Pakistani Passports Suspended: ವಿದೇಶಕ್ಕೆ ತೆರಳಿ ಭಿಕ್ಷೆ ಬೇಡುವ ಪಾಕಿಸ್ತಾನದಲ್ಲಿ 2 ಸಾವಿರ ಭಿಕ್ಷುಕರ ಪಾಸ್‌ಪೋರ್ಟ್ ರದ್ದು

  • ದೇಶದ ಮಾನಹಾನಿ ತಪ್ಪಿಸಲು ಪಾಕಿಸ್ತಾನ ಸರ್ಕಾರದಿಂದ ಕ್ರಮ!

  • ಪ್ರವಾಸಿಗರಾಗಿ ವಿದೇಶಕ್ಕೆ ಹೋಗುತ್ತಿದ್ದರು

  • ಹಣದುಬ್ಬರದಿಂದಾಗಿ ಪಾಕಿಸ್ತಾನದಲ್ಲಿ ಭಿಕ್ಷೆ ಸಿಗದೇ ಇರುವುದರಿಂದ, ವಿದೇಶಕ್ಕೆ ಮೊರೆ ಹೋದರು !

ಇಸ್ಲಾಮಾಬಾದ್ – ವಿದೇಶಕ್ಕೆ ಹೋಗಿ ಭಿಕ್ಷೆ ಬೇಡುವ ಪಾಕಿಸ್ತಾನದ 2 ಸಾವಿರ ಭಿಕ್ಷುಕರ ಪಾಸ್‌ಪೋರ್ಟ್ ಪಾಕಿಸ್ತಾನ ಸರ್ಕಾರವು ರದ್ದುಗೊಳಿಸಲಾಗಿದೆ. ಪಾಕಿಸ್ತಾನದ ‘ಡಾನ್ ನ್ಯೂಸ್’ ಈ ಸುದ್ದಿಯನ್ನು ಪ್ರಸಾರ ಮಾಡಿದೆ. ಪ್ರಸ್ತುತ ಗಂಭೀರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಬೆಲೆಯೇರಿಕೆ ಗಗನಕ್ಕೇರಿದೆ. ಪಾಕಿಸ್ತಾನವು ಪ್ರಸ್ತುತ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸುನಿಧಿಗಳು ಈ ಸಂಸ್ಥೆಗಳಿಂದ ಹಣಕಾಸಿನ ಭಿಕ್ಷೆ ಬೇಡುತ್ತಿದೆ. ಹಾಗಾಗಿ ಸದ್ಯ ದೇಶದಲ್ಲಿ ಭಿಕ್ಷೆ ಸಿಗದ ಕಾರಣ ಪಾಕಿಸ್ತಾನದ ಭಿಕ್ಷುಕರು ವಿದೇಶಕ್ಕೆ ಮೊರೆ ಹೋಗಿದ್ದಾರೆ. ಇದರಿಂದ ಆಗುವ ಅವಮಾನ ತಪ್ಪಿಸಲು ಪಾಕಿಸ್ತಾನ ಸರಕಾರ ಈ ಭಿಕ್ಷುಕರ ಪಾಸ್ ಪೋರ್ಟ್ ರದ್ದುಗೊಳಿಸಿದೆ.

‘ಡಾನ್ ನ್ಯೂಸ್’ ವರದಿ ಪ್ರಕಾರ, ಅನೇಕ ಭಿಕ್ಷುಕರು ಸೌದಿ ಅರೇಬಿಯಾ, ಇರಾನ್, ಇರಾಕ್‌ನಂತಹ ದೇಶಗಳಿಗೆ ತೀರ್ಥಯಾತ್ರೆ ಅಥವಾ ಉಮರಾಹಕ್ಕೆ ಹೋಗುತ್ತಾರೆ ಮತ್ತು ಅಲ್ಲಿಗೆ ತಲುಪಿದ ನಂತರ ಅಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಇಂತಹವರ ಪಟ್ಟಿಯನ್ನು ವಿಶ್ವದಾದ್ಯಂತದ ಪಾಕಿಸ್ತಾನಿ ರಾಯಭಾರಿ ಕಚೇರಿಗಳಿಂದ ಸಂಗ್ರಹಿಸಲು ಪಾಕಿಸ್ತಾನ ಸರ್ಕಾರ ಆದೇಶ ನೀಡಿದೆ. ವಿದೇಶದಲ್ಲಿ ಭಿಕ್ಷೆ ಬೇಡುವಾಗ ಸಿಕ್ಕಿಬಿದ್ದ ಭಿಕ್ಷುಕರ ಪಾಸ್‌ಪೋರ್ಟ್‌ಗಳನ್ನು 7 ವರ್ಷಗಳವರೆಗೆ ಅಮಾನತು ಮಾಡಬಹುದು. ಇಂತಹರಿಂದಾಗಿ ಪಾಕಿಸ್ತಾನದ ಹಾಗೆಯೇ ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಘನತೆಯೂ ಕಡಿಮೆಯಾಗುತ್ತಿತ್ತು. ಇದರಿಂದಾಗಿ ಪಾಕಿಸ್ತಾನ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ. ಇದರೊಂದಿಗೆ ಭಿಕ್ಷುಕರಿಗೆ ಸಹಾಯ ಮಾಡುವ ದಲ್ಲಾಳಿಗಳ ಪಾಸ್‌ಪೋರ್ಟ್‌ಗಳನ್ನು ಕೂಡ ಸರ್ಕಾರ ರದ್ದುಪಡಿಸಲಿದೆ.

ಸಂಪಾದಕೀಯ ನಿಲುವು

ಭಯೋತ್ಪಾದಕರ ಪೋಷಿಸುವುದನ್ನು ಬಿಡದಿದ್ದರೆ, ಪಾಕಿಸ್ತಾನದ ಪರಿಸ್ಥಿತಿ ಇದಕ್ಕಿಂತ ಕೆಟ್ಟದಾಗಿರುತ್ತದೆ !