ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ಕಾರ್ಯವೆಂಬ ಮಾಧ್ಯಮ ಹಾಗೂ ಸಾಧಕರ ಸಾಧನೆಯಾಗುವ ಕಡೆಗೆ ಗಮನಹರಿಸಿ ಅವರನ್ನು ಎಲ್ಲ ರೀತಿಯಿಂದಲೂ ಸಿದ್ಧಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾರ್ಗದರ್ಶನ ಮಾಡಲು ವಿವಿಧ ಜಿಲ್ಲೆಗಳಿಗೆ ಹೋಗುತ್ತಿದ್ದರು. ಅವರು ಆಯಾ ಜಿಲ್ಲೆಯಲ್ಲಿರುವ ಕ್ರಿಯಾಶೀಲ ಮತ್ತು ಹೊಸ ಸಾಧಕರ ಪರಿಚಯವನ್ನು ಮಾಡಿಕೊಳ್ಳುತ್ತಿದ್ದರು. ಆಗ ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಸಾಧನೆ ಮತ್ತು ಕಾರ್ಯದ (ಸೇವೆಯ) ವಿಷಯದಲ್ಲಿ ಅವರು ನೀಡಿದ ದೃಷ್ಟಿಕೋನ ಹಾಗೂ ಅವರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ನೀಡಲಾಗಿದೆ.   

(ಭಾಗ ೧೧)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/117450.html
(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಾಧನೆಗಾಗಿ ನೀಡುತ್ತಿದ್ದ ಪ್ರೋತ್ಸಾಹ

೧ ಅ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಯ ಪ್ರಯತ್ನವನ್ನು ಕೇಳಿ ಅವರಿಗೆ ಬಂದಿರುವ ಅನುಭೂತಿಯ ವಿಶ್ಲೇಷಣೆಯನ್ನು ಮಾಡುವುದು ಮತ್ತು ಸಾಧನೆಯ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವ ಸಾಧಕರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವುದು : ೧೯೯೮ ರಿಂದ ೨೦೦೩ ಈ ಕಾಲಾವಧಿಯಲ್ಲಿ ನಾನು ಠಾಣೆ ಜಿಲ್ಲೆಯ ಮತ್ತು ೨೦೦೩ ರ ನಂತರ ಮುಂಬಯಿ ಮತ್ತು ರಾಯಗಡ ಜಿಲ್ಲೆಯ ಸೇವೆಯ ನಿಯೋಜನೆಯನ್ನು ಮಾಡುತ್ತಿದ್ದೆನು. ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ಜಿಲ್ಲೆಗೆ ಬಂದಾಗ ಅಲ್ಲಿಯ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಸಾಧಕರ ಸಾಧನೆಯ ವಿಷಯದಲ್ಲಿರುವ ಸಂದೇಹಗಳನ್ನು ನಿವಾರಿಸಲು ವಿಶೇಷ ಗಮನಹರಿಸುತ್ತಿದ್ದರು. ಅವರು ಸಾಧಕರು ಸಾಧನೆಗಾಗಿ ಮಾಡಿರುವ ವಿಶೇಷ ಪ್ರಯತ್ನಗಳನ್ನು ಕೇಳುತ್ತಿದ್ದರು, ಸಾಧಕರಿಗೆ ಬಂದಿರುವ ಅನುಭೂತಿಗಳನ್ನು ಕೇಳಿ ಆ ಅನುಭೂತಿಗಳ ವಿಶ್ಲೇಷಣೆಯನ್ನು ಮಾಡುತ್ತಿದ್ದರು ಮತ್ತು ಒಳ್ಳೆಯ ಸಾಧನೆ ಮಾಡುವ ಸಾಧಕರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು.

೧ ಆ. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಹೇಳುವುದು : ‘ಧರ್ಮಕಾರ್ಯವನ್ನು ಮಾಡುವಾಗ ಸಾಧಕರಿಗೆ ಕೆಟ್ಟ ಶಕ್ತಿಗಳು ಹೇಗೆ ತೊಂದರೆ ನೀಡುತ್ತವೆ ?’, ‘ಆ ತೊಂದರೆಗಳನ್ನು ದೂರಗೊಳಿಸಲು ಸಾಧಕರು ಹೇಗೆ ಪ್ರಯತ್ನಿಸಬೇಕು ?’, ಎಂದು ಅವರು ಸವಿಸ್ತಾರವಾಗಿ ಹೇಳುತ್ತಿದ್ದರು. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ತೊಂದರೆಗಳನ್ನು ಕೇಳಿ, ಅವರು ಅವುಗಳಿಗೆ ಆಧ್ಯಾತ್ಮಿಕ ಸ್ತರದ ಉಪಾಯವನ್ನೂ ಹೇಳುತ್ತಿದ್ದರು.

೧ ಇ. ಸಮಯದ ಬಂಧನವನ್ನು ಪಾಲಿಸದೇ ಸಾಧಕರ ಸಂದೇಹ ಪೂರ್ಣ ನಿವಾರಣೆಯಾಗುವ ವರೆಗೆ ಮಾರ್ಗದರ್ಶನವನ್ನು ಮಾಡುತ್ತಿದ್ದರು : ಅವರು ಸಾಧಕರಿಗೆ ಸಾಧನೆಯ ವಿವಿಧ ಆಯಾಮಗಳ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಸಮಯದ ಬಂಧನವನ್ನು ಪಾಲಿಸದೇ ಅವರು ಸಾಧಕರ ಸಂದೇಹ ಪೂರ್ಣ ನಿವಾರಣೆಯಾಗುವವರೆಗೆ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದರು ಮತ್ತು ಅವರನ್ನು ಸಾಧನೆಗಾಗಿ ಪ್ರೋತ್ಸಾಹಿಸುತ್ತಿದ್ದರು. ಅವರ ಮಾರ್ಗದರ್ಶನದ ಬಳಿಕ ಸಾಧಕರ ಸಾಧನೆಯ ಉತ್ಸಾಹ ಹೆಚ್ಚಾಗಿ ಅವರ ಸಾಧನೆಗೆ ವೇಗ ಸಿಗುತ್ತಿತ್ತು.

೨. ಪರಾತ್ಪರ ಗುರು ಡಾ. ಆಠವಲೆಯವರು ‘ಅಧ್ಯಾತ್ಮವು ಮನಸ್ಸು ಮತ್ತು ಬುದ್ಧಿಯ ಆಚೆಗಿನ ಶಾಸ್ತ್ರವಾಗಿದೆ’, ಎನ್ನುವುದನ್ನು ಸಾಧಕರಿಗೆ ಕಲಿಸಲು ಸಾಧಕರಿಂದ ಸೂಕ್ಷ್ಮದ ಅಭ್ಯಾಸಗಳನ್ನು ಮಾಡಿಸಿಕೊಳ್ಳುತ್ತಿದ್ದರು

‘ಅಧ್ಯಾತ್ಮವು ಮನಸ್ಸು ಮತ್ತು ಬುದ್ಧಿಯ ಆಚೆಗಿನ ಶಾಸ್ತ್ರವಾಗಿದೆ’, ಎನ್ನುವುದನ್ನು ಸಾಧಕರು ಕಲಿಯಬೇಕೆಂದು ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮದಲ್ಲಿನ ಕೆಲವು ಪ್ರಯೋಗಗಳನ್ನು ಮಾಡಿಸಿಕೊಳ್ಳುತ್ತಿದ್ದರು, ಉದಾ. ಒಂದು ಪಾಕೀಟಿನಲ್ಲಿ ಯಾವುದಾದರೂ ಸಂತರ ಹೆಸರು ಮತ್ತು ಇನ್ನೊಂದು ಪಾಕೀಟಿನಲ್ಲಿ ಯಾವುದಾದರೂ ಗೂಂಡಾ ಅಥವಾ ರಾಜಕಾರಣಿಯ ಹೆಸರನ್ನು ಕಾಗದದ ಮೇಲೆ ಬರೆದು ಆ ಪಾಕೀಟು ಗಳನ್ನು ಮುಚ್ಚಿಡುತ್ತಿದ್ದರು. ನಂತರ ಅವುಗಳನ್ನು ಸಾಧಕರಿಗೆ ಒಮ್ಮೆ ಒಂದು ಪಾಕೀಟನ್ನು ಮತ್ತು ನಂತರ ಮತ್ತೊಂದು ಪಾಕೀಟನ್ನು ತೋರಿಸಿ ‘ಯಾವ ಪಾಕೀಟನ್ನು ನೋಡಿ ಏನು ಅನಿಸಿತು ? ಸ್ಪಂದನಗಳು ಹೇಗೆ ಅರಿವಾಗುತ್ತವೆ ?” ಎಂದು ಕೇಳುತ್ತಿದ್ದರು.  ವ್ಯಕ್ತಿಯಿಂದ ಪ್ರಕ್ಷೇಪಿತವಾಗುವ ಸ್ಪಂದನಗಳು ಅದು ಆ ವ್ಯಕ್ತಿಯ ಸಾಧನೆಯ ಸ್ಥಿತಿ, ಅವರಲ್ಲಿರುವ ಭಾವ, ಸ್ವಭಾವದೋಷ ಮತ್ತು ಅಹಂ ಇವುಗಳ ಪ್ರಮಾಣವನ್ನು ಅವಲಂಬಿಸಿರುತ್ತವೆ. ‘ಇಬ್ಬರು ಸಾಧಕರನ್ನು ನೋಡಿ ಏನು ಅನಿಸುತ್ತದೆ ?’, ಎಂದು ಕೇಳಿ ಸಾಧಕರಿಗೆ ಸ್ಪಂದನಗಳ ಅಭ್ಯಾಸವನ್ನು ಮಾಡಲು ಕಲಿಸುತ್ತಿದ್ದರು. ಈ ರೀತಿ ಅವರು ಸಾಧಕರಲ್ಲಿ ಸೂಕ್ಷ್ಮವನ್ನು ಅರಿತುಕೊಳ್ಳುವ ಕ್ಷಮತೆಯನ್ನು ಮೂಡಿಸುತ್ತಿದ್ದರು.

೩. ಕಾರ್ಯಕ್ಕಿಂತ ಸಾಧನೆಗೆ ಹೆಚ್ಚು ಮಹತ್ವವನ್ನು ನೀಡುವ ಪರಾತ್ಪರ ಗುರು ಡಾ. ಆಠವಲೆ !

೩ ಅ. ಸಾಧಕರಿಗೆ ಕಾರ್ಯದ ವಿಷಯದಲ್ಲಿ ಏನನ್ನೂ ಕೇಳದೇ ಕೇವಲ ಸಾಧನೆಯ ವಿಷಯದಲ್ಲಿ ಕೇಳುವುದು : ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಕಾರ್ಯದ ಬಗ್ಗೆ ಯಾವತ್ತೂ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ, ಉದಾ. ‘ಎಷ್ಟು ಗ್ರಂಥ ವಿತರಣೆ ಆಯಿತು ? ಅಥವಾ ಗುರುಪೂರ್ಣಿಮೆಗೆ ಎಷ್ಟು ಅರ್ಪಣೆ, ಜಾಹೀರಾತು ಸಿಕ್ಕಿತು ?’, ಮುಂತಾದ ಕಾರ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅವರು ಎಂದಿಗೂ ಕೇಳುತ್ತಿರಲಿಲ್ಲ.

೩ ಆ. ಸಾಧಕರು ಕಾರ್ಯದ ವರದಿಯನ್ನು ಹೇಳಲು ಪ್ರಾರಂಭಿಸಿದಾಗ, ಅವರನ್ನು ತಡೆದು ಸಾಧನೆಯಲ್ಲಿನ ಅಡಚಣೆಗಳನ್ನು ಕೇಳುವಂತೆ ಹೇಳುತ್ತಿದ್ದರು : ಯಾವುದಾದರು ಸಾಧಕರು ಕಾರ್ಯದ ವಿಷಯದಲ್ಲಿ ಹೇಳುತ್ತಿದ್ದರೆ, ಅವರು ಅವರನ್ನು ತಡೆದು ಅವರ ಸಾಧನೆಯಲ್ಲಿನ ಅಡಚಣೆಗಳನ್ನು ಕೇಳುವಂತೆ ಹೇಳುತ್ತಿದ್ದರು. ಈ ವಿಷಯದ ಬಗ್ಗೆ ಒಂದು ಪ್ರಸಂಗವನ್ನು ಹೇಳಬೇಕೆನಿಸುತ್ತದೆ, ‘ಬಹುಶಃ ೨೦೦೪ ರ ಘಟನೆಯಾಗಿರಬೇಕು. ಆಗ ನಾನು ಮುಂಬಯಿ ಜಿಲ್ಲೆಯ ಸೇವೆಗಳ ನಿಯೋಜನೆಯನ್ನು ಮಾಡುತ್ತಿದ್ದೆನು. ಒಮ್ಮೆ ದೇವದ, ಪನವೇಲ ಆಶ್ರಮದಲ್ಲಿ ಮುಂಬಯಿಯ ಕ್ರಿಯಾಶೀಲ ಸಾಧಕರಿಗಾಗಿ ಪರಾತ್ಪರ ಗುರುದೇವರ ಮಾರ್ಗದರ್ಶನವನ್ನು ಇಡಲಾಗಿತ್ತು. ಸಾಧಕರ ಪರಿಚಯವನ್ನು ಮಾಡಿಕೊಟ್ಟ ಬಳಿಕ ನಾನು ಮುಂಬಯಿ ಜಿಲ್ಲೆಯ ಕಾರ್ಯದ ವರದಿಯನ್ನು ಹೇಳಲು ಪ್ರಾರಂಭಿಸಿದೆನು. ಆಗ ಪರಾತ್ಪರ ಗುರುದೇವರು, ”ನೀವು ಇದನ್ನೇನು ಹೇಳುತ್ತಿದ್ದೀರಿ ? ಬಹಳ ದಿನಗಳ ನಂತರ ಭೇಟಿಯಾಗಿದ್ದೇವೆ. ಸಾಧನೆಯಲ್ಲಿನ ಅಡಚಣೆ ಅಥವಾ ಸಂದೇಹಗಳನ್ನು ಕೇಳಿರಿ. ನೀವು ಕಾರ್ಯದ ವಿಷಯದ ಬಗ್ಗೆ ಏನು ಹೇಳುತ್ತಿದ್ದೀರಿ ? ನಿಮ್ಮ ಸಾಧನೆಯಲ್ಲಿನ ಅಡಚಣೆಗಳು ದೂರವಾದರೆ, ನೀವು ಸಾಧನೆಯಲ್ಲಿ ಶೀಘ್ರವಾಗಿ ಮುಂದೆ ಹೋಗುತ್ತೀರಿ ಮತ್ತು ನಿಮ್ಮಿಂದ ಸೇವೆಯೂ ಚೆನ್ನಾಗಿ ಆಗುವುದು” ಎಂದು ಹೇಳಿದರು.

೪. ಪರಾತ್ಪರ ಗುರು ಡಾಕ್ಟರರು ಸಾಧಕರ ಮನಸ್ಸಿನಲ್ಲಿ ವ್ಯಷ್ಟಿ ಸಾಧನೆಯ (ಟಿಪ್ಪಣಿ ೧) ಮಹತ್ವವನ್ನು ಬಿಂಬಿಸಲು ತೆಗೆದುಕೊಂಡ ನಿರ್ಣಯ

(ಟಿಪ್ಪಣಿ ೧ : ೧. ಸ್ವಭಾವದೋಷ ನಿರ್ಮೂಲನೆ ಮತ್ತು ಗುಣಸಂವರ್ಧನೆ ೨. ಅಹಂ ನಿರ್ಮೂಲನೆ, ೩. ನಾಮಜಪ, ೪. ಭಾವಜಾಗೃತಿಗಾಗಿ ಪ್ರಯತ್ನ, ೫. ಸತ್ಸಂಗ, ೬. ಸತ್ಸೇವೆ, ೭. ಸತ್‌ಗಾಗಿ ತ್ಯಾಗ ಮತ್ತು ೮. ಪ್ರೀತಿ ಈ ಅಷ್ಟಾಂಗ ಸಾಧನೆಯನ್ನು ಮಾಡುವುದು)

೪ ಅ. ವ್ಯಷ್ಟಿ ಸಾಧನೆಯನ್ನು ನಿರ್ಲಕ್ಷಿಸುವ ಸಾಧಕರ ಸೇವೆಯನ್ನು ನಿಲ್ಲಿಸುವುದು : ೨೦೦೩-೨೦೦೪ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಅನೇಕ ಜಿಲ್ಲೆಗಳಿಗೆ ಹೋಗಿ ಶುದ್ಧೀಕರಣ ಸತ್ಸಂಗ (ಟಿಪ್ಪಣಿ ೨) ತೆಗೆದುಕೊಂಡರು. ಸಾಧನೆಯನ್ನು ನಿರ್ಲಕ್ಷಿಸುವ ಕಾರ್ಯಕರ್ತರಿಂದ(ಸಾಧಕರಿಂದ) ಸೇವೆಯನ್ನು (ಕಾರ್ಯವನ್ನು) ಮಾಡುವಾಗ ಬಹಳ ತಪ್ಪುಗಳಾಗಿದ್ದವು. ಇದು ಗಮನಕ್ಕೆ ಬಂದಾಗ ಪರಾತ್ಪರ ಗುರುದೇವರು ಆ ಸಾಧಕರ ಸೇವೆಯನ್ನು ನಿಲ್ಲಿಸಿದರು ಮತ್ತು ಅವರಿಗೆ ಮನೆಯಲ್ಲಿದ್ದು ವ್ಯಷ್ಟಿ ಸಾಧನೆಯನ್ನು ಸರಿಯಾಗಿ ಮಾಡುವಂತೆ ಹೇಳಿದರು.

(ಟಿಪ್ಪಣಿ ೨ – ಸಾಧಕರ ಸ್ವಭಾವದೋಷ ಮತ್ತು ಅಹಂನ್ನು ಕಡಿಮೆ ಮಾಡಲು ಸತ್ಸಂಗದಲ್ಲಿ ಅವರಿಂದ ಆಗಿರುವ ತಪ್ಪುಗಳನ್ನು ಹೇಳಿ, ‘ಯಾವುದು ಯೋಗ್ಯವಾಗಿದೆ ?’ ಮತ್ತು ‘ಯಾವುದು ಅಯೋಗ್ಯವಾಗಿದೆ ?’ ಎಂದು ಹೇಳುವುದು)

೪ ಆ. ಯಾವುದಾದರೂ ಜಿಲ್ಲೆಯಲ್ಲಿನ ಎಲ್ಲ ಸಾಧಕರಿಂದ ವ್ಯಷ್ಟಿ ಸಾಧನೆಯೆಡೆಗೆ ನಿರ್ಲಕ್ಷ್ಯವಾಗಿರುವುದು ಗಮನಕ್ಕೆ ಬಂದರೆ ಸಂಪೂರ್ಣ ಜಿಲ್ಲೆಯ ಕಾರ್ಯವನ್ನು ನಿಲ್ಲಿಸಿ, ಅಲ್ಲಿನ ಸಾಧಕರಿಗೆ ವ್ಯಷ್ಟಿ ಸಾಧನೆಗೆ ಗಮನ ಹರಿಸುವಂತೆ ಹೇಳುವುದು : ಯಾವುದೇ ಜಿಲ್ಲೆಯ ಸಾಧಕರು ‘ಸಾಧನೆಯ ಕಡೆಗೆ ಗಮನಹರಿಸದೇ ಕೇವಲ ಕಾರ್ಯದ ಹಿಂದೆಯೇ ಬೆನ್ನು ಹತ್ತಿದ್ದಾರೆ’, ಎಂದು ಪರಾತ್ಪರ ಗುರು ಡಾಕ್ಟರರ ಗಮನಕ್ಕೆ ಬಂದರೆ ಅವರು ಆ ಜಿಲ್ಲೆಯ ಕಾರ್ಯವನ್ನು ಸಂಪೂರ್ಣ ನಿಲ್ಲಿಸುವುದು, ಉದಾ. ಕೊಲ್ಹಾಪುರ ಜಿಲ್ಲೆ, ಅವರು ಸಾಧಕರಿಗೆ ”ಎಲ್ಲಿಯವರೆಗೆ ಜಿಲ್ಲೆಯ ಸಾಧಕರ ವ್ಯಷ್ಟಿ ಸಾಧನೆ ಚೆನ್ನಾಗಿ ಪ್ರಾರಂಭವಾಗುವುದಿಲ್ಲವೋ, ಅಲ್ಲಿಯವರೆಗೆ ಜಿಲ್ಲೆಯ ಕಾರ್ಯ ಪ್ರಾರಂಭವಾಗುವುದಿಲ್ಲ” ಎಂದು ಹೇಳಿದರು,

೪ ಇ. ‘ಸಾಧಕರಿಂದ ತಪ್ಪುಗಳಾಗಿ ಅವರ ಸಾಧನೆಗೆ ಹಾನಿಯಾಗ ಬಾರದೆಂದು ಸೇವೆಯನ್ನು ನಿಲ್ಲಿಸುವುದು : ವ್ಯಷ್ಟಿ ಸಾಧನೆಯ ಕಡೆಗೆ ಗಮನವನ್ನು ಹರಿಸದೇ ಕಾರ್ಯವನ್ನು ಮಾಡುತ್ತಿದ್ದರೆ, ಸಾಧಕರಲ್ಲಿರುವ ಸ್ವಭಾವದೋಷ ಮತ್ತು ಅಹಂನಿಂದಾಗಿ ಅವರಿಂದ ತಪ್ಪುಗಳಾಗಿ ಅವರ ಪಾಪಕರ್ಮಗಳು ಹೆಚ್ಚಾಗುತ್ತವೆ. ಹಾಗಾಗಬಾರದೆಂದು ಪರಾತ್ಪರ ಗುರುದೇವರು ಅವರಿಗೆ ಅವರು ಮಾಡುತ್ತಿರುವ ಕಾರ್ಯವನ್ನು ನಿಲ್ಲಿಸಿ ಅವರಿಗೆ ಸಾಧನೆಯ ಕಡೆಗೆ ಗಮನ ಹರಿಸಲು ಹೇಳುತ್ತಿದ್ದರು. ವ್ಯಷ್ಟಿ ಸಾಧನೆಯ ಅಡಿಯಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರಿಂದ ಸೇವೆಯಲ್ಲಿನ ತಪ್ಪುಗಳು ದೂರವಾಗಿ ಸಾಧನೆಯ ಹಾನಿ ಕಡಿಮೆಯಾಗಿ, ಸೇವೆ ಪರಿಪೂರ್ಣವಾಗುತ್ತದೆ. ಈಗಲೂ ಎಷ್ಟೇ ದೊಡ್ಡ ಜವಾಬ್ದಾರ ಸಾಧಕರಿಂದ ಸಾಧನೆಯ ಕಡೆಗೆ ನಿರ್ಲಕ್ಷ್ಯವಾಗುತ್ತಿದೆ’ ಎಂದು ಗಮನಕ್ಕೆ ಬಂದರೆ ಇತರ ಜವಾಬ್ದಾರ ಸಾಧಕರಿಗೆ ಅವರ ಸೇವೆಯನ್ನು ನಿಲ್ಲಿಸಿ, ಗೋವಾದ ಸನಾತನದ ಆಶ್ರಮಕ್ಕೆ ಸಾಧನೆಯನ್ನು ಸುವ್ಯವಸ್ಥಿತಗೊಳಿಸಲು ಹೋಗುವಂತೆ ಹೇಳುತ್ತಾರೆ.

ಮೇಲಿನ ಎಲ್ಲ ಉದಾಹರಣೆಗಳಿಂದ ‘ಪರಾತ್ಪರ ಗುರು ಡಾಕ್ಟರರಿಗೆ ಕಾರ್ಯಕ್ಕಿಂತ ಸಾಧಕರ ಸಾಧನೆ ಚೆನ್ನಾಗಿ ಆಗಬೇಕು’, ಇದೇ ಅಪೇಕ್ಷಿತವಿದೆ, ಎನ್ನುವುದು ತಿಳಿಯುತ್ತದೆ.

– (ಸದ್ಗುರು) ರಾಜೇಂದ್ರ ಶಿಂದೆ, ದೇವದ ಆಶ್ರಮ, ಪನವೇಲ (೧೬.೧೦.೨೦೨೩)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.