Salman Rushdie: ಭಾರತದಲ್ಲಿ ಹೇರಿದ್ದ ಸಲ್ಮಾನ್ ರಶ್ದಿ ಇವರ ‘ದ ಸಟಾನಿಕ್ ವರ್ಸಸ್’ (ಸೈತಾನಿ ವಾಕ್ಯಗಳು) ಈ ಪುಸ್ತಕದ ಮೇಲಿನ ನಿಷೇಧ ತೆರವು !

ನಿಷೇಧದ ಅಧಿಸೂಚನೆ ನಾಪತ್ತೆಯಾಗಿದ್ದರಿಂದ ದೆಹಲಿ ಉಚ್ಚ ನ್ಯಾಯಾಲಯದ ಆದೇಶ

ಸಲ್ಮಾನ್ ರಶ್ದಿ

ನವ ದೆಹಲಿ – ಭಾರತದಲ್ಲಿ ೧೯೮೮ ರಲ್ಲಿ ವಿದೇಶಿ ಲೇಖಕ ಸಲ್ಮಾನ್ ರಶ್ಡಿ ಇವರ ‘ದ ಸಟಾನಿಕ್ ವರ್ಸಸ್’ (ಶೈತಾನಿನ ವಾಕ್ಯಗಳು) ಈ ಪುಸ್ತಕದ ಮೇಲೆ ನಿಷೇಧ ಹೇರಲಾಗಿತ್ತು. ಈಗ ಈ ನಿಷೇಧದ ಅಧಿಸೂಚನೆ ಸರಕಾರ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸದೆ ಇದ್ದರಿಂದ ದೆಹಲಿ ಉಚ್ಚ ನ್ಯಾಯಾಲಯವು ಪುಸ್ತಕದ ಮೇಲಿನ ನಿಷೇಧ ತೆರವುಗೊಳಿಸಿದೆ. ಉಚ್ಚ ನ್ಯಾಯಾಲಯವು, ‘ನಿಷೇದ ಹೇರಿರುವ ಅಧಿಸೂಚನೆ ಅಧಿಕಾರಿಗಳು ಪ್ರಸ್ತುತಪಡಿಸದೆ ಇದ್ದರಿಂದ ‘ಅದು ಅಸ್ತಿತ್ವದಲ್ಲಿ ಇಲ್ಲ’, ಎಂದು ತಿಳಿಯಲಾಗಿದೆ. ಇದರಿಂದ ಈಗ ಈ ಪುಸ್ತಕ ಭಾರತದಲ್ಲಿ ಆಮದು ಮಾಡಿ ಅದನ್ನು ಮಾರಾಟ ಮಾಡಲು ಸಾಧ್ಯವಾಗುವುದು.

ಏನಿದು ಪ್ರಕರಣ ?

೨೦೧೯ ರಲ್ಲಿ ಸಂದೀಪನ ಖಾನ್ ಎಂಬ ವ್ಯಕ್ತಿಯು ಈ ಪುಸ್ತಕ ಆಮದು ಮಾಡುವ ಸಂದರ್ಭದಲ್ಲಿ ಅರ್ಜಿ ದಾಖಲಿಸಿದ್ದರು. ಸಂದೀಪನ ಇವರು, ಅವರ ‘ದ ಸಟಾನಿಕ್ ವರ್ಸಸ್’ ಈ ಪುಸ್ತಕದ ಬೇಡಿಕೆ ನೀಡಿದ್ದರು; ಆದರೆ ೩೬ ವರ್ಷಗಳ ಹಿಂದೆ ಕಸ್ಟಮ್ಸ್ ಇಲಾಖೆಯು ಪ್ರಸಾರ ಮಾಡಿರುವ ಅಧಿಸೂಚನೆಯಿಂದ ಈ ಪುಸ್ತಕ ಆಮದು ಮಾಡಲು ಸಾಧ್ಯವಾಗಲಿಲ್ಲ. ಹಾಗೂ ಈ ಅಧಿಸೂಚನೆ ಯಾವುದೇ ಅಧಿಕೃತ ಜಾಲತಾಣದಲ್ಲಿ ಲಭ್ಯವಿರಲಿಲ್ಲ ಅಥವಾ ಅದಕ್ಕೆ ಸಂಬಂಧಿಸಿದ ದಾಖಲೆಗಳು ಯಾವುದೇ ಸಂಬಂಧಿತ ಅಧಿಕಾರಿಗಳ ಬಳಿ ಉಪಲಬ್ಧವಿರಲಿಲ್ಲ.

ಈ ಪುಸ್ತಕದಲ್ಲಿ ಏನು ಇದೆ ?

‘ದ ಸಟಾನಿಕ್ ವರ್ಸಸ್’ ಈ ಕಾದಂಬರಿಯ ಹಿಂದಿಯಲ್ಲಿನ ಅರ್ಥ ‘ಸೈತಾನಿ ಆಯತೇ’ ಹೇಗೆ ಇದೆ. ಈ ಪುಸ್ತಕದ ಹೆಸರಿನ ಕುರಿತು ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪುಸ್ತಕದಲ್ಲಿ ರಶ್ದಿ ಇವರು ಒಂದು ಕಾಲ್ಪನಿಕ ಕಥೆ ಬರೆದಿದ್ದರು. ಈ ಕಥೆ ಏನೆಂದರೆ, ಇಬ್ಬರೂ ಕಲಾವಿದರು ವಿಮಾನದಿಂದ ಮುಂಬಯಿಂದ ಲಂಡನಗೆ ಹೋಗುತ್ತಿದ್ದರು. ಅದರಲ್ಲಿನ ಓರ್ವನು ಎಂದರೆ ನಟ ಜಿಬ್ರಿಲ್ ಮತ್ತು ಇನ್ನೊಬ್ಬನು ಎಂದರೆ ‘ವಾಯ್ಸ್ ಓವರ್ ಆರ್ಟಿಸ್ಟ್’ ಸಲಾಉದ್ದೀನ್. ಒಬ್ಬ ಖಲೀಸ್ತಾನಿ ಭಯೋತ್ಪಾದಕನು ಈ ವಿಮಾನವನ್ನು ಅಪಹರಿಸುತ್ತಾನೆ. ಅದರ ನಂತರ ವಿಮಾನ ಅಟಲಾಂಟಿಕ ಮಹಾಸಾಗರದಿಂದ ಹೋಗುತ್ತಿರುವಾಗ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಪೋಟ ಮಾಡಿದನು. ಈ ಘಟನೆಯಲ್ಲಿ ಜಿಬ್ರಿಲ್ ಮತ್ತು ಸಲಾಉದ್ದೀನ್ ಇಬ್ಬರೂ ಸಮುದ್ರದಲ್ಲಿ ಬಿದ್ದರೂ, ಬದುಕುಳಿದರು. ಇದರ ನಂತರ ಇಬ್ಬರ ಆಯುಷ್ಯ ಕೂಡ ಬದಲಾಯಿತು. ಒಂದೇ ದಿನ ಒಂದು ವಿಶಿಷ್ಟ ಧರ್ಮದ ಸಂಸ್ಥಾಪಕರ ಜೀವನಕ್ಕೆ ಸಂಬಂಧಿಸಿದ ಕೆಲವು ಕಥೆಗಳು ಜಿಬ್ರಿಲಿನ ಕನಸಿನಲ್ಲಿ ಬರುತ್ತವೆ. ಅದರ ನಂತರ ಅವನು ಆ ಧರ್ಮದ ಇತಿಹಾಸ ನೂತನ ಪದ್ಧತಿಯಲ್ಲಿ ಮಂಡಿಸಲು ಯೋಚನೆ ಮಾಡುತ್ತಾನೆ. ಈ ಕಥೆಯಿಂದ ಇಸ್ಲಾಮಿಗೆ ಅವಮಾನ ಆಗಿದೆ ಎಂದು ಪುಸ್ತಕಕ್ಕೆ ವಿರೋಧವಾಯಿತು. ಈ ಕಾದಂಬರಿಯನ್ನು ನಿಷೇಧಿಸುವ ಭಾರತ ಮೊದಲ ದೇಶವಾಯಿತು. ಫೆಬ್ರುವರಿ ೧೯೮೯ ರಲ್ಲಿ ಮುಂಬಯಿಯಲ್ಲಿ ರಶ್ದಿ ಇವರ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಆ ಸಮಯದಲ್ಲಿ ಪೊಲೀಸರು ನಡೆಸಿರುವ ಗುಂಡಿನ ದಾಳಿಯಲ್ಲಿ ೧೨ ಜನರು ಸಾವನ್ನಪ್ಪಿದ್ದರು. ಹಾಗೂ ೪೦ ಕಿಂತಲು ಹೆಚ್ಚಿನ ಜನರು ಗಾಯಗೊಂಡಿದ್ದರು. ಇರಾನಿನ ಧರ್ಮಗುರು ಅಯಾತುಲ್ಲಾ ಖೋಮೇನಿ ಇವರು ೧೯೮೯ ರಲ್ಲಿ ರಶ್ದಿ ವಿರುದ್ಧ ಗಲ್ಲು ಶಿಕ್ಷೆಯ ಪತ್ವಾ ಹೊರಡಿಸಿದ್ದರು. ೨ ವರ್ಷಗಳ ಹಿಂದೆಯೇ ರಶ್ದಿ ಇವರ ಮೇಲೆ ಅಮೇರಿಕಾದಲ್ಲಿ ದಾಳಿ ನಡೆದಿತ್ತು. ಅದರಲ್ಲಿ ಅವರು ಒಂದು ಕಣ್ಣು ಕಳೆದುಕೊಂಡಿದ್ದಾರೆ.