Malegaon blasts case : ಬದುಕಿದ್ದರೆ ನ್ಯಾಯಾಲಯದಲ್ಲಿ ಹಾಜರಾಗುತ್ತೇನೆ ! – ಸಾಧ್ವಿ ಪ್ರಜ್ಞಾ ಸಿಂಗ

ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ ಅವರಿಂದ ನ್ಯಾಯಾಲಯದ ವಾರಂಟ್ ಗೆ ಪ್ರತಿಕ್ರಿಯೆ

ಭೋಪಾಲ್ (ಮಧ್ಯಪ್ರದೇಶ) – ಮುಂಬಯಿಯ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯ) ನ್ಯಾಯಾಲಯವು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಜಾಮೀನು ವಾರಂಟ್ ಜಾರಿ ಮಾಡಿದೆ. ‘ಈ ವಾರಂಟ್ ನವೆಂಬರ್ 13ರ ವರೆಗೆ ಮರಳಿಸಬಹುದಾಗಿದೆ. ಇದಕ್ಕಾಗಿ ಪ್ರಜ್ಞಾ ಸಿಂಗ್ ನ್ಯಾಯಾಲಯಕ್ಕೆ ಬರಬೇಕಾಗುವುದು ಮತ್ತು ಅದನ್ನು ರದ್ದುಗೊಳಿಸಬೇಕಾಗುವುದು’, ಎಂದು ಹೇಳಿದೆ. ಇದಕ್ಕೆ ಸಾಧ್ವಿ ಪ್ರಜ್ಞಾ ಸಿಂಗ ತಮ್ಮ ಒಂದು ಛಾಯಾಚಿತ್ರವನ್ನು `ಎಕ್ಸ್’ ನಲ್ಲಿ ಪೋಸ್ಟ ಮಾಡಿ, `ಕಾಂಗ್ರೆಸ್ ಮಾಡಿದ ದೌರ್ಜನ್ಯವು ಕೇವಲ ಭಯೋತ್ಪಾದನಾ ವಿರೋಧಿ ದಳದ ಕೊಠಡಿಯ ವರೆಗೆ ಅಲ್ಲ, ನನ್ನ ಜೀವನ ಪೂರ್ತಿ ತೊಂದರೆಗೆ ಕಾರಣವಾಗಿದೆ. ಮೆದುಳಿನ ಊತ, ದೃಷ್ಟಿ ಮಾಂದ್ಯ, ಶ್ರವಣ ದೋಷ, ಮಾತಿನ ಅಸಮತೋಲನ, ‘ಸ್ಟಿರಾಯ್ಡ್’ ಮತ್ತು ‘ನ್ಯೂರೋ’ ಔಷಧಿಗಳಿಂದ ಸಂಪೂರ್ಣ ದೇಹದಲ್ಲಿ ಊತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಬದುಕಿದರೆ, ಖಂಡಿತಾ ನ್ಯಾಯಾಲಯಕ್ಕೆ ಹೋಗುತ್ತೇನೆ’. ಎಂದು ಬರೆದಿದ್ದಾರೆ.

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯವು ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಈ ವರ್ಷದ ಮಾರ್ಚ್‌ನಲ್ಲಿಯೂ ಬಂಧನದ ವಾರಂಟ್ ಹೊರಡಿಸಿತ್ತು. ವೈದ್ಯಕೀಯ ಕಾರಣಗಳಿಂದ ಅವರು ಕಳೆದ ಕೆಲವು ತಿಂಗಳುಗಳಿಂದ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.