೧. ದೆಹಲಿಯಲ್ಲಿ ರೈತರ ಸಂಘಟನೆಗಳಿಂದ ವಿವಿಧ ಬೇಡಿಕೆಗಳಿಗಾಗಿ ಆಂದೋಲನ
ಆಂದೋಲನದಲ್ಲಿ ಪಾಲ್ಗೊಂಡ ರೈತರು ಒಟ್ಟು ೨೩ ಪ್ರಕಾರದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಖಾತರಿ ಪಡಿಸಬೇಕು, ಪಾಮ್ ಎಣ್ಣೆ ಆಮದು ಮಾಡುವುದನ್ನು ಸಂಪೂರ್ಣ ನಿಲ್ಲಿಸಬೇಕು, ಸ್ವಾಮಿನಾಥನ್ ಆಯೋಗದ ಶಿಫಾರಸ್ಸು ಅನ್ವಯವಾಗಬೇಕು, ಕನಿಷ್ಟ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗಬೇಕು ಇತ್ಯಾದಿ ಬೇಡಿಕೆಗಳಿಗಾಗಿ ‘ಸಂಯುಕ್ತ ಕಿಸಾನ್ ಮೋರ್ಚಾ’ ಮತ್ತು ‘ಪಂಜಾಬ್ ಕಿಸಾನ್ ಮಜದೂರ್ ಸಂಘರ್ಷ ಸಮಿತಿ’ ಇಂತಹ ಕೆಲವು ರೈತ ಸಂಘಟನೆಗಳಿಂದ ದೇಹಲಿಯಲ್ಲಿ ಆಂದೋಲನ ನಡೆದಿತ್ತು.
ಕೆಲವು ವರ್ಷಗಳ ಹಿಂದೆ ಗಣರಾಜ್ಯೋತ್ಸವದ ದಿನ ಈ ಆಂದೋಲನಕಾರರು ಕೆಂಪುಕೋಟೆಯ ಮೇಲೆ ಹೋಗಿ ದಂಗೆಯನ್ನು ಮಾಡಿದ್ದರು. ಆಗ ಆಂದೋಲನಕಾರಿ ರೈತರು ಕೆಂಪು ಕೋಟೆಯ ಮೇಲಿನ ಭಾರತದ ಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿಗಳ ಧ್ವಜವನ್ನು ಹಾರಿಸಿದ್ದರು. ಆಗ ಆ ಮಾರ್ಗದಿಂದ ನ್ಯಾಯಾಧೀಶರು ಮತ್ತು ವಕೀಲರಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ತಲುಪಲು ಅರ್ಧ ಗಂಟೆಯ ಬದಲು ಎರಡುವರೆ ಗಂಟೆ ಬೇಕಾಗಿತ್ತು. ಆಂದೋಲನಕಾರರು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಡಚಣೆಯನ್ನುಂಟು ಮಾಡಿದ್ದರು. ಸಂಪೂರ್ಣ ದೆಹಲಿವಾಸಿಗಳನ್ನು ಒತ್ತೆ ಹಿಡಿಯಲಾಗಿತ್ತು. ಆ ಆಂದೋಲನದಲ್ಲಿ ವಿದೇಶಿ ಶಕ್ತಿಯ ಕೈವಾಡ ಇತ್ತು ಎಂಬುದು ಗಮನಕ್ಕೆ ಬಂದಿತ್ತು. ಈ ಆಂದೋಲನದ ವಿಷಯದಲ್ಲಿ ದೆಹಲಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ‘ರಿಟ್’ ಅರ್ಜಿಯನ್ನು ಸಹ ಸಲ್ಲಿಸಲಾಯಿತು.
೨. ಆಂದೋಲನದ ಹಿಂದಿನ ನಿಜವಾದ ಕಾರಣ
ಕೊರೋನಾ ಮಹಾಮಾರಿಯ ಆಘಾತವಾದರೂ ಭಾರತದ ಅರ್ಥವ್ಯವಸ್ಥೆ ೧೦ ನೇ ಸ್ಥಾನದಿಂದ ೫ ನೇ ಸ್ಥಾನಕ್ಕೆ ತಲುಪಿತು. ಭಾರತ ದೇಶವು ಮಹಾಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ. ಈ ವಾಸ್ತವವನ್ನು ಕೆಲವು ದೇಶಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಭಾರತದೊಂದಿಗೆ ನೇರ ಯುದ್ಧ ಸಾರಲು ಈಗ ಅಷ್ಟು ಸುಲಭವಿಲ್ಲ. ಆದ್ದರಿಂದ ವಿದೇಶಿ ಶಕ್ತಿಗಳು, ಸಾಮ್ಯವಾದಿಗಳು, ಪ್ರಗತಿಪರರು, ಮತಾಂಧರು ಹಾಗೂ ರಾಷ್ಟ್ರವಿರೋಧಿ ಶಕ್ತಿಗಳು ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಕೃತ್ಯವನ್ನು ಮಾಡುತ್ತಿವೆ. ರೈತ ಆಂದೋಲನವೂ ಅದರ ಒಂದು ಭಾಗವಾಗಿದೆ. ದುರ್ಭಾಗ್ಯದ ವಿಷಯವೆಂದರೆ ಸ್ವಾಮಿನಾಥನ್ ಇವರಿಗೆ ಕೇಂದ್ರ ಸರಕಾರ ‘ಭಾರತರತ್ನ’ ನೀಡಿ ಗೌರವಿಸಿತು, ಅವರ ಪುತ್ರಿಯೂ ‘ರೈತರನ್ನು ಅಪರಾಧಿಗಳಂತೆ ನೋಡಬೇಡಿ’, ಎನ್ನುವ ಪುಕ್ಕಟೆ ಸಲಹೆ ನೀಡಿದಳು.
ಇತ್ತೀಚೆಗಷ್ಟೆ ನಡೆದ ರೈತರ ಆಂದೋಲನದ ಸಮಯದಲ್ಲಿ ಹರಿಯಾಣಾದ ಗಡಿಯಲ್ಲಿ ಆಂದೋಲನಕಾರಿಗಳನ್ನು ತಡೆಗಟ್ಟಲು ನಿರ್ಮಿಸಿದ ಚೂಪಾದ ಮೊಳೆಗಳ ಪಟ್ಟಿಗಳನ್ನು ಕಿತ್ತೆಸೆದರು, ಹಾಗೂ ಅವರು ಪೊಲೀಸರ ಮೇಲೆ ದಾಳಿ ಮಾಡಿದರು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ವಿರೋಧಿಗಳಿಗೆ ಈಗ ಯಾವುದೇ ಅಂಶವನ್ನು ಹಿಡಿದು ಸರಕಾರವನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ತಥಾಕಥಿತ ಅನ್ಯಾಯದ ವಿರುದ್ಧ ಆಂದೋಲನ ಮಾಡುವ ನಿರ್ಣಯವನ್ನು ಮಾಡಿದ್ದಾರೆ. ಹಿಂದಿನ ಆಂದೋಲನಗಳಲ್ಲಿ ರೈತರು ಯಾವ ಪದ್ಧತಿಯ ಹಿಂಸಾತ್ಮಕ ಕೃತಿ ಮಾಡಿದ್ದರೊ, ಅದೇ ರೀತಿ ಅವರಿಗೆ ಈ ಸಲವೂ ಮಾಡಲಿಕ್ಕಿತ್ತು; ಆದರೆ ಸರಕಾರ ದಕ್ಷತೆಯಿಂದಾಗಿ ಅವರಿಗೆ ಹಾಗೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ಸರಕಾರದ ನಿಯೋಜನೆ ಯೋಗ್ಯವಾಗಿತ್ತೆಂದೇ ಹೇಳಬೇಕಾಗುತ್ತದೆ.
೩. ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಧ್ವಂಸ ಮಾಡಬೇಕು !
ಈ ಆಂದೋಲನವನ್ನು ಅವಲೋಕಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ವಕೀಲರು ಮುಖ್ಯನ್ಯಾಯಾಧೀಶರಿಗೆ ಪತ್ರ ಬರೆದರು, ಹಾಗೆಯೇ ಈ ವಿಷಯದಲ್ಲಿ ರಿಟ್ ಅರ್ಜಿಯನ್ನೂ ದಾಖಲಿಸಲಾಗಿದೆ ಎಂಬುದು ತಿಳಿದುಬಂದಿದೆ. ಈ ವಿಷಯದಲ್ಲಿ ಮುಖ್ಯನ್ಯಾಯಾಧೀಶರು ‘ವಕೀಲರ ವಿರುದ್ಧ ಏಕಪಕ್ಷೀಯ ನಿರ್ಣಯ ಆಗುವುದಿಲ್ಲ’, ಎನ್ನುವ ಆಶ್ವಾಸನೆಯನ್ನಂತೂ ನೀಡಿದರು; ಆದರೆ ಹಿಂದಿನ ಹಿಂಸಾತ್ಮಕ ಆಂದೋಲನದ ಅನುಭವವನ್ನು ಗಮನಿಸಿ ನಿಜವಾಗಿಯೂ ಸರ್ವೋಚ್ಚ ನ್ಯಾಯಾಲಯ ಅದನ್ನು ತಾನಾಗಿಯೇ ಅವಲೋಕಿಸಿ (ಸುಮೋಟೋ) ‘ರಿಟ್ ಅರ್ಜಿ’ಯನ್ನು ಗೃಹಿಸಿ ಯೋಗ್ಯ ನಿರ್ಣಯವನ್ನು ನೀಡುತ್ತಿದ್ದರೆ ಯೋಗ್ಯವಾಗುತ್ತಿತ್ತು. ಪೌರತ್ವ ಸುಧಾರಣಾ ಕಾನೂನಿನ (‘ಸಿಈ’ಯ) ಆಂದೋಲನದ ನಂತರ ರೈತರ ಆಂದೋಲನದ ನಿಮಿತ್ತದಲ್ಲಿ ದೇಶವನ್ನು ಅಸ್ಥಿರ ಗೊಳಿಸುವ ಷಡ್ಯಂತ್ರ ಇದಾಗಿದೆ. ಹಿಂಸಾಚಾರವು ದೇಶದ ಪ್ರಗತಿಗೆ ಅಡ್ಡಿ ಮಾಡುತ್ತದೆ. ಆದ್ದರಿಂದ ಈ ವಿಷಯಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕೆಂದು ಭಾರತೀಯರಿಗೆ ಅನಿಸುತ್ತದೆ.’
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೧೪.೨.೨೦೨೪)