ಮೀನುಗಾರರು ಭಾರತೀಯ ನೌಕಾಪಡೆಗೆ ಧನ್ಯವಾದ ಸಲ್ಲಿಸುತ್ತಾ, ‘ಹಿಂದುಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದರು
ನವದೆಹಲಿ : ಭಾರತೀಯ ನೌಕಾದಳವು ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿತು. ಇದಾದ ನಂತರ ಮೀನುಗಾರರು ನೌಕಾದಳಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆ ಮಾಡಿದರು. ಇದರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. 9 ಜನ ಕಡಲ್ಗಳ್ಳರು 23 ಪಾಕಿಸ್ತಾನಿ ಮೀನುಗಾರರನ್ನು ಒತ್ತೆಯಾಗಿಟ್ಟುಕೊಂಡಿದ್ದರು. ನೌಕಾದಳ ಮಾರ್ಚ್ 29 ರಂದು ಒಂದು ಕಾರ್ಯಾಚರಣೆಯನ್ನು ನಡೆಸಿ, ಅವರನ್ನು ಬಿಡಿಸಿದರು. ಹಿಂದೂ ಮಹಾಸಾಗರದ ಏಡನ ಕೊಲ್ಲಿಯಿಂದ ಅಲ್- ಕಂಬರ ಹೆಸರಿನ ಇರಾನಿ ಹಡಗಿನ ಅಪಹರಣವಾಗಿರುವ ಮಾಹಿತಿ ನೌಕಾದಳಕ್ಕೆ ಸಿಕ್ಕಿತ್ತು. ತದನಂತರ ಈ ಕಾರ್ಯಾಚರಣೆಯನ್ನು ಕೈಕೊಳ್ಳಲಾಗಿತ್ತು.
Successful Anti-Piracy Operation by the #IndianNavy.
After successfully forcing surrender of the nine armed pirates, #IndianNavy’s specialist teams have completed sanitisation & seaworthiness checks of FV Al-Kambar.
The crew comprising 23 Pakistani nationals were given a thorough… https://t.co/APEyIWmU9e pic.twitter.com/c6TbfL4Jrc— SpokespersonNavy (@indiannavy) March 30, 2024
ರಕ್ಷಣಾ ಕಾರ್ಯಾಚರಣೆಯಾದ ಬಳಿಕ ಪ್ರಸಾರವಾದ ವಿಡಿಯೋದಲ್ಲಿ ಓರ್ವ ವ್ಯಕ್ತಿ `ನಾನು ಅಮೀರ ಖಾನ ಆಗಿದ್ದು, ನಾನು ಈ ಹಡಗಿನ ಮುಖ್ಯಸ್ಥನಾಗಿದ್ದೇನೆ. ನಾವು ಇರಾನನಿಂದ ಬರುತ್ತಿರುವಾಗ ಸೊಮಾಲಿಯಾ ಕಡಲ್ಗಳ್ಳರು ನಮ್ಮ ಹಡಗನ್ನು ಅಪರಹರಣ ಮಾಡಿದ್ದರು. ಮಾರ್ಚ 29 ರಂದು ಮಧ್ಯಾಹ್ನ 3 ಗಂಟೆಗೆ ಭಾರತೀಯ ನೌಕಾದಳವು ನಮಗೆ ಸಹಾಯ ಮಾಡಲು ಪ್ರಾರಂಭಿಸಿತು. ಅವರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರು. ಭಾರತೀಯ ನೌಕಾದಳಕ್ಕೆ ಕೃತಜ್ಞತೆ. ಹಿಂದೂಸ್ಥಾನ ಜಿಂದಾಬಾದ’ ೆಂದು ಹೇಳುತ್ತಿರುವುದು ಕಂಡು ಬರುತ್ತಿದೆ.