ಇಸ್ಲಾಮಾಬಾದ್ – ಅಜರಬೈಜಾನ್ ನ ರಾಷ್ಟ್ರಪತಿ ಇಲ್ಹಾಮ ಅಲಿಯೆವ ಇವರು ಪಾಕಿಸ್ತಾನದ ಪ್ರವಾಸದಲ್ಲಿದ್ದರು. ಆ ಸಮಯದಲ್ಲಿ ಅವರು ಕಾಶ್ಮೀರದ ಅಂಶದ ಕುರಿತು ಪಾಕಿಸ್ತಾನವನ್ನು ಬೆಂಬಲಿಸಿದರು. ಭಾರತದ ಹೆಸರು ಹೇಳದೆ ಅವರು, ಕಾಶ್ಮೀರದ ಅಧಿಕಾರದ ಕಡೆಗೆ ನಿರ್ಲಕ್ಷ ಮಾಡಲಾಗುತ್ತಿದೆ, ಅದರ ಅಧಿಕಾರದ ಉಲ್ಲಂಘನೆ ಕೂಡ ಆಗುತ್ತಿದೆ ಎಂದು ಹೇಳಿದರು. ಅಜರಬೈಜಾನ ಇದು ಒಂದು ಮುಸಲ್ಮಾನ ದೇಶವಾಗಿದೆ. ಭಾರತದ ಜೊತೆಗೆ ನಮ್ಮ ಒಳ್ಳೆಯ ಸಂಬಂಧವಿದೆ. ಅಜರಬೈಜಾನದು ಇಸ್ರೇಲಿನ ಜೊತೆಗೂ ಕೂಡ ಒಳ್ಳೆಯ ಸಂಬಂಧ ಇದೆ. ಭಾರತ ಮತ್ತು ಇಸ್ರೇಲ್ ಇವರಲ್ಲಿ ಆತ್ಮೀಯ ಸ್ನೇಹವಿದೆ.
‘ಇಸ್ರಾಯಿಲಿನ ಅರ್ಥ ವ್ಯವಸ್ಥೆ ಬಹಳಷ್ಟು ಪ್ರಮಾಣದಲ್ಲಿ ಅಜರಬೈಜಾನ ಮೇಲೆ ಅವಲಂಬಿಸಿದೆ’, ಎಂದು ಹೇಳಲಾಗುತ್ತಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಅಜರಬೈಜಾನ ಇಸ್ರೇಲಿನ ಪರವಾಗಿ ನಿಂತಿದೆ. ಇಸ್ರೇಲಿನ ಸಹಾಯದಿಂದ ಅಜರಬೈಜಾನಗೆ ನಾಗೋರ್ನೋ-ಕರಾಬಾಖ್ ಈ ಪ್ರದೇಶ ವಶಕ್ಕೆ ಪಡೆಯಲು ಸಾಧ್ಯವಾಗಿತ್ತು.
ಸಂಪಾದಕೀಯ ನಿಲುವುಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಪಾಕಿಸ್ತಾನವು ದಾಳಿ ನಡೆಸಿ ಅದರ ಕೆಲವು ಭಾಗ ವಶಕ್ಕೆ ಪಡೆದಿದೆ, ಇದು ಭಾರತೀಯ ರಾಜಕಾರಣಿಗಳು ಅಜರಬೈಜಾನ್‌ಗೆ ಒತ್ತಿ ಹೇಳಬೇಕು ಮತ್ತು ಪುನಃ ಭಾರತದ ಅಂತರಿಕ ಸಮಸ್ಯೆಗಳಲ್ಲಿ ಮೂಗು ತೂರಿಸಬಾರದೆಂದು ತಾಕಿತು ಮಾಡಬೇಕು ! |