ಹಿಂದೂ ಧರ್ಮದ ಹಿರಿಮೆ !
‘ಎಲ್ಲಿ ತಂದೆ-ತಾಯಿಯರನ್ನು ಕೂಡ, ನಿರುಪಯೋಗಿ ಎಂದು ಭಾವಿಸಿ, ವೃದ್ಧಾಶ್ರಮಕ್ಕೆ ತಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯೆಡೆ ವಾಲುವ ಸದ್ಯದ ಪೀಳಿಗೆ ಮತ್ತು ಎಲ್ಲಿ ‘ಇಡೀ ವಿಶ್ವವೇ ನನ್ನ ಮನೆ’ ಎಂದು ಕಲಿಸುವ ಹಿಂದೂ ಧರ್ಮದಲ್ಲಿನ ಇದುವರೆಗಿನ ಪೀಳಿಗೆಗಳು !’
ರಜ-ತಮದ ಮಾಲಿನ್ಯವು ಎಲ್ಲಾ ಮಾಲಿನ್ಯಗಳ ಮೂಲ !
‘ಧ್ವನಿಮಾಲಿನ್ಯ, ಜಲಮಾಲಿನ್ಯ, ವಾಯುಮಾಲಿನ್ಯ ಮುಂತಾದವುಗಳಿಗೆ ಸಂಬಂಧಿಸಿದ ವಾರ್ತೆಗಳು ಸದಾ ಮುದ್ರಣವಾಗುತ್ತಿರುತ್ತವೆÉ; ಆದರೆ ಧರ್ಮ ಶಿಕ್ಷಣದ ಅಭಾವದಿಂದ, ಅವುಗಳ ಮೂಲ ದಲ್ಲಿರುವ ರಜ-ತಮಗಳ ಮಾಲಿನ್ಯದೆಡೆಗೆ ಯಾರ ಗಮನವೂ ಇರುವುದಿಲ್ಲ !’
ಹಿಂದೂ ಧರ್ಮದ ಅದ್ವಿತೀಯತೆ !
‘ಅನಂತ ಕೋಟಿ ಬ್ರಹ್ಮಾಂಡನಾಯಕ ನನ್ನು, ಇತರ ಪಂಥಗಳಲ್ಲಿ ಮಾಡಿರುವಂತೆ ಕೇವಲ ಒಂದೊಂದು ಪುಸ್ತಕದಲ್ಲಿ ವರ್ಣಿಸಲು ಸಾಧ್ಯವೇ ? ಹಾಗಾಗಿಯೇ ಹಿಂದೂ ಧರ್ಮದಲ್ಲಿ ಸಾವಿರಾರು ಗ್ರಂಥಗಳಿವೆ ! ಅವುಗಳಿಂದ ಎಲ್ಲಾ ಜ್ಞಾನವು ಲಭಿಸುತ್ತದೆ !’
ಹಿಂದೂ ರಾಷ್ಟ್ರ ಮತ್ತು ಅಹಂಭಾವ ನಿರ್ಮೂಲನೆ !
‘ಹಿಂದೂ ರಾಷ್ಟ್ರದಲ್ಲಿ ಅಹಂಭಾವವನ್ನು ಹೆಚ್ಚಿಸುವ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧವಿರಲಿದೆ; ಹಾಗೂ ಸಾಮಾಜಿಕ ಸ್ವಾಸ್ಥ್ಯ ಮತ್ತು ರಾಷ್ಟ್ರೀಯ ಸುರಕ್ಷೆಗೆ ಪೂರಕವಾಗಿದ್ದು, ತನ್ಮೂಲಕ ಅಹಂ ಅನ್ನು ನಾಶ ಮಾಡಿ ಈಶ್ವರಪ್ರಾಪ್ತಿ ಮಾಡಿಸಿ ಕೊಡುವಂತಹ ಸಮಷ್ಟಿ ಸಾಧನೆಗೆ ಆದ್ಯತೆ ಇರಲಿದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ