ಚೀನಾ ಮತ್ತು ಮಾಲ್ದೀವ್‌ ನಡುವಿನ ರಕ್ಷಣೆಯ ಬಗೆಗಿನ ಒಪ್ಪಂದ ಮತ್ತು ಭಾರತದ ತಂತ್ರಗಾರಿಕೆ

ಭಾರತೀಯ ಸೇನಾಪಡೆಯ ಯುದ್ಧನೌಕೆ ಮತ್ತು ಐಎನ್⃆ಸ್‌ ಜಟಾಯುವಿನ ಬೋಧಚಿಹ್ನೆ

ಸದ್ಯ ಕೆಲವು ದೇಶಗಳು ತಾವಾಗಿಯೇ ಚೀನಾದ ಬಲೆಯಲ್ಲಿ ಸಿಲುಕುತ್ತಿವೆ. ಅವುಗಳಲ್ಲಿ ಮಾಲ್ದೀವ್‌ ಕೂಡ ಒಂದಾಗಿದೆ. ಪ್ರಸ್ತುತ ಮಾಲ್ದೀವ್‌ ರಾಷ್ಟ್ರಾಧ್ಯಕ್ಷ ಮೊಯಿಜ್ಜೂ ಅವರು ಭಾರತದೊಂದಿಗೆ ಸಂಬಂಧ ಸುಧಾರಿಸಲು ಪ್ರಯತ್ನಿಸದೇ,  ಚೀನಾದೊಂದಿಗೆ ಸಂಬಂಧ ವೃದ್ಧಿಸುವ ನೀತಿಯನ್ನು ಹೊಂದಿದ್ದಾರೆ. ಮೊಯಿಜ್ಜು ಭಾರತ ಮತ್ತು ಚೀನಾ ಇವುಗಳ ನಡುವೆ ಚೀನಾವನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಅವರು ಚೀನಾದೊಂದಿಗೆ ರಕ್ಷಣೆಗೆ ಸಂಬಂಧಿಸಿದಂತೆ ಒಂದು ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಚೀನಾದ ಕಾರ್ಯಪದ್ಧತಿಗನುಸಾರ  ಇದೆಲ್ಲ ರಹಸ್ಯವಾಗಿ ನಡೆಯುತ್ತಿದೆ. ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ೨ ವಿಷಯಗಳು ನಮ್ಮ ಗಮನಕ್ಕೆ ಬಂದಿವೆ.

ಅ. ಒಂದು ಎಂದರೆ ಮಾಲ್ದೀವ್‌ಗೆ ಸೇನಾ ನೆರವು ನೀಡಲು ಚೀನಾ ಅನುಮತಿ ಕೊಡಬೇಕು.

ಆ. ಎರಡನೆಯದಾಗಿ, ಅದು ಉಚಿತವಾಗಿರಬೇಕು.

ಮಾಲ್ದೀವ್‌ಗೆ ಸಹಾಯ ಮಾಡುವಲ್ಲಿ ವಿವಿಧ ವಿಷಯಗಳು ಒಳಗೊಂಡಿವೆ. ಇದು ಶಸ್ತ್ರಾಸ್ತ್ರಗಳು ಅಥವಾ ಸೇನೆಯ ವಿಷಯದಲ್ಲಿ ಸಹಾಯ ಮಾಡುವುದು, ನಿಗಾ ಇಡುವುದರ ತಂತ್ರಜ್ಞಾನವನ್ನು ಒದಗಿಸುವುದು ಅಥವಾ ಚೀನೀ ಅಧಿಕಾರಿಗಳನ್ನು ನೇಮಿಸುವುದು, ಇವುಗಳಲ್ಲಿನ ಒಂದು ಅಥವಾ ಮೇಲಿನ ಎಲ್ಲ ವಿಷಯಗಳು ಒಳಗೊಂಡಿರಬಹುದು. ಎಲ್ಲಿಯವರೆಗೆ ಅವುಗಳ ಬಗ್ಗೆ ಸ್ಪಷ್ಟತೆ ಇಲ್ಲವೋ ಅಲ್ಲಿಯವರೆಗೆ ಚರ್ಚೆ ನಡೆಯುತ್ತಿರುವುದು.

೧. ಮಾಲ್ದೀವ್‌ ರಾಷ್ಟ್ರಾಧ್ಯಕ್ಷರ ಭಾರತದ ವಿರುದ್ಧದ ಘಟನಾಕ್ರಮಗಳು

ಪಾಲ್ಕಿ ಶರ್ಮಾ ಉಪಾಧ್ಯಾಯ

ಈಗ ನಾವು ಘಟನಾಕ್ರಮಗಳನ್ನು ನೋಡೋಣ. ಮೊಟ್ಟ ಮೊದಲು ಮೊಯಿಜ್ಜು ಭಾರತೀಯ ಸೈನಿಕರಿಗೆ ಮಾಲ್ದೀವ್‌ ದೇಶವನ್ನು ತೊರೆಯುವಂತೆ  ಹೇಳಿದರು. ತದನಂತರ ಅವರು ಚೀನಾದ ಗೂಢಚಾರಿಕೆ ನಡೆಸುವ ಹಡಗನ್ನು ಆಮಂತ್ರಿಸಿದರು. ಅದರ ನಂತರ, ಅವರು ಭಾರತೀಯ ಸೈನಿಕರ ಬದಲಿಗೆ ನಾಗರಿಕರನ್ನು ನೇಮಿಸಿದರು ಮತ್ತು  ಈಗ ಚೀನಾದೊಂದಿಗೆ ರಕ್ಷಣಾ ವಿಷಯದ ಒಪ್ಪಂದಕ್ಕೆ ಸಹಿ ಹಾಕಿದರು. ಇದರಿಂದ, ಮೊಯಿಜ್ಜು ಇವರು ಚೀನಾದಲ್ಲಿ ತಮ್ಮ ಸ್ವಂತ ಭವಿಷ್ಯವನ್ನು ಹುಡುಕುತ್ತಿದ್ದಾರೆ. ಅವರಿಗೆ ಭಾರತದಿಂದ ದೂರವಾಗಬೇಕಾಗಿದೆ ಎನ್ನುವುದು ಅವರ ಇತ್ತೀಚಿನ ಹೇಳಿಕೆ ಸ್ಪಷ್ಟಪಡಿಸುತ್ತದೆ.  ಅವರು ‘ಮೇ ೧೦ ನೇ ತಾರೀಕಿನವರೆಗೆ  ಮಾಲ್ದೀವ್‌ನಲ್ಲಿ  ಸಮವಸ್ತ್ರದಲ್ಲಿ ಅಥವಾ ಸಾಮಾನ್ಯ ಉಡುಪಿನಲ್ಲಿ ಭಾರತೀಯ ಸೈನಿಕರು ಇರುವುದಿಲ್ಲ. ಈ ದೇಶದಲ್ಲಿ ಯಾವುದೇ ಗಣವೇಷದಲ್ಲಿ ಭಾರತೀಯ ಸೈನಿಕರು ಇರಬಾರದು’ ಎನ್ನುತ್ತಿದ್ದಾರೆ, ಭಾರತವು ಇದನ್ನು ಒಪ್ಪಿಕೊಂಡಿದೆ ಮತ್ತು  ಭಾರತೀಯ ಸೇನೆಯು ಮಾಲ್ದೀವ್‌ನಿಂದ  ಭಾರತಕ್ಕೆ ಮರಳುತ್ತಿದೆ. ಇದರಿಂದ ಭಾರತದ ಭದ್ರತೆಯ ಮೇಲೆ ಯಾವ ಪರಿಣಾಮ ಆಗಬಹುದು ? ಮತ್ತು ಭಾರತ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

೨. ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ವಿಸ್ತಾರವಾದ

ಕೆಲವು ತಜ್ಞರ ಅಭಿಪ್ರಾಯದಂತೆ, ಚೀನಾ ಹಿಂದೂ ಮಹಾಸಾಗರದಲ್ಲಿ ಹೂಡಿಕೆಯ ಮಾಧ್ಯಮದಿಂದ, ಬೇರೆಯವರೊಂದಿಗೆ ಕರಾರು ಮಾಡಿ ಕೊಂಡು ಮತ್ತು ಕುಣಿಕೆಯ ಗಾಳ ಹಾಕಿ ನಿಂತು ಕೊಂಡಿದೆ. ಇದು ಚೀನಾದ ಬಹುದಶಕಗಳ ಯೋಜನೆಯಾಗಿದೆ. ಹಿಂದೂ ಮಹಾಸಾಗರದಲ್ಲಿ ಚೀನಾ ನೆಲೆಗಳನ್ನು ಹೊಂದಿದೆ. ಮೊದಲ ನೆಲೆ ಜಿಬುಟಿ, ಈ ದ್ವೀಪದಲ್ಲಿ ‘ಪಿ.ಎಲ್‌.ಎ.’ (ಪೀಪಲ್ಸ್ ಲಿಬರೇಶನ್‌ ಆರ್ಮಿ)ಯ ಸೇನಾ ನೆಲೆಯಿದೆ. ತದನಂತರ, ಪಾಕಿಸ್ತಾನದ ಗ್ವಾದರ್‌ ಬಂದರಿನಲ್ಲಿ ಚೀನಾದ ನೆಲೆಯಿದೆ. ಶ್ರೀಲಂಕಾದ ದಕ್ಷಿಣದ ಹಂಬನಟೋಟಾ ಈ ದ್ವೀಪದಲ್ಲಿ ಮೂರನೇ ನೆಲೆಯಿದೆ. ಇದಲ್ಲದೇ ಮ್ಯಾನ್ಮಾರನ ಕ್ವಾಯುಪುನಲ್ಲಿ ಚೀನಾ ಬಂದರನ್ನು ನಿರ್ಮಿಸುತ್ತಿದೆ. ಇವು ಚೀನಾದ ಅಸ್ತಿತ್ವದ ಮುಖ್ಯ ಪುರಾವೆಗಳಾಗಿವೆ. ಇದರಲ್ಲಿ ನೀವು ಹೂಡಿಕೆ ಮತ್ತು ಆರ್ಥಿಕ ಸಹಾಯಗಳ ವಿಚಾರವನ್ನು ಮಾಡಿದರೆ, ಅದರ ಪ್ರಮಾಣ ಇದಕ್ಕಿಂತ ಅಧಿಕವಾಗಿದೆ. ಸದ್ಯದ ಸ್ಥಿತಿಯಲ್ಲಿ ಹಿಂದೂ ಮಹಾಸಾಗರದಲ್ಲಿನ ೨೧ ಬಂದರುಗಳು ಚೀನಾದ ವಶದಲ್ಲಿವೆ. ಚೀನಾದ ಮುತ್ತಿನಹಾರದ ದಾರದಲ್ಲಿ ಈ ಬಂದರುಗಳು ಪೋಣಿಸಲ್ಪಟ್ಟಿವೆ. ‘ಮಾಲ್ದೀವ್‌ ಈಗ ಒಂದು ಹೊಸಮಣಿ ಅದರಲ್ಲಿ ಸೇರ್ಪಡೆಯಾಗಲಿದೆಯೇ ? ಎನ್ನುವ ಪ್ರಶ್ನೆಯಿದೆ. ಅದು ತನ್ನ ಬಂದರಿನಲ್ಲಿ ಚೀನಾದ ಆತಿಥ್ಯ ಮಾಡುವುದೇ ? ಈ ವಿಷಯದ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ.

೩. ಚೀನಾದ ವಿರುದ್ಧ ಭಾರತದ ನಡೆ

ಚೀನಾದ ವಿರುದ್ಧ ಭಾರತ ಈಗ ಒಂದು ಆಟವನ್ನು ಆಡುತ್ತಿದೆ. ಭಾರತ ಮತ್ತು ಮಾರಿಶಸ್‌ ಸಂಯುಕ್ತ ರೀತಿಯಲ್ಲಿ ‘ಅಗಾಲೆಗಾ’ ಎಂಬ ಬಂದರಿನಲ್ಲಿ ವಾಯುನೆಲೆ ಮತ್ತು ನೌಕಾನೆಲೆ ನಿರ್ಮಿಸಿ ಅದನ್ನು ಉದ್ಘಾಟಿಸಿದೆ. ಭಾರತವು ಆ ಸ್ಥಳದಲ್ಲಿ ೨೦೦ ದಶಲಕ್ಷ ಡಾಲರ್ಸ (೧ ಸಾವಿರ ೬೫೭ ಕೋಟಿ ರೂಪಾಯಿಗಳಿಗಿಂತ ಅಧಿಕ) ಹೂಡಿಕೆಯನ್ನು ಮಾಡಿದೆ. ಈ ಸೇನಾನೆಲೆಯನ್ನು ಭಾರತವು ನಿರ್ಮಿಸಿದೆ. ಇದರಿಂದ ಭಾರತಕ್ಕೆ ತಂತ್ರಗಾರಿಕೆಯ ರೂಪ ದಲ್ಲಿ ಲಾಭವಾಗಲಿದೆ. ಮಾಹಿತಿಗಳ ವಿನಿಮಯ, ಸಮೀಕ್ಷೆಯ ಕಾರ್ಯಾಚರಣೆ ಅಥವಾ ಜಂಟಿ ಗಸ್ತು ತಿರುಗುವುದು, ಈ ದೃಷ್ಟಿಯಿಂದ ಭಾರತಕ್ಕೆ ಲಾಭವಾಗಲಿದೆ. ಇನ್ನೊಂದು ವಿಷಯವೆಂದರೆ ಭಾರತ ಈಗ ಲಕ್ಷದ್ವೀಪದಲ್ಲಿ ‘ಐ.ಎನ್‌.ಎಸ್. ಜಟಾಯು’ ಈ ಹೊಸ ನೆಲೆಯನ್ನು ನಿರ್ಮಿಸುತ್ತಿದೆ. ಈ ಯೋಜನೆ ಲಕ್ಷದ್ವೀಪದ ಪೂರ್ವ ಭಾಗದಲ್ಲಿದೆ. ಈ ಸ್ಥಳದಲ್ಲಿ ದೊಡ್ಡ ಹಡಗುಗಳು ನಿಲುಗಡೆಗಾಗಿ ಹೊಸ ಬಂದರನ್ನು ನಿರ್ಮಿಸುವ ಯೋಜನೆಯಿದೆ. ಒಟ್ಟಾರೆ ಇದೆಲ್ಲದರ ಅರ್ಥವೇನು ? ಭಾರತ ಹೀಗೆ  ನೆಲೆಯನ್ನು ನಿರ್ಮಿಸಿ ಏನು ಮಾಡಲಿದೆ ? ನೌಕಾದಳದ ಪ್ರಕಾರ, ‘ಐ.ಎನ್‌.ಎಸ್. ಜಟಾಯು’ ಪ್ರಾರಂಭವಾದ ಬಳಿಕ ಭಾರತೀಯ ನೌಕಾದಳದ ಲಕ್ಷದ್ವೀಪದ ಸ್ಥಾನ ಸುದೃಢವಾಗಲಿದೆ. ಇದರಿಂದ ಅಭಿಯಾನದ ಪರಿಶೀಲನೆ, ಭಾರತದ ಕಾರ್ಯಕ್ಷೇತ್ರವನ್ನು ಹೆಚ್ಚಿಸುವುದು ಮತ್ತು ತಂತ್ರಗಾರಿಕೆಯನ್ನು ಸ್ಥಿರವಾಗಿರಿಸುವ ಉದ್ದೇಶಗಳು ಪೂರ್ಣಗೊಳ್ಳಲಿವೆ.’

ಲಕ್ಷದ್ವೀಪವು ದ್ವೀಪಸಮೂಹಗಳ ಮಧ್ಯಭಾಗದಲ್ಲಿದೆ. ಇದಲ್ಲದೇ ಈ ದ್ವೀಪದಲ್ಲಿ ವಿಮಾನವಾಹಕ ನೌಕೆಗಳು, ಲಾಂಚ್‌ ಪ್ಯಾಡ್‌ ಈ ಸೌಲಭ್ಯಗಳಿವೆ. ಮುಂಬರುವ ದಿನಗಳಲ್ಲಿ ಈ ದ್ವೀಪವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಚೀನಾ ಯುದ್ಧ ನೌಕೆಗಳನ್ನು ನಿರ್ಮಿಸುತ್ತಿದ್ದು, ಇದರಲ್ಲಿ ಮೊಯಿಜ್ಜು ಚೀನಾದ ಪಾಲುದಾರರಾಗಿದ್ದಾರೆ. ಒಂದು ವೇಳೆ ಇವರಿಬ್ಬರೂ ಒಂದಾದರೆ ಭಾರತ ಸಂಕಷ್ಟಕ್ಕೆ ಸಿಲುಕಬಹುದು. ಭಾರತಕ್ಕೆ ಹಿಂದೂ ಮಹಾ ಸಾಗರದ ಪರಿಸ್ಥಿತಿ ವಿಭಿನ್ನವಾಗಿದೆ. ಸದ್ಯ  ಭಾರತ ಮತ್ತು ಮಾಲ್ದೀವ್‌ ಪರಸ್ಪರ ದೂರ ಸರಿಯುವ ಸ್ಥಿತಿಯಲ್ಲಿವೆ, ಇದು ಮಾತ್ರ ಖಚಿತ !

– ಪಾಲ್ಕಿ ಶರ್ಮಾ ಉಪಾಧ್ಯಾಯ, ವಿದೇಶಾಂಗ ನೀತಿ ವಿಷಯದ ಪತ್ರಕರ್ತೆ (ಕೃಪೆ : ‘ಫಸ್ಟ್ ಪೋಸ್ಟ್‌’ನ ಜಾಲತಾಣ)