ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶಿಷ್ಯರಿಗೆ ಮಾಡಿದ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಗುರುಗಳು ಹೇಳಿದುದೆಲ್ಲವನ್ನೂ ನಮಗೆ ಮಾಡಲು ಬರಬೇಕು !

‘ತಮ್ಮ ವಿಚಾರವನ್ನು ಬಿಟ್ಟುಕೊಡದಿರು ವುದು, ಇದು ಜಿಜ್ಞಾಸೆಯ ಅಭಾವ ಮತ್ತು ಅಹಂ ಇರುವುದರ ಲಕ್ಷಣವಾಗಿದೆ. ‘ನನಗಾಗಿ ಯಾವುದು ಒಳ್ಳೆಯದಿದೆ ?’, ಎಂಬುದನ್ನು ನಾನು ನಿರ್ಧರಿಸುವೆನು’, ಎಂಬ ವೃತ್ತಿ ತಪ್ಪಾಗಿದೆ. ಅದರ ಬದಲು ‘ನಾನು/ನಾವು, ನನ್ನ/ನಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ಏನು ಮಾಡಲಿ ?’, ಅದನ್ನು ಕೃಪೆ ಮಾಡಿ ಹೇಳಿ’, ಎಂದು ಕೇಳಬೇಕು. ವೈದ್ಯರು/ಆಧುನಿಕ ವೈದ್ಯರು ನೀಡಿದ ಔಷಧಿಗಳನ್ನು ಯಾವುದೇ ಪ್ರಶ್ನೆ ಮಾಡದೇ ನಾವು ತೆಗೆದುಕೊಳ್ಳುತ್ತೇವೆ, ಹಾಗೆಯೇ ನಮ್ಮ ಗುರುಗಳು ಹೇಳಿದ ಎಲ್ಲವನ್ನೂ ನಮಗೆ ಮಾಡಲು ಬರಬೇಕು.’

೨. ‘ಜಗತ್ತಿನಲ್ಲಿ ಅನೇಕ ವಿಷಯಗಳ ಪದವಿಗಳಿವೆ. ‘ಡಾಕ್ಟರೇಟ್’ ನಂತಹ ಅನೇಕ ಉಚ್ಚ ಪದವಿಗಳಿವೆ; ಆದರೆ ಸರ್ವ ಶ್ರೇಷ್ಠ ಪದವಿ ಎಂದರೆ ‘ಗುರುವಿನ ‘ನಿಜವಾದ ಶಿಷ್ಯ’ !

೩. ಒಬ್ಬನು ಅಂತರಂಗ ಮತ್ತು ಇನ್ನೊಬ್ಬನು ಬಹಿರಂಗ ಶಿಷ್ಯ ನಿರುತ್ತಾನೆ. ಪ್ರತಿಯೊಂದು ಕೃತಿಯನ್ನು ಮಾಡುವಾಗ ಅಂತರಂಗ ಶಿಷ್ಯನಿಗೆ ಗುರು ಅಥವಾ ಈಶ್ವರ ಸತತವಾಗಿ ತನ್ನ ಬಳಿ ಇದ್ದಾರೆಂಬ ಅರಿವಿನಿಂದ ಅವನ ಕೃತಿಗಳು ಯೋಗ್ಯ ರೀತಿಯಲ್ಲಾ ಗುತ್ತವೆ. ಬಹಿರಂಗ ಶಿಷ್ಯನು ಗುರುಗಳು ಎದುರಿಗಿದ್ದರೆ, ಮಾತ್ರ ವ್ಯವಸ್ಥಿತವಾಗಿ ಕೃತಿ ಮಾಡುತ್ತಾನೆ, ಇಲ್ಲದಿದ್ದರೆ ಇಲ್ಲ.’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ