ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದರ ಆವಶ್ಯಕತೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ರಾಮರಾಜ್ಯದ ಪ್ರಜೆಗಳು ಧರ್ಮಾಚರಣೆ ಮಾಡುತ್ತಿದ್ದರು; ಹಾಗಾಗಿ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜನು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವನ್ನು ಅನುಭವಿಸಲು ಸಾಧ್ಯವಾಯಿತು. ಹಿಂದಿನಂತಹ ರಾಮರಾಜ್ಯ, ಅಂದರೆ ‘ಹಿಂದೂ ರಾಷ್ಟ್ರ’ ಈಗಲೂ ಅವತರಿಸಬಲ್ಲದು; ಇದಕ್ಕಾಗಿ ಹಿಂದೂ ಸಮಾಜವು ಧರ್ಮಾಚರಣಿ ಮತ್ತು ಈಶ್ವರನ ಭಕ್ತರಾಗಬೇಕು. ಹಿಂದಿನ ಕಾಲದಲ್ಲಿ ಹೆಚ್ಚಿನ ಜನರು ಸಾಧನೆಯನ್ನು ಮಾಡುವವರಾಗಿದ್ದರಿಂದ ಅವರು ಸಾತ್ತ್ವಿಕರಾಗಿದ್ದರು. ಕಲಿಯುಗದಲ್ಲಿ ಹೆಚ್ಚಿನ ಜನರು ಸಾಧನೆಯನ್ನು ಮಾಡದ್ದರಿಂದ ರಜ-ತಮದ ಪ್ರಮಾಣವು ಬಹಳ ಹೆಚ್ಚಾಗಿದೆ. ಇದರ ಪರಿಣಾಮವೆಂದು ರಾಷ್ಟ್ರ ಮತ್ತು  ಧರ್ಮದ ಸ್ಥಿತಿಯು ಅತ್ಯಂತ ಹೀನಾಯವಾಗಿದೆ. ಇದನ್ನು ಬದಲಾಯಿಸಲು ಪ್ರತಿಯೊಬ್ಬರೂ ಧರ್ಮಾಚರಣೆಯನ್ನು ಮಾಡುವುದು ಆವಶ್ಯಕವಾಗಿದೆ. ಹಿಂದೂ ಸಮಾಜಕ್ಕೆ ಧರ್ಮಾಚರಣೆಯನ್ನು ಕಲಿಸಲು ಮೊದಲು ಅವರಿಗೆ ಧರ್ಮಶಿಕ್ಷಣ ನೀಡುವುದು ಆವಶ್ಯಕವಾಗಿದೆ. ‘ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿದರೆ ಅವರು ಧರ್ಮಾಚರಣಿಗಳಾಗುವರು. ಧರ್ಮಾಚರಣೆಯಿಂದ ಅವರಿಗೆ ಅನುಭೂತಿಗಳು ಬರುವವು. ಅನುಭೂತಿಗಳಿಂದ ಧರ್ಮಶ್ರದ್ಧೆ ವೃದ್ಧಿಯಾಗುವುದು. ಧರ್ಮಶ್ರದ್ಧೆಯಿಂದ ಧರ್ಮಾಭಿಮಾನ ವೃದ್ಧಿಯಾಗುವುದು. ಧರ್ಮಾಭಿಮಾನದಿಂದ ಹಿಂದೂ ಸಂಘಟನೆ ವೃದ್ಧಿಯಾಗುವುದು. ಸಂಘಟಿತ ಹಿಂದೂಗಳಿಂದ ಸಂರಕ್ಷಣೆ ನಿರ್ಮಾಣವಾಗುವುದು ಮತ್ತು ಇದರಿಂದಲೇ ಹಿಂದೂ ರಾಷ್ಟ್ರದ ನಿರ್ಮಾಣ, ಪೋಷಣೆ ಆಗುವುದು. ಧರ್ಮಶಿಕ್ಷಣವೇ ಹಿಂದೂ ರಾಷ್ಟ್ರದ ಸ್ಥಾಪನೆಯ ಅಡಿಪಾಯವಾಗಿದೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.