ಸತ್ಪುರುಷರ ಮಾತಿನ ಮೇಲೆ ನಂಬಿಕೆಯಿಟ್ಟು ಅದರಂತೆ ನಡೆದುಕೊಳ್ಳುವುದು ಮಹತ್ವದ್ದಾಗಿದೆ !

ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜ

ತಾಯಿಯು ತನ್ನ ಮಗನ ಬಗ್ಗೆ ಹೆಚ್ಚೆಂದರೆ ಒಂದು ಜನ್ಮದ ತನಕ, ಅಂದರೆ ದೇಹವು ಇರುವವರೆಗೆ ಕಾಳಜಿಯನ್ನು ತೆಗೆದುಕೊಳ್ಳಬಹುದು; ಆದರೆ ಗುರುಗಳು ಜನ್ಮಜನ್ಮಗಳ ವರೆಗೆ ನಿಮ್ಮ ಕಾಳಜಿಯನ್ನು ವಹಿಸಲು ಸಿದ್ಧರಾಗಿದ್ದಾರೆ. ಅವರಿಗೆ ದೇಹವಿಲ್ಲದಿದ್ದರೂ, ಅವರು ಇಲ್ಲವೆಂದು ತಿಳಿಯಬೇಡಿ. ಸತ್ಪುರುಷರ ಮಾತಿನಲ್ಲಿ ವಿಶ್ವಾಸವನ್ನಿಟ್ಟು ಅದರಂತೆ ನಡೆದುಕೊಳ್ಳುವುದೆಂದರೆ ಅದು ನಿಜವಾದ ಸತ್ಸಮಾಗಮವಾಗಿದೆ. ದೇಹದ ಭೋಗವು ಬರುತ್ತದೆ-ಹೋಗುತ್ತದೆ; ಆದರೆ ನೀವು ನಿರಂತರ ಆನಂದ ವಾಗಿರಿ. ಈಗ ನಿಮಗೆ ಏನು ಮಾಡುವುದು ಉಳಿದಿಲ್ಲ, ಎಂದು ತಿಳಿಯಬೇಡಿ. ಗುರುಗಳ ಭೇಟಿ ಆಯಿತು, ಅಂದರೆ ನೀವು ಉಳಿಯುವುದೇ ಇಲ್ಲ; ಆದರೆ ಗುರುಗಳಿಗೆ ಅನನ್ಯ ಶರುಣಾಗಿ. ಭಗವಂತನ ಬಗೆಗಿನ ಹಂಬಲವು ಸಾಧಕತ್ವದ ಪ್ರಾಣವಾಗಿದೆ.

– ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು (‘ಪೂ. (ಪ್ರಾ.) ಕೆ.ವಿ. ಬೆಲಸರೆ ಇವರ ಆಧ್ಯಾತ್ಮಿಕ ಸಾಹಿತ್ಯ ಈ ಫೇಸಬುಕ್‌ನ ಸೌಜನ್ಯದಿಂದ)