ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರಿಂದ ಚೀನಾಗೆ ಛೀಮಾರಿ !
ಟೋಕೀಯೋ (ಜಪಾನ್) – ಚೀನಾದೊಂದಿಗಿನ ನಮ್ಮ ಸಂಬಂಧ ಅಷ್ಟೇನು ಒಳ್ಳೆಯದಾಗಿಲ್ಲ. ೨೦೨೦ ರಲ್ಲಿ ಕೊರೊನಾ ಮಹಾಮಾರಿಯ ಸಮಯದಲ್ಲಿ ಚೀನಾ ಭಾರತ ಗಡಿಯಲ್ಲಿ ಸೈನ್ಯದ ನೇಮಕ ಇದರ ಕಾರಣವಾಗಿದೆ. ಚೀನಾ ಗಡಿಯಲ್ಲಿ ಸೈನ್ಯ ನೇಮಿಸಿ ಒಪ್ಪಂದವನ್ನು ಉಲ್ಲಂಘಿಸಿದೆ. ಇಲ್ಲಿಯವರೆಗೂ ಈ ಸಮಸ್ಯೆ ಪರಿಹಾರವಾಗಿಲ್ಲಾ. ನೆರೆಯ ದೇಶ ಎಂದು ನಾವು ಚೀನಾದ ಜೊತೆಗೆ ಒಳ್ಳೆಯ ಸಂಬಂಧ ಇಡಲು ಆಶಿಸುತ್ತೇವೆ. ಅದು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ಗೌರವಿಸಬೇಕು ಆಗ ಮಾತ್ರ ಸಾಧ್ಯ. ಅದು ಈ ಹಿಂದೆ ಸಹಿ ಮಾಡಿರುವ ಒಪ್ಪಂದವನ್ನೂ ಗೌರವಿಸಬೇಕು. ಎಲ್ಲಿಯವರೆಗೆ ಅದರ ದೃಷ್ಟಿಕೋನ ಬದಲಾಗುವುದಿಲ್ಲ ಅಲ್ಲಿಯವರೆಗೆ ಭಾರತದ ಜೊತೆಗಿನ ಸಂಬಂಧ ಸುಧಾರಿಸುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಇಲ್ಲಿ ಚೀನಾದ ಕಿವಿ ಹಿಂಡಿದೆ. ಇಲ್ಲಿ ‘ಕ್ವಾಡ’ ದೇಶದ (ಭಾರತ, ಅಮೇರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ) ಸಭೆ ನಡೆಯಿತು. ಈ ಸಭೆಯ ಮೊದಲು ಡಾ. ಎಸ್. ಜೈಶಂಕರ್ ಇವರು ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದರು. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ ಯಿ ಇವರಲ್ಲಿ ಜುಲೈ ೨೫ ರಂದು ಥೈಲ್ಯಾಂಡಿನ ನೆರೆಯ ಲಾವೋಸ್ ದೇಶದಲ್ಲಿ ಮಹತ್ವಪೂರ್ಣ ಸಭೆ ನಡೆಯಿತು. ಇದರಲ್ಲಿ ಭಾರತ ಚೀನಾ ಗಡಿ ವಿವಾದದ ಬಗ್ಗೆ ನಾಯಕರಲ್ಲಿ ಚರ್ಚೆ ನಡೆಯಿತು. ಡಾ. ಎಸ್. ಜೈ ಶಂಕರ್ ಇವರು ಚೀನಾದ ವಿದೇಶಾಂಗ ಸಚಿವರಿಗೆ ಪ್ರತ್ಯಕ್ಷ ನಿಯಂತ್ರಣ ರೇಖೆಯ ಮತ್ತು ಹಿಂದಿನ ಒಪ್ಪಂದ ಗೌರವಿಸಲು ಹೇಳಿದರು. ಡಾ. ಜೈ ಶಂಕರ್ ಇವರು ವಾಂಗ ಯಿ ಇವರಿಗೆ, ಸಂಬಂಧ ಸ್ಥಿರವಾಗುವುದು ಎರಡು ದೇಶದ ಹಿತದಲ್ಲಿದೆ. ಭಾರತ ಚೀನಾ ಸಂಬಂಧ ಹಿಂದಿನಂತೆ ಆಗುವುದಕ್ಕಾಗಿ ಗಡಿ ವಿವಾದ ಇದು ಮುಖ್ಯ ಕಾರಣವಾಗಿದೆ. ಗಡಿಯಲ್ಲಿ ಯಾವ ಪರಿಸ್ಥಿತಿ ಇರುತ್ತದೆ ಅದೇ ಪರಿಸ್ಥಿತಿ ನಮ್ಮ ಸಂಬಂಧದಲ್ಲಿ ಕೂಡ ಕಾಣುತ್ತದೆ ಎಂದು ಹೇಳಿದ್ದರು.