Israel Hamas War : ಹಮಾಸ್ ವಿರುದ್ಧದ ಯುದ್ಧವನ್ನು ನಿಲ್ಲಿಸಿದರೆ, ಇಸ್ರೇಲ್ ಸರ್ಕಾರವನ್ನು ಉರುಳಿಸುವೆವು !

ನೆತನ್ಯಾಹು ಸರ್ಕಾರದಲ್ಲಿ ಸಚಿವರಿಂದಲೇ ಎಚ್ಚರಿಕೆ

ರಾಷ್ಟ್ರೀಯ ಭದ್ರತಾ ಸಚಿವ ಬೆನ್ ಜಿವಿರ್ ಇತ್ ಮಾರ್

ಟೆಲ್ ಅವಿವ (ಇಸ್ರೇಲ್) – ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ನಿಲ್ಲಿಸಲು ಪ್ರಯತ್ನಗಳು ನಡೆಯುತ್ತಿರುವಾಗ, ‘ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸುವ ಸಮಯ ಬಂದಿದೆ’ ಎಂದು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ನ ಪ್ರಧಾನಿ ನೆತನ್ಯಾಹು ಕೂಡ ಯುದ್ಧವನ್ನು ಕೊನೆಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ; ಆದರೆ ಅವರ ಸರ್ಕಾರದಲ್ಲಿರುವ ಸಚಿವರು ಯುದ್ಧ ನಿಲ್ಲಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ನೆತನ್ಯಾಹು ಸರ್ಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಚಿವ ಬೆನ್ ಜಿವಿರ್ ಇತ್ ಮಾರ್ ಅವರು ಹಮಾಸ್ ನಾಶವಾಗುವ ಮೊದಲು ಯುದ್ಧವನ್ನು ನಿಲ್ಲಿಸಿದರೆ, ನಾವು ಸರ್ಕಾರವನ್ನು ಬೀಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.