PM Modi Pannun Case : ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಿದೇಶದಿಂದ ಭಾರತ ವಿರೋಧಿ ಚಟುವಟಿಕೆ ನಡೆಸಿ ಹಿಂಸಾಚಾರಕ್ಕೆ ಪ್ರೋತ್ಸಾಹ ! – ಪ್ರಧಾನಿ ಮೋದಿ

  • ಅಮೇರಿಕಾದಲ್ಲಿನ ಖಲಿಸ್ತಾನಿ ಗುರುಪತವಂತ ಸಿಂಹ ಪನ್ನುವಿನ ಹತ್ಯೆಯ ಷಡ್ಯಂತ್ರದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಇವರಿಂದ ಮೊಟ್ಟಮೊದಲ ಹೇಳಿಕೆ !

  • ಸಾಕ್ಷಿ ಒದಗಿಸಿದರೆ ಪ್ರಕರಣದಲ್ಲಿ ಗಮನಹರಿಸಲು ಭರವಸೆ !

ನವ ದೆಹಲಿ – ಅಮೇರಿಕಾ ವ್ಯವಸ್ಥೆಯಿಂದ ಕೆಲ ದಿನಗಳ ಹಿಂದೆ ಇಲ್ಲಿಯ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಷಡ್ಯಂತ್ರದಲ್ಲಿ ಭಾರತ ಸರಕಾರದ ಕೈವಾಡವಿರುವ ಗಂಭೀರ ಆರೋಪ ಮಾಡಿತ್ತು. ಇದರ ಸಂದರ್ಭದಲ್ಲಿ ಓರ್ವ ಭಾರತೀಯನನ್ನು ಬಂಧಿಸಲಾಗಿದ್ದು ಇದೆಲ್ಲವೂ ಆರೋಪ ಪತ್ರದಲ್ಲಿ ನಮೂದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಇದೇ ಮೊದಲ ಬಾರಿ ಹೇಳಿಕೆ ನೀಡಿದ್ದಾರೆ. ಒಂದು ಆಂಗ್ಲ ವಾರ್ತಾಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಮಂತ್ರಿಯವರು, ಯಾರಾದರೂ ಈ ಸಂದರ್ಭದಲ್ಲಿ ಸಾಕ್ಷಿ ಒದಗಿಸಿದರೆ ಆಗ ಖಂಡಿತವಾಗಿ ನಾವು ಈ ಪ್ರಕರಣದ ಬಗ್ಗೆ ಗಮನಹರಿಸುವೆವು. ಭಾರತದ ಯಾವುದೇ ಪ್ರಜೆಯಿಂದ ಯಾವುದಾದರೂ ಒಳ್ಳೆಯ ಅಥವಾ ಕೆಟ್ಟ ಘಟನೆ ಘಟಿಸಿದರೆ ಆಗ ನಾವು ಗಮನಹರಿಸುವುದಕ್ಕಾಗಿ ಸಿದ್ಧರಿದ್ದೇವೆ. ಕಾನೂನಿನ ರಾಜ್ಯಕ್ಕಾಗಿ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.

ಪ್ರಧಾನಮಂತ್ರಿ ಮೋದಿ ಇವರು ಮಾತು ಮುಂದುವರಿಸಿ, ಹೀಗೆ ಇದ್ದರೂ ವಿದೇಶದಲ್ಲಿ ಆಶ್ರಯ ಪಡೆದಿರುವ ವ್ಯಕ್ತಿಯಿಂದ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ನಮಗೆ ಆತಂಕವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇವರಿಂದ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಹತ್ಯೆಯ ಷಡ್ಯಂತ್ರದ ಆರೋಪದಿಂದ ಎರಡು ದೇಶಗಳಲ್ಲಿನ ಸಂಬಂಧ ಹದಗೆಡುವ ಸಾಧ್ಯತೆಯನ್ನು ಪ್ರಧಾನಮಂತ್ರಿಯವರು ತಳ್ಳಿ ಹಾಕಿದರು. ಅವರು, ಈ ಪ್ರಕರಣದಿಂದ ಭಾರತ ಮತ್ತು ಅಮೆರಿಕ ಇವರಲ್ಲಿನ ಸಂಬಂಧದ ಮೇಲೆ ಪರಿಣಾಮ ಆಗುವುದಿಲ್ಲ. ಈ ಸಂಬಂಧ ದೃಢವಾಗುವುದಕ್ಕಾಗಿ ಎರಡು ಕಡೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ರಕ್ಷಣೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸಹಕಾರ ಇದು ನಮ್ಮ ಸ್ನೇಹದ ಮಹತ್ವದ ಅಂಶವಾಗಿದೆ ಎಂದು ಹೇಳಿದರು.