ಐ.ಎನ್.ಎಸ್. ಸೂರತ’, ‘ಐ.ಎನ್.ಎಸ್.ನೀಲಗಿರಿ’ ಈ ಯುದ್ಧನೌಕೆ ಮತ್ತು ‘ಐಎನ್ಎಸ್’ ವಾಘಶೀರ’ ಜಲಾಂತರ್ಗಾಮಿ ನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆ
ಮುಂಬಯಿ, ಜನವರಿ 15 (ಸುದ್ದಿ.) – ಛತ್ರಪತಿ ಶಿವಾಜಿ ಮಹಾರಾಜರು ನೌಕಾಪಡೆಗೆ ಹೊಸ ಶಕ್ತಿ ಮತ್ತು ದೃಷ್ಟಿ ನೀಡಿದ್ದರು. ಇಂದು, ಅವರ ಪವಿತ್ರ ಭೂಮಿಯಲ್ಲಿ, ನಾವು 21 ನೇ ಶತಮಾನಕ್ಕೆ ನೌಕಾಪಡೆಯನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆ ಇಡುತ್ತಿದ್ದೇವೆ. ಈ ಶತಮಾನದಲ್ಲಿ ಭಾರತದ ಸೇನಾ ಸಾಮರ್ಥ್ಯಗಳನ್ನು ಹೆಚ್ಚು ಸಮರ್ಥ ಮತ್ತು ಆಧುನಿಕವಾಗಿಸುವುದು ದೇಶದ ಆದ್ಯತೆಗಳಲ್ಲಿ ಒಂದಾಗಿದೆ. ಜಲ, ಭೂಮಿ ಅಥವಾ ಆಕಾಶವಾಗಿರಲಿ, ಸಮುದ್ರದ ಆಳದಲ್ಲಿರಲಿ ಅಥವಾ ಮಿತಿಯಿಲ್ಲದ ಸ್ಥಳವಾಗಿರಲಿ, ಭಾರತವು ಎಲ್ಲೆಡೆ ತನ್ನ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಇದಕ್ಕಾಗಿ ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತೀಯ ನೌಕಾಪಡೆಯ ಮುಂಬಯಿಯ ಮಡಿಲಲ್ಲಿ ‘ಐಎನ್ಎಸ್. ಸೂರತ’, ‘ಐ.ಎನ್.ಎಸ್.ನೀಲಗಿರಿ’ ಈ ಯುದ್ಧನೌಕೆ ಮತ್ತು ‘ಐಎನ್ಎಸ್’ ವಾಘಶೀರ ಈ ಜಲಾಂತರ್ಗಾಮಿ ನೌಕೆಯನ್ನು ಜನವರಿ 15 ರಂದು ಪ್ರಧಾನಿ ನರೇಂದ್ರ ಮೋದಿಯವರ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ, ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ, ಉಪಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ಅಜಿತ ಪವಾರ ಇವರೊಂದಿಗೆ ನೌಕಾ ಅಧಿಕಾರಿಗಳು ಉಪಸ್ಥಿತರಿದ್ದರು. ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಿದೆ. ಒಂದೇ ದಿನದಲ್ಲಿ 2 ಯುದ್ಧನೌಕೆಗಳು ಮತ್ತು 1 ಜಲಾಂತರ್ಗಾಮಿ ನೌಕಾಪಡೆಗೆ ಸೇರ್ಪಡೆಯಾಗುತ್ತಿರುವುದು ಇದೇ ಮೊದಲಬಾರಿಯಾಗಿದೆ ಎಂದು ಹೇಳಿದರು.
🇮🇳 Advanced Warships INS Surat, INS Nilgiri, and submarine INS Vaghsheer inducted into the Indian Navy!
“Inspired by Chhatrapati Shivaji Maharaj, we are taking bold steps to fortify our naval power!” – Prime Minister Narendra Modi
Highlights of these newly commissioned vessels… pic.twitter.com/ze5JKAJeKp
— Sanatan Prabhat (@SanatanPrabhat) January 15, 2025
ಪ್ರಧಾನಿ ಮೋದಿ ಮಾತು ಮುಂದುವರೆಸಿ…
1. ಇಂದು, ಸಂಪೂರ್ಣ ಜಗತ್ತಿನಲ್ಲಿ ಭಾರತವು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರ ಎಂದು ಗುರುತಿಸಲ್ಪಟ್ಟಿದೆ. ಭಾರತವು ವಿಸ್ತರಣಾವಾದದ ಭಾವನೆಯಿಂದಲ್ಲ, ಬದಲಾಗಿ ಅಭಿವೃದ್ಧಿಯ ಭಾವದಿಂದ ಕೆಲಸ ಮಾಡುತ್ತಿದೆ.
2. ನಮ್ಮ ಸರಕಾರದ ಮೂರನೇ ಕಾರ್ಯಕಾಲದಲ್ಲಿ ಅನೇಕ ದೊಡ್ಡ ನಿರ್ಧಾರಗಳೊಂದಿಗೆ ಪ್ರಾರಂಭವಾಗಿದೆ. ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಹೊಸ ನೀತಿಗಳನ್ನು ತ್ವರಿತವಾಗಿ ಸಿದ್ಧಗೊಳಿಸಿದ್ದೇವೆ. ನಾವು ಹೊಸ ಕಾರ್ಯಗಳನ್ನು ಪ್ರಾರಂಭಿಸಿದ್ದೇವೆ.
3. ದೇಶದ ಪ್ರತಿಯೊಂದು ಮೂಲೆಗಳಲ್ಲಿ ಮತ್ತು ಪ್ರತಿಯೊಂದು ವಲಯವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಕರಾವಳಿ ಸಮುದ್ರ ಪ್ರದೇಶಗಳು, ಆಕಾಶ ಮಾರ್ಗದ ಸ್ವಾತಂತ್ರ್ಯ ಮತ್ತು ಸುರಕ್ಷಿತ ವ್ಯಾಪಾರ ಪೂರೈಕೆ ಮಾರ್ಗಗಳು ಮತ್ತು ಸಮುದ್ರ ಮಾರ್ಗಗಳನ್ನು ರಕ್ಷಿಸುವುದು ಮುಖ್ಯವಾಗಿದೆ.
4. ಮಾದಕ ಪದಾರ್ಥಗಳು, ಶಸ್ತ್ರಾಸ್ತ್ರಗಳು ಮತ್ತು ಭಯೋತ್ಪಾದನೆಯಿಂದ ಸಾಗರಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಸುರಕ್ಷಿತ ಮತ್ತು ಸಮೃದ್ಧವಾಗಿಸಲು ನಾವು ಜಾಗತಿಕ ಪಾಲುದಾರರಾಗಬೇಕು. ಇದಕ್ಕಾಗಿ ನಾವು ಪರಿಣಾಮಕಾರಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
5. ಜಾಗತಿಕ ಭದ್ರತೆ, ಅರ್ಥವ್ಯವಸ್ಥೆ ಮತ್ತು ಭೂ-ರಾಜಕೀಯ ಪರಿದೃಶ್ಯವನ್ನು ಸಿದ್ಧಪಡಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ.
ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿರುವ ಯುದ್ಧನೌಕೆಗಳ ಗುಣಲಕ್ಷಣಗಳು
‘ಐ.ಎನ್.ಎಸ್. ಸೂರತ’
ಗುಜರಾತ ರಾಜ್ಯದ ಒಂದು ನಗರದ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ. ಈ ಯುದ್ಧನೌಕೆ ಉದ್ದ 164 ಮೀಟರ್, ಅಗಲ 18 ಮೀಟರ್ ಮತ್ತು ತೂಕ 7 ಸಾವಿರ 600 ಟನ್ ಇದೆ. ಶತ್ರುಗಳ ಮೇಲೆ ಮೂರು ಕಡೆಯಿಂದ ದಾಳಿ ಮಾಡಲು, ಇದರಲ್ಲಿ ಬ್ರಹ್ಮೋಸ್ ಕ್ಷಿಪಣಿಗಳು, ಬರಾಕ ಕ್ಷಿಪಣಿಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್ಗಳು ಮತ್ತು ವಿಶೇಷ ಭಾರತೀಯ ನಿರ್ಮಿತ ಬಂದೂಕುಗಳಿವೆ.
‘ಐ.ಎನ್.ಎಸ್. ನೀಲಗಿರಿ
ಈ ಯುದ್ಧನೌಕೆಯಲ್ಲಿ ಶತ್ರುಗಳ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳಿಂದ ಕೂಡಿದೆ. ಇವುಗಳಲ್ಲಿ ಮುಖ್ಯವಾಗಿ 8 ಬ್ರಹ್ಮೋಸ್ ಕ್ಷಿಪಣಿಗಳು ಮತ್ತು 32 ಬರಾಕ್ ಕ್ಷಿಪಣಿಗಳು ಸೇರಿವೆ, ಇವು ಆಕಾಶದಲ್ಲಿರುವ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿವೆ. ಇದು ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್ಗಳನ್ನು ಸಹ ಹೊಂದಿದ್ದು, ಇವು ನೀರಿನೊಳಗಿನಿಂದ ಗುಂಡು ಹಾರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಾಬೀತಾಗಿದೆ. ಈ ಯುದ್ಧನೌಕೆ ಗಂಟೆಗೆ 28 ನಾಟಿಕಲ್ ವೇಗವನ್ನು ಹೊಂದಿದ್ದು, 6 ಸಾವಿರ 670 ಟನ್ ತೂಕವಿದ್ದು, 149 ಮೀಟರ್ ಉದ್ದವಿದೆ. ಶತ್ರು ರಾಡಾರ್ ನಲ್ಲಿ ಪತ್ತೆಯಾಗುವುದನ್ನು ತಪ್ಪಿಸಲು ಹಲವು ಸಲಕರಣೆಗಳೊಂದಿಗೆ ಈ ಯುದ್ಧನೌಕೆಯು ಸಜ್ಜಾಗಿದೆ.
‘ಐಎನ್ಎಸ್’ ವಾಘಶೀರ ಜಲಾಂತರ್ಗಾಮಿ!
ಭಾರತೀಯ ನೌಕಾಪಡೆಯ ‘ಐಎನ್ಎಸ್’ ವಾಘಶೀರ ಜಲಾಂತರ್ಗಾಮಿ ಪ್ರಾಜೆಕ್ಟ್ 75 ಸ್ಕಾರ್ಪೀನ್ ವರ್ಗದ ಆರನೇ ಮತ್ತು ಅಂತಿಮ ಜಲಾಂತರ್ಗಾಮಿ ನೌಕೆಯಾಗಿದೆ. 2022 ರಲ್ಲಿ ಬಿಡುಗಡೆಯಾದ ನಂತರ ಅದರ ಎಲ್ಲಾ ತಪಾಸಣೆಗಳು ಪೂರ್ಣಗೊಳಿಸಿದ ನಂತರ, ಅದನ್ನು ಭಾರತೀಯ ನೌಕಾಪಡೆಯ ನೌಕಾಪಡೆಗೆ ಸೇರ್ಪಡೆಯಾಗಿದೆ. ಈ ಜಲಾಂತರ್ಗಾಮಿ ನೌಕೆ 67.5 ಮೀಟರ್ ಉದ್ದ ಮತ್ತು 12.3 ಮೀಟರ್ ಎತ್ತರವಿದೆ. ಅದು ಸಮುದ್ರದ ಆಳಕ್ಕೆ ಹೋಗಿ ಶತ್ರುಗಳನ್ನು ಹೊಡೆಯಬಲ್ಲದು. ಈ ಜಲಾಂತರ್ಗಾಮಿ ನೌಕೆ 45 ರಿಂದ 50 ದಿನಗಳವರೆಗೆ ಸಮುದ್ರದಲ್ಲಿ ಪ್ರಯಾಣಿಸಬಹುದು.
ಮುಂಬಯಿನಲ್ಲಿರುವ `ಮಾಝಗಾವ ಡಾಕ್ ಶಿಪಬಿಲ್ಡರ’ ಮಡಿಲಿನಿಂದ ಎರಡೂ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ಉತ್ಪಾದಿಸುವ ಮೂಲಕ ಭಾರತ ಸರಕಾರದ ‘ಆತ್ಮನಿರ್ಭರ ಭಾರತ’ ಕನಸನ್ನು ನನಸಾಗಿಸುವತ್ತ ಮತ್ತೊಂದು ಬಲವಾದ ಹೆಜ್ಜೆಯನ್ನು ಇಟ್ಟಿದೆ.