ನ್ಯಾಯಾಲಯದ ನಿಂದನೆ; ವಕೀಲರಿಗೆ 4 ತಿಂಗಳ ಜೈಲು ಶಿಕ್ಷೆ

ನವದೆಹಲಿ – ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೆಹಲಿ ಉಚ್ಚನ್ಯಾಯಾಲಯವು ವಕೀಲರೊಬ್ಬರಿಗೆ 4 ತಿಂಗಳು ಶಿಕ್ಷೆ ಮತ್ತು 2 ಸಾವಿರ ರೂಪಾಯಿ ದಂಡ ವಿಧಿಸಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಈ ವಕೀಲರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಮೇ ತಿಂಗಳಲ್ಲಿ ಒಬ್ಬ ನ್ಯಾಯಾಧೀಶರು ವಕೀಲರ ವಿರುದ್ಧ ತಾವಾಗಿ ಕ್ರಿಮಿನಲ್ ನಿಂದನೆ ಪ್ರಕರಣವನ್ನು ದಾಖಲಿಸಿದ್ದರು; ಏಕೆಂದರೆ ವಕೀಲರು ನ್ಯಾಯಾಧೀಶರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದರು.

ನ್ಯಾಯಾಲಯವು, ವಕೀಲರು ಮಾಡಿರುವ ಟೀಕೆಗಳು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಗೆ ಮತ್ತು ನ್ಯಾಯಾಲಯದ ಅವಮಾನ ಮಾಡಲಾಗಿದೆ ಎಂದು ಹೇಳಿದೆ. ಆದ್ದರಿಂದ ಅವಮಾನಾಸ್ಪದ (ಅವಾಚ್ಯ)ಶಬ್ದ ಬಳಸಿದ ಪ್ರಕರಣದಲ್ಲಿ ವಕೀಲರನ್ನು ದೋಷಿ ಎಂದು ಪರಿಗಣಿಸಲಾಗಿದೆ. ಅವರು ಇಡೀ ನ್ಯಾಯಾಂಗ ವ್ಯವಸ್ಥೆಯ ಅಗೌರವ ಮಾಡಿದ್ದಲ್ಲದೆ ಅವರು ಯಾವುದೇ ಕ್ಷಮೆಯಾಚಿಸಲಿಲ್ಲ ಅಥವಾ ಅವರ ನಡವಳಿಕೆ ಬಗ್ಗೆ ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ. ಈ ನಡವಳಿಕೆಯು ತಿರಸ್ಕಾರದ್ದಾಗಿದ್ದು ವಕೀಲರೆಂದು ಅರ್ಹತೆ ಹೊಂದಿರುವ ಯಾವುದೇ ವ್ಯಕ್ತಿಯಿಂದ ಈ ರೀತಿಯ ಕೃತ್ಯ ಆಗುವುದಿಲ್ಲ. ಆದ್ದರಿಂದ, ಮೇಲಿನ ಹೇಳಿಕೆ ನೋಡಿದರೆ, ನ್ಯಾಯಾಲಯದ ನ್ಯಾಯಾಂಗ ಅಧಿಕಾರಿ, ಪೊಲೀಸ್ ಅಧಿಕಾರಿ ಮತ್ತು ನ್ಯಾಯಾಧೀಶರ ವಿರುದ್ಧ 30 ರಿಂದ 40 ದೂರು ದಾಖಲಿಸಿದ್ದರಿಂದ ನ್ಯಾಯಾಲಯಕ್ಕೆ ಅಪಕೀರ್ತಿತರುವುದು ಅವರ ಉದ್ದೇಶವಾಗಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂಗಳ ದೇವರು ಮತ್ತು ಶ್ರದ್ಧಾ ಸ್ಥಾನಗಳ ಅವಮಾನ ಮಾಡುವವರನ್ನು ಕೂಡಲೇ ಕಠಿಣವಾಗಿ ಶಿಕ್ಷಿಸಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನ್ನಿಸುತ್ತದೆ !