ಮನೋರೋಗಗಳಿಗೆ ಸ್ವೇಚ್ಛೆಯೇ ಮೂಲ ಕಾರಣ !
‘ತನ್ನ ಇಚ್ಛೆಯಂತೆ ಆಗದಿದ್ದರೆ, ಮಾನಸಿಕ ಒತ್ತಡ ಹೆಚ್ಚಾಗಿ ಮುಂದೆ ಅನೇಕ ವಿಧದ ಮನೋರೋಗಗಳು ಬರುತ್ತವೆ. ಹಾಗಾಗಿ ಈಗಿನ ಮಾನಸೋಪಚಾರತಜ್ಞರು ಅವುಗಳಿಗೆ ವಿವಿಧ ಪರಿಹಾರಗಳನ್ನು ಹೇಳುತ್ತಾರೆ; ಆದರೆ ಸ್ವೇಚ್ಛೆಯನ್ನೇ ಇಟ್ಟುಕೊಳ್ಳಬಾರದು ಎಂದು ಯಾರೂ ಕಲಿಸುವುದಿಲ್ಲ. ಇದರಿಂದ ಇಡೀ ಜಗತ್ತಿನಲ್ಲಿ ಇಂತಹ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ವಸ್ವದ ತ್ಯಾಗ ವನ್ನು ಮಾಡಿದಂತಹ ಋಷಿ-ಮುನಿಗಳು ಮತ್ತು ಸಂತರಿಗೆ ಎಂದಿಗೂ ಮನೋರೋಗಗಳು ಆಗಲಿಲ್ಲ. ತದ್ವಿರುದ್ಧ ಅವರು ಸದಾಕಾಲ ಸಚ್ಚಿದಾನಂದ ಅವಸ್ಥೆಯಲ್ಲಿ ಇರುತ್ತಿದ್ದರು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ