ಆಧ್ಯಾತ್ಮಿಕ ಬಲದ ಮೇಲೆಯೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ! – ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ.ರಾಜಾ ಸಿಂಹ

ಟಿ. ರಾಜಾ ಸಿಂಹ, ಶಾಸಕರು, ತೆಲಂಗಾಣ

ಭಿಲೈ (ಛತ್ತೀಸಗಡ) – ಗೋಹತ್ಯೆ, ಮತಾಂತರ, ಲವ್ ಜಿಹಾದ್ ಮತ್ತು ಇತರ ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟಿತರಾಗುವ ಆವಶ್ಯಕತೆಯಿದೆ. ಅದರೊಂದಿಗೆ ಪ್ರತಿಯೊಬ್ಬ ಹಿಂದೂ, `ಸ್ವಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ?’ ಎಂದು ಕಲಿಯಬೇಕಾಗಿದೆ. ನಮ್ಮ ಮೇಲೆತ್ತಿದ ಲಾಠಿಯನ್ನು ಕಸಿದುಕೊಳ್ಳುವ ಧೈರ್ಯ ನಮ್ಮಲ್ಲಿ ನಿರ್ಮಾಣವಾಗಬೇಕಾಗಿದೆ ಮತ್ತು ಇದಕ್ಕಾಗಿ ಸಾಧನೆಯನ್ನು ಮಾಡಿ ನಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ಆಧ್ಯಾತ್ಮಿಕ ಬಲದಿಂದಲೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ಎಂದು ಭಾಗ್ಯನಗರ (ತೆಲಂಗಾಣ)ದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಪ್ರತಿಪಾದಿಸಿದ್ದಾರೆ. ಅವರು ಇಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು, ಧರ್ಮಪ್ರೇಮಿ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ‘ನಾವು ಸಂಘಟನೆ, ಜಾತಿ, ಪಂಥ, ಸಂಪ್ರದಾಯಗಳಲ್ಲಿನ ಭೇದವನ್ನು ಮರೆತು ಹಿಂದೂ ಎಂದು ಸಂಘಟಿತರಾದರೆ ಮತ್ತು ಪ್ರಯತ್ನಿಸಿದರೆ ನಮ್ಮ ಧ್ಯೇಯ ಸಾಧ್ಯವಾಗಲಿದೆ’, ಎಂದೂ ಟಿ. ರಾಜಾ ಸಿಂಹ ಹೇಳಿದರು. ಹಿಂದೂ ಜನಜಾಗೃತಿ ಸಮಿತಿ ಮತ್ತು ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಸಂಚಾಲನೆಯನ್ನು ಶ್ರೀ. ಮದನ ಮೋಹನ ಉಪಾಧ್ಯಾಯರು ಮಾಡಿದರು. ಈ ಕಾರ್ಯಕ್ರಮಕ್ಕೆ 250ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಕೈಜೋಡಿಸಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ! – ಟಿ. ರಾಜಾ ಸಿಂಹ ಇವರ ಕರೆ

ಶಾಸಕ ಟಿ. ರಾಜಾ ಸಿಂಹ ಮಾತನಾಡಿ, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ಛತ್ತೀಸಗಢದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಕೇಳಿ ನನಗೆ ಬಹಳ ಆನಂದವಾಯಿತು. ಈಗ ಎಲ್ಲ ಸಂಘಟನೆಗಳಿಗೆ ನಮ್ಮದೇ ಆದ ಹಕ್ಕಿನ ವೇದಿಕೆಯೆಂದರೆ ಹಿಂದೂ ಜನಜಾಗೃತಿ ಸಮಿತಿಯಾಗಿದೆ. ನೀವೆಲ್ಲರೂ ಸಮಿತಿಯೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಛತ್ತೀಸಗಢ ಸರಕಾರವು ಹಲಾಲ ಉತ್ಪಾದನೆಗಳ ಮೇಲೆ ನಿಷೇಧ ಹೇರಬೇಕು ! – ಶ್ರೀ. ಸುನಿಲ ಘನವಟ, ಸಂಘಟಕರು, ಮಹಾರಾಷ್ಟ್ರ ಮತ್ತು ಛತ್ತೀಸಗಢ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಸುನಿಲ ಘನವಟ

ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ಸಂಘಟಕರಾದ ಶ್ರೀ. ಸುನಿಲ ಘನವಟ ಇವರು, ‘ಹಲಾಲ್ ದೇಶ ಯಾವ ರೀತಿ ದೇಶವಿರೋಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ? ಕುರಿತು ಹೇಳಿದರು. ‘ಉತ್ತರ ಪ್ರದೇಶ ಸರಕಾರವು ಯಾವ ಪದ್ಧತಿಯಲ್ಲಿ ಹಲಾಲ ಉತ್ಪಾದನೆಗಳ ಮೇಲೆ ನಿಷೇಧ ಹೇರಿದೆಯೋ, ಅದೇ ಪದ್ಧತಿಯಲ್ಲಿ ಛತ್ತೀಸಗಢ ಸರಕಾರವೂ ಈ ಎಲ್ಲ ವಿಷಯಗಳ ತನಿಖೆ ನಡೆಸಿ ನಿಷೇಧಿಸಬೇಕು’ ಎಂದು ಅವರು ಮನವಿ ಮಾಡಿದರು. ಆ ಸಮಯದಲ್ಲಿ ಉಪಸ್ಥಿತರಿರುವ ಎಲ್ಲಾ ಹಿಂದೂಗಳು ಇದನ್ನು ಬೆಂಬಲಿಸಿ, ‘ಹಲಾಲ್ ಮುಕ್ತ ಛತ್ತೀಸಗಢ’ ಎಂಬ ಪ್ರತಿಜ್ಞೆಯನ್ನು ಮಾಡಿದರು.