ಡಾಕ್ಟರ್, ನನಗೆ ಪಂಚಕರ್ಮ ಮಾಡಿಸಲಿಕ್ಕಿದೆ !

ಶುದ್ಧ ಆಯುರ್ವೇದ ಪ್ರಾಕ್ಟಿಸ್‌ (ವ್ಯವಸಾಯ)ಮಾಡುವ ವೈದ್ಯರಿಗೆ ರೋಗಿಗಳಿಂದ ಬರುವ ‘ನನಗೆ ಪಂಚಕರ್ಮ ಮಾಡಿಸಲಿಕ್ಕಿದೆ’, ಎನ್ನುವ ಬೇಡಿಕೆ ಹೊಸತೇನಲ್ಲ. ‘ಕೇವಲ ಪಂಚಕರ್ಮ ಮಾಡಿಸಬೇಕು’, ಎಂಬ ಇಚ್ಛೆಯಿಂದಲೇ ಅನೇಕ ರೋಗಿಗಳು ಚಿಕಿತ್ಸಾಲಯಕ್ಕೆ ಬರುತ್ತಾರೆ. ಹಾಗೆ ಮಾಡುವುದರಲ್ಲಿ ಅಭ್ಯಂತರವಿಲ್ಲ. ‘ಪಂಚಕರ್ಮವೆಂದರೆ, ವಿಶ್ರಾಂತಿ ಪಡೆಯುವ ತಂತ್ರ (ರಿಲ್ಯಾಕ್ಸೇಶನ್‌ ಥೆರಪಿ) ಆಗಿದೆ’, ಎನ್ನುವ ತಪ್ಪು ತಿಳುವಳಿಕೆ ಇರುವವರು ಅನೇಕರಿದ್ದಾರೆ; ಆದರೆ ಪಂಚಕರ್ಮದಲ್ಲಿ ಚಿಕಿತ್ಸೆಯ ದೃಷ್ಟಿಕೋನವೂ ಅಷ್ಟೇ ಹೆಚ್ಚು ಪ್ರಮಾಣದಲ್ಲಿದೆ.

೧. ‘ಸ್ಪಾ’ ಮತ್ತು ಪಂಚಕರ್ಮದಲ್ಲಿ ವ್ಯತ್ಯಾಸವಿದೆ

(ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ

ಪಂಚಕರ್ಮದಲ್ಲಿ ಮೂಲತಃ ದೋಷವನ್ನು ಹುಡುಕುವುದು ಅಥವಾ ಶರೀರದಲ್ಲಿ ಹೆಚ್ಚಾಗಿರುವ ಅಥವಾ ಬೇಡವಾದ ಸ್ಥಳದಲ್ಲಿ ರುವ ದೋಷವನ್ನು ಹೊರಗೆ ತೆಗೆಯುವ ಉದ್ದೇಶವಿರುತ್ತದೆ. ಪಂಚಕರ್ಮವನ್ನು ರೋಗಕ್ಕನುಸಾರ ಹಾಗೂ ಋತುಗಳಿಗನುಸಾರ ಮಾಡಬಹುದು. ದೋಷವೆಂದರೇನು ?, ಯಾವ ಋತುವಿನಲ್ಲಿ ಯಾವ ಪಂಚಕರ್ಮ ಮಾಡಬೇಕು ? ಎಂಬುದರ ಜ್ಞಾನ ವೈದ್ಯರಿಗಿರುತ್ತದೆ. ಯಾವಾಗ ನೀವು ವಮನ, ವಿರೇಚನ, ಬಸ್ತಿ, ನಸ್ಯ, ರಕ್ತಮೋಕ್ಷಣ ಇತ್ಯಾದಿ ಚಿಕಿತ್ಸೆ ತೆಗೆದುಕೊಳ್ಳುವಿರೊ, ಆಗ ಚಿಕಿತ್ಸೆಯ ದೃಷ್ಟಿಕೋನವಿರುವುದರಿಂದ ಪಥ್ಯ ಪಾಲನೆ ಮಾಡು ವುದು ಮಹತ್ವದ್ದಾಗಿರುತ್ತದೆ, ಆಗ ಸರಿಯಾಗಿ ಪಥ್ಯ ಮಾಡದಿದ್ದರೆ, ತೊಂದರೆಯಾಗಬಹುದು. ‘ಸ್ಪಾ’ (ಸಂಪೂರ್ಣ ಮೈಗೆ ತೈಲ ಹಚ್ಚುವ ಪ್ರಕ್ರಿಯೆ) ಮಾಡಿಸುವುದು ಹಾಗೂ ಪ್ರತ್ಯಕ್ಷ ವೈದ್ಯಕೀಯ ಶಿಕ್ಷಣ ಪಡೆದು ಶುದ್ಧ ಆಯುರ್ವೇದ ಪ್ರಾಕ್ಟೀಸ್‌ನ ಅನುಭವ ಇರುವ ವೈದ್ಯರಿಂದ ಪಂಚಕರ್ಮ ಮಾಡಿಸಿಕೊಳ್ಳುವುದರಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ.

ಮೂಲತಃ ‘ಸ್ಪಾ ಥೆರಪಿ’, ಎಂದರೆ ಪಂಚಕರ್ಮ ಕ್ರಿಯೆಯಲ್ಲ; ಆದರೆ ಆಯುರ್ವೇದದ ತತ್ತ್ವವನ್ನು ಉಪಯೋಗಿಸಿ ‘ಸ್ಪಾ’ದಂತಹ ಉಪಕ್ರಮವನ್ನು ಮಾಡಬಹುದು, ಅಂದರೆ ಆಯುರ್ವೇದದ ಅಧಿಕಾರ ತುಂಬಾ ವಿಶಾಲವಾಗಿದೆ. ಇನ್ನೊಂದು ತಪ್ಪು ಅಭಿಪ್ರಾಯವಿದೆ
ಅದೇನೆಂದರೆ, ಮಸಾಜ್‌ (ಮರ್ದನ ಮಾಡುವುದು), ಸ್ಟೀಮ್‌ (ಶಾಖ) ತೆಗೆದುಕೊಳ್ಳುವುದು, ಪೋಟ್ಟಲಿ ಸ್ವೇದನ (ಎಲೆಗಳನ್ನು ಬಳಸಿ ಶಾಖ ಕೊಡುವುದು) ಅಂದರೆ ಪಂಚಕರ್ಮ. ಇವೆಲ್ಲವನ್ನೂ ಪಂಚಕರ್ಮದ ಮೊದಲು ಅಥವಾ ಸ್ವತಂತ್ರವಾಗಿ ಮಾಡಲಾಗು ತ್ತದೆ, ಅದರಿಂದ ಒಳ್ಳೆಯ ಲಾಭವಾಗುತ್ತದೆ; ಆದರೆ ರೋಗಿಯ ಶರೀರದಲ್ಲಿನ ರೋಗದ ಪ್ರಭಾವ, ಪಂಚಕರ್ಮದಿಂದ ಏನನ್ನು ಸಾಧಿಸಬಹುದು ? ಅದಕ್ಕನುಸಾರ ಏನು ಮಾಡಿಸಿಕೊಳ್ಳಬೇಕು, ಎಂಬುದನ್ನು ವೈದ್ಯರೇ ನಿಖರವಾಗಿ ಹೇಳಬಲ್ಲರು. ‘ಆಮ್ಲಪಿತ್ತಕ್ಕೆ ಕೇವಲ ಪಂಚಕರ್ಮ ಮಾಡಿರಿ. ಔಷಧಿ ಬೇಡ ಅಥವಾ ಸಂಧಿವಾತಕ್ಕೆ ಕೇವಲ ಮರ್ದನ ಮತ್ತು ಯಾವುದಾದರೂ ಸ್ವೇದನ ಕ್ರಿಯೆ (ಶಾಖ ನೀಡಿದರೆ) ಮಾಡಿದರೆ ಸಾಕು. ನಾವು ಇಂತಹ ಒಂದು ಕಂಪನಿಯ ಕೆಲವು ಮಾತ್ರೆಗಳನ್ನು ಸೇವಿಸುತ್ತಿದ್ದೇವೆ’ ಇದೆಲ್ಲ ಪರಿಪೂರ್ಣ ಆಯುರ್ವೇದ ಉಪಚಾರವಲ್ಲ.

೨. ಔಷಧಿ ಮತ್ತು ಪಂಚಕರ್ಮ ಇವೆರಡನ್ನೂ ಒಟ್ಟಾಗಿ ಮಾಡುವುದು ಮಹತ್ವದ್ದಾಗಿದೆ !

ಇದನ್ನು ಹೇಳುವ ಉದ್ದೇಶವೆಂದರೆ, ಅನೇಕ ಬಾರಿ ಕೇವಲ ಪಂಚಕರ್ಮ ಮಾಡಿ ಬಂದ ನಂತರ ರೋಗಿ ‘ಆಯುರ್ವೇದ ಉಪಚಾರದ ಸ್ವಲ್ಪಮಟ್ಟಿಗೆ ಲಾಭವಾಯಿತು’ ಅಥವಾ ‘ನಾವು ಇಂತಿಂತಹ ವೈದ್ಯರಲ್ಲಿ ಇಂತಹ ಕಾಯಿಲೆಗೆ ಪಂಚಕರ್ಮ ಉಪಚಾರ ಮಾಡಿಸಿದೆವು; ಆದರೆ ಏನೂ ವ್ಯತ್ಯಾಸವಾಗಿಲ್ಲ’, ಎನ್ನುವ ಮಾತು ಕೇಳಿಬರುತ್ತದೆ. ನಿಜ ವಾಗಿಯೂ ಔಷಧಿ ಮತ್ತು ಪಂಚಕರ್ಮ ಇದು ಒಂದಕ್ಕೊಂದು ಕೈಗೆ ಕೈ ಜೋಡಿಸಿಕೊಂಡು ಹೋಗುವ ವಿಷಯವಾಗಿದೆ, ಅದರಿಂದ ಚಿಕಿತ್ಸೆ ಪೂರ್ಣವಾಗುತ್ತದೆ. ಪ್ರತಿಯೊಬ್ಬ ರೋಗಿಗೂ ಪಂಚಕರ್ಮ ಮಾಡಲೇ ಬೇಕೆಂದಿಲ್ಲ. ಇದು ನಿಮ್ಮ ವೈದ್ಯರಿಗೆ ತಿಳಿಯುತ್ತದೆ.

೩. ವೈದ್ಯಕೀಯ ಮಾರ್ಗದರ್ಶನ ಪಡೆದೇ ಪಂಚಕರ್ಮ ಮಾಡುವುದು ಯೋಗ್ಯ !

ಪಂಚಕರ್ಮ ಚಿಕಿತ್ಸೆ ಮಾಡಿಸಿದಾಗ ದೋಷ ಹೊರಗೆ ಬಂದನಂತರ ನಿತ್ರಾಣವಾಗುವುದು ಸ್ವಾಭಾವಿಕವಾಗಿದೆ. ಅದು ಸ್ವಲ್ಪ ಸಮಯವಿದ್ದು ನಂತರ ಶರೀರ ಹಗುರವೆನಿಸುತ್ತದೆ, ರೋಗ ನಾಶ ಹಾಗೂ ಆರೋಗ್ಯಪ್ರಾಪ್ತಿಯು ಅಪೇಕ್ಷಿತವಿದೆ. ಇದನ್ನು ಒಬ್ಬ ಶಾಸ್ತ್ರೋಕ್ತ ಪದ್ಧತಿಯಲ್ಲಿ ಶಿಕ್ಷಣ ಪಡೆದಿರುವ ವ್ಯಕ್ತಿಯೆ ನಿಮಗೆ ಹೇಳಲು ಸಾಧ್ಯ. ಲೇಖನದ ಉದ್ದೇಶ ಏನಿದೆಯೆಂದರೆ ರೋಗಿಗಳು /
ಜನರು ಶುದ್ಧ ಆಯುರ್ವೇದ ಚಿಕಿತ್ಸೆಯ ಉದ್ದೇಶದಿಂದ ಪಂಚಕರ್ಮ ಮಾಡಿಸಲಿಕ್ಕಿದ್ದರೆ, ಶಿಕ್ಷಣ ಪಡೆದಿರುವ ವೈದ್ಯರಿಂದ ಸರಿಯಾದ ವೈದ್ಯಕೀಯ ಮಾರ್ಗದರ್ಶನ ಪಡೆದುಕೊಂಡೇ ಮಾಡಬೇಕು.

ವೈದ್ಯ (ಸೌ.) ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.