Death Sentence: ಪಾಕಿಸ್ತಾನದಲ್ಲಿ ಧರ್ಮನಿಂದನೆ; ಕ್ರೈಸ್ತ ವ್ಯಕ್ತಿಗೆ ನ್ಯಾಯಾಲಯದಿಂದ ಗಲ್ಲು ಶಿಕ್ಷೆ !

ಇಸ್ಲಾಮಾಬಾದ – ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಪ್ರಕರಣಗಳ ವಿಶೇಷ ನ್ಯಾಯಮೂರ್ತಿ ಜೈನುಲ್ಲಾಹ ಖಾನ ಅವರು ಅಹಸಾನ ರಾಜಾ ಮಸಿಹ ಈ ಕ್ರೈಸ್ತ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಅವನ ಮೇಲೆ ಧರ್ಮನಿಂದನೆ ಮಾಡಿರುವ ಆರೋಪ ಅಂದರೆ ಇಸ್ಲಾಂ ವಿರೋಧಿ ಕೃತ್ಯ ಎಸಗಿರುವ ಆರೋಪವಿದೆ. ಗಲ್ಲು ಶಿಕ್ಷೆಯ ಜೊತೆ ಅವನಿಗೆ 10 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಮಸಿಹನು ‘ಟಿಕ್‌ಟಾಕ್’ ನಲ್ಲಿ ತಥಾಕಥಿತ ಧರ್ಮನಿಂದನೆ ಮಾಡಿರುವ ಪೋಸ್ಟ ಪ್ರಸಾರ ಮಾಡಿದ್ದನು. ಅವನ ಪೋಸ್ಟನಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದೆಯೆಂದು ಆರೋಪಿಸಲಾಗಿದೆ. ಓರ್ವ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಸೀಹ ವಿರುದ್ಧ ಪಾಕಿಸ್ತಾನದಲ್ಲಿನ ಭಯೋತ್ಪಾದನಾ ನಿಗ್ರಹ ಕಾಯ್ದೆ ಮತ್ತು ‘ವಿದ್ಯುನ್ಮಾನ ಅಪರಾಧಗಳ ನಿಷೇಧ ಕಾಯ್ದೆ’ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಧರ್ಮನಿಂದನೆಯ ಪೋಸ್ಟ್‌ನಿಂದ ಕ್ರೈಸ್ತರ ಮನೆಗಳು ಮತ್ತು ಚರ್ಚ್‌ಗಳನ್ನು ಸುಡಲಾಗಿತ್ತು!

ಮಸಿಹ್ ನ ಪೋಸ್ಟ್‌ನಿಂದಾಗಿ, ಪಂಜಾಬ್ ಪ್ರಾಂತ್ಯದಲ್ಲಿ ‘ಕ್ರೈಸ್ತರು ಕುರಾನ್‌ ವಿಡಂಬನೆ ಮಾಡಿದರು’ ಎಂಬ ವದಂತಿ ಹರಡಿತ್ತು. ರಾಜಧಾನಿ ಲಾಹೋರ್‌ನಿಂದ 130 ಕಿಮೀ ದೂರದಲ್ಲಿರುವ ಫೈಸಲಾಬಾದ್ ಜಿಲ್ಲೆಯ ಜರನ್‌ವಾಲಾ ತಾಲೂಕಿನ ಮುಸ್ಲಿಮರು 24 ಚರ್ಚ್‌ಗಳಿಗೆ ಬೆಂಕಿ ಹಚ್ಚಿದರು, ಅಲ್ಲದೇ ಚರ್ಚ್ ಮತ್ತು ಸುತ್ತಮುತ್ತಲಿನ ಆವರಣಗಳನ್ನು ಧ್ವಂಸಗೊಳಿಸಿದರು. ಇದರೊಂದಿಗೆ ಕ್ರೈಸ್ತರ 80 ಮನೆಗಳನ್ನು ಸುಟ್ಟರು. ಈ ಘಟನೆಯ ಬಳಿಕ ಪೊಲೀಸರು 200 ಮುಸಲ್ಮಾನರನ್ನು ವಶಕ್ಕೆ ಪಡೆದಿದ್ದರು; ಆದರೆ ಯಾರ ಮೇಲೆಯೂ ಕ್ರಮ ಕೈಗೊಳ್ಳಲಿಲ್ಲ. ಈ 200 ಜನರ ಪೈಕಿ 188 ಮಂದಿಯನ್ನು ನ್ಯಾಯಾಲಯವು ಸಾಕ್ಷ್ಯಗಳ ಕೊರತೆಯಿಂದ ನಿರಪರಾಧಿ ಎಂದು ಘೋಷಿಸಿ ಬಿಡುಗಡೆಗೊಳಿಸಿದೆ, ಉಳಿದ 12 ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಧರ್ಮನಿಂದಯ ಕಾನೂನಿನ ಉಪಯೋಗಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಮಾಡುವವರ ಮೇಲೆ ಬಳಸಲಾಗುತ್ತದೆ. ಅದರ ಪೆಟ್ಟು ಅಲ್ಲಿಯ ಹಿಂದೂಗಳಿಗೂ ಆಗುತ್ತಿದೆಯೆನ್ನುವುದೂ ಅಷ್ಟೇ ಸತ್ಯ!