‘ಪತಂಜಲಿ ಆಯುರ್ವೇದ’ದ ಜಾಹೀರಾತುಗಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹಿಂದೂದ್ವೇಷ ?

೧. ‘ಪತಂಜಲಿ ಆಯುರ್ವೇದ’ದ ಜಾಹೀರಾತುಗಳ ವಿರುದ್ಧ ನ್ಯಾಯಾಲಯದಲ್ಲಿ ಖಟ್ಲೆ ದಾಖಲು !

ಕೋವಿಡ್‌ ಮಹಾಮಾರಿಯ ಸಂದರ್ಭದಲ್ಲಿ ಅಲೋಪಥಿ ಔಷಧಗಳು ನಿಷ್ಕ್ರಿಯವಾಗಿದ್ದವು. ಆಗ ಜನರು ಆಯುರ್ವೇದಕ್ಕನುಸಾರ ಕಷಾಯ ಕುಡಿಯುವುದು, ವನಸ್ಪತಿಗಳ ಔಷಧಿ ಸೇವಿಸುವುದು, ಹೋಮಿಯೋಪಥಿಯ ಔಷಧ ಸೇವನೆ ಇತ್ಯಾದಿ ಪಾರಂಪರಿಕ ಉಪಚಾರಗಳನ್ನು ಆರಂಭಿಸಿದ್ದರು. ಅದರಿಂದ ಭಾರತೀಯರು ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಪಡೆದರು, ಅಲ್ಲದೇ ಅಂತಾರಾಷ್ಟ್ರೀಯ ಸ್ತರದಲ್ಲಿ ಅದನ್ನು ಸ್ವೀಕರಿಸಲಾಯಿತು. ಆ ಕಾಲದಲ್ಲಿ ಅಲೋಪಥಿಯಿಂದ ಕೆಲವರ ಕೋವಿಡ್‌ ಗುಣವಾಯಿತು ಮತ್ತು ಕೆಲವರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ‘ಪತಂಜಲಿ ಉದ್ಯೋಗ’ದ ಯೋಗಋಷಿ ರಾಮದೇವಬಾಬಾ ಇವರು ಕೋವಿಡ್‌ನ್ನು ಸಂಪೂರ್ಣ ನಾಶ ಮಾಡಲು ಮಧುಮೇಹ, ರಕ್ತದೊತ್ತಡ, ಮುಂತಾದ ಅಸಾಧ್ಯ ರೋಗಗಳನ್ನು ಗುಣಪಡಿಸುವ ಹಾಗೂ ಕೊಲೆಸ್ಟ್ರೋಲ್’ ಕಡಿಮೆ ಮಾಡುವ ವಿಷಯದಲ್ಲಿಯೂ ಕೆಲವು ಜಾಹೀರಾತುಗಳನ್ನು ನೀಡಿದರು. ಇದು  ಜಾಹೀರಾತುಗಳ ಯುಗವಾಗಿದೆ. ದೂರಚಿತ್ರವಾಹಿನಿಯಲ್ಲಿ ಪ್ರತಿದಿನ ಅಶ್ಲೀಲ ಹಾಗೂ ಮನುಷ್ಯನ ಜೀವನವನ್ನು ಅಪಾಯಕ್ಕೀಡು ಮಾಡುವಂತಹ ಜಾಹೀರಾತುಗಳನ್ನು ತೋರಿಸಲಾಗುತ್ತದೆ. ಇಂತಹ ಅಶ್ಲೀಲ ಜಾಹೀರಾತುಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಖಟ್ಲೆಗಳು ಹೋದಾಗ ಅವುಗಳನ್ನು ನಿಯಂತ್ರಿಸಲು ಸಕ್ಷಮ ಕಾನೂನುಗಳಿಲ್ಲ, ಎಂದು ತನ್ನ ಅಸಾಮರ್ಥ್ಯವನ್ನು ತೋರಿಸುವ ಸರ್ವೋಚ್ಚ ನ್ಯಾಯಾಲಯದಿಂದ ರಾಮದೇವಬಾಬಾರವರ ಜಾಹೀರಾತುಗಳನ್ನು ಆಕ್ಷೇಪಿಸಲಾಗುತ್ತದೆ.

ಡಾ. ಬಾಬು ಕೆ. ಇವರು ‘ಪತಂಜಲಿ ಆಯುರ್ವೇದ’ದ ವಿರುದ್ಧ ಉತ್ತರಾಖಂಡ ಸರಕಾರಕ್ಕೆ ಅನೇಕ ಮನವಿ ಪತ್ರಗಳನ್ನು ನೀಡಿದರು. ಅನಂತರ ಈ ಪತ್ರಗಳ ವಿಚಾರ ಮಾಡಿಲ್ಲವೆಂದು ಅವರು ರಿಟ್‌ ಪಿಟಿಶನ್‌ ದಾಖಲಿಸಿದರು. ಅದರಲ್ಲಿ ಡಾ. ಬಾಬು ಇವರ ಪ್ರಾಮುಖ್ಯವಾದ ಹೇಳಿಕೆಯೇನಿತ್ತೆಂದರೆ, ಈ ಜಾಹೀರಾತುಗಳು ಮೋಸ ಮಾಡುವಂತಿದ್ದು ಅವುಗಳಿಂದ ಕಾಯಿಲೆ ಗುಣವಾಗುವುದು ದೂರದ ಮಾತು; ಇದರಿಂದ ಸಮಾಜವನ್ನು ದಾರಿ ತಪ್ಪಿಸಲಾಗುತ್ತಿದೆ. ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಆದ್ದರಿಂದ ಇಂತಹ ಅನಧಿಕೃತ ಜಾಹೀರಾತುಗಳನ್ನು ತಕ್ಷಣ ನಿಲ್ಲಿಸಬೇಕು, ಎಂದು ನ್ಯಾಯಾಲಯವು ಉತ್ತರಾಖಂಡ ಸರಕಾರಕ್ಕೆ ಆದೇಶಿಸಬೇಕು. ಆಗಸ್ಟ್ ೨೦೨೨ ರ ಅವಧಿಯಲ್ಲಿ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯವನ್ನು ತಲುಪಿ ಕೆಲವು ಆದೇಶಗಳನ್ನು ನೀಡ ಲಾಯಿತು. ಉತ್ತರಾಖಂಡ ಸರಕಾರವು ಅದನ್ನು ಪಾಲಿಸಲಿಲ್ಲ, ಎಂಬ ವಿಷಯವನ್ನು ಎತ್ತಿ ಹಿಡಿಯಲಾಯಿತು.

ಇತ್ತೀಚೆಗೆ, ‘ಯೋಗಋಷಿ ಬಾಬಾ ರಾಮದೇವ ಮತ್ತು ‘ಪತಂಜಲಿ ಆಯುರ್ವೇದ’ದ ವ್ಯವಸ್ಥಾಪಕ ಸಂಚಾಲಕರಾದ ಆಚಾರ್ಯ ಬಾಲಕೃಷ್ಣ ಇವರು ಮುಂದಿನ ಒಂದು ವಾರದೊಳಗೆ ಜನರಲ್ಲಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು’, ಎಂದು ನ್ಯಾಯಾಲಯ ಆದೇಶ ನೀಡಿದೆ.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಯೋಗಋಷಿ ರಾಮದೇವ ಬಾಬಾರನ್ನು ದ್ವೇಷಿಸುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಹಸಾಉದ್ದೀನ ಅಮಾನುಲ್ಲಾ

೨೧.೧.೨೦೨೩ ರಂದು ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಹಸಾಉದ್ದೀನ ಅಮಾನುಲ್ಲಾ ಇವರ ಪೀಠದಲ್ಲಿ ದಾಖಲಾಗಿತ್ತು. ಅವರು ಮೊದಲ ದಿನದಿಂದಲೇ ರಾಮದೇವ ಬಾಬಾ ಇವರನ್ನು ಅವಮಾನಿಸಲು ನಿರ್ಧರಿಸಿದರು. ಅನಂತರ ಹಲವಾರು ಬಾರಿ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ಬಂದಾಗ ಇತರ ಹಿರಿಯ ನ್ಯಾಯಾಧೀಶರಿಗಿಂತ ಅಮಾನುಲ್ಲಾ ಇವರೇ ಹೆಚ್ಚು ಮಾತನಾಡುವ ಅವಕಾಶವನ್ನು ತೆಗೆದುಕೊಂಡರು. ಪ್ರತಿಯೊಂದು ಸಂದರ್ಭದಲ್ಲಿಯೂ ಅವರು ‘ನಿಮಗೆ ೧ ಕೋಟಿ ರೂಪಾಯಿಗಳ ದಂಡ ವಿಧಿಸುವೆವು’, ‘ನಿಮಗೆ ಪಾಠ ಕಲಿಸುವೆವು’, ಇತ್ಯಾದಿ ಹೇಳಿಕೆಗಳನ್ನೇ ನೀಡಿದರು ಹಾಗೂ ರಾಮದೇವ ಬಾಬಾ ಇವರನ್ನು ಅವಮಾನಿಸಿದರು. ಈ ವಿಷಯದ ವಾರ್ತೆ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಿದ್ಧವಾಯಿತು. ಇದರಲ್ಲಿ ‘೧ ಕೋಟಿ ರೂಪಾಯಿಗಳ ದಂಡ ವಿಧಿಸುವೆವು’, ಈ ಬೆದರಿಕೆಯ ಆದೇಶದ ವಾರ್ತೆಯು ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಯಿತು. ಈ ನಡುವೆ ಯೋಗಋಷಿ ರಾಮದೇವ ಬಾಬಾ ಇವರು ತಮ್ಮ ಸಹಾಯಕ ಬಾಲಕೃಷ್ಣ ಇವರ ಜೊತೆಗೆ ಕ್ಷಮೆಯಾಚನೆ ಮಾಡಿದರು (ಮಾಫಿನಾಮಾವನ್ನು ಬರೆದು ಕೊಟ್ಟರು). ಆಶ್ಚರ್ಯದ ವಿಷಯವೆಂದರೆ, ‘ಈ ಕ್ಷಮೆ ಯಾಚನೆ ಯೋಗ್ಯವಾಗಿಲ್ಲ, ಅದು ಪ್ರಾಮಾಣಿಕವಾಗಿಲ್ಲ’, ಎಂಬ ಕಾರಣವನ್ನು ಹೇಳಿ ಪುನಃ ಆಲಿಕೆಯನ್ನು ಮುಂದೂಡಲಾಯಿತು. ನ್ಯಾಯಾಲಯವನ್ನು ಅವಮಾನಿಸಿದ್ದಕ್ಕಾಗಿ ೮.೪.೨೦೨೪ ರಂದು ರಾಮದೇವಬಾಬಾ ಮತ್ತು ಆಚಾರ್ಯ ಬಾಲಕೃಷ್ಣ ಇವರು ಮತ್ತೊಮ್ಮೆ ಕ್ಷಮೆಯಾಚನೆ ಮಾಡಿದರು. ಅದನ್ನು ಮಾಧ್ಯಮಗಳು ‘ಮಾಫೀನಾಮಾ’ ಎಂದು ಹೀಯಾಳಿಸಿದವು. ಅನಂತರವೂ ನ್ಯಾಯಾಲಯವು ಟೀಕಿಸುವುದನ್ನು ಮುಂದುವರಿಸಿತು. ಅದು ಉತ್ತರಾಖಂಡದ ಅಧಿಕಾರಿಗಳ ಮೇಲೆ ಕೂಡ ರೊಚ್ಚಿಗೆದ್ದಿತು. ನ್ಯಾಯಾಲಯದಲ್ಲಿ ಅಸಭ್ಯ ಹೇಳಿಕೆಗಳನ್ನು ನೀಡಲಾಯಿತು. ಇದರಲ್ಲಿ ಪತಂಜಲಿ ಹಾಗೂ ಯೋಗಋಷಿ ರಾಮದೇವಬಾಬಾ ಇವರನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಿದ್ದು ಕಂಡುಬರುತ್ತದೆ.

೩. ಆಯುರ್ವೇದ ಹಾಗೂ ಯೋಗಋಷಿ ರಾಮದೇವಬಾಬಾ ಇವರನ್ನು ಉದ್ದೇಶಪೂರ್ವಕ ಗುರಿ ಮಾಡಿರುವ ವೈದ್ಯಕೀಯ ಮಾಫಿಯಾಗಳು !

ಆಯುರ್ವೇದವು ಸಾವಿರಾರು ವರ್ಷಗಳಿಂದ ಕಾರ್ಯನಿರತವಾಗಿದೆ ಹಾಗೂ ಅದರಿಂದ ಮನುಕುಲಕ್ಕೆ ಒಳ್ಳೆಯ ಪರಿಣಾಮ ಸಿಗುತ್ತಿದೆ, ಆದರೆ ಅದನ್ನೂ ಗುರಿಪರಿಪಡಿಸಲಾಗುತ್ತಿದೆ. ಅಲೋಪಥಿಯು ಕೆಲವೇ ಶತಮಾನಗಳ ಹಿಂದೆ ಬಂದಿರುವ ಉಪಚಾರ ಪದ್ಧತಿಯಾಗಿದೆ. ಅದು ದುಬಾರಿಯಾಗಿದ್ದು ಸಾಮಾನ್ಯ ಜನರು ಅದರಿಂದ ಉಪಚಾರ ಮಾಡಿಸುವ ಹಾಗಿಲ್ಲ. ಅಲೋಪಥಿ ಯಲ್ಲಿ ಕೆಲವು ಕಾಯಿಲೆಗಳು ಮಾತ್ರ ಗುಣವಾಗುತ್ತವೆ; ಆದರೆ ಅದರಲ್ಲಿ ಅನೇಕ ಅಡ್ಡಪರಿಣಾಮಗಳು ಕಂಡುಬರುತ್ತವೆ. ಆದ್ದರಿಂದ ಕಳೆದ ಕೆಲವು ವರ್ಷಗಳಿಂದ ಜನರು ಅಲೋಪಥಿಯಿಂದ ಆಯುರ್ವೇದದತ್ತ ಹೆಜ್ಜೆ ಇಡುತ್ತಿರುವುದು ಈ ವಿವಾದಕ್ಕೆ ಮುಖ್ಯ ಕಾರಣವಾಗಿದೆ. ದೇಶದಲ್ಲಿ ಹಿಂದುತ್ವನಿಷ್ಠ ಸರಕಾರ ಬಂದ ನಂತರ ಅದು ಭಾರತದ ಸಂಸ್ಕೃತಿ ಮತ್ತು ಭಾರತೀಯ ಪುರಾತನ ಶ್ರೇಷ್ಠ ಪರಂಪರೆಯ ಸಂವರ್ಧನೆಗಾಗಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿಶೇಷ ಆಯುಷ್‌ ಸಚಿವಾಲಯವನ್ನು ನಿರ್ಮಿಸಲಾಗಿದೆ. ಅಲೋಪಥಿ ಯವರ ಉದರಶೂಲೆಗೆ ಇದೇ ಮುಖ್ಯ ಕಾರಣವಾಗಿದೆ. ಆದ್ದರಿಂದ ಅವರು ಒಂದಲ್ಲ ಒಂದು ಕಾರಣವನ್ನು ಹುಡುಕಿ ಆಯುರ್ವೇದ ವನ್ನು ವಿರೋಧಿಸಲು ಹಾಗೂ ರಾಮದೇವಬಾಬಾ ಇವರನ್ನು ಅವಮಾನಿಸಲು ಪ್ರಾರಂಭಿಸಿದರು. ಅಲೋಪಥಿ ಭಾರತದಂತಹ ಮಾರುಕಟ್ಟೆಯನ್ನು ಕೈಬಿಡಲು ಸಿದ್ಧವಿಲ್ಲ. ಆದ್ದರಿಂದ ಅವರ ಔಷಧ ನಿರ್ಮಾಣದ ಕಂಪನಿಗಳು ಇಲ್ಲಿನ ಆಧುನಿಕ ವೈದ್ಯರಿಗೆ ವಿವಿಧ ಪ್ರಕಾರದ ಆಮಿಷಗಳನ್ನು ತೋರಿಸುತ್ತವೆ. ಅದರಿಂದ ಅಮಾಯಕ ಭಾರತೀಯ ರೋಗಿಗಳನ್ನು ಮೋಸಗೊಳಿಸಲಾಗುತ್ತದೆ. ಅದಕ್ಕಾಗಿಯೇ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಉದ್ಯೋಗವನ್ನು ಕೆಡಿಸುವ ಪ್ರಯತ್ನ ನಡೆದಿದೆ. ರಾಮದೇವ ಬಾಬಾ ಹೇಳಿದರು, ”ವೈದ್ಯಕೀಯ ಮಾಫಿಯಾಗಳು ನನ್ನ ಹಿಂದೆ ಬಿದ್ದಿವೆ. ಆದರೆ ಹಣದಿಂದ ಸತ್ಯ ಮತ್ತು ಅಸತ್ಯವನ್ನು ನಿರ್ಣಯಿಸಲು ಸಾಧ್ಯವಿಲ್ಲ.’’

೪. ಸರ್ವೋಚ್ಚ ನ್ಯಾಯಾಲಯದ ಹಿಂದೂ ಧರ್ಮ ಮತ್ತು ಹಿಂದುತ್ವನಿಷ್ಠರನ್ನು ಅವಮಾನಿಸುವ ದೊಡ್ಡ ಪರಂಪರೆ !

ಅ. ಇಷ್ಟರವರೆಗೆ ಜಿಹಾದಿ ಭಯೋತ್ಪಾದಕರು ದೇಶದಾದ್ಯಂತ ಅನೇಕ ಸ್ಥಳಗಳಲ್ಲಿ ಬಾಂಬ್‌ಸ್ಫೋಟಿಸಿದರು. ಅದರಲ್ಲಿ ಸಾವಿರಾರು ನಿರಪರಾಧಿಗಳು ಅಸುನೀಗಿದರು. ಭ್ರಷ್ಟ ರಾಜಕಾರಣಿಗಳ ದೊಡ್ಡ ಪ್ರಮಾಣದ ಆರ್ಥಿಕ ಭ್ರಷ್ಟಾಚಾರದ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಬಂದವು. ಅದೇ ರೀತಿ ಮಾವೋವಾದಿ ಅಥವಾ ನಕ್ಸಲವಾದಿಗಳಿಂದ ಅನೇಕ ಆಕ್ರಮಣಗಳಾದವು. ಇಂತಹ ಎಲ್ಲ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪಿದವು, ಆಗ ಅಂತಹ ಆರೋಪಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯ ರೊಚ್ಚಿಗೇಳಲಿಲ್ಲ. ಅವುಗಳ ಅಂತಾರಾಷ್ಟ್ರೀಯ ಪರಿಣಾಮವನ್ನು ಮುಂದಿಟ್ಟುಕೊಂಡು ಅವರಿಗೆ ಭಾರತ ಸರಕಾರದ ವತಿಯಿಂದ ಪ್ರತಿಷ್ಠಿತ ವಕೀಲರನ್ನು ಪೂರೈಸುವುದು, ಅವರಿಗಾಗಿ ರಾತ್ರಿ ನ್ಯಾಯಾಲಯಗಳನ್ನು ತೆರೆಯುವಂತಹ ಕೃತಿಗಳಾದವು. ಭಯಂಕರ ಗಲಭೆಗಳು, ‘ಲವ್‌ ಜಿಹಾದ್‌’ನಲ್ಲಿ ನಿರಪರಾಧಿ ಯುವತಿಯರ ಹತ್ಯೆ, ಇತ್ಯಾದಿ ಪ್ರಕರಣಗಳೂ ಸರ್ವೋಚ್ಚ ನ್ಯಾಯಾಲಯಕ್ಕೆ ಬಂದವು, ಆ ಸಂದರ್ಭದಲ್ಲಿಯೂ ಶಾಂತ ರೀತಿಯಿಂದ ಪ್ರಕರಣಗಳನ್ನು ನಿಭಾಯಿಸಲಾಯಿತು.

ಆ. ಭಾಜಪದ ನಾಯಕಿ ನುಪೂರ್‌ ಶರ್ಮಾ ಇವರ ಕಥಿತ ಹೇಳಿಕೆಯ ವಿರುದ್ಧ ಭಾರತದಿಂದ ಮಾತ್ರವಲ್ಲ, ಜಗತ್ತಿನಾದ್ಯಂತದ ಮತಾಂಧರು ಬೆದರಿಕೆ ಹಾಕಿದರು. ಆಗ ಕೂಡ ನ್ಯಾಯಾಲಯ ಶಾಂತವಾಗಿತ್ತು. ನುಪೂರ್‌ ಶರ್ಮಾ ಇವರ ವಿರುದ್ಧ ದೇಶ ದಾದ್ಯಂತ ದಾಖಲಾದ ಕ್ರಿಮಿನಲ್‌ ಖಟ್ಲೆಗಳನ್ನು ಒಂದು ರಾಜ್ಯಕ್ಕೆ ಸ್ಥಳಾಂತರಿಸಬೇಕೆಂದು ವಿನಂತಿಸಲಾಯಿತು, ಆಗ ಸರ್ವೋಚ್ಚ ನ್ಯಾಯಾಲಯ ಸಂತಾಪ ವ್ಯಕ್ತಪಡಿಸಿತು. ಆಗ ನ್ಯಾಯಾಲಯ ಶರ್ಮಾ ಇವರಿಗೆ, ”ನೀವು ದೇಶದ ಮುಂದೆ ಕ್ಷಮೆ ಕೇಳಬೇಕು. ಭಾರತದಾದ್ಯಂತ ಉದ್ಭವಿಸಿರುವಂತಹ ಸ್ಥಿತಿಗೆ ನೀವೇ ಕಾರಣ ರಾಗಿದ್ದೀರಿ’’ ಎಂದು ಹೇಳಿತು.

ಇ. ಮತಾಂಧ ಚಿತ್ರಕಾರ ಎಮ್‌.ಎಫ್. ಹುಸೇನನು ಹಿಂದೂ ದೇವಿ ದೇವತೆಗಳ ಮತ್ತು ಭಾರತ ಮಾತೆಯ ನಗ್ನ ಚಿತ್ರಗಳನ್ನು ಚಿತ್ರಿಸಿದನು. ಆಗ ಅವನ ವಿರುದ್ಧ ಭಾರತದಲ್ಲಿ ಅನೇಕ ಖಟ್ಲೆಗಳು ದಾಖಲಾದವು. ಆಗ ಅವನ ವಿರುದ್ಧ ದೇಶದಾದ್ಯಂತ ದಾಖಲಿಸಿದ ೧ ಸಾವಿರದ ೨೦೦ ಕ್ಕಿಂತಲೂ ಹೆಚ್ಚು ಕ್ರಿಮಿನಲ್‌ ದೂರುಗಳನ್ನು ರದ್ದುಪಡಿಸಲಾಯಿತು.

ಈ. ಅಂತಾರಾಷ್ಟ್ರೀಯ ಸ್ತರದಲ್ಲಿ ಭಯೋತ್ಪಾದನೆಯನ್ನು ಹರಡುವ ಡಾ. ಝಾಕೀರ ನಾಯಿಕ್‌ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಟ್ಟು ಮಾಡಿ ಒಂದು ರಾಜ್ಯದಲ್ಲಿ ಖಟ್ಲೆ ನಡೆಸಬೇಕೆಂದು ಆದೇಶ ನೀಡಲಾಯಿತು.

ಉ. ಕಳೆದ ೧೦ ವರ್ಷಗಳಲ್ಲಿ ಹಿಂದುತ್ವನಿಷ್ಠರ ದ್ವೇಷಯುಕ್ತ ಹೇಳಿಕೆಯ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಮತಾಂಧರಿಗೆ ಅನುಕೂಲಕರ ಆದೇಶ ನೀಡಿತು. ದಕ್ಷಿಣದ ರಾಜಕಾರಣಿಗಳು ಮತ್ತು ಮತಾಂಧರು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಾಶಗೊಳಿಸುವ ಹೇಳಿಕೆಗಳನ್ನು ನೀಡಿದಾಗ ಕೂಡ ಸರ್ವೋಚ್ಚ ನ್ಯಾಯಾಲಯ ಅವರನ್ನು ಗದರಿಸಲಿಲ್ಲ. ತದ್ವಿರುದ್ಧ ‘ರಾಮಚರಿತಮಾನಸವನ್ನು ಸುಟ್ಟು ಹಾಕಿ’, ಎಂದು ಹೇಳುವ ಬಿಹಾರದ ಸ್ವಾಮಿ ಪ್ರಸಾದ ಮೌರ್ಯ ತನ್ನ ವಿರುದ್ಧದ ಕ್ರಿಮಿನಲ್‌ ಖಟ್ಲೆಯನ್ನು ರದ್ದುಪಡಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಬಂದಾಗ ಆ ಕ್ರಿಮಿನಲ್‌ ಪ್ರಕ್ರಿಯೆಗೆ ಸ್ಥಗಿತಿ ನೀಡಲಾಯಿತು.

ಊ. ಕೇಜರಿವಾಲ ಮತ್ತು ರಾಹುಲ ಗಾಂಧಿ ಇವರು ಕ್ಷಮಾಯಾಚನೆ ಮಾಡಿದಾಗ ಅವರ ‘ಮಾಫೀನಾಮಾ’ಗಳನ್ನು ಸ್ವೀಕರಿಸಲಾಗುತ್ತದೆ. ಅದೇ ರೀತಿ ಪ್ರಶಾಂತ ಭೂಷಣ ಇವರು ಕ್ಷಮಾಯಾಚನೆ ಮಾಡಿದಾಗ ಸಮಸ್ಯೆ ನಿವಾರಣೆಯಾಗದಿರುವುದರಿಂದ ಸರ್ವೋಚ್ಚ ನ್ಯಾಯಾಲಯ ಅವರಿಗೆ ಕೇವಲ ೧ ರೂಪಾಯಿ ದಂಡ ವಿಧಿಸಿ ಆ ಪ್ರಕರಣವನ್ನು ಮುಗಿಸಿತು. ಇಂತಹ ವಿವಿಧ ಪ್ರಕರಣಗಳಲ್ಲಿ ಎಲ್ಲಿಯೂ ರೋಷ ವ್ಯಕ್ತವಾಗಿಲ್ಲ. ಈ ಮೇಲೆ ಉಲ್ಲೇಖಿಸಿದ ವ್ಯಕ್ತಿಗಳನ್ನು ಅವಮಾನಗೊಳಿಸಲಾಗಿಲ್ಲ, ತದ್ವಿರುದ್ಧ ಅವರ ಇಚ್ಛೆಗಳನ್ನು ಈಡೇರಿಸಲಾಗಿದೆ.

೫. ಸರ್ವೋಚ್ಚ ನ್ಯಾಯಾಲಯದ ಅವಹೇಳನಕಾರಿ ಭಾಷೆಯ ವಿರುದ್ಧ ಮಾಜಿ ನ್ಯಾಯಾಧೀಶರಿಂದ ತೀವ್ರ ಪ್ರತಿಕ್ರಿಯೆಗಳು ಯೋಗಋಷಿ ರಾಮದೇವಬಾಬಾ, ನುಪೂರ್‌ ಶರ್ಮಾ, ಕಥಿತ ದ್ವೇಷಯುಕ್ತ ಭಾಷಣ ಮಾಡುವ ಹಿಂದುತ್ವನಿಷ್ಠ ಮುಖಂಡರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಏಕೆ ಅವಹೇಳನಕಾರಿಯಾಗಿ ವರ್ತಿಸುತ್ತದೆ ? ನ್ಯಾಯಾಧೀಶೆ ಹಿಮಾ ಕೋಹಲಿ ಮತ್ತು ನ್ಯಾಯಾಧೀಶ ಅಸನುದ್ದೀನ ಅಮಾನುಲ್ಲಾ ಇವರು ನ್ಯಾಯಾಲಯ ದಲ್ಲಿ ನೀಡಿರುವ ಹೇಳಿಕೆ ಮತ್ತು ಅವರು ಉಪಯೋಗಿಸಿದ ಭಾಷೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು. ‘ಅವರು ನ್ಯಾಯದಾನ ಮಾಡುವಾಗ ಹೇಗೆ ವರ್ತಿಸಬೇಕು ? ಎಂಬ ವಿಷಯದಲ್ಲಿ ಈ ಹಿಂದೆ ಸರ್ವೋಚ್ಚ ನ್ಯಾಯಾಲಯದಲ್ಲಿ ನೀಡಿರುವ ಕೆಲವು ಖಟ್ಲೆಗಳ ಅವಲೋಕನ ಮಾಡಬೇಕು’, ಎಂದು ಸಲಹೆಯನ್ನೂ ನೀಡಿದರು. ‘ನಾವು ನಿಮ್ಮನ್ನು ಸಾಯಿಸಿಬಿಡುತ್ತೇವೆ’, ‘ನಿಮಗೆ ಕೆಲವು ಕೋಟಿ ದಂಡ ವಿಧಿಸುತ್ತೇವೆ’, ಇಂತಹ ಭಾಷೆ ರಸ್ತೆಗಳಲ್ಲಿ ಕೇಳಲು ಸಿಗುತ್ತದೆ. ‘ಇಂತಹ ಭಾಷೆಯು ನ್ಯಾಯಾಲಯದಲ್ಲಿ ಉಪಯೋಗಿಸಲ್ಪಡುತ್ತಿದ್ದರೆ, ಅದು ಯೋಗ್ಯವೆನಿಸುತ್ತದೆಯೇ ?’, ಎಂದು ನಿವೃತ್ತ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯ ವನ್ನು ಪ್ರಶ್ನಿಸಿದರು. ಒಟ್ಟಾರೆ ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆ ಯಾದಾಗ ನ್ಯಾಯಾಧೀಶ ರಾಮಮೂರ್ತಿ ಪ್ರಭುಣೆ ಇವರಿಗೆ ಅಪೇಕ್ಷಿತ ನ್ಯಾಯವ್ಯವಸ್ಥೆ ನಿರ್ಮಾಣವಾಗುವುದು !’ (೧೪.೪.೨೦೨೪)

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ.