ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೆ, ಪ್ರಪಂಚದ ಇತರ 15 ರಾಷ್ಟ್ರಗಳು ಹಿಂದೂ ರಾಷ್ಟ್ರವಾಗಲು ಸಿದ್ಧವಿದೆ !

ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತೀಜಿ ಮಹಾರಾಜರ ಪುನರುಚ್ಚಾರ !

ಮುಂಬಯಿ, ಫೆಬ್ರವರಿ 4 (ಸುದ್ದಿ.) – ಭಾರತವು ವಿಶ್ವದ ಹೃದಯವಾಗಿದೆ. ಭಾರತ ದಿಕ್ಕು ತೋಚದಂತಾದರೆ ಇಡೀ ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಭಾರತವನ್ನು ಅದರ ಮೂಲ ಸ್ವರೂಪಕ್ಕೆ ತರುವುದು ಅಗತ್ಯವಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೆ, ವಿಶ್ವದ ಇತರ 15 ರಾಷ್ಟ್ರಗಳು ಹಿಂದೂ ರಾಷ್ಟ್ರಗಳಾಗಲು ಸಿದ್ಧವಿದೆ ಎಂದು ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತೀಜಿ ಮಹಾರಾಜರು ಪ್ರತಿಪಾದಿಸಿದರು. ಸಾಂತಾಕ್ರೂಜ್ ಪಶ್ಚಿಮದ ಹಿರಾವತಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಹಿಂದೂ ರಾಷ್ಟ್ರ ಧರ್ಮ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ವೇಳೆ ಅವರು ಉಪಸ್ಥಿತರಿದ್ದ ಜಿಜ್ಞಾಸುಗಳ ಸಂದೇಹಗಳನ್ನು ನಿವಾರಿಸಿದರು.

ಸ್ವಾಮಿ ನಿಶ್ಚಲಾನಂದ ಸರಸ್ವತೀಜಿ ಮಹಾರಾಜರು ಮಂಡಿಸಿದ ಇತರ ಅಂಶಗಳು

1. ಸಂವಿಧಾನದ ಅಂಶದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಬೇಕಾಗುತ್ತದೆ. ಭಾರತದ ಸಂವಿಧಾನವು ಭಾರತದ ಗಡಿಗಳಿಗೆ ಅನ್ವಯಿಸುತ್ತದೆ; ಆದರೆ ಮನುಸ್ಮೃತಿಯ ಸೂತ್ರಗಳು ಯಾವುದೇ ಸಮಯಕ್ಕೆ ಮತ್ತು ವಿಶ್ವದ ಎಲ್ಲೆಡೆಯಲ್ಲೂ ಅನ್ವಯಿಸುತ್ತವೆ. ಆದರೂ ಸಂವಿಧಾನ ಬದಲಿಸುವುದನ್ನು ವಿರೋಧಿಸುವವರು ಧರ್ಮಗ್ರಂಥಗಳನ್ನು ಬದಲಿಸುವ ಭಾಷೆ ಮಾತನಾಡುತ್ತಾರೆ.

2. ಇಂದಿನ ಅಭಿವೃದ್ಧಿಯು ಪರಿಸರ ಸ್ನೇಹಿಯಾಗಿಲ್ಲದ ಕಾರಣ ಅದನ್ನು ಅಭಿವೃದ್ಧಿ ಎಂದು ಕರೆಯಲಾಗುವುದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ.

3. ಪ್ರತಿಯೊಬ್ಬ ಮನುಷ್ಯನ ಶಿಕ್ಷಣ, ವಸತಿ, ಸೇವೆಗಳು ಮತ್ತು ಭದ್ರತೆಯನ್ನು ರಕ್ಷಿಸಲು ಒಂದು ವ್ಯವಸ್ಥೆ ಅಪೇಕ್ಷಿತವಾಗಿದೆ.

4. ವಿದೇಶದಲ್ಲಿನ ಅನೇಕ ಸನಾತನಿಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಸನಾತನ ಧರ್ಮದಿಂದ ದೂರವಾಗಿದ್ದಾರೆ ಅವರು ಮತ್ತೆ ಸ್ವಧರ್ಮಕ್ಕೆ ಮರಳಲು ಸಿದ್ಧರಾಗಿದ್ದಾರೆ.