ನಿಜವಾಗಿಯೂ ಮಾಲಿನ್ಯನಿವಾರಣೆ ಮಾಡಬಯಸಿದರೆ ಮೊಟ್ಟಮೊದಲು ಮನಸ್ಸಿನ ಮಾಲಿನ್ಯವನ್ನು ದೂರಗೊಳಿಸಿರಿ !
‘ಮಾಲಿನ್ಯದ ವಿಷಯದಲ್ಲಿ ಎಲ್ಲ್ಲೆಡೆಯೂ ಅಬ್ಬರದಿಂದ ಯಾವ ಪರಿಹಾರವನ್ನು ಕೈಗೊಳ್ಳಲಾಗುತ್ತಿದೆಯೋ ಅದು ರೋಗದ ಮೂಲಕ್ಕೆ ಹೋಗಿ ಪರಿಹಾರ ಕೈಗೊಳ್ಳುವ ಬದಲು ಮೇಲೆ ಮೇಲೆ ಪರಿಹಾರ ಮಾಡಿದಂತಿದೆ. ಮಾಲಿನ್ಯಕ್ಕೆ ಕಾರಣವಾಗಿರುವ ರಜೋಗುಣ-ತಮೋಗುಣ ಪ್ರಧಾನವಾಗಿರುವ ಮನಸ್ಸು ಮತ್ತು ಬುದ್ಧಿಗಳನ್ನು ಸಾಧನೆಯ ಮೂಲಕ ಸಾತ್ತ್ವಿಕವನ್ನಾಗಿಸದೇ ಅಂದರೆ ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರ ಮಾಡದೇ ಮೇಲೆಮೇಲೆ ಕೈಗೊಳ್ಳಲಾಗುವ ಪರಿಹಾರಗಳು ಹಾಸ್ಯಾಸ್ಪದವಾಗಿವೆ. ಇದು, ಕ್ಷಯರೋಗ ಆಗಿರುವ ರೋಗಿಗೆ ಕ್ಷಯರೋಗದ ಔಷಧಿ ನೀಡದೇ ಕೇವಲ ಕೆಮ್ಮಿಗೆ ಔಷಧಿ ನೀಡಿದಂತಿದೆ !’
ಎಲ್ಲಿ ಸುಮಾರು ೩೫೦೦ ವರ್ಷಗಳ ಹಿಂದೆಯಷ್ಟೇ ಹುಟ್ಟಿದ ವಿವಿಧ ಧರ್ಮಗಳು(ಪಂಥಗಳು) ಮತ್ತು ಎಲ್ಲಿ ಅನಾದಿ ಸನಾತನ ಧರ್ಮ !
‘೧೪೦೦ ವರ್ಷಗಳ ಹಿಂದೆ ಈ ಜಗತ್ತಿನಲ್ಲಿ ಒಬ್ಬ ಮುಸಲ್ಮಾನನು ಕೂಡ ಇರಲಿಲ್ಲ, ೨೧೦೦ ವರ್ಷಗಳ ಹಿಂದೆ ಒಬ್ಬ ಕ್ರೈಸ್ತನು ಕೂಡ ಇರಲಿಲ್ಲ, ೨೮೦೦ ವರ್ಷಗಳ ಹಿಂದೆ ಒಬ್ಬ ಬೌದ್ಧನು ಅಥವಾ ಜೈನನು ಕೂಡ ಇರಲಿಲ್ಲ ಮತ್ತು ೩೫೦೦ ವರ್ಷಗಳ ಹಿಂದೆ ಈ ಜಗತ್ತಿನಲ್ಲಿ ಒಬ್ಬ ಪಾರ್ಸಿಯು ಕೂಡ ಇರಲಿಲ್ಲ; ಹಾಗಾದರೆ ಅದಕ್ಕೂ ಮೊದಲು ಈ ಜಗತ್ತಿನಲ್ಲಿ ಯಾರಿದ್ದರು ? ಕೇವಲ ಹಿಂದೂಗಳಿದ್ದರು. ಸನಾತನ ಹಿಂದೂ ಧರ್ಮವು ಅನಾದಿ ಮತ್ತು ಅನಂತವಾಗಿದ್ದು ಹಿಂದೂ ಧರ್ಮವು ಎಲ್ಲರ ಮೂಲ ಧರ್ಮವಾಗಿದೆ.’
ಧರ್ಮವಿರೋಧಿಗಳ ವಿಚಾರಗಳನ್ನು ಖಂಡಿಸುವುದು ಅವಶ್ಯಕ !
‘ಧರ್ಮವಿರೋಧಿಗಳ ವಿಚಾರಗಳನ್ನು ಖಂಡಿಸುವುದು ಸಮಷ್ಟಿ ಸಾಧನೆಯೇ ಆಗಿದೆ. ಹೀಗೆ ಮಾಡುವುದರಿಂದ ‘ಧರ್ಮವಿರೋಧಿಗಳ ವಿಚಾರಗಳು ಅಯೋಗ್ಯವಾಗಿವೆ’ ಎಂಬುದು ಕೆಲವರಿಗೆ ತಿಳಿಯುತ್ತದೆ ಮತ್ತೆ ಅವರು ಯೋಗ್ಯ ಮಾರ್ಗದಲ್ಲಿ ಮುನ್ನಡೆಯುತ್ತಾರೆ.’
– ಸಚ್ವಿದಾನಂದ ಪರಬ್ರಹ್ಮ ಡಾ. ಆಠವಲೆ