‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ವಿರುದ್ಧ ‘ಹಿಂದೂ ಜನಜಾಗೃತಿ ಸಮಿತಿ’ಯ ಹೋರಾಟ ಮತ್ತು ಯಶಸ್ಸು !

ರಾಷ್ಟ್ರೀಯ ಸ್ತರದಲ್ಲಿ ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ಸಂಕಟವನ್ನು ಗಮನದಲ್ಲಿಟ್ಟು ಕೊಂಡು ‘ಹಿಂದೂ ಜನಜಾಗೃತಿ ಸಮಿತಿ’ಯು ಅದರ ಬಗ್ಗೆ ಜಾಗೃತಿ ಮಾಡುವುದರೊಂದಿಗೆ ವ್ಯಾಪಕ ಆಂದೋಲನಗಳನ್ನು ನಡೆಸಲು ನಿರ್ಧರಿಸಿತು. ‘ಈ ಆಂದೋಲನಗಳ ಸ್ವರೂಪ ಹೇಗಿರುತ್ತದೆ ?’ ಮತ್ತು ‘ಈ ಆಂದೋಲನಗಳಲ್ಲಿ ತಾವು ಹೇಗೆ ಪಾಲ್ಗೊಳ್ಳಬಹುದು ?’ ಎಂಬುದರ ಮಾಹಿತಿಯನ್ನು ಮುಂದೆ ನೀಡಲಾಗಿದೆ.

೧. ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ವಿರುದ್ಧ ಜನಜಾಗೃತಿ : ‘ಹಲಾಲ್‌ ಆರ್ಥಿಕ ವ್ಯವಸ್ಥೆ’ಯ ಸಮಸ್ಯೆಯು ಹೊಸದಾಗಿರುವುದರಿಂದ ಅದರ ಬಗ್ಗೆ ಸಾಮಾನ್ಯ ಜನರಿಗೆ ಎಲ್ಲ ಮಾಹಿತಿಯನ್ನು ಕೊಟ್ಟು ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ‘ಹಿಂದೂ ಜನಜಾಗೃತಿ ಸಮಿತಿ’ ಯು ವಿವಿಧ ಕ್ಷೇತ್ರಗಳಲ್ಲಿನ ವ್ಯಕ್ತಿ ಮತ್ತು ಸಂಘಟನೆಗಳಿಗೆ ವ್ಯಾಖ್ಯಾನಗಳನ್ನು, ‘ಪವರ್‌ ಪಾಯಿಂಟ್‌ ಪ್ರ್ರೆಸೆಂಟೇಶನ್‌’, ಹಾಗೆಯೇ ಜಾಗೃತಿ ಸಭೆಗಳನ್ನು ಆಯೋಜಿಸಿತು. ಅದೇ ರೀತಿ ‘ವ್ಯಾಪಾರಿ-ಉದ್ಯಮಿಗಳ ಸಂಘಟನೆ’, ‘ವೈಶ್ಯ ಸಮಾಜ’

ಮುಂತಾದವರ ಕಾರ್ಯಕ್ರಮಗಳಲ್ಲೂ ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ಸಮಸ್ಯೆಯ ಗಾಂಭೀರ್ಯವನ್ನು ಗಮನಕ್ಕೆ ತಂದುಕೊಡ ಲಾಯಿತು. ಈ ಮಾಧ್ಯಮಗಳಿಂದ ಜನತೆ ಮತ್ತು ವ್ಯಾಪಾರಿ ಗಳಲ್ಲಾದ ಜಾಗೃತಿಯಿಂದ ಅವರು ಮುಂದಿನ ಕೃತಿಗಳನ್ನು ಸ್ವಯಂಸ್ಫೂರ್ತಿಯಿಂದ ಮಾಡಿದರು.

೨. ಜನರು ಮಾಡಿದ ಕೃತಿಗಳು : ಅನೇಕರು ಮಾರುಕಟ್ಟೆ ಮತ್ತು ‘ಮಾಲ್‌’ಗಳಲ್ಲಿ ಸಾಮಾನುಗಳನ್ನು ಖರೀದಿಸುವಾಗ ಉತ್ಪನ್ನಗಳ ಮೇಲೆ ‘ಹಲಾಲ್’ ಚಿಹ್ನೆ ನೋಡಲು ಪ್ರಾರಂಭಿಸಿದರು. ಯಾವುದಾದರೊಂದು ಉತ್ಪನ್ನದ ಮೇಲೆ ‘ಹಲಾಲ್’ ಚಿಹ್ನೆ ಕಂಡುಬಂದಲ್ಲಿ ಅದಕ್ಕೆ ಪರ್ಯಾಯವಾದ ಇನ್ನೊಂದು ಉತ್ಪನ್ನ ಖರೀದಿಸಲು ಪ್ರಾಧಾನ್ಯ ನೀಡಿದರು. ಹಾಗೆಯೇ ಕೆಲವರು ಸಂಬಂಧಿಸಿದ ಅಂಗಡಿಯವರಿಗೆ ಅಥವಾ ‘ಮಾಲ್‌’ನ ವ್ಯವಸ್ಥಾಪಕರನ್ನು ಭೇಟಿಯಾಗಿ ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿಯನ್ನು ಹೇಳಿದರು.

೩. ವ್ಯಾಪಾರಿಗಳು ಮಾಡಿದ ಕೃತಿಗಳು : ಸಗಟು ಮಾರಾಟಗಾರರು ಯಾವುದಾದರೊಂದು ‘ಹಲಾಲ್’ ದೃಢೀಕೃತ ಉತ್ಪನ್ನವನ್ನು ನೀಡುತ್ತಿದ್ದಲ್ಲಿ ಅವರ ಬಳಿ ಬೇರೆ ಕಂಪನಿಯ ಉತ್ಪನ್ನದ ಬೇಡಿಕೆಯನ್ನು ಮಾಡುವುದು, ಹಾಗೆಯೇ ಸಂಬಂಧಿಸಿದ ಕಂಪನಿಯ ವ್ಯವಸ್ಥಾಪಕರು ಮತ್ತು ಇತರ ವ್ಯಾಪಾರಿಗಳಿಗೆ ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ಬಗ್ಗೆ ಮಾಹಿತಿ ಹೇಳುವುದು, ಇಂತಹ ಕೃತಿಗಳನ್ನು ವ್ಯಾಪಾರಿಗಳು ಸ್ವಯಂಸ್ಫೂರ್ತಿಯಿಂದ ಮಾಡಿದರು.

೪. ಜಾಗೃತ ಹಿಂದೂಗಳು ‘ಝಟಕಾ’ ಮಾಂಸದ ಅಂಗಡಿಗಳನ್ನು ಆರಂಭಿಸುವುದು : ‘ಹಲಾಲ್’ ಮತ್ತು ‘ಝಟಕಾ’ ಮಾಂಸದ ವ್ಯತ್ಯಾಸ ತಿಳಿಯದಿದ್ದುದರಿಂದ ಮಾಂಸಾಹಾರ ಸೇವನೆÀ ಮಾಡುವ ಬಹುತೇಕ ಹಿಂದೂಗಳು ಇಸ್ಲಾಮಿ ಪದ್ಧತಿಯ ‘ಹಲಾಲ್’ ಮಾಂಸವನ್ನೇ ಖರೀದಿಸುತ್ತಿದ್ದರು. ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ಬಗ್ಗೆ ಮಾಹಿತಿ ತಿಳಿದ ನಂತರ ಅನೇಕ ಕಡೆಗಳಲ್ಲಿನ ಹಿಂದೂಗಳು ‘ಹಲಾಲ್’ ಮಾಂಸ ಸೇವಿಸುವುದನ್ನು ನಿಲ್ಲಿಸಿದರು. ಇವರಲ್ಲಿ ಕೆಲವರು ಮಾಂಸಾಹಾರಿ ಹಿಂದೂಗಳಿಗಾಗಿ ‘ಝಟಕಾ’ ಮಾಂಸ ಮಾರಾಟದ ಅಂಗಡಿಗಳನ್ನು ಆರಂಭಿಸಿದರು.

೫. ‘ಟ್ವಿಟರ್‌ ಟ್ರೆಂಡ್‌’ನ ಮೂಲಕ ರಾಷ್ಟ್ರೀಯ ಸ್ತರದಲ್ಲಿ ಜಾಗೃತಿ ಮಾಡುವುದು : ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ವಿರುದ್ಧ ಜಾಗೃತಿ ಮಾಡಲು ‘ಟ್ವಿಟರ್’ ಎಂಬ ಸಾಮಾಜಿಕ ಜಾಲತಾಣದಲ್ಲಿ ಅನೇಕ ‘ಟ್ರೆಂಡ್‌’ಗಳನ್ನು ನಡೆಸಲಾಯಿತು. ಅವುಗಳಲ್ಲಿ ೨೦೨೦ ರಲ್ಲಿ ‘#BoycottHalalProducts’ (‘ಹಲಾಲ್‌ ಉತ್ಪನ್ನಗಳನ್ನು ಬಹಿಷ್ಕರಿಸಿ !’) ಎಂಬ ಹ್ಯಾಶ್‌ಟ್ಯಾಗ್‌ ‘ಟ್ವಿಟರ್‌ ಟ್ರೆಂಡ್‌’ನಲ್ಲಿ ರಾಷ್ಟ್ರೀಯ ಸ್ತರದಲ್ಲಿ ಮೊದಲ ಕ್ರಮಾಂಕದಲ್ಲಿತ್ತು, ಹಾಗೆಯೇ ಅದು ಸತತವಾಗಿ ೨ ದಿನ ರಾಷ್ಟ್ರೀಯ ಸ್ತರದಲ್ಲಿ ಚರ್ಚೆಯಲ್ಲಿತ್ತು. ಇದರಿಂದ ಅನೇಕ ರಾಷ್ಟ್ರೀಯ ದೂರದರ್ಶನವಾಹಿನಿಗಳು ಅದನ್ನು ಪರಿಗಣಿಸಿ ಅದರ ಬಗ್ಗೆ ವಾರ್ತೆಗಳನ್ನು ಪ್ರಸಾರ ಮಾಡಿದವು ಮತ್ತು ಚರ್ಚೆಗಳನ್ನು ಆಯೋಜಿಸಿದವು.

ಅನಂತರ ೨೦೨೧ ರಲ್ಲಿ ದೀಪಾವಳಿಯ ಮೊದಲು #Halal_Free_Diwali (‘ಹಲಾಲ್‌’ಮುಕ್ತ ದೀಪಾವಳಿ) ಎಂಬ ಹ್ಯಾಶ್‌ಟ್ಯಾಗ್‌ನ ಮೂಲಕ ‘ಟ್ವಿಟರ್‌ ಟ್ರೆಂಡ್’ ಮಾಡಲಾಯಿತು. ಅದು ರಾಷ್ಟ್ರೀಯ ಸ್ತರದಲ್ಲಿ ಮೂರನೇ ಕ್ರಮಾಂಕದಲ್ಲಿತ್ತು. ಈ ಮೂಲಕ ‘ಹಲಾಲ್‌ ಪ್ರಮಾಣಪತ್ರ’ಗಳಿರುವ ಉತ್ಪನ್ನಗಳ ಖರೀದಿಯನ್ನು ತಡೆಗಟ್ಟಿ ‘ಹಲಾಲ್‌’ಮುಕ್ತ ದೀಪಾವಳಿ ಆಚರಿಸಲು ಕರೆ ನೀಡಲಾಗಿತ್ತು.

೬. ಜನಪ್ರತಿನಿಧಿ ಮತ್ತು ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ ‘ಹಲಾಲ್‌ ಆರ್ಥಿಕವ್ಯವಸ್ಥೆ’ಯ ಬಗ್ಗೆ ಸಂಘಟಿತರಾಗಿ ಮನವಿ ಯನ್ನು ಕೊಡುವುದು : ‘ಹಿಂದೂ ವಿಧಿಜ್ಞ ಪರಿಷತ್ತು’ ಭಾರತದ ಪ್ರಧಾನಮಂತ್ರಿ ಮತ್ತು ಗೃಹಮಂತ್ರಿಗಳಿಗೆ ಈ ವಿಷಯದ ಮನವಿ ಸಲ್ಲಿಸಿತು. ಈ ಮನವಿಯ ಬಗ್ಗೆ ಮಾಹಿತಿ ಕೇಳಿದಾಗ ‘ಮುಂದಿನ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಕೇಂದ್ರೀಯ ಗೃಹ ಇಲಾಖೆಯು ‘ಹಿಂದೂ ವಿಧಿಜ್ಞ ಪರಿಷತ್ತಿ’ಗೆ ಉತ್ತರ ಕಳುಹಿಸಿತು.

೭ ಅಲ್ಲಲ್ಲಿ ‘ಹಲಾಲ್’ ವಿರೋಧಿ ಕೃತಿ ಸಮಿತಿ’ಯ ಸ್ಥಾಪನೆ ! : ‘ಹಲಾಲ್‌ ಆರ್ಥಿಕವ್ಯವಸ್ಥೆ’ಯನ್ನು ಸಂಘಟಿತವಾಗಿ ವಿರೋಧಿಸುವ ಆವಶ್ಯಕತೆ ಗಮನದಲ್ಲಿಟ್ಟುಕೊಂಡು ‘ಹಿಂದೂ ಜನಜಾಗೃತಿ ಸಮಿತಿ’ಯ ಮಾರ್ಗದರ್ಶನದಡಿಯಲ್ಲಿ ಪ್ರತಿಯೊಂದು ಜಿಲ್ಲಾ ಸ್ತರದಲ್ಲಿ ‘ಹಲಾಲ್’ ವಿರೋಧಿ ಕೃತಿ  ಸಮಿತಿ’ಯ ಸ್ಥಾಪನೆಯಾಗತೊಡಗಿದೆ. ಈ ಸಮಿತಿಯಲ್ಲಿ ಉದ್ಯಮಿಗಳು, ವ್ಯಾಪಾರಿಗಳು, ನ್ಯಾಯವಾದಿಗಳು, ಮಾಹಿತಿ ಹಕ್ಕು ಕಾರ್ಯಕರ್ತರು, ಪತ್ರಕರ್ತರು, ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು, ಹಿಂದೂ ಧರ್ಮಪ್ರೇಮಿಗಳು ಇವರೆಲ್ಲರನ್ನು ಸೇರಿಸಿ ‘ಹಲಾಲ್‌ ಆರ್ಥಿಕ ವ್ಯವಸ್ಥೆ’ಯ ವಿರುದ್ಧ ಆಂದೋಲನ ಮಾಡುವ ಆಯೋಜನೆಯಿದೆ. (ಆಧಾರ : ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಗ್ರಂಥ ‘ಹಲಾಲ್‌ ಜಿಹಾದ್‌’)