ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಪ್ರತ್ಯಕ್ಷ ಕಾರಸೇವೆ, ಕಾನೂನು ಹೋರಾಟ, ರಾಜಕೀಯ ಹೋರಾಟ, ಪ್ರಚಾರ, ಜಾಗೃತಿ, ನಿಧಿ ದೇಣಿಗೆ ಮುಂತಾದ ವಿವಿಧ ಮಾರ್ಗಗಳಿಂದ ಕಾರ್ಯಗಳು ನಡೆದಿವೆ. ಇದು ಹಿಂದೂಗಳ ಸ್ವಾಭಿಮಾನದ ಹೋರಾಟವಾಗಿರುವುದರಿಂದ ಪ್ರತಿಯೊಬ್ಬರೂ ಕೈಲಾದಷ್ಟು ಕೊಡುಗೆ ನೀಡಿದ್ದಾರೆ. ಈ ರಾಮಕಾರ್ಯದಲ್ಲಿ ಸನಾತನ ಸಂಸ್ಥೆಯ ಕೊಡುಗೆಯೂ ಆಧ್ಯಾತ್ಮಿಕ ಸ್ವರೂಪದ್ದಾಗಿತ್ತು.
ಅಧ್ಯಾತ್ಮದ ಅಧಿಕಾರಿಗಳು (?), ಸಂತರು ಅಥವಾ ಆಧ್ಯಾತ್ಮಿಕ ಸಂಸ್ಥೆಗಳು ಆಧ್ಯಾತ್ಮಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುತ್ತವೆ. ಈ ಕಾರ್ಯವು ಎಂದಿಗೂ ಪ್ರಚಾರವಾಗುವುದಿಲ್ಲ. ಅಂತಹ ಕಾರ್ಯ ಮಾಡುವವರಲ್ಲಿ ಸನಾತನ ಸಂಸ್ಥೆ ಒಂದಾಗಿದೆ. ಭವ್ಯ- ದಿವ್ಯವಾದ ಕಾರ್ಯಗಳು ನಡೆಯುತ್ತಿರುವಾಗ, ಅದರಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿಯೂ ಅನೇಕ ಕಾರ್ಯಗಳು ನಡೆಯುತ್ತಿರುತ್ತವೆ ಮತ್ತು ಅದಕ್ಕೆ ಒಂದು ಮಹತ್ವವಿರುತ್ತದೆ. ಶಾರೀರಿಕ, ಮಾನಸಿಕ, ಬೌದ್ಧಿಕ ಮುಂತಾದ ಮಟ್ಟದಲ್ಲಿ ಕಾರ್ಯ ಮಾಡುವವರಿಗೆ ಅಲ್ಪ ಸ್ವಲ್ಪ ಮಾಹಿತಿ ದೊರಕಬೇಕು ಎಂದು ಈ ಬರಹ.
1. 2010 ರಲ್ಲಿ, ಅಲಹಾಬಾದ ಉಚ್ಚನ್ಯಾಯಾಲಯದಲ್ಲಿ ಶ್ರೀರಾಮ ಜನ್ಮಭೂಮಿಯ ಪ್ರಕರಣದ ತೀರ್ಪು ಹೊರಬರುವುದರಲ್ಲಿತ್ತು. ಆ ಸಮಯದಲ್ಲಿ ಸನಾತನ ಸಂಸ್ಥೆಯು ಎಲ್ಲಾ ಸಾಧಕರಿಗೆ ಮತ್ತು ಸಮಾಜಕ್ಕೆ ಕರೆ ನೀಡಿತ್ತು, ‘ದಯವಿಟ್ಟು ರಾಮ ಜನ್ಮಭೂಮಿಯ ತೀರ್ಪು ಹಿಂದೂ ಸಮಾಜದ ಪರವಾಗಿ ಬರುವಂತೆ ಪ್ರಾರ್ಥಿಸಿರಿ. !’ (ಪ್ರಾರ್ಥನೆ ಎಂದರೆ ಪ್ರಭು ಶ್ರೀರಾಮನಲ್ಲಿ ಆರ್ತತೆಯಿಂದ ಕರೆಯುವುದು, ಇಂತಹ ಕರೆಯನ್ನು ಕೇವಲ ಭಗವಂತನ ಭಕ್ತರು, ಸಾಧಕರು ಮತ್ತು ಸಂತರು ಮಾಡಲು ಸಾಧ್ಯವಿದೆ!)
2. ಸರ್ವೋಚ್ಚ ನ್ಯಾಯಾಲಯದಲ್ಲಿ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ವಿಳಂಬವಾಗುತ್ತಿದ್ದ ಕಾರಣದಿಂದಾಗಿ, `ಈ ಕಾನೂನು ಹೋರಾಟಕ್ಕೆ ಆಧ್ಯಾತ್ಮಿಕ ಶಕ್ತಿ ಸಿಗಬೇಕು ಮತ್ತು ಆದಷ್ಟು ಬೇಗನೆ ತೀರ್ಪು ಹೊರಬರಬೇಕು’, ಎಂದು ಜನವರಿ 2019 ರಲ್ಲಿ ಸನಾತನ ಸಂಸ್ಥೆಯು ದೇಶಾದ್ಯಂತ ‘ಶ್ರೀ ರಾಮನಾಮಸಂಕೀರ್ತನೆ ಅಭಿಯಾನ’ವನ್ನು ಆಯೋಜಿಸಿತು. ‘ಶ್ರೀರಾಮನ ನಾಮಜಪ ಮಾಡಿ, ಈ ಕಾನೂನುಬದ್ಧ ಹೋರಾಟಕ್ಕೆ ಆಧ್ಯಾತ್ಮಿಕ ಶಕ್ತಿ ನೀಡಲು’ ಈ ಅಭಿಯಾನಗಳನ್ನು ನಡೆಸಲಾಗಿತ್ತು.
3. ಜನವರಿ 2019 ರಿಂದ 9.11.2019 ಈ 11 ತಿಂಗಳ ಕಾಲಾವಧಿಯಲ್ಲಿ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್ ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇಶಾದ್ಯಂತ ಪ್ರವಾಸ ಮಾಡಿ ಅನೇಕ ತೀರ್ಥಕ್ಷೇತ್ರಗಳ ಅನುಷ್ಠಾನ ಮತ್ತು ಯಜ್ಞಗಳನ್ನು ಮಾಡಿದರು.
4. 9.11.2019 ರಂದು, ಅಂದರೆ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ದಿನ ಮತ್ತು ತೀರ್ಪಿನ ಪ್ರತ್ಯಕ್ಷ ಸಮಯದಲ್ಲಿ, ಮಹರ್ಷಿಗಳ ಆದೇಶದಂತೆ ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ತಿರುಪತಿಯ ಬಾಲಾಜಿಯ ಎದುರು ನಿಂತುಕೊಂಡು ಅನುಷ್ಠಾನ ಮಾಡಿದರು.
5. 10ನೇ ನವೆಂಬರ್ 2019 ರಂದು, ಅಂದರೆ ತೀರ್ಪು ಬಂದ ಮರುದಿನ, ‘ಶ್ರೀರಾಮನ ಜನ್ಮಭೂಮಿಯಲ್ಲಿ ಆದಷ್ಟು ಬೇಗ ಭವ್ಯ ದಿವ್ಯ ಮಂದಿರ ನಿರ್ಮಾಣವಾಗಬೇಕು’, ಎಂದು ಶ್ರೀ ಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ (ಸೌ. ) ಅಂಜಲಿ ಗಾಡಗೀಳ ಇವರು ಪ್ರತ್ಯಕ್ಷವಾಗಿ ಅಯೋಧ್ಯೆಗೆ ತೆರಳಿ ಅನುಷ್ಠಾನ ಮಾಡಿದರು.
6. 31.7.2020 ರಂದು ಸಪ್ತರ್ಷಿ ಜೀವನಾಡಿ ಪಟ್ಟಿಯ ಮಾಧ್ಯಮದಿಂದ ಮಹರ್ಷಿಗಳು ನೀಡಿದ ಆಜ್ಞೆಯಂತೆ `ಸನಾತನ ಸಂಸ್ಥೆಯ ಸಂಸ್ಥಾಪಕರಾದ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಳೆಯವರ ವತಿಯಿಂದ ಶ್ರೀ ಚಿತ್ ಶಕ್ತಿ(ಸೌ.) ಅಂಜಲಿ ಗಾಡಗೀಳ ಇವರು ಅಯೋಧ್ಯೆಗೆ ಹೋಗಿ , ಶ್ರೀರಾಮ ಜನ್ಮಭೂಮಿ ಟ್ರಸ್ಟಿನ ಕಾರ್ಯದರ್ಶಿ ಶ್ರೀ. ಚಂಪತ ರಾಯ್ ಇವರಿಗೆ ಶ್ರೀರಾಮ ಮಂದಿರದ ಭೂಮಿಪೂಜೆಗಾಗಿ ಸುವರ್ಣವನ್ನು ದಾನ ಮಾಡಿದರು. ಇದಕ್ಕಾಗಿ ಮಹರ್ಷಿಗಳ ಆಜ್ಞೆಯನುಸಾರ ಪಂಚಮಹಾಭೂತಗಳ ಸಂಕೇತವಾಗಿ 5 ಚಿನ್ನದ ಮಣಿಗಳನ್ನು ತಯಾರಿಸಿ ಕೊಳ್ಳಲಾಗಿತ್ತು.
7. ಇದೇ ದಿನದಂದು ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಶ್ರೀ ರಾಮಮಂದಿರದ ಭೂಮಿಪೂಜೆಗಾಗಿ, ಪ್ರತ್ಯಕ್ಷ ಶಿವನ ನಿವಾಸಸ್ಥಾನವಾಗಿರುವ ಕೈಲಾಸ ಪರ್ವತದ ಮಣ್ಣು, ಶಿವನ ನೆಲೆ, ಕೈಲಾಸ ಚರಣಸ್ಪರ್ಶದ ಮಣ್ಣು, ಕೈಲಾಸ ಗೌರಿಕುಂಡದ ಮಣ್ಣು ಮತ್ತು ಮಾನಸ ಸರೋವರದ ಜಲವನ್ನು ಶ್ರೀ ರಾಮ ಜನ್ಮಭೂಮಿಯ ಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ. ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದರು.
8. 15.1.2024 ರಿಂದ ಸನಾತನ ಸಂಸ್ಥೆಯ ಭಕ್ತರು `ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಬೇಕು’, ಎಂದು ಪ್ರಾರ್ಥನೆ ಮತ್ತು ಅನುಷ್ಠಾನಗಳನ್ನು ಮಾಡುತ್ತಿದ್ದಾರೆ.
ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ. (19.1.2024)