ಶ್ರೇಷ್ಠತಮ ಜನಸಂಗ್ರಹ ಮಾಡಿದ ‘ಜನಸಂಘಟಕ’ರಾದ ಮಹಾರಾಣಾ ಪ್ರತಾಪ !

ಜ್ಯೇಷ್ಠ ಶುಕ್ಲ ತೃತೀಯಾ (೯ ಜೂನ್‌ ೨೦೨೪) ರಂದು ಮಹಾರಾಣಾ ಪ್ರತಾಪ ಇವರ ಜಯಂತಿ ಇದೆ, ಆ ನಿಮಿತ್ತದಿಂದ ಸವಿನಯ ವಂದನೆಗಳು !

ಮೇವಾಡದ ಉದಯಸಿಂಹ ಇವರ ನಂತರ ಅವರ ಹಿರಿಯ ಮತ್ತು ಪರಾಕ್ರಮಿ ಪುತ್ರನಾದ ‘ಪ್ರತಾಪ’ ಇವರ ರಾಜ್ಯಾಭಿಷೇಕವು ೧೫೭೨ ರಲ್ಲಿ ಆಯಿತು, ಆಗ ಅವರು ೩೨ ವರ್ಷದವರಿದ್ದರು (ಜನ್ಮ ೯.೫.೧೫೪೦). ಅಂದರೆ ಇದಕ್ಕಿಂತ ಮೊದಲು ಅನೇಕ ವರ್ಷಗಳಿಂದ ಪ್ರತಾಪ ಇವರ ಪರಾಕ್ರಮದ ಅನೇಕ ಕಥೆಗಳು ಮನೆಮಾತಾಗಿದ್ದವು. ರಜಪೂತ ರಾಜಮನೆತನದ ಅಂದಿನ ಸಂಪ್ರದಾಯದಂತೆ ಪ್ರತಾಪ ಇವರು ಧನುಷ್ಯಬಾಣ, ಈಟಿ, ಖಡ್ಗ ಮತ್ತು ಬಂದೂಕು ಇವುಗಳನ್ನು ನಡೆಸುವ ಉತ್ತಮ ಶಿಕ್ಷಣವನ್ನು ಪಡೆದಿದ್ದರು. ದೊಡ್ಡವರಾದ ಮೇಲೆ ರಾಣಾ ಪ್ರತಾಪ ಇವರ ಅಸಾಧಾರಣ ಹೋರಾಟಗಾರನಾಗಿ ದೊಡ್ಡ ಖ್ಯಾತಿಯನ್ನು ಗಳಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ರಜಪೂತದಲ್ಲಿನ ಅಕ್ಬರನ ರಾಜಕೀಯವು ೧೫೬೧ ರಿಂದ ಪ್ರಾರಂಭವಾಯಿತು. ಪ್ರತಾಪ ಇವರು ರಾಜಕುಲದಿಂದ ಹೊರಗೆ ಬಂದು ತಮ್ಮ ರಾಜ್ಯದಲ್ಲಿ ಸತತವಾಗಿ ಸುತ್ತಾಡತೊಡಗಿದರು. ಅವರು ಪ್ರದೇಶದಲ್ಲಿನ ಕೋಟೆಗಳು, ಬೆಟ್ಟಗಳು, ಕಣಿವೆಗಳು ಮತ್ತು ನದಿಹಳ್ಳ ಇತ್ಯಾದಿಗಳ ಸವಿಸ್ತಾರ ಮಾಹಿತಿಯನ್ನು ಪಡೆದರು. ಜನತೆಯ ಸಮುದಾಯದ ಉದ್ದೇಶದಿಂದ ಜನಶಕ್ತಿಯನ್ನು ಜಾಗೃತಗೊಳಿಸುವ ಮೂಲಕ ಸೈನ್ಯದಲ್ಲಿ ಸೇರಿಸಲಾಯಿತು. ಅದಕ್ಕಾಗಿ ಅವರು ಸಾಮಾನ್ಯವಾಗಿ ಈ ಮೊದಲು ಯಾರೂ ಅವರಲ್ಲಿ ಹೋಗದಿರುವ ಬೇಡರ ಪ್ರದೇಶದಲ್ಲಿನ ತಂಡದವರೊಂದಿಗೆ ಒಳ್ಳೆಯ ಸಂಬಂಧ ವನ್ನು ಬೆಳೆಸಿದರು. ಆದ್ದರಿಂದ ಬಿಲ್ಲರಲ್ಲಿ ಅವರಿಗೆ ‘ಕಿಳಾ’, ಅಂದರೆ ಮಗನೆಂದು ಪ್ರೀತಿಯಿಂದ ನೋಡತೊಡಗಿದರು. ಮುಂದೆ ಅಧಿಕಾರಕ್ಕೆ ಬಂದ ನಂತರ ರಾಣಾ ಪ್ರತಾಪ ಇವರು ತಮ್ಮ ರಾಜಚಿಹ್ನೆಯ ನಡುವೆ ಕುಲದೇವತೆಯಾದ ಏಕಲಿಂಗಜಿ, ಅದರ ಒಂದು ಬದಿಯಲ್ಲಿ ಸ್ವತಃ ಮತ್ತು ಇನ್ನೊಂದು ಬದಿಯಲ್ಲಿ ಭಿಲ್ಲದ ಆಕೃತಿಯನ್ನು ಹಾಕಿಸಿಕೊಂಡರು. ಇದರಿಂದ ಅವರು ಎಷ್ಟು ಉತ್ತಮ ಗುಣಮಟ್ಟದ ಜನಸಂಗ್ರಹವನ್ನು ಸಾಧಿಸುವ ‘ಜನಸಂಘಟಕ’ ರಾಗಿದ್ದರು, ಎಂಬುದು ಕಂಡುಬರುತ್ತದೆ. ಆದ್ದರಿಂದಲೇ ಅವರಿಗೆ ಸುದೀರ್ಘ ಹೋರಾಟದಲ್ಲಿ ಪ್ರಜೆಗಳ ಪೂರ್ಣ ಬೆಂಬಲ ಸಿಕ್ಕಿತು.

ತನ್ನ ಈ ದೃಢ ಶ್ರದ್ಧೆ ಮತ್ತು ವಿಶ್ವಾಸವಿರುವ ವೀರ ರಾಜನಿಗೆ ಪ್ರಜೆಗಳು ಕೊನೆಯವರೆಗೂ ಎಲ್ಲರೀತಿಯಲ್ಲಿ ಬೆಂಬಲವನ್ನು ನೀಡಿದರು. ಅದರೊಂದಿಗೆ ಅನೇಕ ಕಷ್ಟಗಳನ್ನು ಸ್ವಯಂಪ್ರೇರಣೆಯಿಂದ ಅನುಭವಿಸಿದರು. ಇದು ರಾಣಾ ಪ್ರತಾಪ ಇವರ ಅಸಾಧಾರಣ ಸಾಮರ್ಥ್ಯವೆಂದು ಪರಿಗಣಿಸಬೇಕು.

– ಶ್ರೀ. ಯಶವಂತ ಜೋಗಳೇಕರ, ಠಾಣೆ (ಪ.)

(ಆಧಾರ : ಸಾಪ್ತಾಹಿಕ ‘ಸ್ವಾತಂತ್ರ್ಯವೀರ’, ಜನವರಿ ೨೦೦೬)