ಭಾರತಕ್ಕೆ ‘ಪ್ರಿಡೇಟರ್‘ ಡ್ರೋನ್ ಪೂರೈಸಲು ಅಮೇರಿಕಾ ಸರಕಾರದಿಂದ ಒಪ್ಪಿಗೆ !

ವಾಷಿಂಗ್ಟನ್ – ಭಾರತಕ್ಕೆ ೩೧ ‘ಪ್ರಿಡೇಟರ್‘ ಡ್ರೋನ್‌ಗಳನ್ನು ಪೂರೈಸಲು ಅಮೇರಿಕಾ ಸರಕಾರ ಒಪ್ಪಿಗೆ ನೀಡಿದೆ. ೩ ಅಬ್ಜ ಡಾಲರ್ (೨೪ ಸಾವಿರದ ೯೦೦ ಕೋಟಿ ರೂಪಾಯಿ) ಮೌಲ್ಯದ ಈ ಡ್ರೋನ್ ಒಪ್ಪಂದದ ಅಧಿಸೂಚನೆಯನ್ನು ಬರುವ ೨೪ ಗಂಟೆಗಳಲ್ಲಿ ಅಮೇರಿಕಾ ಸರಕಾರದ ಕಡೆಯಿಂದ ಅನುಮೋದನೆಯಾಗಲಿದೆ. ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನು ಹತ್ಯೆಗೆ ಭಾರತ ಸಂಚು ರೂಪಿಸಿದೆ ಎಂದು ಆರೋಪಿಸಿ ಅಮೇರಿಕ ಸಂಸತ್ತು ಈ ಒಪ್ಪಂದವನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. (ಇದರಿಂದ ಅಮೇರಿಕಾದ ಭಾರತ ದ್ವೇಷ ಕಂಡುಬರುತ್ತದೆ – ಸಂಪಾದಕರು) ಇದಾದ ನಂತರ ಅಮೇರಿಕಾದ ಮೇಲೆ ಟೀಕೆಗಳ ಸುರಿಮಳೆಯಾಯಿತು. ಇಷ್ಟೇಅಲ್ಲ, ಭಾರತದೊಂದಿಗೆ ಅದರ ಸ್ನೇಹವನ್ನು ಪ್ರಶ್ನಿಸಲಾಗಿತ್ತು.

೧. ‘ಪ್ರಿಡೇಟರ್‘ ಡ್ರೋನ್‌ಗಳ ವಿಶೇಷತೆ ಎಂದರೆ ಅವು ಎತ್ತರದ ಪ್ರದೇಶದಿಂದ ದೀರ್ಘಕಾಲಾವಧಿಯವರೆಗೆ ಹಾರಬಲ್ಲವು. ಇದರಲ್ಲಿ ೧೫ ಡ್ರೋನ್‌ಗಳನ್ನು ಭಾರತೀಯ ನೌಕಾಪಡೆಗೆ ಮತ್ತು ಉಳಿದ ಪ್ರತ್ಯೇಕ ೮ ಭಾರತೀಯ ಭೂಸೇನೆ ಮತ್ತು ವಾಯುಪಡೆಗೆ ನೀಡಲಾಗುವುದು.

೨. ಕಳೆದ ೧೦ ವರ್ಷಗಳಲ್ಲಿ ಭಾರತ-ಅಮೇರಿಕಾ ರಕ್ಷಣಾ ಪಾಲುದಾರಿಕೆ ಗಮನಾರ್ಹವಾಗಿ ಬಲಗೊಂಡಿದೆ ಎಂದು ಅಮೇರಿಕಾದ ವಿದೇಶಾಂಗ ವಿಭಾಗದ ವಕ್ತಾರರು ಹೇಳಿದ್ದಾರೆ. ಈ ಡ್ರೋನ್ ಒಪ್ಪಂದದಿಂದ ಈ ಪಾಲುದಾರಿಕೆ ಮತ್ತಷ್ಟು ಮುಂದಕ್ಕೆ ಹೋಗುವುದು.

೩. ಒಂದು ದೇಶವು ಅಮೇರಿಕಾ ಸಂಸತ್ತಿನ ಕಡೆಯಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಯಸಿದರೆ, ಆ ದೇಶದ ಕಾನೂನಿನ ಪ್ರಕಾರ ಸಂಸತ್ತಿನ ಅನುಮೋದನೆ ಅಗತ್ಯವಿದೆ. ಆದ್ದರಿಂದ ಭಾರತವು ‘ಜನರಲ್ ಟೋಮಿಕ‘ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಭಾರತ ಮತ್ತು ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.