ಸನಾತನ ಸಂಸ್ಥೆಯ ಬಗ್ಗೆ ಗಣ್ಯರ ಅಭಿಪ್ರಾಯಗಳು !

ಸನಾತನ ಸಂಸ್ಥೆಯು ಭಾರತೀಯರನ್ನು ಸುಶಿಕ್ಷಿತರನ್ನಾಗಿಸುವ ಕೆಲಸವನ್ನು ಮಾಡುತ್ತದೆ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಸನಾತನ ಸಂಸ್ಥೆಯು ಅನೇಕ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಅದರಲ್ಲಿ ‘ಸನಾತನ ಪ್ರಭಾತ ನಿಯತಕಾಲಿಕೆಗಳ ಪ್ರಕಾಶನ ಇದು ಬಹಳ ಮಹತ್ವದ್ದಾಗಿದೆ. ಸಂಸ್ಥೆಯ ಈ ಎಲ್ಲ ಪತ್ರಿಕೆಗಳು ‘ಹಾರ್ಡ್‌ಕಾಪಿ ಮತ್ತು ‘ಈ-ಕಾಪಿಗಳಲ್ಲಿ ಲಭ್ಯ ಇವೆ. ಅದರಲ್ಲಿ ರಾಷ್ಟ್ರ-ಧರ್ಮ ಸ್ತಂಭಗಳಲ್ಲಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ವಿವಿಧ ಲೇಖನಗಳು ಪ್ರಕಾಶನವಾಗುತ್ತವೆ, ಹಾಗೆಯೇ ಸಂಪಾದಕೀಯ ಸಹ ಇರುತ್ತದೆ. ಅದರಲ್ಲಿ ಬಹಳ ಮಹತ್ವಪೂರ್ಣ ಬರಹಗಳನ್ನು ಮಾಡಲಾಗುತ್ತದೆ. ಅದರ ಅರ್ಥ ಹೀಗಿದೆ, ಭಾರತದ ಸುರಕ್ಷತೆಯು ದೇಶದ ನಾಗರಿಕರು ಎಷ್ಟು ಜಾಗರೂಕರಾಗಿದ್ದಾರೆ, ಎಂಬುದರ ಮೇಲೆ ಅವಲಂಬಿಸಿರುತ್ತದೆ. ಈಗ ದೇಶವನ್ನು ರಕ್ಷಿಸುವುದು ಕೇವಲ ಪೊಲೀಸರ ಅಥವಾ ಸೈನಿಕರ ಜವಾಬ್ದಾರಿಯಾಗಿಲ್ಲ. ಸುರಕ್ಷೆಯ ಸವಾಲುಗಳು ಪ್ರತಿಯೊಂದು ಕ್ಷೇತ್ರದಲ್ಲಿವೆ. ಆರ್ಥಿಕ ಸುರಕ್ಷತೆ, ಆರ್ಥಿಕ ಯುದ್ಧ, ಸೈಬರ್ ಯುದ್ಧ, ಅಪಪ್ರಚಾರ ಯುದ್ಧ ಇಂತಹ ವಿವಿಧ ಪ್ರಕಾರದ ಯುದ್ಧಗಳನ್ನು ಚೀನಾ ಮತ್ತು ಪಾಕಿಸ್ತಾನದಂತಹ ಶತ್ರುರಾಷ್ಟ್ರಗಳು ದೇಶದ ವಿರುದ್ಧ ನಡೆಸುತ್ತವೆ. ಅವುಗಳನ್ನು ಎದುರಿಸಬೇಕಾಗಿದ್ದರೆ ಕೇವಲ ಸುರಕ್ಷೆಯ ವ್ಯವಸ್ಥೆಗಳಿಂದ ಕೆಲಸವಾಗಲಾರದು, ಅದರಲ್ಲಿ ಪ್ರತಿಯೊಬ್ಬ ಭಾರತೀಯನ ಕೊಡುಗೆಯು ಬಹಳ ಮಹತ್ವದ್ದಾಗಿದೆ. ಅದಕ್ಕನುಗುಣವಾಗಿ ಸಮಾಜಕ್ಕೆ ಶಿಕ್ಷಣ ನೀಡುವ ಕೆಲಸವನ್ನು ‘ಸನಾತನ ಪ್ರಭಾತ ಪತ್ರಿಕೆ ಮತ್ತು ಸನಾತನ ಸಂಸ್ಥೆಯು ಮಾಡುತ್ತಿವೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು ಮತ್ತು ಸನಾತನ ಸಂಸ್ಥೆಯ ವಿವಿಧ ಉಪಕ್ರಮ ಗಳಿಗಾಗಿ ಅವರಿಗೆ ಮತ್ತೊಮ್ಮೆ ಮನಃಪೂರ್ವಕ ಶುಭೇಚ್ಛೆಗಳು ! – ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ

ಪೊಲೀಸ್ ಇಲಾಖೆ ಮತ್ತು ಇತರರಿಂದ ಗೌರವೋದ್ಗಾರ !

‘ಸನಾತನದ ಮೆರವಣಿಗೆಯೆಂದರೆ ನಮಗೆ ಚಿಂತೆಯೇ ಇಲ್ಲ, ಎಂಬ ಉದ್ಗಾರವನ್ನು ಅನೇಕ ಸ್ಥಳಗಳಲ್ಲಿ ಪೊಲೀಸರು ಯಾವಾಗಲೂ ತೆಗೆಯುತ್ತಾರೆ. ಸನಾತನದ ಸಾಧಕರು ಸಮಾಜ ಅಥವಾ ರಾಷ್ಟ್ರ-ಧರ್ಮ ವಿಷಯದಲ್ಲಿ ಏನಾದರೂ ಮನವಿ ಸಲ್ಲಿಸಲು ಹೋದರೆ ಪೊಲೀಸರು,  ಮುಖ್ಯೋಪಾಧ್ಯಾಯರು ಅಥವಾ ಜನಪ್ರತಿನಿಧಿಗಳು, ‘ನಿಮ್ಮ  ಉಪಕ್ರಮ ಬಹಳ ಚೆನ್ನಾಗಿರುತ್ತವೆ, ಎಂದು ಗೌರವದಿಂದ ಹೇಳುತ್ತಾರೆ ಮತ್ತು ಅವರ ಸ್ಥಳದಲ್ಲಿ ಪ್ರವಚನ ತೆಗೆದುಕೊಳ್ಳುವಂತೆ ಆಮಂತ್ರಣವನ್ನೂ ನೀಡುತ್ತಾರೆ.

ಹಿಂದೂ ರಾಷ್ಟ್ರ ನಿರ್ಮಿತಿಯ ಸನಾತನ ಸಂಸ್ಥೆಯ ಕನಸು ಬೇಗ ನನಸಾಗಲಿ !

ಶ್ರೀ. ಚಕ್ರವರ್ತಿ ಸೂಲಿಬೆಲೆ

 

ನಾನು ನನ್ನ ಕಾಲೇಜು ದಿನಗಳಿಂದ ಸನಾತನ ಸಂಸ್ಥೆಯನ್ನು ಅನುಸರಿಸುತ್ತಿದ್ದೇನೆ. ಆಗ ಸಂಸ್ಥೆಯ ಸಾಪ್ತಾಹಿಕ ಸತ್ಸಂಗಗಳಿಗೆ ಹೋಗುತ್ತಿರುವುದು ನೆನಪಿದೆ. ಈಗ ಇಪ್ಪತ್ತೈದು ವರ್ಷ ಕಳೆದವು ಎಂದರೆ ಖುಷಿ ಅನಿಸುತ್ತದೆ. ಸಮಾಜದ ಮೂಲೆ ಮೂಲೆಯ ಹಿಂದೂಗಳನ್ನು ಸಂಘಟಿಸಿ, ಹಿಂದೂಗಳಿಗೆ ಏನಾದರೂ ಸಮಸ್ಯೆ ಆದಾಗ ಒಕ್ಕೊರಳಲ್ಲಿ ಪ್ರತ್ಯುತ್ತರಿಸುವಂತಹ ವಾತಾವರಣ ರೂಪಿಸುವ ಸನಾತನ ಸಂಸ್ಥೆಯು ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಮಾರ್ಗಕ್ರಮಣದಲ್ಲಿ ನಾನು ಕೂಡ ಹೆಜ್ಜೆಯಾಗಿದ್ದೇನೆ ಎಂಬುದಕ್ಕೆ ಬಹಳ ಖುಷಿಯೆನಿಸುತ್ತದೆ. ನಾಮಜಪ ಮಾಡಿಸಲು ಶುರುವಾದ ಒಂದು ಸಂಸ್ಥೆ ಇವತ್ತು ಹಿಂದೂ ಸಮಾಜದ ಉಳಿವಿಗಾಗಿ ಈ ಪರಿಯ ಹೋರಾಟ ನೋಡಿದಾಗ ಭಗವಂತನ ಕೃಪೆ ಎಷ್ಟರ ಮಟ್ಟಿಗೆ ಈ ಸಂಸ್ಥೆಯ ಮೂಲಕ ಹರಿಯುತ್ತಿದೆ ಎಂಬುದು ಗೊತ್ತಾಗುತ್ತದೆ. ೨೫ ವರ್ಷ ಇರೋದು ಇನ್ನು ೨೫೦ ವರ್ಷವೂ ಆಗಲಿ ಎಂದು ನಾನು ಅತ್ಯಂತ ಪ್ರೀತಿಯಿಂದ ಹಾರೈಸುತ್ತೇನೆ. ಹಿಂದೂ ರಾಷ್ಟ್ರದ ಸನಾತನ ಸಂಸ್ಥೆಯ ಕನಸು ಬಹಳ ಬೇಗ ಈಡೇರಲಿ. – ಶ್ರೀ. ಚಕ್ರವರ್ತಿ ಸೂಲಿಬೆಲೆ, ಖ್ಯಾತ ವಾಗ್ಮಿ ಹಾಗೂ ‘ಯುವಾ ಬ್ರಿಗೇಡ್ನ ಸಂಸ್ಥಾಪಕರು, ಬೆಂಗಳೂರು.

ಧರ್ಮದ ಒಳಿತಿಗೆ, ಸಂರಕ್ಷಣೆಗೆ ಸನಾತನವು ತನ್ನ ಕೊಡುಗೆ ನೀಡುತ್ತಿದೆ !

ಡಾ. ಎಸ್.ಆರ್. ಲೀಲಾ

ಅತ್ಯದ್ಭುತ ಕಾರ್ಯ ಮಾಡುವ ಸನಾತನ ಸಂಸ್ಥೆಗೆ ಧನ್ಯವಾದಗಳು. ಅವರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಅಂದ ಹಾಗೆ ಏನಿದು ಸನಾತನ ಸಂಸ್ಥೆ ? ಸನಾತನ ಎಂದರೆ ಶಾಶ್ವತವಾದುದು. ಆದ್ದರಿಂದ ಅವರು ಈ ಧರ್ಮದ ಶಾಶ್ವತ ಪ್ರಕೃತಿಯ ಜೋಪಾಸನೆಗಾಗಿ ಶಾಶ್ವತ ಸ್ವರೂಪದ ಕಾರ್ಯ ಮಾಡುತ್ತಿದ್ದಾರೆ. ಸನಾತನ ಧರ್ಮವು ಈ ದೇಶದ ಅಂದರೆ ಭಾರತದ, ಹಿಂದೂಸ್ಥಾನದ ಧರ್ಮವಾಗಿದೆ. ಆದರೆ ಸನಾತನ ಧರ್ಮವನ್ನು ಗೌರವಿಸುವವರ ಸಂಖ್ಯೆ ಬಹಳ ಕಡಿಮೆ. ಸನಾತನ ಧರ್ಮವನ್ನು ಅನುಸರಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಕೊಂಡರೂ ನಿಜವಾಗಿ ಈ ಧರ್ಮವನ್ನು ಅರ್ಥಮಾಡಿಕೊಳ್ಳುವ, ಮೆಚ್ಚುವ ಮತ್ತು ಪೂಜಿಸುವ ಜನರು ಬಹಳ ಕಡಿಮೆ. ಆದುದರಿಂದ ಸನಾತನ ಧರ್ಮದ ರಕ್ಷಣೆಗಾಗಿ ಮತ್ತು ಉನ್ನತಿಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರನ್ನು, ಸನಾತನ ಧರ್ಮದ ಉನ್ನತಿಗಾಗಿ ಶ್ರಮಿಸುವವರನ್ನು ಅಭಿನಂದಿಸಲೇ ಬೇಕು, ಆ ಎಲ್ಲಾ ಸನಾತನಿಗಳಿಗೆ ಕೃತಜ್ಞತೆ ಯನ್ನು ಸಲ್ಲಿಸಲೇಬೇಕು. ಇಂದು ನಾವೆಲ್ಲ ನೋಡುತ್ತಿರುವ ಹಾಗೆ ಸನಾತನ ಧರ್ಮದ ಮೇಲೆ ವಿವಿಧ ದಿಕ್ಕುಗಳಿಂದ ಹಲವಾರು ಜನರು ಹಲವು ರೀತಿಯ ದಾಳಿ ನಡೆಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ, ಅದರ ಹೊರತಾಗಿಯೂ ಈ ಸನಾತನ ಸಂಸ್ಥೆಯವರು ಈ ಕಾರ್ಯವನ್ನು ತಮ್ಮದು ಎಂದು ತಿಳಿದು ತಮ್ಮನ್ನು ಸಂಪೂರ್ಣವಾಗಿ ಈ ಕಾರ್ಯ ದೊಂದಿಗೆ ಏಕರೂಪವಾಗಿದ್ದಾರೆ.ವಾಸ್ತವ ವಾಗಿ ಸನಾತನ ಧರ್ಮವು ಬಹಳ ಸುಂದರ ಮನೋಭಾವದ ಧರ್ಮವಾಗಿದೆ. ಇದು ಕೇವಲ ಹಕ್ಕುಗಳ ಬಗ್ಗೆ ಮಾತ್ರವಲ್ಲ, ನಿಮ್ಮ ಕರ್ತವ್ಯಗಳನ್ನು ನೀವು ನಿರ್ವಹಿಸಬೇಕೆಂದು ಬೋಧಿಸುತ್ತದೆ. ಅದನ್ನೇ ಸನಾತನವು ತನ್ನ ಆಚರಣೆಗಳಿಂದ, ತನ್ನ ಪ್ರಕಾಶನಗಳಿಂದ ಮಾಡುತ್ತಿದೆ, ತನ್ನ ಸಾಧಕರಿಂದ ಮಾಡಿಸುತ್ತಿದೆ. ಹಲವರು ತಮ್ಮದೇ ಆದ ರೀತಿ ಸನಾತನದ ಒಳಿತಿಗಾಗಿ, ಸಂರಕ್ಷಣೆ ಗಾಗಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಆದುದರಿಂದ ಸನಾತನ ಧರ್ಮವನ್ನು ಮತ್ತು ಅದಕ್ಕಾಗಿ ಶ್ರಮಿಸುತ್ತಿರುವ ಸನಾತನ ಸಂಸ್ಥೆಯನ್ನು ಅಭಿನಂದಿಸಬೇಕು ಎಂದು ನಾನು ಮನಃಪೂರ್ವಕ ಭಾವಿಸುತ್ತೇನೆ. ಮತ್ತು ಸಂಸ್ಥೆಯ ಮಹತ್ತರ ಕಾರ್ಯವನ್ನು ಬಹಳ ಗೌರವಿಸ ಬೇಕು. ಧನ್ಯವಾದಗಳು ! – ಡಾ. ಎಸ್.ಆರ್. ಲೀಲಾ, ಲೇಖಕರು, ಬೆಂಗಳೂರು.