ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಇವರ ತಪ್ಪಿಗೆ `ಮೆಟಾ’ ಕ್ಷಮೆಯಾಚನೆ

ಕ್ಯಾಲಿಫೋರ್ನಿಯಾ – ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರ ತಪ್ಪು ಹೇಳಿಕೆಗೆ ಫೇಸ್‌ಬುಕ್ ನ ಮೂಲ ಕಂಪನಿ ‘ಮೆಟಾ’ ಭಾರತದ ಬಳಿ ಕ್ಷಮೆಯಾಚಿಸಿದೆ. ಮಾರ್ಕ್ ಜುಕರ್ಬರ್ಗ್ ತಮ್ಮ ಹೇಳಿಕೆಯೊಂದರಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಹೆಚ್ಚಿನ ದೇಶಗಳ ಹಾಲಿ ಸರಕಾರಗಳಿಗೆ 2024 ರ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಯಿತು ಎಂದು ಹೇಳಿದ್ದರು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

1. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಅವರು ಮಾರ್ಕ್ ಜುಕರ್ಬರ್ಗ್ ಅವರ ಹೇಳಿಕೆಯನ್ನು ‘ವಾಸ್ತವಿಕವಾಗಿ ತಪ್ಪು’ ಎಂದು ಕರೆದಿದ್ದರು. ಶ್ರೀ. ವೈಷ್ಣವ ಅವರು `ಎಕ್ಸ್‘ನಲ್ಲಿ ಒಂದು ಪೋಸ್ಟ ಪ್ರಸಾರ ಮಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು 2024 ರ ಸಾರ್ವತ್ರಿಕ ಚುನಾವಣೆಯನ್ನು ನಡೆಸಿತು, ಇದರಲ್ಲಿ 64 ಕೋಟಿಗೂ ಹೆಚ್ಚು ಮತದಾರರು ಭಾಗವಹಿಸಿದ್ದರು ಮತ್ತು ಭಾರತೀಯರು ಮತ್ತೊಮ್ಮೆ ಪ್ರಧಾನಿ ನರೇಂದ್ರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ವಿಶ್ವಾಸ ವ್ಯಕ್ತ ಪಡಿಸಿದ್ದರು’, ಎಂದು ಪೋಸ್ಟ್ ಮಾಡಿದ್ದರು.

2. ಶ್ರೀ. ಅಶ್ವಿನಿ ವೈಷ್ಣವ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಮೂರನೇ ಬಾರಿಗೆ ನಿರ್ಣಾಯಕ ಗೆಲುವು ಇದು ಉತ್ತಮ ಆಡಳಿತ ಮತ್ತು ಜನತೆಯ ನಂಬಿಕೆಯ ಸಂಕೇತವಾಗಿದೆ ಎಂದು ಹೇಳಿದ್ದರು.

3. ಮೆಟಾಗೆ ಟ್ಯಾಗ್ ಮಾಡಿದ ಅಶ್ವಿನಿ ವೈಷ್ಣವ್ ಅವರು, ಜುಕರ್ಬರ್ಗ್ ಸ್ವತಃ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಇದನ್ನು ನೋಡುವುದು ‘ನಿರಾಶಾದಾಯಕ’ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಜುಕರ್ಬರ್ಗ್ ಭಾರತ ಸರಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಹರಡಿ ಹೆಸರು ಕೆಡಿಸುತ್ತಾರೆ ಮತ್ತು ಅವರ ಆಡಳಿತ ಮಂಡಳಿ ಕ್ಷಮೆಯಾಚಿಸುವಂತೆ ನಟಿಸುತ್ತದೆ ! ಜುಕರ್ಬರ್ಗ್‌ನಂತಹವರ ಬಗ್ಗೆ ಭಾರತೀಯರು ಚೆನ್ನಾಗಿ ತಿಳಿದಿದ್ದಾರೆ !