ಅಮೇರಿಕಾದಲ್ಲಿ ಹಿಂದೂಗಳನ್ನು ರಕ್ಷಿಸಲು ಸಂಸದರಿಂದ ‘ಕಾಂಗ್ರೆಷನಲ್ ಹಿಂದೂ ಕಾಕಸ್’ ಸಂಘಟನೆಯ ಸ್ಥಾಪನೆ

ವಾಷಿಂಗ್ಟನ್ (ಅಮೇರಿಕಾ) – ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ಅಮೇರಿಕಾದ ಸಂಸದರು ‘ಕಾಂಗ್ರೆಸನಲ್ ಹಿಂದೂ ಕಾಕಸ್’ ಅನ್ನು ಸ್ಥಾಪಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಸಾಂಸದ ಪೀಟರ್ ಮತ್ತು ಎಲಿಸ್ ಸ್ಟೆಫಾನಿಮ್ ಇವರು ಅಮೇರಿಕಾದ ಸಂಸತ್ತಿನಲ್ಲಿ ಘೋಷಣೆ ಮಾಡಿದರು. ಈ ಗುಂಪಿನಲ್ಲಿ ಹಿಂದೂಗಳ ಬಗ್ಗೆ ಸಹಾನುಭೂತಿ ಇರುವ ಸಂಸದರು ಇರುತ್ತಾರೆ.

1. ಈ ಕುರಿತು ಪ್ರಸಾರ ಮಾಡಿರುವ ಮನವಿಯಲ್ಲಿ, ‘ಕಾಂಗ್ರೆಸನಲ್ ಹಿಂದೂ ಕಾಕಸ್’ ಸ್ಥಾಪನೆಯು ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಮಾಡುವುದು ಹಿಂದೂ-ಅಮೆರಿಕನ್ ಸಮುದಾಯದ ಧ್ವನಿಯನ್ನು ಗುರುತಿಸುವ ಮತ್ತು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ. ಹಿಂದೂಗಳ ಕಳವಳವನ್ನು ಮಂಡಿಸಿ ಅವರ ಅಮೆರಿಕಾದ ಕೊಡುಗೆಯನ್ನು ಮುಂದಿಡಲು ನಾವು ಬದ್ಧರಾಗಿದ್ದೇವೆ. ನಾವು ಯಾವಾಗಲೂ ಅವರನ್ನು ಕೇಳಲು ಬಯಸುತ್ತೇವೆ. ಕಾಂಗ್ರೆಸನಲ್ ಹಿಂದೂ ಕಾಕಸ್‌ನ ಉದ್ದೇಶವು ಹಿಂದೂ-ಅಮೆರಿಕನ್ ಸಮುದಾಯದ ಮೌಲ್ಯಗಳನ್ನು ಉತ್ತೇಜಿಸುವುದಾಗಿದೆ.

2. ಕಾಂಗ್ರೆಸನಲ್ ಹಿಂದೂ ಕಾಕಸ್ ಭಾರತ, ನೇಪಾಳ, ಶ್ರೀಲಂಕಾ, ಇಂಡೋನೇಷ್ಯಾ, ಬಾಂಗ್ಲಾದೇಶ, ಭೂತಾನ್, ಪಾಕಿಸ್ತಾನ, ಅಫ್ಘಾನಿಸ್ತಾನ, ಯುನೈಟೆಡ್ ಕಿಂಗ್‌ಡಮ್, ನೆದರ್‌ಲ್ಯಾಂಡ್ಸ್ ಇತ್ಯಾದಿಗಳಿಂದ ಹಿಂದೂಗಳನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಹಿಂದೂಗಳ ಸಹಿತ ಸಿಖ್ಖರು, ಜೈನರು ಮತ್ತು ಬೌದ್ಧರು ಸೇರಿದ್ದಾರೆ.

3. ಸಂಸದರ ಪ್ರಕಾರ, ‘ಕಾಂಗ್ರೆಸನಲ್ ಹಿಂದೂ ಕಾಕಸ್’ ಮುಕ್ತ ವ್ಯಾಪಾರ, ಸೀಮಿತ ಸರಕಾರ, ಆರ್ಥಿಕ ಶಿಸ್ತು, ಬಲವಾದ ಕುಟುಂಬ ಮೌಲ್ಯಗಳು ಮತ್ತು ನಿರಂಕುಶ ಆಡಳಿತದ ವಿರುದ್ಧ ಬಲವಾದ ನೀತಿಯನ್ನು ಪ್ರತಿನಿಧಿಸುತ್ತದೆ. ಇದು ಅಮೆರಿಕಕ್ಕೆ ಸೀಮಿತವಾಗಿಲ್ಲ, ಬದಲಾಗಿ ಅನೇಕ ದೇಶಗಳಿಗೆ ಇದೆ.

ಸಂಪಾದಕೀಯ ನಿಲುವು

ಭಾರತದ ಹಿಂದೂ ಸಂಸದರು ದೇಶದ ಹಿಂದೂಗಳಿಗಾಗಿ ಇಂತಹ ಪ್ರಯತ್ನವನ್ನು ಎಂದಾದರೂ ಮಾಡಿದ್ದಾರೆಯೇ?