೧. ಆರ್ಯ ಚಾಣಕ್ಯರು ತಕ್ಷಶಿಲಾ ವಿದ್ಯಾಪೀಠದಲ್ಲಿ ‘ಆಚಾರ್ಯ ಈ ಪದವಿಯಲ್ಲಿ ನಿಯುಕ್ತಿಯಾದ ನಂತರ ಅವರು ಕೇವಲ ವಿದ್ಯಾದಾನದಲ್ಲಿಯೇ ಧನ್ಯತೆಯನ್ನು ಕಾಣದೇ, ಚಂದ್ರಗುಪ್ತರಂತಹ ಅನೇಕ ಶಿಷ್ಯರಿಗೆ ಕ್ಷಾತ್ರ-ಉಪಾಸನೆಯ ಮಹಾಮಂತ್ರವನ್ನು ನೀಡಿ ಅವರ ಮೂಲಕ ಪರಕೀಯ ಗ್ರೀಕರ ಹಿಂದುಸ್ಥಾನದ ಮೇಲಿನ ಆಕ್ರಮಣವನ್ನು ಸದೆಬಡಿದರು ಮತ್ತು ಹಿಂದುಸ್ಥಾನವನ್ನು ಅಖಂಡ ಮಾಡಿದರು.
೨. ಪ್ರತ್ಯಕ್ಷ ಪ್ರಭು ರಾಮನ ದರ್ಶನ ಪಡೆದ ಸಮರ್ಥ ರಾಮದಾಸ ಸ್ವಾಮಿಗಳು ಕೇವಲ ರಾಮನಾಮದ್ದೇ ಜಪ ಮಾಡುವಲ್ಲಿ ತಲ್ಲೀನರಾಗದೇ, ಸಮಾಜವು ಬಲೋಪಾಸನೆ ಮಾಡಬೇಕೆಂದು ಅವರು ಅನೇಕ ಕಡೆಗಳಲ್ಲಿ ಮಾರುತಿಯ ಸ್ಥಾಪನೆ ಮಾಡಿದರು ಮತ್ತು ಶಿವಾಜಿ ಮಹಾರಾಜರಿಗೆ ಅನುಗ್ರಹ ನೀಡಿ ಅವರಿಂದ ‘ಹಿಂದವೀ ಸ್ವರಾಜ್ಯ ದ ಸ್ಥಾಪನೆ ಮಾಡಿಸಿಕೊಂಡರು.
೩. ಇತ್ತೀಚಿಗಿನ ಕಾಲದಲ್ಲಿ ಆದಂತಹ ಸ್ವಾಮಿ ವರದಾನಂದ ಭಾರತಿ ಮತ್ತು ಮಹಾಯೋಗಿ ಗುರುದೇವ ಕಾಟೇಸ್ವಾಮೀಜಿ, ಇವರೂ ಹೀಗೆಯೇ ಶ್ರೇಷ್ಠ ಗುರುಗಳಾಗಿದ್ದರು. ಧರ್ಮ ಮತ್ತು ಅಧ್ಯಾತ್ಮ ಇವುಗಳ ಬೋಧನೆ ನೀಡುವುದರೊಂದಿಗೆ ಈ ಮಹಾನ ಪುರುಷರ ಲೇಖನಿ ಪ್ರಜ್ವಲಿಸಿದವು, ಅವು ರಾಷ್ಟ್ರ ಮತ್ತು ಧರ್ಮ ಇವುಗಳ ಕರ್ತವ್ಯಗಳ ಬಗೆಗೆ ನಿದ್ರಿಸ್ತರಾಗಿರುವ ಹಿಂದೂ ಸಮಾಜವನ್ನು ಜಾಗೃತಗೊಳಿಸಲು ! ಇಂತಹ ಎಷ್ಟೋ ಗುರುಗಳಿದ್ದಾರೆ, ಅವರು ತಮ್ಮ ಆಚಾರ-ವಿಚಾರಗಳಿಂದ ತಮ್ಮ ಶಿಷ್ಯರಿಗೆ ಮತ್ತು ಸಮಾಜಕ್ಕೂ ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಯಂತಹ ಪವಿತ್ರ ಕಾರ್ಯದ ಆದರ್ಶ ಹಾಕಿ ಕೊಟ್ಟಿದ್ದಾರೆ.