‘ಶ್ರೀರಾಮ ಮತ್ತು ಪಾಂಡವರು ಅವರ ತಂದೆಗೆ ಹುಟ್ಟಿದವರಲ್ಲ!’ – ಪ್ರೊ. ಕೆ.ಎಸ್. ಭಗವಾನ್

ಪ್ರೊ. ಕೆ.ಎಸ್. ಭಗವಾನ್ ರ ಹಿಂದೂ ವಿರೋಧಿ ಹೇಳಿಕೆ!

ಹರಿಹರ – ರಾಮಾಯಣದ ಶ್ರೀರಾಮ ಮತ್ತು ಮಹಾಭಾರತದ ಪಾಂಡವರು ತಮ್ಮ ತಂದೆಗೆ ಹುಟ್ಟಿಲ್ಲ. ಈ ವಿಷಯಕ್ಕೆ ದಾಖಲೆಗಳಿವೆಯೆಂದು ಹಿಂದೂ ದ್ವೇಷಿ ಹೇಳಿಕೆಯನ್ನು ಪ್ರಗತಿಪರ ವಿಚಾರವಂತ ಎಂದು ಹೇಳಿಕೊಳ್ಳುವ ಪ್ರೊ. ಕೆ.ಎಸ್. ಭಗವಾನ ಇತ್ತೀಚೆಗೆ ನೀಡಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪರವಾಗಿ ಆಯೋಜಿಸಲಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಪ್ರೊ. ಬಿ.ಕೃಷ್ಣಪ್ಪಾ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರೊ.ಭಗವಾನ್ ಹೇಳಿದ್ದು:

1. ರಾಮನು ‘ದಶರಥ ಮಹಾರಾಜನ ಮಗ’ ಇಷ್ಟೇ ತಿಳಿದುಕೊಂಡಿರುವ ವಿಷಯವಾಗಿದ್ದರೂ, ರಾಮನು ದಶರಥ ಮಹಾರಾಜರಿಂದ ಜನಿಸಿಲ್ಲ, ಒಬ್ಬ ಪುರೋಹಿತನಿಂದ ಜನಿಸಿದ್ದಾನೆ. ಅದೇ ರೀತಿ ಮಹಾಭಾರತದಲ್ಲಿ ಶಾಪಗ್ರಸ್ತ ರಾಜ ಪಾಂಡು `೫ ಮಂದಿ ಪಾಂಡವರ ತಂದೆ’ ಎಂದು ಹೇಳಲಾಗುತ್ತದೆ; ಆದರೆ ಪಾಂಡವರು ಜನಿಸಿದ್ದು ದೇವತೆಗಳಿಂದ ಎಂದು ಮಹಾಭಾರತದಲ್ಲಿ ಹೇಳಲಾಗಿದೆ.

2. ದೇವಸ್ಥಾನಗಳು ಮತ್ತು ಪುರಾಣಗಳಿಂದ ಯಾವುದೇ ಉಪಯೋಗವಿಲ್ಲ. ಪುರಾಣಗಳು ಮತ್ತು ಮನು ಸ್ಮೃತಿಗಳಲ್ಲಿ, ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದ ಜಾತಿ-ಗುಂಪುಗಳನ್ನು ಶೂದ್ರರು ಎಂದು ಕರೆಯಲಾಗಿದೆ. ಎಲ್ಲಾ ಶೂದ್ರರನ್ನು ‘ಬ್ರಾಹ್ಮಣರ ಸೇವಕರು’ ಎಂದು ಕರೆಯಲಾಗುತ್ತಿತ್ತು. ಮನುಷ್ಯರನ್ನು ಮನುಷ್ಯರೆಂದು ತಿಳಿಯದ ಇಂತಹ ಪುರಾಣಗಳೂ ಮತ್ತು ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ. ಆದರೂ ಕೆಲವು ಜನರಿಗೆ ಪುರಾಣಗಳು ಮತ್ತು ಮನುಸ್ಮೃತಿಯನ್ನು ತಲೆಯ ಮೇಲೆ ಇಟ್ಟುಕೊಂಡು `ಅದರಂತೆ ಆಡಳಿತ ನಡೆಸೋಣ’ ಎಂದು ಹೇಳಿ ಕುಣಿಯುತ್ತಿರುತ್ತಾರೆ. (ಸುಳ್ಳು ಹೇಳು ಆದರೆ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳು ಎನ್ನುವ ವೃತ್ತಿಯ ಪ್ರಗತಿಪರ ವಿಚಾರವಂತರು: ಈ ತಥಾಕಥಿತ ಪ್ರಗತಿಪರರು ಹಿಂದೂ ಧರ್ಮಗ್ರಂಥಗಳನ್ನು ಎಂದಿಗೂ ಅಧ್ಯಾತ್ಮದ ದೃಷ್ಟಿಕೋನದಿಂದ ಅಧ್ಯಯನವೇ ಮಾಡದ ಕಾರಣ ಮತ್ತು ಬುದ್ಧಿಯ ಸ್ತರದಲ್ಲಿ ಅದರ ಸಾರ ಅರ್ಥೈಸಿಕೊಂಡಿರುವುದರಿಂದ ಅವರು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹವರಿಗೆ ತಿಳಿ ಹೇಳಲು ಪ್ರಯತ್ನಿಸುವುದು ಬೋರ್ಗಲ್ಲ ಮೇಲೆ ನೀರೆರೆದಂತೆ ಆಗುವುದು- ಸಂಪಾದಕರು)

3. ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ಜಾತಿ ಗಣತಿಯ ವಿವರಗಳನ್ನು ರಾಜ್ಯ ಸರಕಾರವು ಘೋಷಿಸಬೇಕು. ಇದರಿಂದ ಶೋಷಿತ ಸಮುದಾಯಗಳಿಗೆ ಆಹಾರ, ಉದ್ಯೋಗ, ಶಿಕ್ಷಣ ಸಿಗಬೇಕು. (ಕುಲ-ಜಾತಿಗಳಲ್ಲಿ ಸಿಲುಕಿರುವವರೇ `ಪ್ರಗತಿಪರರು’! – ಸಂಪಾದಕರು.)

ಸಂಪಾದಕೀಯ ನಿಲುವು

ತಮ್ಮನ್ನು ತಾವು ಪ್ರಗತಿಪರರು ಎಂದು ಹೇಳಿಕೊಳ್ಳುವವರು ಕೇವಲ ಹಿಂದೂಗಳ ಶ್ರದ್ಧಾಸ್ಥಾನಗಳ ವಿಷಯದಲ್ಲಿಯೇ ಈ ರೀತಿಯ ಹೇಳಿಕೆಗಳನ್ನು ಧೈರ್ಯದಿಂದ ನೀಡುತ್ತಾರೆ. ಇದಕ್ಕೆ ಕಾರಣವೆಂದರೆ ಹಿಂದೂಗಳು ಸಹಿಷ್ಣುಗಳಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಇತರ ಧರ್ಮಗಳಿಗೆ ಸಂಬಂಧಿಸಿದಂತೆ ಯಾರಾದರೂ ಇಂತಹ ಹೇಳಿಕೆಗಳನ್ನು ನೀಡಿದ್ದರೆ, ಅವರು ನೇರವಾಗಿ `ಸರ್ ತನ್ ಸೆ ಜುದಾ’ ‘ಶಿರಚ್ಛೇದ’ದ ಫತ್ವಾ ಹೊರಡಿಸುತ್ತಿದ್ದರು.

ಭಗವಾನ ಶ್ರೀರಾಮನ ಜನ್ಮ ದೇವತೆಗಳ ಕೃಪಾ ಪ್ರಸಾದದಿಂದ ಮತ್ತು ಪಾಂಡವರ ಜನ್ಮ ವಿವಿಧ ದೇವತೆಗಳ ಕೃಪೆಯಿಂದ ಆಗಿದೆ ಎನ್ನುವುದು ಸತ್ಯವಾಗಿದ್ದರೂ ಕೂಡ ಅವರನ್ನು ರಾಜ ದಶರಥ ಮತ್ತು ಪಾಂಡುವಿನ ಮಕ್ಕಳು ಎಂದೇ ಗುರುತಿಸಲಾಗುತ್ತದೆ.