ಧರ್ಮಯುದ್ದದಲ್ಲಿ ನ್ಯಾಯವಾದಿ ಜೈನ ತಂದೆ-ಪುತ್ರರ ಯೋಗದಾನ !

(ಎಡದಿಂದ) ನ್ಯಾಯವಾದಿ ವಿಷ್ಣು ಶಂಕರ ಜೈನ್‌ ಮತ್ತು ಪೂ. (ನ್ಯಾಯವಾದಿ) ಹರಿ ಶಂಕರ ಜೈನ್‌

‘ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಶ್ರೀರಾಮಮಂದಿರದಲ್ಲಿ ಇತ್ತೀಚೆಗೆ ಪ್ರಭು ಶ್ರೀರಾಮರ ಮೂರ್ತಿಯ ಪ್ರಾಣಪ್ರತಿಷ್ಠಾಪನಾ ಸಮಾರಂಭ ನೆರವೇರಿತು. ಅದರ ಬಗ್ಗೆ ದೇಶದಾದ್ಯಂತ ದೊಡ್ಡ ಆನಂದೋತ್ಸವನ್ನು ಆಚರಿಸಲಾಯಿತು. ಈ ಶ್ರೀರಾಮಮಂದಿರಕ್ಕಾಗಿ ನಡೆದ ಸಂಘರ್ಷದಲ್ಲಿ ಅನೇಕರ ಯೋಗದಾನವಿದೆ; ಆದರೆ ಅದಕ್ಕಾಗಿ ಯಾರಾದರೂ ಅತೀ ಹೆಚ್ಚು ಶ್ರಮಪಟ್ಟವರಿದ್ದರೆ ಅವರು ಧರ್ಮಾಭಿಮಾನಿ ತಂದೆ-ಮಗ ಪೂ. ನ್ಯಾಯವಾದಿ ಹರಿಶಂಕರ ಜೈನ್‌ ಮತ್ತು ನ್ಯಾಯವಾದಿ ವಿಷ್ಣುಶಂಕರ ಜೈನ್. ಕೇವಲ ಶ್ರೀರಾಮಮಂದಿರ ಮಾತ್ರವಲ್ಲ, ಕಾಶೀ, ಮಥುರಾಗಳಿಗಾಗಿಯೂ ಅವರ ಹೋರಾಟ ನಡೆದಿದೆ. ಆದ್ದರಿಂದ ದೇಶದಲ್ಲಿ ಅವರನ್ನು ‘ಟೆಂಪಲ್‌ ವಾರಿಯರ್ಸ್‌’ (ಮಂದಿರಗಳ ಯೋಧರು) ಎಂದು ಗುರುತಿಸಲಾಗುತ್ತಿದೆ. ಧರ್ಮಕ್ಕಾಗಿ ಹೋರಾಡುವಾಗ ಅವರಿಗೆ ಬಂದಿರುವ ಅನುಭವಗಳನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ಹಿಂದೂ ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡಿರುವ ಪೂ. (ನ್ಯಾಯವಾದಿ) ಹರಿ ಶಂಕರ ಜೈನ್‌ !

೧. ಚಿಕ್ಕಂದಿನಿಂದಲೂ ‘ಹಿಂದೂ ರಾಷ್ಟ್ರ’ದ ಸ್ಥಾಪನೆಗಾಗಿ ಹೋರಾಡುವ ಧ್ಯಾಸ !

ಮೊಗಲರ ಕಾಲದಲ್ಲಿ ಯಾವ ಯಾವ ಹಿಂದೂ ಮಂದಿರಗಳು ಮಸೀದಿಗಳಾಗಿವೆಯೋ, (ಮಂದಿರಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆಯೋ) ಆ ಎಲ್ಲ ಮಂದಿರಗಳನ್ನು ಹಿಂಪಡೆಯಲಿಕ್ಕಿದೆ ಹಾಗೂ ಇನ್ನೂ ಮುಂದೆ ಹೋಗಿ ಹಿಂದೂ ರಾಷ್ಟ್ರದ ಸಂಕಲ್ಪವನ್ನು ಸಾಕಾರಗೊಳಿಸಲಿಕ್ಕಿದೆ’, ಎನ್ನುವ ಬೋಧನೆಯನ್ನು ನನ್ನ ತಾಯಿ ನನಗೆ ನಾನು ೧೦ ವರ್ಷದವನಿರುವಾಗಲೇ ನೀಡಿದ್ದರು. ನನ್ನ ತಂದೆ ಗಾಂಧಿವಾದಿ ಅಥವಾ ಜಾತ್ಯತೀತವಾದಿ ವಿಚಾರಶೈಲಿಯವರಾಗಿದ್ದರು. ಆದ್ದರಿಂದ ಅವರು ಈ ವಿಷಯವನ್ನು ವಿರೋಧಿಸುತ್ತಿದ್ದರು. ನನ್ನ ಶಿಕ್ಷಣ, ವಿವಾಹ ಇತ್ಯಾದಿಗಳಲ್ಲಿ ಸಾಕಷ್ಟು ಸಮಯ ಕಳೆಯಿತು. ೧೯೮೬ ರಲ್ಲಿ ಶ್ರೀರಾಮಜನ್ಮಭೂಮಿಯ ಬೀಗ ತೆರೆದಾಗ ದೇಶದಲ್ಲಿ ಹಿಂದುತ್ವದ ಒಂದು ಅಲೆ ಎದ್ದಿತು. ಆಗ ನನಗೆ, ‘ನನ್ನ ತಾಯಿ ನನಗೆ ನೀಡಿರುವ ಬೋಧನೆಯ ಕಾಲ ಪಕ್ವವಾಗಿದೆ ಹಾಗೂ ನಾವು ಏನಾದರೂ ಮಾಡಬೇಕು’ ಎಂದು ಅನಿಸಿತು. ಅಂದಿನಿಂದ ನಾನು ಈ ಕಾರ್ಯದಲ್ಲಿ ಸಕ್ರಿಯವಾಗಲು ಪ್ರಯತ್ನ ಆರಂಭಿಸಿದೆನು. ೧೦ ಜುಲೈ ೧೯೮೯ ರಂದು ‘ಶ್ರೀರಾಮಜನ್ಮಭೂಮಿಗೆ ಸಂಬಂಧಿಸಿದ ಎಲ್ಲ ಖಟ್ಲೆಗಳು ಇನ್ನು ಉಚ್ಚ ನ್ಯಾಯಾಲಯದಲ್ಲಿ ನಡೆಯುವವು’, ಎಂದು ಉಚ್ಚ ನ್ಯಾಯಾಲಯದ ಲಖ್ನೌ ವಿಭಾಗೀಯ ಪೀಠ ಆದೇಶ ನೀಡಿತು. ಈ ಖಟ್ಲೆಯು ಉಚ್ಚ ನ್ಯಾಯಾಲಯಕ್ಕೆ ಬಂದಿತು. ಆಗ ನನ್ನ ಅದೃಷ್ಟದಿಂದ ಹಿಂದೂ ಮಹಾಸಭೆಯು ನನ್ನನ್ನು ತನ್ನ ವಕೀಲನೆಂದು ನೇಮಿಸಿತು. ನಾನು ೧೯೯೧ ರಲ್ಲಿ ಶ್ರೀರಾಮಜನ್ಮಭೂಮಿ ಪ್ರಕರಣದ ಲಿಖಿತ ಅಂಶವನ್ನು ನ್ಯಾಯಾಲಯದಲ್ಲಿ ದಾಖಲಿಸಿದೆ ಹಾಗೂ ನಾನು ಹಿಂದೂ ಮಹಾಸಭೆಯ ಮೂಲಕ ಶ್ರೀರಾಮಮಂದಿರದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದೆನು.

ನಾನು ಅಯೋಧ್ಯೆಯ ಪ್ರಕರಣದಲ್ಲಿ ನನ್ನನ್ನು ತೊಡಗಿಸಿ ಕೊಂಡಾಗ ಅದಕ್ಕೆ ನನ್ನ ತಂದೆಯ ವಿರೋಧವಿತ್ತು. ಅವರು, ”ಇವನು ತುಂಬಾ ತಪ್ಪು ಮಾಡಿದನು” ಎಂದು ಹೇಳಿದರು. ತಾಯಿ ನನಗೆ, ”ನೀನು ಮಾಡುವುದು ಯೋಗ್ಯವಾಗಿದೆ. ನಾನು ಅವರಿಗೆ ಮನವರಿಕೆ ಮಾಡಿಸುತ್ತೇನೆ’ ಎಂದು ಹೇಳಿದರು. ನನ್ನ ಹಿಂದೆ ಒಂದು ಪ್ರೇರಣೆ ಇತ್ತು, ಅದಕ್ಕೆ ನಾವು ಈಶ್ವರೀ ಶಕ್ತಿಯೆಂದು ಹೇಳಬಹುದು. ನಾನು ೧೦-೧೨ ವರ್ಷದವನಾಗಿದ್ದಾಗಿನಿಂದ ‘ನಾನು ಹಿಂದುತ್ವಕ್ಕಾಗಿ ಏನಾದರೂ ಮಾಡಬೇಕು’, ಎನ್ನುವ ಛಲವಿತ್ತು. ‘ಮಕ್ಕಳ ಪಾಲನೆ ಪೋಷಣೆ ಆಗಲಿ, ಆಗದಿರಲಿ, ಮನೆ ಹಾಳಾದರೂ ಚಿಂತೆಯಿಲ್ಲ; ಆದರೆ ನಾನು ಒಂದು ಪ್ರತಿಜ್ಞೆ ಮಾಡಿದ್ದೆನು, ಅದನ್ನು ಪೂರ್ಣಗೊಳಿಸಲೇಬೇಕು’, ಎನ್ನುವ ಧ್ಯಾಸ ನನ್ನ ಮನಸ್ಸಿನಲ್ಲಿ ಹುದುಗಿತ್ತು.

೨. ‘ಅವಮಾನದಿಂದ ಸನ್ಮಾನ’ ಎಂಬ ಕಠೋರ ಪ್ರವಾಸ

ಒಂದು ಕಾಲವಿತ್ತು, ಆಗ ಹಿಂದುತ್ವದ ಕಾರ್ಯ ಮಾಡುತ್ತಿರುವಾಗ ಸಂಬಂಧಿಕರು ಹಾಗೂ ಸಮಾಜದ ಪ್ರತಿಕ್ರಿಯೆ ಅತ್ಯಂತ ನಕಾರಾತ್ಮಕವಾಗಿತ್ತು. ಆಗ ಅನೇಕ ಜನರು ನನ್ನತ್ತ ತುಚ್ಛವಾಗಿ ನೋಡುತ್ತಿದ್ದರು. ಎಲ್ಲರೂ ನನ್ನನ್ನು ಹುಚ್ಚನೆಂದು ನಿರ್ಧರಿಸಿದ್ದರು. ಜನರು ನನ್ನ ಮುಂದೆಯೆ ನನ್ನ ಮಗನಿಗೆ (ವಕೀಲ ವಿಷ್ಣು ಶಂಕರ ಜೈನ್‌ಗೆ) ‘ನೀನು ಇವರ ಮಾರ್ಗದಲ್ಲಿ ಹೋದರೆ, ನೀನೂ ನಷ್ಟವಾಗುತ್ತೀಯ’, ಎಂದು ಮೂದಲಿಸುತ್ತಿದ್ದರು. ದೊಡ್ಡ ಹುದ್ದೆಯಲ್ಲಿನ ಜನರು ಅವನಿಗೆ, ‘ನೀನು ತಂದೆಯ ಹಾಗಾಗಬೇಡ ಮಗ !’ ಎಂದು ಹೇಳುತ್ತಿದ್ದರು. ಅನೇಕ ಜನರು ನನ್ನನ್ನು ತಮ್ಮ ಕಾರ್ಯಾಲಯಕ್ಕೆ ಕರೆಯಲು ಹಿಂದೇಟು ಹಾಕುತ್ತಿದ್ದರು. ‘ಇವರನ್ನು ಕರೆದರೆ ನಮಗೆ ಕೋಮುವಾದಿ ಅಥವಾ ಹಿಂದುತ್ವನಿಷ್ಠರೆಂದು ಮುದ್ರೆ ಬೀಳಬಹುದು. ಇವರು ಬಂದರೆ ನಮ್ಮ ಮನೆಗೆ ಪೊಲೀಸರು ಬರಬಹುದು’, ಎಂದು ಅವರಿಗೆ ಅನಿಸುತ್ತಿತ್ತು. ಜನರಿಗೆ ‘ವಕೀಲ ಜೈನ್‌ ‘ಹಿಟ್‌ಲಿಸ್ಟ್‌’ನಲ್ಲಿ (ಅಪರಾಧಿ ಅಥವಾ ರಾಜಕೀಯ ಕಾರಣಕ್ಕಾಗಿ ಕೊಲೆಯಾಗುವ ಪಟ್ಟಿ) ಇದ್ದಾರೆ. ಆದ್ದರಿಂದ ನಮ್ಮ ಹೆಸರು ಕೂಡ ಅದರಲ್ಲಿ ಬರುವುದು ಬೇಡ’, ಎಂದು ಅನಿಸುತ್ತಿತ್ತು.

ನಾನು ‘ವಿಶ್ವಹಿಂದೂ ವಕೀಲರ ಸಂಘ’ವನ್ನು ಸ್ಥಾಪನೆ ಮಾಡಿದ್ದೆನು ಹಾಗೂ ನಾನು ಅದರ ಕಾರ್ಯದರ್ಶಿಯಾಗಿದ್ದೆನು. ಆದ್ದರಿಂದ ನ್ಯಾಯಾಂಗಕ್ಷೇತ್ರದಲ್ಲಿ ನನಗೆ ‘ವಕೀಲರಲ್ಲಿ ಹಿಂದೂ ಅಥವಾ ಮುಸಲ್ಮಾನ ಎಂದು ಇರುತ್ತದೆಯೇ ?’, ಎಂದು ಕೇಳುತ್ತಿದ್ದರು. ವಕೀಲರು ಮತ್ತು ನ್ಯಾಯಾಧೀಶರೂ ‘ಕಮೆಂಟ್‌ (ವ್ಯಂಗ್ಯ) ಮಾಡುತ್ತಿದ್ದರು. ಎಲ್ಲಕ್ಕಿಂತ ಕೆಟ್ಟದೆಂದರೆ, ಸಂಬಂಧಿಕರು ಮತ್ತು ಪರಿಚಿತರೂ ನಮ್ಮನ್ನು ತಿರಸ್ಕಾರದಿಂದ ನೋಡುತ್ತಿದ್ದರು. ಅವರ ಮೇಲೆ ಅಪ್ಪಿತಪ್ಪಿ ನಮ್ಮ ನೆರಳು ಬಿದ್ದರೂ ಅವರಿಗೇನಾದರೂ ಹಾನಿಯಾಗಬಹುದೆಂದು ಅವರಿಗೆ ಅನಿಸುತ್ತಿತ್ತು. ಏನಾದರೂ ಆಕ್ರಮಣ ಅಥವಾ ಗೊಂದಲವಾಗಬಾರದೆಂದು ಎಲ್ಲರೂ ನನ್ನಿಂದ ದೂರವಿರುತ್ತಿದ್ದರು. ನಾನು ಅಂತಹ ತಿರಸ್ಕಾರವನ್ನು ಸಹಿಸಿಕೊಂಡಿದ್ದೇನೆ. ನನ್ನ ಪತ್ನಿಗೆ ಅವಳ ‘ತಂದೆ-ತಾಯಿ ತನ್ನನ್ನು ಬಾವಿಗೆ ತಳ್ಳಿದ್ದಾರೆ’, ಎಂದು ಅನಿಸುತ್ತಿತ್ತು; ಅವಳ ದುರದೃಷ್ಟದಿಂದ ಅವಳನ್ನು ಈ ಮನೆಗೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಳು. ಆದರೂ ಅವಳು ”ನಾನು ಭಾರತೀಯ ನಾರಿಯಾಗಿದ್ದೇನೆ ಹಾಗೂ ಕುಂಕುಮ ಹಚ್ಚಿದ್ದೇನೆ, ಆದ್ದರಿಂದ ಸಂಸಾರ ನಡೆಸುತ್ತೇನೆ” ಎಂದು ಹೇಳುತ್ತಿದ್ದಳು.

– ಪೂ. (ನ್ಯಾಯವಾದಿ) ಹರಿ ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ (ಶ್ರೀ. ಸುಶಾಂತ ಸಿನ್ಹಾ ಇವರ ‘ಯೂ ಟ್ಯೂಬ್’ ವಾಹಿನಿಯ ಆಧಾರದಿಂದ)

ಸನಾತನ ಧರ್ಮಕ್ಕೆ ಪುನರ್ವೈಭವವನ್ನು ಪ್ರಾಪ್ತಮಾಡಿಕೊಡಲು ನಿರಂತರ ಹೋರಾಡುವ ನ್ಯಾಯವಾದಿ ವಿಷ್ಣು ಶಂಕರ ಜೈನ್‌ (ಆಧ್ಯಾತ್ಮಿಕ ಮಟ್ಟ ಶೇ. ೬೧)

ನ್ಯಾಯವಾದಿ ವಿಷ್ಣು ಶಂಕರ ಜೈನ್‌

೧. ಸನಾತನ ಧರ್ಮಕ್ಕಾಗಿ ಹೋರಾಡುವ ತಂದೆಯ ಆದರ್ಶವನ್ನಿಟ್ಟುಕೊಂಡ ನ್ಯಾಯವಾದಿ ವಿಷ್ಣು ಶಂಕರ ಜೈನ್‌ !

‘ಒಬ್ಬ ಯುವಕ ಯಾವಾಗ ವಕೀಲನಾಗುತ್ತಾನೆಯೋ, ಆಗ ಅವನಿಗೆ, ನಾನು ಕೂಡ ವ್ಯಾವಸಾಯಿಕ ವಕೀಲನೆಂದು ಯಶಸ್ವಿಯಾಗಬೇಕು, ಸಾಕಷ್ಟು ಹಣ ಗಳಿಸಬೇಕು. ನಾನು ಎಲ್ಲ ಸುಖಸೌಲಭ್ಯಗಳನ್ನು ಗಳಿಸಬೇಕು. ದೊಡ್ಡ ಮಟ್ಟದ ವಕೀಲನಾಗಬೇಕು, ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಬೇಕು, ರಾಜಕಾರಣಕ್ಕೂ ಹೋಗಬೇಕು’ ಎಂದು ಅನಿಸುತ್ತದೆ. ಆದರೆ ನನ್ನ ವಿಷಯದಲ್ಲಿ ಬೇರೆಯೆ ಇದೆ. ನಾನು ನನ್ನ ತಂದೆಯವರ ಕಾರ್ಯಶೈಲಿಯನ್ನು ನೋಡಿದ್ದೇನೆ, ಅವರು ತಮ್ಮ ಸಂಪೂರ್ಣ ಜೀವನವನ್ನು ಸನಾತನ ಧರ್ಮಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಕೇವಲ ಶ್ರೀರಾಮಮಂದಿರ ಮಾತ್ರವಲ್ಲ, ಯಾವುದೇ ಒಂದು ಹುಡುಗಿ ‘ಲವ್‌ ಜಿಹಾದ್‌’ನಲ್ಲಿ ಸಿಲುಕಿದರೆ, ಅವಳಿಗಾಗಿ ಉಚಿತ ಖಟ್ಲೆ ನಡೆಸುವುದು, ಎಲ್ಲಿಯಾದರೂ ಅಶ್ವತ್ಥವೃಕ್ಷವನ್ನು ಕೆಡವಿದರೆ, ಎಲ್ಲಿಯಾದರೂ ಸಣ್ಣ ಹನುಮಂತನ ಮೂರ್ತಿಯನ್ನು ಒಡೆದರೆ, ಇಂತಹ ಪ್ರಕರಣಗಳಿಗೂ ನಿರಂತರ ಲಕ್ಷ್ಮಣಪುರಿಯ ನ್ಯಾಯಾಲಯದಲ್ಲಿ ಹೋರಾಡುತ್ತಿರುವುದನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿದ್ದೇನೆ. ನನಗೆ ಅವರು ಯಾವತ್ತೂ ಈ ವ್ಯವಸಾಯಕ್ಕೆ ಬರಲು ಹೇಳಿಲ್ಲ. ‘ನೀನು

ವಕೀಲನಾಗಬೇಕು, ನಾನು ಮಾಡುವುದನ್ನೇ ನೀನು ಸಹ ಮಾಡಬೇಕು’, ಎಂದು ಅವರು ಯಾವತ್ತೂ ನನಗೆ ಹೇಳಿಲ್ಲ. ಅವರು ಹಿಂದೂ ಧರ್ಮ ಹಾಗೂ ಸಮಾಜಕ್ಕಾಗಿ ಏನೇನು ಮಾಡಿದ್ದಾರೆಯೋ, ಅದಕ್ಕಾಗಿ ಅವರು ನನಗೆ ಆದರ್ಶರಾಗಿದ್ದಾರೆ. ಓರ್ವ ವಕೀಲನು ಹೇಗೆ ಅವನ ಆಕಾಂಕ್ಷೆಗಳಿಗೆ ತಿಲಾಂಜಲಿ ನೀಡಿ ಹಿಂದೂ ಧರ್ಮ ಹಾಗೂ ಸಮಾಜಕ್ಕಾಗಿ ಕಾರ್ಯ ಮಾಡಬಹುದು ಎಂಬುದಕ್ಕೆ ಅವರು ಜೀವಂತ ಉದಾಹರಣೆಯಾಗಿದ್ದಾರೆ.

೨. ಅಪಮಾನದಿಂದ ಸನ್ಮಾನದವರೆಗಿನ ಅವರ ಕಠಿಣ ಪ್ರವಾಸ

ಇಂದು ನಮ್ಮ ಬಳಿ ನ್ಯಾಯಾಂಗ ಖಟ್ಲೆಗಳ ವಿಷಯದಲ್ಲಿ ಅಭಿಪ್ರಾಯವನ್ನು ಕೇಳಲಾಗುತ್ತದೆ. ಈ ಹಿಂದೆ ನಾವು ಅವಮಾನ ಹಾಗೂ ತಿರಸ್ಕಾರವನ್ನು ಸಹಿಸಿಕೊಂಡಿದ್ದೇವೆ, ‘ನೀವು ಜೀವನದಲ್ಲಿ ಪ್ರಗತಿಯನ್ನು ಮಾಡಿಕೊಳ್ಳಲಿಲ್ಲ ಎಂದು ಜನರು ನನ್ನ ತಂದೆಗೆ ಹೇಳುತ್ತಿದ್ದರು’, ‘ಅವರು ಯಾವ ಕೊಂಬೆಯ ಮೇಲೆ ಕುಳಿತುಕೊಳ್ಳುತ್ತಾರೋ, ಆ ಕೊಂಬೆಯನ್ನೇ ಕಡಿದು ಹಾಕುತ್ತಾರೆ’, ‘ತಿಲಕದಾರಿ ಆಗಿದ್ದಾರೆ’, ‘ಕೋಮುವಾದಿಯಾಗಿದ್ದಾರೆ’, ‘ಪಾಗಲ್‌ (ಹುಚ್ಚರಾಗಿದ್ದಾರೆ) ಆಗಿದ್ದಾರೆ. ನೀವೂ ಈ ಮಾರ್ಗದಲ್ಲಿ ಏಕೆ ಹೋಗುತ್ತಿದ್ದೀರಿ ?’ ಎಂದು ನನಗೆ ದೊಡ್ಡ ಹುದ್ದೆಯಲ್ಲಿನ ಜನರು, ‘ನೀನು ತಂದೆಯ ಹಾಗಾಗಬೇಡ !’ ಎಂದು ಹೇಳುತ್ತಿದ್ದರು. ಆಗ ನಾನು ಮುಂದಿನಂತೆ ವಿಚಾರ ಮಾಡುತ್ತಿದ್ದೆ, ಸನಾತನದ ಹೋರಾಟ ಮಾಡುವಾಗ ಇಂತಹ ಅನುಭವ ಬರುತ್ತಿದ್ದರೆ, ಹಾಗೆಯೇ ಆಗಲಿ. ಒಂದು ಪೀಳಿಗೆ ಅವಮಾನವನ್ನು ಸಹಿಸಿಕೊಂಡರೆ ನಾನು ಕೂಡ ದೇಶ ಹಾಗೂ ಧರ್ಮಕ್ಕಾಗಿ ಅವಮಾನವನ್ನು ಸಹಿಸಿಕೊಳ್ಳಲು ಸಿದ್ಧನಿದ್ದೇನೆ. ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಸಭ್ಯತೆ ಹಾಗೂ ನಮ್ಮ ಪೂರ್ವಜರಿಗೆ ಅನ್ಯಾಯವಾಗಿದೆ, ನಮಗೆ ಆ ಸಭ್ಯತೆಗೆ ನ್ಯಾಯ ದೊರಕಿಸುವ ಕಾರ್ಯ ಮಾಡಲಿಕ್ಕಿದೆ.

ಜನರು ತಂದೆಯವರನ್ನು ಟೀಕಿಸುತ್ತಿದ್ದರು. ಅದರ ಬಗ್ಗೆ ನನಗೆ, ಅವರು ನಮ್ಮ ಸಮಾಜಕ್ಕಾಗಿ ನಿಷ್ಕಾಮ ಭಾವನೆಯಿಂದ ಏನೆಲ್ಲ ಮಾಡಿದ್ದಾರೆಯೋ, ಆ ವಿಷಯದ ಸರಿಯಾದ ಮಾಹಿತಿ ಸಮಾಜಕ್ಕೆ ತಲುಪಿಲ್ಲ ಎಂದು ಅನಿಸುತ್ತಿತ್ತು ಅವರು ಜಿತೇಂದ್ರಿಯರಾಗಿದ್ದಾರೆ ಅಂದರೆ ಅವರು ಎಲ್ಲ ಇಂದ್ರಿಯಗಳನ್ನು ಜಯಿಸಿದ್ದಾರೆ. ನಾನು ಅದನ್ನು ಸಾಕ್ಷಾತ್‌ ನೋಡಿದ್ದೇನೆ. ಅವರು ಸನಾತನ ಧರ್ಮಕ್ಕಾಗಿ ತಪಶ್ಚರ್ಯ ಮಾಡಿದ್ದಾರೆ. ಅವರು ಮಥುರಾ ಅಥವಾ ಕಾಶಿಗಾಗಿ ಸಿದ್ಧಪಡಿಸಿದ ಅಡಿಪಾಯ ಅಮೂಲ್ಯವಾಗಿದೆ. ನಮ್ಮ ಎಲ್ಲ ಖಟ್ಲೆಗಳು ಆಳವಾದ ಅಧ್ಯಯನದ ಆಧಾರಿತವಾಗಿದೆ. ಅಯೋಧ್ಯೆ, ಮಥುರಾ, ಕಾಶಿ, ತಾಜಮಹಲ್, ಭೋಜಶಾಲೆ, ಕುತುಬ್‌ಮಿನಾರ್‌ ಇವೆಲ್ಲ ಪ್ರಕರಣಗಳ ಆಳವಾದ ಸಂಶೋಧನೆಯನ್ನು ಮಾಡಲಾಗಿದೆ. ಇವೆಲ್ಲ ಪ್ರಕರಣಗಳ ಅಡಿಪಾಯವನ್ನು ನಾವು ಸಿದ್ಧಪಡಿಸಿದ್ದೇವೆ. ನನ್ನ ತಂದೆಯ ಅಥವಾ ನನ್ನ ಜೀವಮಾನದಲ್ಲಿ ಇವುಗಳಿಗೆ ಯಶಸ್ಸು ಸಿಗದಿದ್ದರೂ ಅದನ್ನು ಮುಂದಿನ ಪೀಳಿಗೆಯ ಕೈಗೆ ಒಪ್ಪಿಸಲಾಗುವುದು. ಆದರೂ ಈ ಹೋರಾಟವನ್ನು ಮುಂದುವರಿಸುವುದು ಒಂದು ಹೊಣೆಗಾರಿಕೆಯಾಗಿದೆ.

೩. ಧರ್ಮಕ್ಕಾಗಿ ಹೋರಾಡುತ್ತಿರುವಾಗ ಜೈನ್‌ ಕುಟುಂಬದವರ ದೃಷ್ಟಿಕೋನ  

ಈ ಎಲ್ಲ ಕಾರ್ಯವನ್ನು ನೋಡಿ ನನ್ನ ತಾಯಿ ನನಗೆ, ‘ಇಂತಹ ಅಪಾಯಕಾರಿ ಕಾರ್ಯವನ್ನು ಮಾಡಿ ಏನು ಸಿಗಲಿಕ್ಕಿದೆ ?’ ಎಂದು ಕೇಳುತ್ತಿದ್ದಳು. ಪ್ರತಿಯೊಬ್ಬ ತಾಯಿಗೂ ಹೀಗೆಯೇ ಅನಿಸುತ್ತದೆ. ವಾಸ್ತವದಲ್ಲಿ ಇದೊಂದು ಸಭ್ಯತೆಯ ಹೋರಾಟ ವಾಗಿದೆ. ಆದ್ದರಿಂದ ಇದರಲ್ಲಿ ಭಾಗವಹಿಸಿದಾಗ ಜನರು ನಮ್ಮನ್ನು ‘ನಾಯಕ’ ಎಂದು ತಿಳಿಯುವರು. ಮುಂದೆ ಈ ಹೋರಾಟದಲ್ಲಿ ನಾವು ಇಲ್ಲವಾಗಬಹುದು. ಆದ್ದರಿಂದ ಇಂತಹ ಕಾರ್ಯವನ್ನು ಮಾಡಬಾರದು ಹಾಗೂ ಒಂದು ಸಾಮಾನ್ಯ ಜೀವನವನ್ನು ನಡೆಸಬೇಕೆಂದು ಅನಿಸುವುದು ಸ್ವಾಭಾವಿಕವಾಗಿದೆ ಎಂದು ತಾಯಿಯಾದವಳಿಗೆ ಅನಿಸುವುದು ಸಹಜವಾಗಿದೆ. ನಾನು ನನ್ನ ಅಂತರಾತ್ಮ ಹೇಳಿದಂತೆ ಮಾಡಿದೆ. ಅದೇ ರೀತಿ ನಾನು ಈ ಕಾರ್ಯಕ್ಕೆ ಇಳಿಯಬೇಕೆಂದು ಅನೇಕ ಘಟನೆಗಳು ಘಟಿಸಿವೆ.’ – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ.

ಅಖಂಡ ‘ಹಿಂದೂ ರಾಷ್ಟ್ರ ಆಗಬೇಕು ಹಾಗೂ ಸಂಪೂರ್ಣ ಜಗತ್ತಿಗೆ ಹಿಂದುತ್ವದ ಪರಿಚಯವಾಗಬೇಕು !

‘ಯಾವಾಗ ನಾನು ಕೆಲಸದ ನಿಮಿತ್ತ ಸರ್ವೋಚ್ಚ ನ್ಯಾಯಾಲಯದ ಪರಿಸರದಲ್ಲಿ ಇರುತ್ತೇನೆ, ಆಗ ಜನರು ನನಗೆ, ‘ಜೂನ್‌-ಜುಲೈ ತಿಂಗಳಲ್ಲಿ (ಆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ರಜೆ ಇರುತ್ತದೆ) ತಿರುಗಾಡಲು ಯಾವ ದೇಶಕ್ಕೆ ಹೋಗಲಿಕ್ಕಿದ್ದೀರಿ ?’ ಎಂದು ಕೇಳುತ್ತಾರೆ. ನಾನು ತಿರುಗಾಡಲು ವಿದೇಶಕ್ಕೆ ಹೋಗುವುದಿಲ್ಲ, ಆ ಸಮಯದಲ್ಲಿ ನಾನು ವಾರಾಣಸಿ, ಕಾಶಿಯ ಸ್ಥಳೀಯ ಖಟ್ಲೆಗಳನ್ನು ನೋಡಿಕೊಳ್ಳುತ್ತೇನೆ. ನಾವು ಈ ವ್ಯವಸಾಯದಿಂದ ಏನು ಸಂಪಾದಿಸುತ್ತೇವೆಯೋ, ಅದೆಲ್ಲವನ್ನೂ ಧರ್ಮಕಾರ್ಯಕ್ಕಾಗಿ ಉಪಯೋಗಿಸುತ್ತೇವೆ. ಆರ್ಥಿಕ ಸಹಾಯ ಗಳಿಸಿ ಕೊಡುವಂತಹ ಯಾವುದೇ ನ್ಯಾಸ ಅಥವಾ ಸಂಘಟನೆ ನಮ್ಮಲ್ಲಿಲ್ಲ. ನಮ್ಮಿಂದ ಅಲ್ಪಸ್ವಲ್ಪ ಕಾರ್ಯ ಆಗುವುದು ಇದು ಈಶ್ವರನ ಇಚ್ಛೆಯಾಗಿದೆ. ಸಮಾಜದ ಯಾವುದೇ ವ್ಯಕ್ತಿ ಯಾವುದೇ ಕೆಲಸಕ್ಕಾಗಿ ವಿಷ್ಣುಶಂಕರ ಜೈನ್‌ ಇವರು ಇಷ್ಟು ಹಣ ಕೇಳಿದರು, ಎಂದು ಹೇಳಲು ಆಗುವುದಿಲ್ಲ. ನಾವು ಎಲ್ಲವನ್ನೂ ಯಥಾಶಕ್ತಿ ಪ್ರಯತ್ನಿಸುತ್ತೇವೆ. ನನಗೂ ‘ಈ ದೇಶ ‘ಅಖಂಡ ಹಿಂದೂ ರಾಷ್ಟ್ರ’ ಆಗಬೇಕು’, ರಾಮರಾಜ್ಯದ ಮತ್ತು ‘ಹಿಂದೂ ರಾಷ್ಟ್ರ’ದ ಸಂಕಲ್ಪನೆ ಒಂದೇ ಆಗಿದೆ. ನಾವು ಕಳೆದುಕೊಂಡಿರುವ ಭಾಗವನ್ನು ಹಿಂತಿರುಗಿ ಪಡೆಯಬೇಕು ಹಾಗೂ ಸಂಪೂರ್ಣ ಜಗತ್ತಿಗೆ ಹಿಂದುತ್ವದ ಪರಿಚಯ ವಾಗಬೇಕು !’ ಎಂದು ನನಗೆ ಅನಿಸುತ್ತದೆ.  – ನ್ಯಾಯವಾದಿ ವಿಷ್ಣು ಶಂಕರ ಜೈನ್‌

ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಮಸಿಂಹ ಇವರ ‘ಪ್ರಸ್ತಾಪ’ವನ್ನು ದಿಟ್ಟತನದಿಂದ ನಿರಾಕರಿಸಿದ ಪೂ. ಜೈನ್‌ !

‘ಸಮಾಜವಾದಿ ಪಕ್ಷದ ಮುಲಾಯಮಸಿಂಹ ಇವರ ಸರಕಾರ ಅಯೋಧ್ಯೆಯಲ್ಲಿ ಕೇವಲ ೧೬ ಕಾರಸೇವಕರು ಮೃತರಾಗಿದ್ದಾರೆ ಎಂದು ಹೇಳಿತ್ತು; ಆದರೆ ನಾನು ಘಟನಾಸ್ಥಳಕ್ಕೆ ಹೋಗಿ ೧೬ ಅಲ್ಲ, ೩೬೫ ಕಾರಸೇವಕರು ಮೃತರಾಗಿರುವುದರ ಬಗ್ಗೆ ಹೇಳಿದ್ದೆ. ೧೯೯೩-೯೪ ರಲ್ಲಿ ಮುಲಾಯಮಸಿಂಹ ಇವರ ಅಧಿಕಾರದ ಅವಧಿಯಲ್ಲಿ ಉತ್ತರಪ್ರದೇಶದ ಸರಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಎ.ಪಿ. ಸಿಂಹರನ್ನು ಅತ್ಯಂತ ಶಕ್ತಿಶಾಲಿ ಎಂದು ತಿಳಿಯಲಾಗುತ್ತಿತ್ತು. ಒಂದು ರಾತ್ರಿ ಅವರು ನನ್ನ ಮನೆಗೆ ಬಂದು ಇಂತಹ ವಿಷಯಗಳನ್ನೆಲ್ಲ ಬಿಟ್ಟುಬಿಡಬೇಕೆಂದು ಎಚ್ಚರಿಕೆ ನೀಡಿದರು. (೧೯೮೯ ರಿಂದ

೧೯೯೪ ಈ ಅವಧಿಯಲ್ಲಿ ಪೂ. ಹರಿ ಶಂಕರ ಜೈನ್‌ ಇವರು ಮುಲಾಯಮಸಿಂಹ ಸರಕಾರದ ವಿರುದ್ಧ ಅನೇಕ ಖಟ್ಲೆಗಳನ್ನು ದಾಖಲಿಸಿದ್ದರು) ಆಗ ಸಿಂಹ ಇವರು ನನಗೆ ನೇರವಾಗಿ ಎರಡು ‘ಪ್ರಸ್ತಾಪ’ಗಳನ್ನು ನೀಡಿದ್ದರು. ‘ಮುಲಾಯಮ ಸಿಂಹರೊಂದಿಗೆ ಕೈಜೋಡಿಸಿ, ಮಂತ್ರಿಯಾಗಿ ಹಾಗೂ ಬೇಕಾದ್ದೆಲ್ಲವನ್ನೂ ಪಡೆದುಕೊಳ್ಳಿರಿ. ಇಲ್ಲದಿದ್ದರೆ ಮುಂದೇನಾಗಬಹುದು, ಎಂಬುದನ್ನು ತಿಳಿದುಕೊಳ್ಳಿ.’ ಇದರ ಅರ್ಥ ನನಗೆ ಏನೂ ಆಗಬಹುದಿತ್ತು. ರಾತ್ರಿಯ ಸಮಯ ವಾಗಿತ್ತು, ನನ್ನ ಮಕ್ಕಳು ಮಲಗಿದ್ದರು. ನಾನು ಸಿಂಹ ಇವರಿಗೆ ಎರಡು ನಿಮಿಷ ನಿಲ್ಲಲು ಹೇಳಿದೆ, ನಾನು ದೇವರ ಕೋಣೆಗೆ ಹೋದೆ. ಭಗವಾನ ಶಿವನಿಗೆ ಕೈಜೋಡಿಸಿ ಪ್ರಾರ್ಥನೆ ಮಾಡಿದೆ. ನನಗೆ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಶಕ್ತಿನೀಡು.’ ಭಗವಂತನು ‘ನೀವು ಹೋರಾಡಿ !’ ಎಂದು ನಿರ್ಣಯ ನೀಡಿದನು. ನಾನು ಎ.ಪಿ. ಸಿಂಹ ಇವರಿಗೆ ಹೇಳಿದೆ, ‘ಈ ವಸ್ತು (ನಾನು ಸ್ವತಃ) ಮಾರಾಟಕ್ಕಾಗಿ ಇಲ್ಲ.” ಅನಂತರ ಅವರು ಚಡಪಡಿಸುತ್ತ, ಆದರೆ ತಲೆತಗ್ಗಿಸಿ ಹೊರಟು ಹೋದರು. ಅವರಿಗೆ ಹೋಗುವಾಗ ನನ್ನ ಕಣ್ಣುಗಳತ್ತ ನೋಡಲು ಆಗಲಿಲ್ಲ. ಒಬ್ಬ ಸಾಮಾನ್ಯ ಮನುಷ್ಯ ಆಡಳಿತಕ್ಕೆ ಸಡ್ಡು ಹೊಡೆಯಬಲ್ಲನೆಂದು ಅವರಿಗೆ ಅಪೇಕ್ಷೆ ಇರಲಿಲ್ಲ. ಸರಕಾರದಿಂದ ಎಲ್ಲ ಸಿದ್ಧತೆ ಯಾಗುತ್ತಿದೆ ಎಂದು ನನಗೆ ತಿಳಿದಾಕ್ಷಣ ನಾನು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಉಚ್ಚ ನ್ಯಾಯಾಲಯ ‘ಹರಿ ಶಂಕರ ಜೈನ್‌ ಇವರ ಬಂಧನವಾಗುವುದಿಲ್ಲ’, ಎಂದು ಆದೇಶ ನೀಡಿತು. (ಶ್ರೀ. ಸುಶಾಂತ ಸಿನ್ಹಾ ಇವರ ‘ಯೂ ಟ್ಯೂಬ್’ ವಾಹಿನಿಯ ಆಧಾರದಿಂದ)