ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸ್ವೇಚ್ಛೆಯ ಎರಡು ವಿಧಗಳು !

ಸಾಧನೆ ಮಾಡುವವರು ಮುಂದೆ ಜನ್ಮ ಬೇಡ; ಸಾಧನೆ ಮಾಡಿ ಈ ಜನ್ಮದಲ್ಲಿಯೇ ಮೋಕ್ಷ ಪಡೆಯಬೇಕು, ಎಂಬ ಇಚ್ಛೆಯನ್ನು ಇಟ್ಟುಕೊಂಡಿರುತ್ತಾರೆ. ತದ್ವಿರುದ್ಧ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಜನರಿಗೆ,  ಧರ್ಮಕಾರ್ಯ ಮಾಡುವುದಕ್ಕಾಗಿ ಮತ್ತೆ-ಮತ್ತೆ ಜನ್ಮಕ್ಕೆ ಬರಬೇಕು ಎಂದೆನಿಸುತ್ತದೆ. ಒಂದು ವೇಳೆ ಇದನ್ನು ಸ್ವೇಚ್ಛೆ ಎನ್ನುವುದಾದರೆ ಮುಂದಿನ ಜನ್ಮ ಬೇಡ, ಎನ್ನುವುದು ಸಹ ಸ್ವೇಚ್ಛೆಯೇ ಆಗಿದೆ.

ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಇಲ್ಲದಿರುವ ನಿರರ್ಥಕ ಬುದ್ಧಿವಾದಿಗಳು !

ಆದಿ ಶಂಕರಾಚಾರ್ಯರು ವಿರೋಧಿ ಪಂಡಿತರೊಂದಿಗೆ ವಾದ ಮಾಡಿ ಅವರನ್ನು ಪರಾಜಯಗೊಳಿಸಿದರು; ಆದರೆ ಇಂದಿನ ಬುದ್ಧಿವಾದಿಗಳೊಂದಿಗೆ ಮತ್ತು ಧರ್ಮದ್ರೋಹಿಗಳೊಂದಿಗೆ ವಾದ ಮಾಡಿ ಅವರನ್ನು ಪರಾಜಯಗೊಳಿಸಲು ಸಾಧ್ಯವಿಲ್ಲ; ಏಕೆಂದರೆ ಅವರಲ್ಲಿ ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಇಲ್ಲದಿರುವ ಕಾರಣ ಅವರು ವಾದ ಮಾಡಲು ಮುಂದೆ ಬರುವುದಿಲ್ಲ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ