Shia Sunni Muslims Fight: ಪಾಕಿಸ್ತಾನದಲ್ಲಿ ಶಿಯಾ ಮತ್ತು ಸುನ್ನಿ ನಡುವೆ ಘರ್ಷಣೆ ಆರು ದಿನದಲ್ಲಿ ೪೯ ಸಾವು

ಇಸ್ಲಾಮಾಬಾದ್ (ಪಾಕಿಸ್ತಾನದ) – ಪಾಕಿಸ್ತಾನದ ಖೈಬರ್ ಪಖ್ತುನಖ್ವಾ ಪ್ರಾಂತದಲ್ಲಿನ ಕುರ್ರಮ ಜಿಲ್ಲೆಯಲ್ಲಿನ ಬೂಶೆಹರಾ ಗ್ರಾಮದಲ್ಲಿ ಶಿಯಾ ಮತ್ತು ಸುನ್ನಿ ಈ ಜನಾಂಗದಲ್ಲಿ ೩೦ ಎಕರೆ ಭೂಮಿಯ ವಿವಾದದಿಂದ ನಡೆದ ಘರ್ಷಣೆಯಲ್ಲಿ ಇಲ್ಲಿಯವರೆಗೆ ೪೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈಗ ಈ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಮತ್ತು ಭದ್ರತಾ ಪಡೆಯನ್ನು ನೇಮಕ ಮಾಡಲಾಗಿದೆ. ಕುರ್ರಮನ ಉಪಯುಕ್ತ ಜಾವೇದುಲ್ಲಾ ಮೇಶುದ್ ಇವರು ಮಾತನಾಡಿ, ಈ ಸಂಘರ್ಷ ೬ ದಿನದಿಂದ ನಡೆಯುತ್ತಿದೆ.

ಕಳೆದ ವರ್ಷ ಎರಡೂ ಕಡೆಯ ಜನರಲ್ಲಿನ ವಿವಾದ ಪರಿಹಾರವಾದ ನಂತರ ಅವರಲ್ಲಿ ಸಮನ್ವಯ ಒಪ್ಪಂದ ಕೂಡ ನಡೆದಿತ್ತು. ಈ ಭೂಮಿ ಯಾರದ್ದು ? ಇದನ್ನು ಸರಕಾರ ನಿಶ್ಚಯಿಸುವುದು ಎಂದು ನಿರ್ಧರಿಸಲಾಗಿತ್ತು. ಎರಡು ಪಕ್ಷಗಳು ಭೂವಿವಾದ ಪರಿಹರಿಸುವ ಭೂಮಿ ಆಯೋಗದ ನಿಯಮದ ಪಾಲನೆ ಮಾಡಬೇಕಾಗುತ್ತದೆ. ಅದರ ನಂತರ ಆಯೋಗವು ಈ ಭೂಮಿ ಶಿಯಾ ಜನಾಂಗಕ್ಕೆ ಸೇರಿದೆ ಎಂದು ನಿರ್ಣಯ ನೀಡಿತು. ವರ್ಷದ ನಂತರ ಈಗ ಮತ್ತೊಮ್ಮೆ ವಿವಾದ ಆರಂಭವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನರು ಯಾವ ದೇಶದಲ್ಲಿ ಅಲ್ಪಸಂಖ್ಯಾತರಿರುತ್ತಾರೆ ಅಲ್ಲಿ ಅವರು ಇತರ ಧರ್ಮದವರನ್ನು ಗುರಿ ಮಾಡುತ್ತಾರೆ ಮತ್ತು ಎಲ್ಲಿ ಅವರು ಬಹು ಸಂಖ್ಯಾತರಾಗಿರುತ್ತಾರೆ ಅಲ್ಲಿ ಅವರು ಪರಸ್ಪರ ಹಿಂಸಾಚಾರ ಮಾಡುತ್ತಾರೆ. ಹಿಂಸಾಚಾರ ಮಾಡುವುದು ಇದೇ ಅವರ ಪ್ರವೃತ್ತಿ ಆಗಿದೆ ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !