ನೌಕೆಯಲ್ಲಿದ್ದ ೨೩ ಪಾಕಿಸ್ತಾನಿ ನಾಗರಿಕರ ಬಿಡುಗಡೆ
ಮುಂಬಯಿ – ಅರಬ್ಬೀ ಸಮುದ್ರದಲ್ಲಿದ್ದ ಕಡಲ್ಗಳ್ಳರಿಂದ ಇರಾನಿನ ನೌಕೆಯನ್ನು ಭಾರತೀಯ ನೌಕಾಪಡೆಯು ೨೧ ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ವಿಶೇಷವೆಂದರೆ ಇರಾನ್ ನೌಕೆಯಲ್ಲಿ ಪಾಕಿಸ್ತಾನದ ೨೩ ನಾಗರಿಕರು ಸಹ ಇದ್ದರು.
#INSSumedha intercepted FV Al-Kambar during early hours of #29Mar 24 & was joined subsequently by the guided missile frigate #INSTrishul.
After more than 12 hrs of intense coercive tactical measures as per the SOPs, the pirates on board the hijacked FV were forced to surrender.… https://t.co/2q3Ihgk1jn pic.twitter.com/E2gtTDHVKu
— SpokespersonNavy (@indiannavy) March 29, 2024
ನೌಕಾಪಡೆ ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್ ೨೮ ರ ಸಂಜೆ ಕಡಲ್ಗಳ್ಳರು ಇರಾನಿನ ಮೀನುಗಾರಿಕಾ ನೌಕೆ ‘ ಅಲ್ ಕಂಬಾರ ೭೮೬ ‘ ಅನ್ನು ಅಪಹರಿಸಿದ್ದರು. ಈ ಮಾಹಿತಿಯ ಆಧಾರವಾಗಿ ಭಾರತೀಯ ನೌಕಾಪಡೆ ‘ಐ.ಎನ್.ಎಸ್ .ಸುಮೇಧ ‘ ಮತ್ತು ‘ಐ.ಎನ್.ಎಸ್. ತ್ರಿಶೂಲ’ ಈ ೨ ಯುದ್ಧ ನೌಕೆಗಳು ಇರಾನ್ ನೌಕೆಯ ಸಹಾಯಕ್ಕೆ ತಲುಪಿದವು. ೨೧ ಗಂಟೆಗಳ ಕಾರ್ಯಾಚರಣೆಯ ನಂತರ ಕಡಲ್ಗಳ್ಳರು ಭಾರತೀಯ ನೌಕಾಪಡೆಗೆ ಶರಣಾದರು.