ಬಾಂಗ್ಲಾದೇಶದ ಮೊಗಲಾ ಬಂದರಿನ ‘ ಟರ್ಮಿನಲ್ ‘ ನಡೆಸುವ ಜವಾಬ್ದಾರಿ ಭಾರತಕ್ಕೆ !

  • ಚೀನಾವನ್ನು ಹಿಂದಿಕ್ಕಿ ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡ ಬಾಂಗ್ಲಾದೇಶ

  • ಈ ವರ್ಷದಲ್ಲಿ ಭಾರತವು ಒಪ್ಪಂದ ಮಾಡಿಕೊಂಡಿರುವ ಇದು ಮೂರನೇ ಬಂದರಾಗಿದೆ

(ಟರ್ಮಿನಲ್ ಎಂದರೆ ಬಂದರನಲ್ಲಿರುವ ನೌಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಭಾಗವಾಗಿದೆ)

ನವದೆಹಲಿ – ಹಿಂದೂ ಮಹಾಸಾಗರದಲ್ಲಿ ಚೀನಾದ ಕಾರ್ಯ ಚಟುವಟಿಕೆ ಹೆಚ್ಚಿದೆ. ಇದರ ಹಿನ್ನೆಲೆಯಲ್ಲಿ ಮೊಗಲಾ ಬಂದರಿನ ಟರ್ಮಿನಲ್ ನಡೆಸುವ ವಿಷಯವಾಗಿ ಬಾಂಗ್ಲಾದೇಶವು ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಭಾರತವು ಮಾಡಿಕೊಂಡಿರುವ ಈ ಒಪ್ಪಂದ ಹಿಂದೂ ಮಹಾಸಾಗರದಲ್ಲಿ ಚೀನಾವನ್ನು ಎದುರಿಸುವ ಪ್ರಯತ್ನ ಎಂದು ನೋಡಲಾಗುತ್ತಿದೆ. ಚೀನಾ ಈ ಒಪ್ಪಂದ ಮಾಡಿಕೊಳ್ಳುವುದಕ್ಕಾಗಿ ಉತ್ಸುಕವಾಗಿತ್ತು ; ಆದರೆ ಬಾಂಗ್ಲಾದೇಶ ಚೀನಾವನ್ನು ಬಿಟ್ಟು ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಬಾಂಗ್ಲಾದೇಶದಲ್ಲಿನ ಚಿತಗಾವ ಬಂದರಿನ ಬಳಿಕ ಮೊಗಲಾ ಬಂದರ್ ಅಲ್ಲಿನ ಎರಡನೆಯ ದೊಡ್ಡ ಬಂದರಾಗಿದೆ.

೧. ದೆಹಲಿಯ ಕಿಂಗ್ ಟ್ಯಾಕ್ ಸೊಸೈಟಿ ಫಾರ್ ಪಾಲಿಸಿಯ ಸಂಚಾಲಕ ಮತ್ತು ಭಾರತೀಯ ನೌಕಾದಳದ ಮಾಜಿ ಅಧಿಕಾರಿ ಉದಯ ಭಾಸ್ಕರ್ ಅವರ ಅಭಿಪ್ರಾಯದಂತೆ, ಹಿಂದೂ ಮಹಾಸಾಗರದಲ್ಲಿ ಭಾರತವು ಬಂದರಿನ ಕಾರ್ಯ ನಿರ್ವಹಿಸುವ ಕ್ಷಮತೆಯ ಪ್ರದರ್ಶನ ಮಾಡುವುದಕ್ಕಾಗಿ ಮೊಗಲಾ ಬಂದರ ಒಪ್ಪಂದ ಒಂದು ಒಳ್ಳೆಯ ಅವಕಾಶವಾಗಿದೆ.

೨. ಈ ವರ್ಷದ ಆರಂಭದಲ್ಲಿ ಭಾರತವು ಮ್ಯಾನ್ಮಾರ್ ಜೊತೆಗಿನ ಶ್ವೇತ ಬಂದರ್ ಮತ್ತು ಇರಾನ್ ಜೊತೆಗಿನ ಚಬಹಾರ ಬಂದರ ಇವುಗಳ ಒಪ್ಪಂದ ಮಾಡಿಕೊಂಡಿದೆ. ಮೊಗಲಾ ಬಂದರದ ಒಪ್ಪಂದದ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿಯವರೆಗೆ ಬೆಳಕಿಗೆ ಬಂದಿಲ್ಲ. ಕೆಲವು ವಾರ್ತ ವಾಹಿನಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಟರ್ಮಿನಲ್ ಅನ್ನು ಇಂಡಿಯಾ ಪೋರ್ಟರ್ಸ್ ಗ್ಲೋಬಲ್ ಲಿಮಿಟೆಡ್ ಮೂಲಕ (ಐಪಿಜಿಎಲ್) ನಡೆಸಲಾಗುವುದು.

ಮೊಗಲಾ ಬಂದರ್ ಒಪ್ಪಂದದ ವಿಶೇಷತೆ ಏನು ?

ಸಂಪರ್ಕದ ದೃಷ್ಟಿಯಿಂದ ಮೊಗಲಾ ಬಂದರ ಒಪ್ಪಂದ ಭಾರತಕ್ಕೆ ಮಹತ್ವದ್ದಾಗಿದೆ. ಈ ಬಂದರದಿಂದ ಭಾರತ ಈಶಾನ್ಯದ ರಾಜ್ಯಗಳ ಜೊತೆಗೆ ಸಂಪರ್ಕ ಹೆಚ್ಚಿಸಲು ಸಹಾಯವಾಗುತ್ತದೆ. ಇದರಿಂದ ಚಿಕನ್ ನೆಕ್ ಅಥವಾ ಸಿಲಿಗುಡಿ ಕಾರಿಡಾರ್ ಮೇಲಿನ ಒತ್ತಡ ಕಡಿಮೆ ಆಗುವುದು. ಚಿಕನ್ ನೆಕ್ ಇದು ಪಶ್ಚಿಮ ಬಂಗಾಲದಲ್ಲಿನ ಸಿಲಿಗುಡಿ ನಗರದಲ್ಲಿನ ೨೨ ಕಿಲೋಮೀಟರದ ಪ್ರದೇಶವಾಗಿದೆ. ಈ ಪ್ರದೇಶವು ಈಶಾನ್ಯ ಭಾಗದ ೭ ರಾಜ್ಯಗಳು ಮತ್ತು ಭಾರತದಲ್ಲಿನ ಇತರ ರಾಜ್ಯಗಳನ್ನು ಜೋಡಿಸುತ್ತದೆ.