ಥೈರಾಯ್ಡ್ ಗ್ರಂಥಿ ನಿಷ್ಕ್ರಿಯ ಮತ್ತು ಅತಿ ಸಕ್ರಿಯವಾಗುವುದು ಇವುಗಳ ನಡುವಿನ ಜೀವನಶೈಲಿ ಹೇಗಿರಬೇಕು ?

೨೬/೧೩ ನೇ ಸಂಚಿಕೆಯಲ್ಲಿ ಮುದ್ರಿಸಲಾದ ಲೇಖನದಲ್ಲಿ ನಾವು ಥೈರಾಯ್ಡ್ ಗ್ರಂಥಿ (ಒಂದು ಅಂತಃಸ್ರಾವಕ ಗ್ರಂಥಿ) ನಿಷ್ಕ್ರಿಯ ವಾಗುವುದು ಮತ್ತು ಅದರ ಅತೀಸಕ್ರಿಯವಾಗುವುದು ಇವುಗಳ ಬಗ್ಗೆ ನೋಡಿದೆವು. ಇಂದಿನ ಲೇಖನದಲ್ಲಿ ಹೀಗೆ ಎರಡು ರೀತಿಯಾದಾಗ ಜೀವನಶೈಲಿ ಹೇಗಿರಬೇಕು ? ಎಂಬುದನ್ನು ಇಲ್ಲಿ ಕೊಡುತ್ತಿದ್ದೇವೆ.

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/131293.html

೧. ಥೈರಾಯ್ಡ್ ಗ್ರಂಥಿಯು ನಿಷ್ಕ್ರಿಯವಿದ್ದಾಗ ಜೀವನಶೈಲಿ 

‘ಥೈರಾಯ್ಡ್ ಗ್ರಂಥಿಯು ನಿಷ್ಕ್ರಿಯವಾಗಿದೆ’, ಎಂಬುದು ರಕ್ತಪರೀಕ್ಷೆಯ ನಂತರ ನಮಗೆ ಗಮನಕ್ಕೆ ಬರುತ್ತದೆ. ಥೈರಾಯ್ಡ್‌ನಿಂದ ಸ್ರವಿಸುವ ಅಂತಃಸ್ರಾವವು ‘T3’ ಮತ್ತು ‘T4’ ಇವುಗಳ (‘T3’ ಮತ್ತು ‘T4’ ಈ ಹೆಸರಿನಿಂದ ಗುರುತಿಸಲ್ಪಡುವ ಸ್ರಾವ) ಕಡಿಮೆ ಮಟ್ಟದಲ್ಲಿದೆ ಎಂದು ರಕ್ತದಲ್ಲಿ ಕಂಡುಬರುತ್ತದೆ. ಅದರ ಮಟ್ಟವನ್ನು ನಿಯಂತ್ರಣದಲ್ಲಿಡಲು ನಾವು ಮಾತ್ರೆಗಳನ್ನು ಪ್ರಾರಂಭಿಸಬೇಕಾಗುತ್ತದೆ. ವೈದ್ಯರ ಸಲಹೆಯಿಂದ ಮಾತ್ರೆಯನ್ನು ಸೇವಿಸುವುದು, ಅದನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿ ಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಬೇಕಾದಾಗ ಮಾತ್ರೆಯನ್ನು ಸೇವಿಸುವುದು ಮತ್ತು ತಿಂಗಳುಗಟ್ಟಲೆ ಅದೇ ಮಾತ್ರೆಗಳನ್ನು ಸೇವಿಸುವುದು ಸಹ ಅಯೋಗ್ಯವಾಗಿದೆ. ಅನೇಕ ರೋಗಿಗಳು ಈ ತಪ್ಪನ್ನು ಮಾಡುತ್ತಾರೆ.

೧ ಅ. ಯಾವ ರೀತಿಯ ಆಹಾರವನ್ನು ಸೇವಿಸಬೇಕು ? : ಈಗ ಆಹಾರದ ವಿಷಯದಲ್ಲಿ ನೋಡೋಣ. ಇದರಲ್ಲಿ ತೂಕ ಹೆಚ್ಚಾಗುತ್ತಿದೆ; ಏಕೆಂದರೆ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಆದ್ದರಿಂದ ಪ್ರತಿದಿನ ಮನೆಯಲ್ಲಿ ತಯಾರಿಸಿದ ಮತ್ತು ಜೀರ್ಣವಾಗುವಷ್ಟೇ ತಾಜಾ ಆಹಾರವನ್ನು ಸೇವಿಸಬೇಕು. ಚಪಾತಿಯನ್ನು ತಿನ್ನುವ ಬದಲು ರೊಟ್ಟಿಯನ್ನು ತಿನ್ನಬೇಕು. ಆಹಾರದಲ್ಲಿ ಪ್ರೊಟಿನ್ಸ್ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿರಬೇಕು ಮತ್ತು ಪಿಷ್ಟಮಯ ಹಾಗು ಸ್ನಿಗ್ಧ ಪದಾರ್ಥಗಳು ಕಡಿಮೆ ಪ್ರಮಾಣದಲ್ಲಿರಬೇಕು. ಎರಡು ಬಾರಿಯೇ ಆಹಾರವನ್ನು ಸೇವಿಸಬೇಕು. ರಾತ್ರಿಯ ಊಟವನ್ನು ೭ ಗಂಟೆಯ ಒಳಗೆ ಮುಗಿಸಲು ಪ್ರಯತ್ನಿಸಬೇಕು, ಒಟ್ಟಿನಲ್ಲಿ ರಾತ್ರಿಯ ಆಹಾರವು ಸಂಪೂರ್ಣವಾಗಿ ಜೀರ್ಣವಾಗಬೇಕು. ಪ್ರತಿದಿನ ಸುಮಾರು ೪೦ ನಿಮಿಷಗಳವರೆಗೆ ಯಾವುದಾದರೂ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮ ಮಾಡುವುದರಿಂದ ನಮ್ಮ ಜಠರಾಗ್ನಿಯು ಪ್ರಜ್ವಲಿತವಾಗಿ ಸೇವಿಸಿದ ಆಹಾರವು ಜೀರ್ಣವಾಗಲು ಸಹಾಯವಾಗುತ್ತದೆ.

೧ ಆ. ಆಹಾರದಲ್ಲಿ ಯಾವ ವಿಷಯಗಳನ್ನು ತಪ್ಪಿಸಬೇಕು ?

ಅ. ಸೋಯಾಬಿನ್, ಸೋಯಾ ಹಾಲು, ಸೋಯಾಬಿನ್‌ನ ವಡೆಗಳನ್ನು ತಿನ್ನಬಾರದು.

ಆ. ಎಲೆಕೋಸಿನ ಪ್ರಕಾರದ ತರಕಾರಿಗಳು ಅಂದರೆ ಹೂಕೋಸು, ಎಲೆಕೋಸು, ಕೋಸುಗಡ್ಡೆ, ಪಾಲಕ ತರಕಾರಿಗಳನ್ನು ತಿನ್ನಬಾರದು.

ಇ. ‘ಕೆಫೀನ್’ ಹೊಂದಿರುವ ಪಾನೀಯಗಳು ಅಂದರೆ, ಕಾಫಿ, ‘ಗ್ರೀನ ಟೀ’ (ಚಹಾದ ಒಂದು ವಿಧ) ಇವುಗಳನ್ನು ಕುಡಿಯಬಾರದು

ಈ. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಖರೀದಿಸಿದ ಬೆಣ್ಣೆ, ಪ್ರಕ್ರಿಯೆ ಮಾಡಿದ ಮಾರಾಟದ ಪದಾರ್ಥಗಳು ಅಂದರೆ, ಡಬ್ಬಿಯಲ್ಲಿನ ಪ್ಯಾಕ್‌ (ಸೀಲ್) ಮಾಡಿದ ಪದಾರ್ಥಗಳು, ಶರಬತ್ತುಗಳು, ತಂಪು ಪಾನೀಯಗಳನ್ನು ಸಂಪೂರ್ಣವಾಗಿ ಬಿಡಬೇಕು. ಇದರಲ್ಲಿ ಸಾಸ್, ಮೆಯಾನಿಸ್‌ ಮುಂತಾದವುಗಳು ಒಳಗೊಂಡಿರುತ್ತವೆ.

ವೈದ್ಯೆ (ಸೌ.) ಮುಕ್ತಾ ಲೊಟಲೀಕ

೨. ಥೈರಾಯ್ಡ್ ಅತಿಸಕ್ರಿಯವಾದಾಗಿನ ಜೀವನಶೈಲಿ

ಇದರಲ್ಲಿ ‘T3’ ಮತ್ತು ‘T4’ ಇವುಗಳ ರಕ್ತದಲ್ಲಿನ ಪ್ರಮಾಣ ಹೆಚ್ಚಾಗಿರುತ್ತದೆ ಮತ್ತು ‘ಟಿ.ಎಸ್‌.ಎಚ್‌.’ ಎಂಬ ಹೆಸರಿನ ಅಂತಃಸ್ರಾವದ ಪ್ರಮಾಣವು ಕಡಿಮೆಯಾಗಿರುತ್ತದೆ. ರಕ್ತಪರೀಕ್ಷೆಯನ್ನು ಮಾಡಿ ಅವಶ್ಯಕತೆಗನುಸಾರ ಮಾತ್ರೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

೨ ಅ. ಯಾವ ರೀತಿಯ ಆಹಾರವನ್ನು ಸೇವಿಸಬೇಕು ? : ಈ ಪ್ರಕಾರದಲ್ಲಿಯೂ ಮೇಲಿನಂತೆಯೇ ಆಹಾರ ಪದ್ಧತಿಯನ್ನು ಪಾಲಿಸಬೇಕು. ಎರಡು ಸಮಯದ ಊಟದ ನಡುವಿನ ಸಮಯದಲ್ಲಿ ಹಸಿವು ಆದರೆ ಹಣ್ಣುಗಳನ್ನು ತಿನ್ನಬೇಕು.

೨ ಆ. ಆಹಾರದಲ್ಲಿ ಯಾವ ಪದಾರ್ಥಗಳನ್ನು ಬಿಡಬೇಕು ?

ಅ. ಆಯೋಡಿನ್‌ ಹೆಚ್ಚು ಇರುವ ಪದಾರ್ಥಗಳು ಅಂದರೆ, ಮೊಟ್ಟೆಯ ಹಳದಿ ಭಾಗ, ಆಯೋಡಿನ್‌ಯುಕ್ತ ಉಪ್ಪು, ಮೀನು ಇತ್ಯಾದಿ ಪದಾರ್ಥಗಳನ್ನು ತಿನ್ನಬಾರದು.

ಆ. ‘ಗ್ಲುಟೇನ್’ ಈ ಘಟಕಗಳಿರುವ ಪದಾರ್ಥಗಳು ಅಂದರೆ, ಪಾಸ್ತಾ, ಮೈದಾ ಇರುವ ಪದಾರ್ಥಗಳನ್ನು ತಿನ್ನಬಾರದು.

ಇ. ಇದರ ಹೊರತು ಚಹಾ, ಕಾಫಿ, ಚಾಕಲೇಟ್, ತಂಪುಪಾನೀಯಗಳು, ಕೇಕ್‌ ಮತ್ತು ಮಾರಾಟದ ಜ್ಯೂಸ್‌ ಸಂಪೂರ್ಣವಾಗಿ ಬಿಡಬೇಕು.

೩. ಥೈರಾಯ್ಡ್‌ನ ತೊಂದರೆಗಾಗಿ ಯೋಗಾಸನಗಳು

ಥೈರಾಯ್ಡ್‌ನ ತೊಂದರೆ ಇರುವವರು ಭುಜಂಗಾಸನ, ಸರ್ವಾಂಗಾಸನ, ಮತ್ಸ್ಯಾಸನ, ಪಶ್ಚಿಮೋತ್ತಾಸನ, ಉಷ್ಟ್ರಾಸನ, ಸುಪ್ತ ವಜ್ರಾಸನ, ವಿರಾಸನ, ತ್ರಿಕೋನಾಸನ, ಧನುರಾಸನ ಮತ್ತು ಶವಾಸನ ಈ ಯೋಗಾಸನಗಳನ್ನು ನಿಯಮಿತವಾಗಿ ಮಾಡಬೇಕು. ಆಸನಗಳನ್ನು ಹೇಗೆ ಮಾಡಬೇಕು ? ಎಂಬುದು ಗೊತ್ತಿಲ್ಲದಿದ್ದರೆ ಗೊತ್ತಿರುವ ವ್ಯಕ್ತಿಯಿಂದ ಕಲಿತುಕೊಂಡು ಮಾಡಬಹುದು.

೪. ಮಹತ್ವದ ವಿಷಯ

೪ ಅ. ಉತ್ತಮ ಜೀವನಶೈಲಿಯನ್ನು ಜಿಗುಟುತನದಿಂದ ಪಾಲಿಸುವುದು ಆವಶ್ಯಕ : ಅನೇಕ ರೋಗಿಗಳಲ್ಲಿ ‘ಥೈರಾಯ್ಡ್‌ನ ಮಾತ್ರೆಗಳು ಪ್ರಾರಂಭವಾಗಿವೆ, ಅಂದರೆ ‘ಈಗ ನಮಗೆ ತುಂಬಾ ದೊಡ್ಡ ಕಾಯಿಲೆ ಆಗಿದೆ ಮತ್ತು ಇದರಿಂದ ನಮಗೆ ಬಿಡುಗಡೆ ಇಲ್ಲ’, ಎಂಬ ಮಾನಸಿಕತೆ ಉಂಟಾಗುತ್ತದೆ. ಈ ಬಗ್ಗೆ ರೋಗಿಗಳಿಗೆ ಒಂದು ಮಾನಸಿಕ ಒತ್ತಡವಿದ್ದು ಅನೇಕ ಜನರು ತಾವಾಗಿಯೇ ಮಾತ್ರೆಯನ್ನು ನಿಲ್ಲಿಸುತ್ತಾರೆ. ಇದು ಅತ್ಯಂತ ಗಂಭೀರ ತಪ್ಪು. ಇಲ್ಲಿ ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ಶಾಸ್ತ್ರದ ತುಲನೆ ಮಾಡದೇ ಎಲ್ಲಿ ಏನು ಆವಶ್ಯಕವಿದೆಯೋ, ಆ ಪರಿಹಾರೋಪಾಯವನ್ನು ಮಾಡಬೇಕು. ಉತ್ತಮ ಜೀವನ ಶೈಲಿಯೇ ನಮ್ಮನ್ನು ಆರೋಗ್ಯಶಾಲಿಯನ್ನಾಗಿಸುತ್ತದೆ, ಎಂಬುದನ್ನು ಗಮನದಲ್ಲಿಟ್ಟು ಜಿಗುಟುತನದಿಂದ ಪ್ರಯತ್ನಿಸುತ್ತಿರಬೇಕು.

೪ ಆ. ಅಂತಃಸ್ರಾವಕಗಳ ಅಸಮತೋಲನ ಹೆಚ್ಚಾಗಲು ಮಾನಸಿಕ ಒತ್ತಡವೂ ಒಂದು ಕಾರಣ ! : ಅಂತಃಸ್ರಾವಕಗಳ ಅಸಮತೋಲನಕ್ಕೆ ಮಾನಸಿಕ ಒತ್ತಡ ಶೇ. ೯೦ ರಷ್ಟು ಕಾರಣವಾಗಿರುತ್ತದೆ. ನಂತರ ಈ ಅಸಮತೋಲನವು ಥೈರಾಯ್ಡ್ ಅಥವಾ ಮಧುಮೇಹದ ಸಂದರ್ಭದಲ್ಲಿರಲಿ ಅಥವಾ ‘ಪಿಸಿಓಡಿ’ಯಂತಹ (ಮಾಸಿಕ ಸರದಿ) ಅನಾರೋಗ್ಯವಿರಲಿ. ಮಾನಸಿಕ ಒತ್ತಡ ಹೆಚ್ಚಾದರೆ, ನಮ್ಮ ಶರೀರದಲ್ಲಿನ ಗ್ರಂಥಿಗಳ ಮೇಲೆ ವಿಪರೀತ ಪರಿಣಾಮ ಬೀರುವ ಕೆಲವು ಅಂತಃಸ್ರಾವಕಗಳು ಸಿದ್ಧವಾಗುತ್ತವೆ. ಇದು ಒಂದೇ ದಿನದಲ್ಲಿ ತಯಾರಾಗುವುದಿಲ್ಲ. ಸತತ ಮಾನಸಿಕ ಒತ್ತಡವಿದ್ದರೆ ಇಂತಹ ರೋಗಗಳು ಮುಂದೆ ಉದ್ಭವಿಸುತ್ತವೆ. ಆಗ ಮಾನಸಿಕ ಒತ್ತಡವನ್ನು ನಿವಾರಿಸುವುದು ಮಹತ್ವದ್ದಾಗಿದೆ. ಮಾನಸಿಕ ಒತ್ತಡದಿಂದ ನಮ್ಮ ದೇಹದ ಮೇಲೆ ಹೇಗೆ ಪರಿಣಾಮವಾಗುತ್ತದೆ ? ಎಂಬ ಬಗ್ಗೆ ಮುಂದೆ ಲೇಖನ ಮುದ್ರಿಸಲಿದ್ದೇವೆ. ಮನಸ್ಸಿನ ಒತ್ತಡ ನಿವಾರಣೆಗೆ ಸದ್ಯ ಹೆಚ್ಚಿನ ಜನರು ವ್ಯಸನಕ್ಕೆ ಮೊರೆ ಹೋಗುತ್ತಾರೆ. ಅದು ದೇಹದಲ್ಲಿ ಅತ್ಯಂತ ಅಪಾಯಕರ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ನಿವಾರಣೆಗೆ ಸಾಧನೆ, ಧ್ಯಾನಧಾರಣೆ, ಪ್ರಾಣಾಯಾಮ, ಮನಮುಕ್ತತೆ ಮತ್ತು ಸಮಯೋಚಿತ ತಜ್ಞರ ಸಲಹೆಯನ್ನು ಪಡೆಯುವುದು, ಹವ್ಯಾಸ ಬೆಳೆಸಿಕೊಳ್ಳುವಂತಹ ವಿವಿಧ ಉಪಾಯಗಳನ್ನು ಮಾಡಬೇಕು.

– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ. (೧೩.೨.೨೦೨೪)