ಜುಲೈ ತಿಂಗಳ ಮೂರನೇ ವಾರದಲ್ಲಿ ನಡೆಯಲಿದೆ.

೮. ಕಾನೂನಿಗೆ ವಿರೋಧ ಮಾಡುವ ಕಾರಣಗಳು

ಈ ಕಾನೂನಿಗಳಿಗೆ ಪ್ರಗತಿಪರರಿಂದ ವಿರೋಧವಿದೆ. ಪ್ರಾಮುಖ್ಯವಾಗಿ ಹೊಸ ಕಾನೂನಿನಿಂದ ಸರಕಾರದ ಅಧಿಕಾರ ಹೆಚ್ಚಾಯಿತು. ವಿರೋಧಿಗಳ ಬಾಯಿ ಮುಚ್ಚಿಸುವುದು, ವಾರ್ತಾವಾಹಿನಿಗಳ ಕತ್ತು ಹಿಸುಕುವುದು, ಹಾಗೆಯೆ ಪರೋಕ್ಷವಾಗಿ ತುರ್ತುಪರಿಸ್ಥಿತಿಯಂತಹ ಸ್ಥಿತಿ ಉಂಟು ಮಾಡುವುದು ಮೊದಲಾದ ಹಾಗೂ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರಕ್ಕೆ ಬದಲಾಯಿಸುವ ಷಡ್ಯಂತ್ರ ಇದಾಗಿದೆ. ಇದರ ಮೂಲಕ ವಿರೋಧಪಕ್ಷ ಅಥವಾ ವಿರೋಧಿಸುವ ಸಂಘಟನೆಗಳನ್ನು ಗುರಿಪಡಿಸಲಾಗಿದೆ, ಎಂದು ಅವರಿಗೆ ಅನಿಸುತ್ತದೆ. ಅವರ ಅಭಿಪ್ರಾಯದಲ್ಲಿ ರಾ.ಸ್ವ. ಸಂಘ ಪರಿವಾರಕ್ಕೆ ಸಂರಕ್ಷಣೆ ನೀಡುವುದು ಹಾಗೂ ವಿರೋಧಿಗಳನ್ನು ಹತ್ತಿಕ್ಕುವುದೇ ಸರಕಾರದ ಉದ್ದೇಶವಾಗಿದೆ. ಪೊಲೀಸ್‌ ರಾಜ್ಯ ನಿರ್ಮಾಣ ಮಾಡಿ ಸರಕಾರಕ್ಕೆ ತನ್ನ ಅಧಿಕಾರವನ್ನು ಕಾಪಾಡಿಕೊಳ್ಳಲಿಕ್ಕಿದೆ. ಸಂವಿಧಾನ ನೀಡಿದ ಮೂಲಭೂತ ಅಧಿಕಾರಗಳು ಈ ೩ ಕಾನೂನಿನಿಂದ ಸಂಕುಚಿತವಾಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ, ಎಂಬುದು ಅವರ ಆರೋಪವಾಗಿದೆ.

೯. ಹೊಸ ಕಾನೂನುಗಳಿಗೆ ಮುಂಬಯಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಂದ ಸ್ವಾಗತ

ಮುಂಬಯಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹೊಸ ಕಾನೂನನ್ನು ಸ್ವಾಗತಿಸಿದ್ದಾರೆ. ‘ಯಾವುದಾದರೊಂದು ಬದಲಾವಣೆಯಾದಾಗ ಅದನ್ನು ವಿರೋಧಿಸುವುದು ಮಾನವನ ಸ್ವಭಾವವಾಗಿದೆ. ನಾನು ಈ ಹೊಸ ಬದಲಾವಣೆಯನ್ನು ಸ್ವಾಗತಿಸುತ್ತೇನೆ’, ಎಂದು ಅವರು ಹೇಳಿದ್ದಾರೆ. ‘ಖಟ್ಲೆಗಳನ್ನು ಶೀಘ್ರವಾಗಿ ನಡೆಸಲು ಹೊಸ ಕಾನೂನುಗಳಿಂದ ಸಹಾಯವಾಗುವುದು’, ಎಂಬುದು ಕೇಂದ್ರ ಸರಕಾರದ ಅಭಿಪ್ರಾಯವಾಗಿದೆ. ಕಾನೂನು ಎಷ್ಟು ಚೆನ್ನಾಗಿದೆ, ಸಕ್ಷಮ ಹಾಗೂ ಕಠೋರವಾಗಿದೆ, ಎಂಬುದಕ್ಕೆ ಮಹತ್ವವಿಲ್ಲ, ಅದನ್ನು ಹಮ್ಮಿಕೊಳ್ಳುವ ವ್ಯವಸ್ಥೆ ಹೇಗಿದೆ, ಎಂಬುದಕ್ಕೆ ಮಹತ್ವವಿದೆ. ಡಾ. ಆಂಬೇಡ್ಕರರು ಕೂಡ ಸಂವಿಧಾನದ ವಿಷಯದಲ್ಲಿ. ‘ಸಂವಿಧಾನವನ್ನು ಹಮ್ಮಿಕೊಳ್ಳುವವರು ಹೇಗಿದ್ದಾರೆ, ಎಂಬುದನ್ನು ಗಮನಿಸಬೇಕಾಗಿದೆ’ ಹೀಗೆಯೇ ಹೇಳಿದ್ದರು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೭.೭.೨೦೨೪)

|| ಶ್ರೀಕೃಷ್ಣಾರ್ಪಣಮಸ್ತು ||

ಹೊಸ ಕಾನೂನುಗಳ ವೈಶಿಷ್ಟ್ಯಗಳು 

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

ಹೊಸ ಕಾನೂನುಗಳ ಕೆಲವು ಕಲಮ್‌ ಗಳು ವೈಶಿಷ್ಟ್ಯಪೂರ್ಣವಾಗಿವೆ. ಹಳೆಯ ‘ಭಾರತೀಯ ದಂಡ ಸಂಹಿತೆ (ಇಂಡಿಯನ್‌ ಪಿನಲ್‌ ಕೋಡ್‌)’ಯನ್ನು ಈಗ ‘ಭಾರತೀಯ ನ್ಯಾಯ ಸಂಹಿತೆ’ ಎಂದು ಸಂಬೋಧಿಸಲಾಗುವುದು, ಅದರಲ್ಲಿನ ಕೆಲವು ಮಹತ್ವದ ಬದಲಾವಣೆಗಳು ಗಮನಾರ್ಹವಾಗಿವೆ.

ಅ. ಮೂಲತಃ ಈ ಕಾನೂನುಗಳನ್ನು ಮಹಿಳೆಯರು, ಮಕ್ಕಳು, ದೇಶ ಮತ್ತು ಸರಕಾರದ ಹಕ್ಕುಗಳ ಬಗ್ಗೆ ಅರಿವನ್ನು ಇಟ್ಟುಕೊಂಡು (ವಿಚಾರ ಮಾಡಿ) ಅವರ ರಕ್ಷಣೆಗಾಗಿ ಮಾಡಲಾಗಿದೆ. ಈ ಹೊಸ ಪರಿವರ್ತನೆಯಿಂದಾಗಿ ನಾವು ಪೊಲೀಸ್‌ ಠಾಣೆಗೆ ಹೋಗದೆಯೇ ಮನೆಯಿಂದಲೇ ಅಪರಾಧವನ್ನು ದಾಖಲಿಸ ಬಹುದು. ಅದರ ಸತ್ಯತೆಯನ್ನು ಪರಿಶೀಲಿಸಿ ಆ ಅಪರಾಧವನ್ನು ಪೊಲೀಸರು ದಾಖಲಿಸಿಕೊಳ್ಳುವರು ಹಾಗೂ ಅದನ್ನು ಅವರು ಕಡ್ಡಾಯವಾಗಿ ಮಾಡಬೇಕಾಗುವುದು.

. ಅನೇಕ ವೇಳೆ ಪೊಲೀಸರು ತಮ್ಮ ವ್ಯಾಪ್ತಿಯ ಪ್ರದೇಶದ ಮಿತಿಯ ಹೆಸರಿನಲ್ಲಿ ಒಂದು ಪೊಲೀಸ್‌ ಠಾಣೆಯಿಂದ ಇನ್ನೊಂದು ಪೊಲೀಸ್‌ ಠಾಣೆಗೆ ಅಲೆದಾಡುವಂತೆ ಮಾಡುತ್ತಾರೆ. ಈಗ ಹಾಗೆ ಉಪೇಕ್ಷೆ ಮಾಡಲು ಸಾಧ್ಯವಿಲ್ಲ. ಅವರು ‘ಝಿರೋ ಎಫ್‌.ಐ.ಆರ್‌.’ ನೋಂದಾಯಿಸುವುದು (ಅಪರಾಧ ಎಲ್ಲಿಯೇ ನಡೆದಿದ್ದರೂ ಅದರ ದೂರನ್ನು ಸಮೀಪದ ಠಾಣೆಯಲ್ಲಿ ನೀಡುವುದು) ಕಡ್ಡಾಯವಾಗಿರಲಿದೆ. ಅನಂತರ ಅದನ್ನು ಯೋಗ್ಯ ಪೊಲೀಸ್‌ ಠಾಣೆಗೆ ಕಳುಹಿಸಲಾಗುವುದು ಹಾಗೂ ಅದರ ನಕಲನ್ನು ಪೀಡಿತರಿಗೆ ಹಾಗೂ ಆರೋಪಿಗೆ ನೀಡಲಾಗುವುದು.

. ನಾವು ‘ವಿ-ಅಂಚೆ’, ‘ವಾಟ್ಸ್ಪ್‌’, ‘ಟೆಕ್ಸ್ಟ್‌ ಮೆಸೇಜ್’ (ಎಸ್‌.ಎಮ್‌.ಎಸ್) ಇವುಗಳ ಮೂಲಕವೂ ಅಪರಾಧವನ್ನು ದಾಖಲಿಸಬಹುದು.

. ದೇಶದ ಐಕ್ಯತೆ, ಅಖಂಡತೆ, ಭದ್ರತೆ (ಸುರಕ್ಷತೆ), ಸಾರ್ವಭೌಮತ್ವದ ವಿರುದ್ಧ ಹಿಂಸಾಚಾರ, ಭಯೋತ್ಪಾದನೆ ಯಂತಹ ಕೃತ್ಯ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸುವ ವ್ಯವಸ್ಥೆ ಮಾಡಲಾಗಿದೆ. ಆರ್ಥಿಕ ಅಪರಾಧ, ಅಮಲು ಪದಾರ್ಥಗಳ ಮಾರಾಟ, ಸಾಯಬರ್‌ ಅಪರಾಧ, ವೇಶ್ಯಾವ್ಯವಸಾಯ, ‘ಕಂಟ್ರಾಕ್ಟ್ ಕಿಲಿಂಗ್’ (ಹತ್ಯೆ ಮಾಡಲು ಸುಪಾರಿ ನೀಡುವುದು / ತೆಗೆದುಕೊಳ್ಳುವುದು) ಇತ್ಯಾದಿಗಳಿಗೆ ಸಂಬಂಧಿಸಿದ ನಿಯೋಜನಬದ್ಧ ಅಪರಾಧ ಮಾಡುವವರ ವಿರುದ್ಧ ಕಠೋರ ಶಿಕ್ಷೆಯ ವ್ಯವಸ್ಥೆ ಮಾಡಲಾಗಿದೆ. ಇಂತಹ ವ್ಯಕ್ತಿಗಳಿಗೆ ೧೦ ವರ್ಷಗಳ ವರೆಗೆ ಶಿಕ್ಷೆಯನ್ನು ಸೂಚಿಸಲಾಗಿದೆ.

. ರಸ್ತೆಯಲ್ಲಿ ಅಡ್ಡಗಟ್ಟಿ ಲೂಟಿ ಮಾಡುವುದು, ಶಸ್ತ್ರವನ್ನು ತೋರಿಸಿ ಕಳ್ಳತನ ಮಾಡುವುದು, ಇಂತಹ ಅಪರಾಧಗಳಿಗೆ ೭ ವರ್ಷಗಳ ವರೆಗೆ ಶಿಕ್ಷೆಯಾಗಬಹುದು. ಕೇಂದ್ರ ಸರಕಾರ ೪೧ ಅಪರಾಧಗಳ ಶಿಕ್ಷೆಯನ್ನು ಹೆಚ್ಚಿಸಲಾಗಿದೆ ಹಾಗೂ ೮೦ ಕ್ಕೂ ಹೆಚ್ಚು ಅಪರಾಧಗಳಲ್ಲಿ ಶಿಕ್ಷೆಯಾದರೆ ಈ ಹಿಂದೆ ಇದ್ದ ದಂಡದ ಮೊತ್ತವನ್ನೂ ಬಹಳಷ್ಟು ಹೆಚ್ಚಿಸಲಾಗಿದೆ.

. ಖಟ್ಲೆಯ ದೃಷ್ಟಿಯಲ್ಲಿ ಸಾಕ್ಷಿದಾರರ ಭದ್ರತೆ (ಸುರಕ್ಷತೆ) ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ರಾಜ್ಯ ಸರಕಾರಗಳಿಗೆ ಒಂದು ಯೋಜನೆಯನ್ನು ಸಿದ್ಧಪಡಿಸುವ ಆದೇಶವನ್ನು ಈ ಕಾನೂನಿನಲ್ಲಿ ನೀಡಲಾಗಿದೆ.

. ಸರ್ವೋಚ್ಚ ನ್ಯಾಯಾಲಯ ಅಥವಾ ಇತರ ನ್ಯಾಯಾಲಯ ಗಳು ಅಂತಿಮ ನಿರ್ಣಯ ನೀಡಿದ ನಂತರ ೩೦ ದಿನಗಳ ಒಳಗೆ ದಯೆಯ ಅರ್ಜಿಯನ್ನು ದಾಖಲಿಸಬಹುದು.

ಏ. ನ್ಯಾಯಾಲಯದ ಎಲ್ಲ ಕಾರ್ಯಗಳು, ನಿರ್ಣಯಗಳು, ಆದೇಶ ಇವುಗಳನ್ನು ಜಾಲತಾಣದಲ್ಲಿ ಇಡಲಾಗುವುದು. ಅದರಿಂದ ಅದನ್ನು ಪಕ್ಷಕಾರರು, ಪೀಡಿತರು, ಆರೋಪಿಗಳು ‘ಆನ್‌ಲೈನ್‌’ನಲ್ಲಿ ನೋಡಬಹುದು.

. ಅನೇಕ ವೇಳೆ ಕೆಲವು ರಾಜ್ಯ ಸರಕಾರಗಳು ಹಿಂಸಾತ್ಮಕ ಹಾಗೂ ನಿಂದನೀಯ ಕೃತ್ಯಗಳನ್ನು ಮಾಡಿದ ಆರೋಪಿಗಳನ್ನು ಬಿಟ್ಟುಬಿಡುತ್ತವೆ, ಅಷ್ಟು ಮಾತ್ರವಲ್ಲ ಅವರ ಶಿಕ್ಷೆಯನ್ನೂ ಕ್ಷಮಿಸುತ್ತವೆ. ಇಂತಹ ಸಂದರ್ಭದಲ್ಲಿ ಪೀಡಿತರ ವಿಚಾರ ಮಾಡುವುದೂ ಆವಶ್ಯಕವಾಗಿರುತ್ತದೆ. ಆದ್ದರಿಂದ ಅವರ ಒಪ್ಪಿಗೆ ಇಲ್ಲದೆ ಇಂತಹ ಅಪರಾಧವನ್ನು ಹಿಂಪಡೆಯಬಾರದು ಅಥವಾ ಶಿಕ್ಷೆಯನ್ನು ಕ್ಷಮಿಸಬಾರದು ಎಂದು ಕಾನೂನು ಸೂಚಿಸುತ್ತದೆ. ಇದರ ಜೊತೆಗೆ ಪೀಡಿತರಿಗೆ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಒಟ್ಟಾಗಿ ಪ್ರಯತ್ನಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿವೆ.

. ಪೀಡಿತ ಅಥವಾ ಆರೋಪಿ ಇವರಿಗೆ ತೀರ್ಪಿನ ವಿಷಯವನ್ನು ಕೂಡಲೇ ಹೇಳಬೇಕು. ಅನೇಕ ವೇಳೆ ನಿರ್ಣಯವಾದ ಮೇಲೆಯೂ ಅಥವಾ ಆರೋಪಿ ನಿರಪರಾಧಿಯೆಂದು ಮುಕ್ತನಾದರೂ ಅವನಿಗೆ ಅದರ ಮಾಹಿತಿ ಇರುವುದಿಲ್ಲ. ಆದ್ದರಿಂದ ಅವನು ದಾಖಲಿಸಿದ ಸವಾಲನ್ನು ಕಾಲಾವಧಿಯ ಕಾರಣದಿಂದ ನಿರಾಕರಿಸಲಾಗುತ್ತದೆ.

ಅಂ. ಪಲಾಯನಗೈದ ಆರೋಪಿ ಉಪಸ್ಥಿತನಿಲ್ಲದ ಕಾರಣ ಅಥವಾ ಪಲಾಯನಗೈದಿರುವುದರಿಂದ ಖಟ್ಲೆಯ ಆಲಿಕೆ ಮುಂದೆ ಹೋಗುತ್ತಿತ್ತು. ಈಗ ಆರೋಪಿ ಪಲಾಯನ ಮಾಡಿರುವಾಗಲೂ ಆಲಿಕೆಯನ್ನು ಮುಂದುವರಿಸಲು ಸಾಧ್ಯವಿದೆ, ಅದೇ ರೀತಿ ಪರಾರಿ ಆರೋಪಿಯ ಸಂಪತ್ತನ್ನು ಮುಟ್ಟುಗೋಲು ಹಾಕುವುದು ಇತ್ಯಾದಿ ವಿಷಯದಲ್ಲಿನ ಕಾನೂನಿನ ಕಲಮ್‌ಗಳನ್ನು ಕಠೋರಗೊಳಿಸಲಾಗಿದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ