ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ

ಪ್ರಯಾಗರಾಜ – ಕುಂಭಮೇಳವು ಭಾರತೀಯತೆ, ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಹಬ್ಬವಾಗಿದೆ. ಆದ್ದರಿಂದ, ಮಹಾ ಕುಂಭ ಮೇಳವನ್ನು ಯಾವುದೇ ಸಮಾಜ ಅಥವಾ ಧರ್ಮದ ದೃಷ್ಟಿಯಿಂದ ನೋಡಬಾರದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ ಜನವರಿ 18 ರಂದು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಹೇಳಿದರು. ಅವರು ಉತ್ತರ ಪ್ರದೇಶ ಪ್ರವಾಸದಲ್ಲಿರುವಾಗ ಪ್ರಯಾಗರಾಜಗೆ ಬಂದು ಸಂಗಮದಲ್ಲಿ ಸ್ನಾನ ಮಾಡಿದರು, ಜೊತೆಗೆ ಪೂಜೆ ಮತ್ತು ಆರತಿಯನ್ನೂ ಮಾಡಿದರು.
ಅವರು ತಮ್ಮ ಮಾತನ್ನು ಮುಂದುವರಿಸಿ, ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ನನ್ನ ಭಾಗ್ಯವೆಂದು ನಾನು ಭಾವಿಸುತ್ತೇನೆ. ನನಗೆ ತುಂಬಾ ಕೃತಜ್ಞತೆಯೆನಿಸುತ್ತದೆ. ಭಾರತದಿಂದ ಮಾತ್ರವಲ್ಲದೆ, ದೇಶದ ಮೂಲೆ ಮೂಲೆಗಳಿಂದಲೂ ಜನರು ಇಲ್ಲಿ ಸ್ನಾನ ಮಾಡಲು ಬರುತ್ತಾರೆ. ಯಾರಾದರೂ ಭಾರತ ಮತ್ತು ಭಾರತೀಯತೆಯನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಅವರು ಮಹಾ ಕುಂಭ ಮೇಳಕ್ಕೆ ಬರಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|